ಅಸ್ಸಾಂನಲ್ಲಿ ಮುಸ್ಲಿಂ ವಿವಾಹ, ವಿಚ್ಛೇದನ ನೋಂದಣಿ ಕಡ್ಡಾಯ

By Kannadaprabha News  |  First Published Aug 22, 2024, 11:09 AM IST

ಮುಸ್ಲಿಂ ಜನರ ವಿವಾಹ ಮತ್ತು ವಿಚ್ಛೇದನದ ಕಡ್ಡಾಯ ಸರ್ಕಾರಿ ನೋಂದಣಿಗೆ ಅಸ್ಸಾಂ ಸರ್ಕಾರ ಗುರುವಾರ ಮಸೂದೆಯನ್ನು ಮಂಡಿಸಲಿದೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಹೇಳಿದ್ದಾರೆ.


ಗುವಾಹಟಿ: ಮುಸ್ಲಿಂ ಜನರ ವಿವಾಹ ಮತ್ತು ವಿಚ್ಛೇದನದ ಕಡ್ಡಾಯ ಸರ್ಕಾರಿ ನೋಂದಣಿಗೆ ಅಸ್ಸಾಂ ಸರ್ಕಾರ ಗುರುವಾರ ಮಸೂದೆಯನ್ನು ಮಂಡಿಸಲಿದೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಹೇಳಿದ್ದಾರೆ. ಸಂಪುಟ ಸಭೆಯ ನಂತರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಶರ್ಮಾ, ಗುರುವಾರ ಪ್ರಾರಂಭವಾಗಲಿರುವ ಅಧಿವೇಶನದಲ್ಲಿ ಸರ್ಕಾರವು ಅಸ್ಸಾಂ ಕಡ್ಡಾಯ ಮುಸ್ಲಿಂ ವಿವಾಹ ಮತ್ತು ವಿಚ್ಛೇದನ ಮಸೂದೆ, 2024 ಅನ್ನು ಮಂಡಿಸಲಿದೆ ಎಂದು ಹೇಳಿದರು. ಈ ತಿಂಗಳ ಆರಂಭದಲ್ಲಿ ಹಿಮಂತ ಬಿಸ್ವಾ ಶರ್ಮಾ ಅವರು ''ಲವ್ ಜಿಹಾದ್'' ಅಪರಾಧಿಗಳಿಗೆ ಜೀವಾವಧಿ ಶಿಕ್ಷೆಯನ್ನು ಕಡ್ಡಾಯಗೊಳಿಸುವ ಹೊಸ ಕಾನೂನನ್ನು ರಾಜ್ಯ ಸರ್ಕಾರ ಶೀಘ್ರದಲ್ಲೇ ಪರಿಚಯಿಸಲಿದೆ ಎಂದು ಘೋಷಿಸಿದರು. 

ಕೋವಿಶೀಲ್ಡ್‌ ತಯಾರಿಸಿದ್ದ ಸೀರಂನಿಂದ ವರ್ಷಾಂತ್ಯಕ್ಕೆ ಮಂಕಿಪಾಕ್ಸ್‌ಗೂ ಲಸಿಕೆ ಸಿದ್ಧ

Tap to resize

Latest Videos

ನವದೆಹಲಿ: ವಿಶ್ವದ ಅತಿ ದೊಡ್ಡ ಲಸಿಕಾ ಉತ್ಪಾದನಾ ಕಂಪನಿ ಪುಣೆ ಮೂಲದ ಸೀರಂ ಇನ್ಸ್‌ಟಿಟ್ಯೂಟ್‌ ಇದೇ ವರ್ಷಾಂತ್ಯಕ್ಕೆ ಮಂಕಿ ಪಾಕ್ಸ್‌ ವೈರಸ್‌ಗೂ ಸಹ ಲಸಿಕೆ ಲಭ್ಯವಾಗುವ ಸಾಧ್ಯತೆ ಇದೆ. ಅದಕ್ಕಾಗಿ ಸಿದ್ಧತೆಗಳು ಭರದಿಂದ ಸಾಗಿದೆ ಎಂದು ಹೇಳಿದೆ. ಈ ಬಗ್ಗೆ ಮಾತನಾಡಿರುವ ಸೀರಂನ ಅದಾರ್‌ ಪೂನಾವಾಲಾ, ‘ಈಗಾಗಲೇ ಆರೋಗ್ಯ ತುರ್ತು ಪರಿಸ್ಥಿತಿ ಎದುರಾಗಿದ್ದು, ಮಂಕಿಪಾಕ್ಸ್‌ಗೆ ಲಸಿಕೆಯನ್ನು ತಯಾರಿಸಲು ಸೀರಂ ಸಕಲ ಸಿದ್ಧತೆ ನಡೆಸುತ್ತಿದೆ. ಈ ವರ್ಷದ ಅಂತ್ಯದಲ್ಲಿ ಸಿಹಿಸುದ್ದಿ ಸಿಗುವ ನಿರೀಕ್ಷೆ ಇದೆ. ಈ ಮೂಲಕ ಕೋಟ್ಯಂತರ ಜನರಿಗೆ ಅನುಕೂಲವಾಗಲಿದೆ ಎಂದು ಹೇಳಿದ್ದಾರೆ. ಇದೇ ಸಂಸ್ಥೆ ಕೋವಿಡ್‌ ಸೋಂಕಿಗೆ ಕೋವಿಶೀಲ್ಡ್‌ ಲಸಿಕೆ ತಯಾರಿಸಿತ್ತು. ಅದು ಹಲವು ದೇಶಗಳಿಗೆ ರಫ್ತಾಗಿತ್ತು.

ಬಾಂಗ್ಲಾದಲ್ಲಿ ಅರಾಜಕತೆ: ಕೊಡಗಿನ ಕಾಫಿ ತೋಟಕ್ಕೆ ಅಸ್ಸಾಂ ಕಾರ್ಮಿಕರ ನೆಪದಲ್ಲಿ ಬಾಂಗ್ಲಾದವರು ನುಸುಳಿರುವ ಶಂಕೆ!

ಬಾಂಗ್ಲಾ ರೀತಿ ಭಾರತದಲ್ಲೂ ಸಂಸತ್‌ ಮೇಲೆ ದಾಳಿ: ರಾಕೇಶ್ ಟಿಕಾಯತ್‌ ಎಚ್ಚರಿಕೆ

ನವದೆಹಲಿ: ಇತ್ತೀಚೆಗೆ ಬಾಂಗ್ಲಾದೇಶದಲ್ಲಿ ಸಂಸತ್‌ ಮೇಲೆ ದಾಳಿ ನಡೆಸಿದಂತೆ ಭಾರತದಲ್ಲೂ ದಾಳಿ ಮಾಡಬೇಕಾಗುತ್ತದೆ ಎಂದು ರೈತ ನಾಯಕ ರಾಕೇಶ್‌ ಟಿಕಾಯತ್‌ ಎಚ್ಚರಿಸಿದ್ದಾರೆ. ಬಂಗಾಳದ ವೈದ್ಯೆ ರೇಪ್‌ ಪ್ರಕರಣಕ್ಕೆ ವಿನಾಕಾರಣ ಹೆಚ್ಚಿನ ಪ್ರಚಾರ ನೀಡಲಾಗುತ್ತಿದೆ. ಸರ್ಕಾರ ಉರುಳಿಸಿ, ಟಿಎಂಸಿ ನಾಯಕರ ಜೈಲಿಗೆ ಕಳುಹಿಸಲು ಈ ಸಂಚು ರೂಪಿಸಲಾಗಿದೆ. ಇದೇ ಪರಿಸ್ಥಿತಿ ಮುಂದುವರೆದರೆ ಬಾಂಗ್ಲಾ ರೀತಿಯ ದಾಳಿ ನಡೆಸಬೇಕಾಗುತ್ತದೆ. ಕಳೆದ ಬಾರಿ ಸರ್ಕಾರ ನಮ್ಮನ್ನು ಸಂಸತ್ ಕಡೆಯಿಂದ ಕೆಂಪುಕೋಟೆ ಕಡೆಗೆ ಕಳುಹಿಸಿತು. ಅಂದು ನಾವು ಆ ತಪ್ಪು ಮಾಡದೇ ಇದ್ದಲ್ಲಿ ಅಂದೇ ನಮ್ಮ ಗುರಿ ಈಡೇರುತ್ತಿತ್ತು ಎಂದಿದ್ದಾರೆ.

ಸಾಕ್ಷಿ ಕೊಟ್ಟರೆ ಝಾಕಿರ್‌ ಹಸ್ತಾಂತರ: ಮಲೇಷ್ಯಾ ಪ್ರಧಾನಿ ಅನ್ವರ್‌ ಸುಳಿವು

ನವದೆಹಲಿ: ವಿವಾದಿತ ಇಸ್ಲಾಮಿಕ್ ಬೋಧಕ ಝಾಕಿರ್‌ ನಾಯಕ್‌ ವಿರುದ್ಧ ಸೂಕ್ತ ಸಾಕ್ಷ್ಯ ಒದಗಿಸಿದರೆ ಆತನನ್ನು ಭಾರತಕ್ಕೆ ಹಸ್ತಾಂತರಿಸುವ ಬಗ್ಗೆ ತಮ್ಮ ಸರ್ಕಾರ ಚಿಂತನೆ ನಡೆಸಬಹುದು ಎಂದು ಮಲೇಷ್ಯಾ ಪ್ರಧಾನಿ ಅನ್ವರ್‌ ಇಬ್ರಾಹಿಮ್‌ ಮಂಗಳವಾರ ಹೇಳಿದ್ದಾರೆ. ದೆಹಲಿಯಲ್ಲಿ ನಡೆದ ಇಂಡಿಯನ್ ಕೌನ್ಸಿಲ್ ಆಫ್ ವರ್ಲ್ಡ್ ಅಫೇರ್ಸ್‌ನಲ್ಲಿ ಭಾಗವಹಿಸಿದ ಅವರು, ಈ ಸಮಸ್ಯೆ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧದ ಮೇಲೆ ಋಣಾತ್ಮಕ ಪರಿಣಾಮ ಬೀರದಿರಲಿ ಎಂದಿದ್ದಾರೆ.

ಲವ್‌ ಜಿಹಾದ್‌ಗೆ ಜೀವಾವಧಿ ಶಿಕ್ಷೆ; ಅಸ್ಸಾಂ ಸಿಎಂ ಹಿಮಂತ್ ಬಿಸ್ವ ಶರ್ಮಾ ಘೋಷಣೆ

click me!