ಅಪ್ಪ ಅಮ್ಮ ಇಬ್ಬರೂ ಐಎಎಸ್: ಗಗನಚುಂಬಿ ಕಟ್ಟಡದ 10ನೇ ಮಹಡಿಯಿಂದ ಹಾರಿ ಮಗಳು ಸಾವಿಗೆ ಶರಣು

By Suvarna News  |  First Published Jun 3, 2024, 2:26 PM IST

ಮಹಾರಾಷ್ಟ್ರದ ಉನ್ನತ ಇಲಾಖೆಯಲ್ಲಿ ಅಧಿಕಾರಿಗಳಾಗಿದ್ದ ಐಎಎಸ್ ದಂಪತಿಯ ಪುತ್ರಿಯೊಬ್ಬರು 10ನೇ ಮಹಡಿಯಿಂದ ಹಾರಿ ಸಾವಿಗೆ ಶರಣಾಗಿದ್ದಾರೆ. ಮುಂಜಾನೆ 4 ಗಂಟೆ ಸುಮಾರಿಗೆ ಆಕೆ ರಾಜ್ಯ ಸಚಿವಾಲಯಗಳ ಸಮೀಪದ ಇರುವ ಗಗನಚುಂಬಿ ಕಟ್ಟಡದ 10ನೇ ಮಹಡಿಯಿಂದ ಕೆಳಗೆ ಹಾರಿ ಸಾವನ್ನಪ್ಪಿದ್ದಾಳೆ.


ಮುಂಬೈ: ಅವರಿಬ್ಬರು ಐಎಎಸ್ ಅಧಿಕಾರಿಗಳು, ಮಹಾರಾಷ್ಟ್ರದ ಉನ್ನತ ಇಲಾಖೆಯಲ್ಲಿ ಇಬ್ಬರೂ ಕೆಲಸ ಮಾಡುತ್ತಿದ್ದರು. ಆದರೆ ಶ್ರೀಮಂತಿಕೆ ಶಿಕ್ಷಣ, ದುಡ್ಡು, ಅಂತಸ್ತು ಎಲ್ಲವೂ ಇದ್ದರೂ ಇವರ ಪುತ್ರಿಗೆ ಅದೇನಾಯ್ತೋ  ಗೊತ್ತಿಲ್ಲ, 10ನೇ ಮಹಡಿಯಿಂದ ಕೆಳಗೆ ಹಾರಿ ಆಕೆ ಸಾವನ್ನಪ್ಪಿದ್ದು, ಈ ವಿಚಾರ ಅನೇಕರನ್ನು ದಿಗ್ಭ್ರಮೆಗೊಳಿಸಿದೆ. ಮಹಾರಾಷ್ಟ್ರದ ಉನ್ನತ ಇಲಾಖೆಯಲ್ಲಿ ಅಧಿಕಾರಿಗಳಾಗಿದ್ದ ಐಎಎಸ್ ದಂಪತಿಯ ಪುತ್ರಿಯೊಬ್ಬರು 10ನೇ ಮಹಡಿಯಿಂದ ಹಾರಿ ಸಾವಿಗೆ ಶರಣಾಗಿದ್ದಾರೆ. ಮುಂಜಾನೆ 4 ಗಂಟೆ ಸುಮಾರಿಗೆ ಆಕೆ ರಾಜ್ಯ ಸಚಿವಾಲಯಗಳ ಸಮೀಪದ ಇರುವ ಗಗನಚುಂಬಿ ಕಟ್ಟಡದ 10ನೇ ಮಹಡಿಯಿಂದ ಕೆಳಗೆ ಹಾರಿ ಸಾವನ್ನಪ್ಪಿದ್ದಾಳೆ.

27 ವರ್ಷದ ಲಿಪಿ ರಸ್ತೋಗಿ ಸಾವಿಗೆ ಶರಣಾದ ಯುವತಿ, ಈಕೆ ಐಎಎಸ್ ಅಧಿಕಾರಿಗಳಾದ ರಾಧಿಕಾ ರಸ್ತೋಗಿ ಹಾಗೂ ವಿಕಾಸ್ ರಸ್ತೋಗಿ ಅವರ ಪುತ್ರಿ. ಮಹಡಿಯಿಂದ ಕೆಳಗೆ ಬಿದ್ದ ಕೂಡಲೇ ಆಕೆಯನ್ನು ಅಲ್ಲಿದ್ದ ಸಿಬ್ಬಂದಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ  ಆಕೆ ಸಾವನ್ನಪ್ಪಿದ್ದಾಳೆ. ಪೊಲೀಸರು ಘಟನೆಯ ಬಳಿಕ ಆಕೆ ವಾಸವಿದ್ದ ಕೋಣೆಯಿಂದ ಪತ್ರವೊಂದನ್ನು ವಶಕ್ಕೆ ಪಡೆದಿದ್ದಾರೆ. ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಇಂತಹ ಆಘಾತಕಾರಿ ನಿರ್ಧಾರ ಕೈಗೊಳ್ಳುವುದರ ಹಿಂದಿನ ಕಾರಣ ಏನು ಎಂಬ ಬಗ್ಗೆ ತನಿಖೆ ಮಾಡುತ್ತಿದ್ದಾರೆ. 

Tap to resize

Latest Videos

ನಿವೇದಿತಾ ಜೈನ್: ಕೊಲ್ಲೂರಿನಲ್ಲಿ ಕೇರಳದ ಜ್ಯೋತಿಷಿ ಭವಿಷ್ಯ ನುಡಿದಿದ್ರು, ಹೇಳಿದಂತೆ ಆಯ್ತು!

ಕೆಲ ಮೂಲಗಳ ಪ್ರಕಾರ, 27 ವರ್ಷದ ಲಿಪಿ ಕಾನೂನು ವಿದ್ಯಾರ್ಥಿನಿಯಾಗಿದ್ದು, ಪರೀಕ್ಷೆಯಲ್ಲಿ ತನ್ನ ಸಾಧನೆಯ ಬಗ್ಗೆ ಆಕೆಗೆ ಸಂತೃಪ್ತಿಯಿರಲಿಲ್ಲ, ಇದರಿಂದ ಆಕೆ ಅಸಮಾಧಾನಗೊಂಡಿದ್ದಳು. ಹರ್ಯಾಣದ ಕಾಲೇಜೊಂದರಲ್ಲಿ ಆಕೆ ಎಲ್‌ಎಲ್‌ಬಿ ಕೋರ್ಸ್ ಮಾಡುತ್ತಿದ್ದಳು ಎಂದು ತಿಳಿದು ಬಂದಿದೆ. ಇತ್ತ ಆಕೆಯ ತಂದೆ ವಿಕಾಸ್ ರಸ್ತೋಗಿ ಮಹಾರಾಷ್ಟ್ರದ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದಾರೆ. ಇತ್ತ ಅಮ್ಮ ರಾಧಿಕಾ ರಸ್ತೋಗಿ ರಾಜ್ಯ ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಆದರೆ ಯಾವುದಕ್ಕೂ ಕಡಿಮೆ ಇಲ್ಲದಂತೆ ಬೆಳೆದ ಇವರ ಪುತ್ರಿ ಹೀಗೆ ಜೀವನವನ್ನು ದುರಂತಮಯವಾಗಿ ಅಂತ್ಯಗೊಳಿಸಿದ್ದು, ದಿಗ್ಭ್ರಮೆ ಮೂಡಿಸಿದೆ.

ಆತ್ಮಹತ್ಯೆ ಎಲ್ಲದಕ್ಕೂ ಪರಿಹಾರವಲ್ಲ, ಖಿನ್ನತೆಗೂ ಮದ್ದಿದೆ. ಪರೀಕ್ಷೆಯೇ ಆಗಲಿ ಪ್ರೇಮ ವೈಫಲ್ಯವೇ ಇರಲಿ, ಅದು ಬದುಕಿನ ಒಂದು ಭಾಗವೇ ಹೊರತು ಅದುವೇ ಬದುಕಲ್ಲ, ಹೀಗಾಗಿ ಖಿನ್ನತೆಗೊಳಗಾಗಿ ಸಾಯುವ ಯೋಚನೆ ಮಾಡುವ ಯುವ ಸಮೂಹ ಅದಕ್ಕೂ ಮೊದಲು ತಮ್ಮ ಆಪ್ತರಲ್ಲಿ ತಾವು ಅನುಭವಿಸುವ ಭಾದೆಯನ್ನು ಹೇಳಿಕೊಂಡು ಪರಿಹಾರ ಕಂಡುಕೊಳ್ಳಬೇಕು. ಸಾವೇ ಎಲ್ಲದಕ್ಕೂ ಪರಿಹಾರವಲ್ಲ.

ಮಾ ತುಜೆ ಸಲಾಂ ಹಾಡುತ್ತಲೇ ಪ್ರಾಣ ಬಿಟ್ಟ ಯೋಧ, ವಿದ್ಯಾರ್ಥಿಗಳಿಗೆ ತಿಳಿಯಲೇ ಇಲ್ಲ ಸಾವು!

click me!