ಕೂಡಿಟ್ಟ ಹಣ ಕೊರೋನಾಕ್ಕೆ ನೀಡಿದ್ದ ಬಾಲಕನಿಗೆ ಹೊಸ ಬೈಸಿಕಲ್ ಕೊಡಿಸಿದ ಸಿಎಂ

Published : May 13, 2021, 12:33 AM ISTUpdated : May 13, 2021, 12:35 AM IST
ಕೂಡಿಟ್ಟ ಹಣ ಕೊರೋನಾಕ್ಕೆ ನೀಡಿದ್ದ ಬಾಲಕನಿಗೆ ಹೊಸ ಬೈಸಿಕಲ್ ಕೊಡಿಸಿದ ಸಿಎಂ

ಸಾರಾಂಶ

* ಕೊರೋನಾ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿದ್ದ ಬಾಲಕ * ಮುಖ್ಯಮಂತ್ರಿ ಕಡೆಯಿಂದಲೇ ಬಾಲಕನಿಗೆ ಸೈಕಲ್ ಬಂತು * ಸೈಕಲ್ ಖರೀದಿಗೆ ಕೂಡಿಟ್ಟುಕೊಂಡಿದ್ದ ಸಾವಿರ ರೂ. ನೀಡಿದ್ದ ಹರೀಶ್ * ಬಾಲಕನಿಗೆ ಧನ್ಯವಾದ ತಿಳಿಸಿದ ಸಿಎಂ ಸ್ಟಾಲಿನ್  

ಚೆನ್ನೈ(ಮೇ 12) ಕೊರೋನಾ ಸಂಕಷ್ಟಕ್ಕೆ ಈ ಬಾಲಕನ ಹೃದಯ ಮಿಡಿದಿದೆ. ಸೈಕಲ್ ಖರೀದಿಗೆ ಎಂದು  ಕೂಡಿಟ್ಟುಕೊಂಡಿದ್ದ ಹಣವನ್ನು ಈ ಬಾಲಕ ಸಿಎಂ ಪರಿಹಾರ ನಿಧಿಗೆ ನೀಡಿದ್ದ. ಹೃದಯ ವೈಶ್ಯಾಲತೆ ಮೆರೆದಿದ್ದ  7 ವರ್ಷದ  ಬಾಲಕ ಹರೀಶ್ ವರ್ಮನ್ ಗೆ ಈಗ ಹೊಸ ಸೈಕಲ್ ಬಂದಿದೆ.

ತಮಿಳುನಾಡಿನ ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ವಿಶೇಷ ಉಡುಗೊರೆ ಆಗಿ ಸೈಕಲ್  ನೀಡಿದ್ದಾರೆ. ಮಧುರೈ ಮೂಲದ ಎಲೆಕ್ಟ್ರಿಷಿಯನ್ ಅವರ ಪುತ್ರ ಹರೀಶ್ ವರ್ಮನ್ ಎರಡು ವರ್ಷಗಳಿಂದ ಸಂಗ್ರಹಿಸಿ ಇಟ್ಟಿದ್ದ 1,000 ರೂಪಾಯಿ ಹಣವನ್ನು ಸಿಎಂ ಕೊವಿಡ್-19 ಪರಿಹಾರ ನಿಧಿಗೆ ನೀಡಿದ್ದ. ಬಾಲಕನ ಕಾರ್ಯದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿರುವ ಸಿಎಂ ಎಂ ಕೆ ಸ್ಟಾಲಿನ್ ಬಾಲಕನಿಗೆ ಸೈಕಲ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ವಿಚಾರವನ್ನು ಸೋಶಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ.

ಕೊರೋನಾ ಫಂಡ್ ಕಲೆಹಾಕುತ್ತಿರುವ ಪ್ರಿಯಾಂಕಾ ಚೋಪ್ರಾ

ಕೊರೊನಾವೈರಸ್ ಸೋಂಕಿನಿಂದ ಜನರು ನಿತ್ಯ ಅನುಭವಿಸುತ್ತಿದ್ದ ನರಕಯಾತನೆಯನ್ನು ನೋಡಿದ 7 ವರ್ಷದ ಬಾಲಕ ಹರೀಶ್ ತನ್ನ ಹಣವನ್ನು ಮುಖ್ಯಮಂತ್ರಿ ಕೊವಿಡ್-19 ಪರಿಹಾರ ನಿಧಿಗೆ ನೀಡಿದ್ದ.  1,000 ರೂಪಾಯಿ ಹಣದ ಜೊತೆಗೆ ಪತ್ರ ಬರೆದಿದ್ದ ಬಾಲಕ  ರಾಜ್ಯದಲ್ಲಿ ಕೊರೊನಾವೈರಸ್ ಸೋಂಕಿನಿಂದ ಸಮಸ್ಯೆ ಎದುರಿಸುತ್ತಿರುವ ಸಾರ್ವಜನಿಕರಿಗೆ ನೆರವು ನೀಡಬೇಕು ಎಂದು ಮನವಿ ಮಾಡಿಕೊಂಡಿದ್ದ.

ಮೇ 9ರಂದು ಮಧುರೈ ಉತ್ತರ ಕ್ಷೇತ್ರದ ಶಾಸಕ ತಳಪಥಿ ಅವರು ತಮ್ಮ ಬೆಂಬಲಿಗರೊಂದಿಗೆ ಹರೀಶ್ ವರ್ಮನ್ ಅವರ ಮನೆಗೆ ಭೇಟಿ ನೀಡಿ ಸೈಕಲ್ ನೀಡಿದ್ದಾರೆ. . ಕೆಂಪು-ನೀಲಿ ಬಣ್ಣದ ಸೈಕಲ್ ನೀಡಲಾಯಿತು. ಇದೇ ಸಂದರ್ಭ ದೂರವಾಣಿ ಮೂಲಕ ಬಾಲಕನ ಜೊತೆಗೆ ಮಾತನಾಡಿದ ಸಿಎಂ ಎಂ ಕೆ ಸ್ಟಾಲಿನ್ ಧನ್ಯವಾದ ತಿಳಿಸಿದರು. ಹೊಸ ಸೈಕಲ್ ಪಡೆದ ಖುಷಿಯಲ್ಲಿ ಬಾಲಕ ಸವಾರಿ ಮಾಡುತ್ತಿದ್ದಾನೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಮದುವೆಯಾದ್ರೆ ಸಿಗುತ್ತೆ 2.5 ಲಕ್ಷ ರೂಪಾಯಿ; ಶೇ.99 ಜನರಿಗೆ ಈ ವಿಷಯವೇ ಗೊತ್ತಿಲ್ಲ
ಮಾಡೆಲ್ ಮಗಳ ಯಶಸ್ಸು: ಮಾಲ್‌ನಲ್ಲಿ ಬಿಲ್‌ಬೋರ್ಡ್ ಮೇಲೆ ಮಗಳ ಫೋಟೋ ನೋಡಿ ಭಾವುಕರಾದ ಪೋಷಕರು