ಸುತ್ತಲೂ ಕತ್ತಲೂ ಒಂಟಿ ರಸ್ತೆಯಲ್ಲಿ ಹೊರಟಿದ್ದ ಯುವತಿ ಬಳಿ ಬಂದು ಮನವಿ ಮಾಡ್ಕೊಂಡ !

ಅಪರಿಚಿತ ಯುವತಿ ಬಳಿ ತೆರಳುವ ಯುವಕನೋರ್ವ ಮನವಿಯೊಂದನ್ನು ಮಾಡಿಕೊಳ್ಳುತ್ತಾನೆ. ನಂತರ ಯುವತಿ ಸಹ ಆತನ ಮನವಿಗೆ ಇಲ್ಲನ ಅನ್ನಲು ಮನಸ್ಸಿಲ್ಲದೇ ಒಪ್ಪಿಕೊಂಡಿದ್ದಾಳೆ. ಆದರೆ ಇದರ ಬಗ್ಗೆ ನೆಟ್ಟಿಗರು ಅನುಮಾನ ವ್ಯಕ್ತಪಡಿಸಿದ್ದಾರೆ.


ಬೆಂಗಳೂರು: ಸೋಶಿಯಲ್ ಮೀಡಿಯಾದಲ್ಲಿ ಪ್ರತಿದಿನ ಹಲವು ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಕೆಲವೊಮ್ಮೆ ವೈರಲ್ ವಿಡಿಯೋಗಳನ್ನು ನೋಡಿ ಲೈಕ್ಸ್. ಕಮೆಂಟ್ ಮತ್ತು ವ್ಯೂವ್‌ಗಾಗಿ  ಏನೆಲ್ಲಾ ಮಾಡ್ತಾರೆ ಅಂತ ಅನ್ನಿಸುತ್ತದೆ. ಹುಡುಗ-ಹುಡುಗಿ ಜೊತೆಯಾಗಿ ಮಾಡುವ ರೀಲ್ಸ್ ಮತ್ತು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಟ್ರೆಂಡ್ ಆಗುತ್ತಿರುತ್ತವೆ. ರೀಲ್ಸ್ ಮಾಡುವ ಜನರು ತಮ್ಮ ವಿಡಿಯೋ ಎಲ್ಲರಗಿಂತ ಭಿನ್ನವಾಗಿರಬೇಕು ಎಂದು ಯೋಚಿ ಸುತ್ತಿರುತ್ತಾರೆ. ಇದೀಗ ಅಂತಹುವುದೇ ಒಂದು ವಿಡಿಯೋ ವೈರಲ್ ಆಗಿದೆ. ಸುತ್ತಲೂ ಕತ್ತಲೂ, ಸ್ಮಶಾನ ಮೌನದ ರಸ್ತೆಯಲ್ಲಿ ಒಂಟಿ ಹುಡುಗಿ ಹೋಗುತ್ತಿರುತ್ತಾಳೆ. ಆಕೆ ಬಳಿಯಲ್ಲಿ ಬರುವ ಯುವಕನೋರ್ವ ಬಂದು ಮನವಿ ಮಾಡಿಕೊಳ್ಳುತ್ತಾನೆ. ಯುವತಿ ಸಹ ಯುವಕನ ಮನವಿಗೆ ಇಲ್ಲ ಅಂತ ಹೇಳಿಲ್ಲ.  

ಇಂದು ನೀವು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಕ್ಯಾಮೆರಾ ಹಿಡಿದು ಬರುವ ಜನರು, ನಾವು ಫೋಟೋಗ್ರಾಫರ್‌ಗಳು, ಅಪರಿಚಿತರ ಒಪ್ಪಿಗೆ ಪಡೆದು ಫೋಟೋ ಕ್ಲಿಕ್ಕಿಸುತ್ತೇವೆ. ನಿಮ್ಮ ಫೋಟೋಗಳನ್ನು ಕ್ಕಿಕ್ಕಿಸಬಹುದಾ ಎಂದು ಕೇಳುತ್ತಿರುತ್ತವೆ. ಇಂತಹ ವಿಡಿಯೋ ಮತ್ತು ರೀಲ್ಸ್‌ಗಳು ಇನ್‌ಸ್ಟಾಗ್ರಾಂನಲ್ಲಿ ಹೆಚ್ಚು ವೈರಲ್ ಆಗುತ್ತಿರುತ್ತವೆ. ಕೇರಳದ ಜಿಶಾನ್ ಎಂಬ ಯುವಕ "Dance with Strangers" ಎಂದು ಡ್ಯಾನ್ಸ್ ಮಾಡುತ್ತಿರುತ್ತಾನೆ. ಜಿಶಾನ್ ಇನ್‌ಸ್ಟಾಗ್ರಾಂನಲ್ಲಿ ಈ ರೀತಿಯ ಹಲವು ವಿಡಿಯೋಗಳನ್ನು ನೋಡಬಹುದು. 

Latest Videos

ಜಿಶಾನ್ ಖಾತೆಯಲ್ಲಿ ಲಂಡನ್ ಮೂಲದ ಯುವತಿ ಜೊತೆ ಡ್ಯಾನ್ಸ್ ಮಾಡಿರುವ ವಿಡಿಯೋ ಹಲವು ಅನುಮಾನಗಳಿಗೆ ಕಾರಣವಾಗಿದೆ. ರಾತ್ರಿ ರಸ್ತೆಯಲ್ಲಿ ಹೊರಟಿದ್ದ ಯುವತಿ ಬಳಿ ಹೋಗುವ ಜಿಶಾನ್ ತನ್ನನ್ನು ಪರಿಚಯ ಮಾಡಿಕೊಳ್ಳುತ್ತಾನೆ. ನಿಮ್ಮ ಜೊತೆ ಡ್ಯಾನ್ಸ್ ಮಾಡಬಹುದಾ? ಆ ರೀಲ್ಸ್ ಶೇರ್ ಮಾಡಿಕೊಳ್ಳಬಹುದಾ ಎಂದು ಅನುಮತಿ ಕೇಳುತ್ತಾನೆ. ಇದಕ್ಕೆ ಯುವತಿ  ಸಹ ಒಪ್ಪಿಕೊಳ್ಳುತ್ತಾಳೆ. ನನ್ನ ಹೆಸರು ಆಲಿಯಾ, ಲಂಡನ್‌ನಿಂದ ಕೊಚ್ಚಿಗೆ ಬಂದಿದ್ದೇನೆ ಎಂದು ತನ್ನ ಪರಿಚಯ ಮಾಡಿಕೊಳ್ಳುತ್ತಾಳೆ. ನಂತರ ಜಿಶಾನ್ ಜೊತೆ ಸೇರಿ ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಮತ್ತು ಕ್ಯೂಟ್ ಶ್ರೀಲೀನಾ ಅಭಿನಯದ ಗುಂಟೂರು ಖಾರಂ ಚಿತ್ರದ ಐಕಾನಿಸ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ.

ನನ್ನ ತಂದೆಯನ್ನ ಜೈಲಿನೊಳಗೆ ಹಾಕಿ- ಪೊಲೀಸ್ ಠಾಣೆಗೆ ಬಂದು ದೂರು ಸಲ್ಲಿಸಿದ 5ರ ಪೋರ

ಒಂದಿಷ್ಟು ಅನುಮಾನ 

ವಿಡಿಯೋ ನೋಡಿದ ನೆಟ್ಟಿಗರು ಒಂದಿಷ್ಟು ಅನುಮಾನ ವ್ಯಕ್ತಪಡಿಸಿದ್ದಾರೆ. ಹುಡುಗಿ ತನ್ನನ್ನು ಲಂಡನ್‌ ಮೂಲದವಳು ಎಂದು ಹೇಳಿಕೊಳ್ಳುತ್ತಾಳೆ. ಆದರೂ ತೆಲುಗಿನ ಹಾಡಿಗೆ ಎಷ್ಟು ಚೆನ್ನಾಗಿ ಡ್ಯಾನ್ಸ್ ಮಾಡಿದ್ದಾಳೆ. ಇಬ್ಬರ ಸ್ಟೆಪ್ಸ್‌ಗಳು ಎಷ್ಟು ಚೆನ್ನಾಗಿ ಮ್ಯಾಚ್ ಆಗಿದೆ. ಒಂದು ವೇಳೆ ಇಬ್ಬರು ಡ್ಯಾನ್ಸರ್ ಆಗಿದ್ರೆ ಸ್ಟೆಪ್ ಕಲಿಯಲು ಎರಡರಿಂದ ಮೂರು ಗಂಟೆಯಾದ್ರೂ ಬೇಕು. Dance with Strangers ಅಂತ  ಹೇಳುವುದೆಲ್ಲಾ ಸುಳ್ಳು. ಪರಿಚಯಸ್ಥರ ಬಳಿಯೇ ಹೋಗಿ ಈ ಸುಳ್ಳು ವಿಡಿಯೋಗಳನ್ನು ಮಾಡುತ್ತಾರೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ . 

ಇನ್ನು ಕೆಲ ನೆಟ್ಟಿಗರು ಇಬ್ಬರ ಡ್ಯಾನ್ಸ್‌ಗೆ ಮೆಚ್ಚುಗೆ ಸೂಚಿಸಿ ಲೈಕ್ ಬಟನ್ ಒತ್ತಿದ್ದಾರೆ. ಈ ರೀಲ್ಸ್‌ಗೆ 3.3 ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿದ್ದು, ನೂರಾರು ಕಮೆಂಟ್‌ಗಳು ಬಂದಿವೆ. ಜಿಶಾನ್ ಇದೇ ರೀತಿ Dance with Strangers ಎಂಬ ಥೀಮ್‌ನಲ್ಲಿ ಹಲವು ಅಪರಿಚಿತರ ಜೊತೆ ಡ್ಯಾನ್ಸ್ ಮಾಡಿರುವ ರೀಲ್ಸ್‌ಗಳನ್ನು ಹಂಚಿಕೊಂಡಿದ್ದಾನೆ. ಇನ್‌ಸ್ಟಾಗ್ರಾಂನಲ್ಲಿ 3 ಲಕ್ಷಕ್ಕೂ ಅಧಿಕ ಫಾಲೋವರ್ಸ್‌ಗಳನ್ನು ಹೊಂದಿರುವ ಜಿಶಾನ್ ರೀಲ್ಸ್‌ಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. 

ಮಗಳ ಸಾವಿಗೆ ಮರುಕಪಡದ ಅಮ್ಮ! ಅಂತ್ಯಸಂಸ್ಕಾರಕ್ಕೂ ಹೊಸ ಡ್ರೆಸ್ ಧರಿಸಿ ರೀಲ್ಸ್ ಮಾಡಿಕೊಂಡೇ ಹೋದ ತಾಯಿ

click me!