
ನವದೆಹಲಿ: ಅಮುಲ್ ತನ್ನ ಹಾಲಿನ ಬೆಲೆಯನ್ನು ಪ್ರತಿ ಲೀಟರ್‌ಗೆ 2 ರೂಪಾಯಿ ಏರಿಕೆ ಮಾಡಿದೆ. ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟ (GCMMF-Gujarat Cooperative Milk Marketing Federation) ಆದೇಶದ ಪ್ರಕಾರ ಇಂದಿನಿಂದಲೇ ಹೊಸ ಬೆಲೆಗಳು ಅನ್ವಯವಾಗಲಿದೆ. ಅಮುಲ್ ತಾಜಾ (Amul Taaza) ಮತ್ತು ಗೋಲ್ಡ್ (Amul Gold) ಬೆಲೆ ಲೀಟರ್‌ಗೆ 2 ರೂಪಾಯಿ ಮತ್ತು ಅಮುಲ್ ಎಮ್ಮೆ ಹಾಲಿನ (Amul Buffalo Milk) ಬೆಲೆ ಲೀ.ಗೆ 3 ರೂ. ಏರಿಕೆಯಾಗಿದೆ. ಇನ್ನುಳಿದ ಉತ್ಪನ್ನಗಳ ಬೆಲೆ ಲೀ.ಗೆ 1 ರೂಪಾಯೊನ ಹೆಚ್ಚಳ ಮಾಡಿ ಆದೇಶ ಹೊರಡಿಸಲಾಗಿದೆ. ಬೆಲೆ ಏರಿಕೆಯ ನಂತರ ಅಮುಲ್ ಎಮ್ಮೆ ಹಾಲು ಲೀ.ಗೆ 73 ರೂ. ಮತ್ತು ಆಕಳು ಹಾಲು (Amul Cow Milk) ಲೀ.ಗೆ 58 ರೂಪಾಯಿ ಆಗಲಿದೆ.
ಕಾರ್ಯ ನಿರ್ವಹಣೆ ಮತ್ತು ಉತ್ಪಾದನಾ ವೆಚ್ಚ ಏರಿಕೆಯಾದ ಹಿನ್ನೆಲೆ ಬೆಲೆ ಹೆಚ್ಚಳ ಮಾಡಲಾಗಿದೆ ಎಂದು ಅಮುಲ್ ತನ್ನ ಪ್ರಕಟಣೆಯಲ್ಲಿ ಹೇಳಿದೆ. ನಮ್ಮ ಘಟಕದ ಸದಸ್ಯರ ಒಕ್ಕೂಟಗಳು ಕಳೆದ ವರ್ಷ ಶೇ.6ರಿಂದ 8ರಷ್ಟು ಬೆಲೆಯನ್ನು ಹೆಚ್ಚಳ ಮಾಡಿಕೊಂಡಿವೆ. ಅಮುಲ್ ದೇಶದಾದ್ಯಂತ ತನ್ನ ಡೈರಿ ಉತ್ಪನ್ನಗಳನ್ನು ಮಾರಾಟ ಮಾಡುವ ದೊಡ್ಡ ಕಂಪನಿಯಾಗಿದೆ. ಕೊನೆಯ ಬಾರಿ 2023 ಫೆಬ್ರವರಿಯಲ್ಲಿ ಅಮುಲ್ ಉತ್ಪನ್ನಗಳ ಬೆಲೆ ಏರಿಕೆಯಾಗಿತ್ತು.
ರೈತರಿಗೆ ಎಷ್ಟು ಹೋಗುತ್ತೆ?
ಕಂಪನಿ ಕಳೆದ ವರ್ಷ ಫೆಬ್ರವರಿ 2023ರಲ್ಲಿ ಅಮುಲ್ ಮಾರುಕಟ್ಟೆ ತನ್ನ ತಾಜಾ ಹಾಲಿ ಪಾಕೆಟ್ ಬೆಲೆಯನ್ನು ಏರಿಕೆ ಮಾಡಿಲ್ಲ. ಗ್ರಾಹಕರು ಪಾವತಿಸುವ ಒಂದು ರೂಪಾಯಿಯಲ್ಲಿ 88 ಪೈಸೆ ರೈತರಿಗೆ ನೀಡಲಾಗುತ್ತದೆ. ಈ ಬೆಲೆ ಏರಿಕೆಯು ನಮ್ಮ ಹಾಲು ಉತ್ಪಾದಕರಿಗೆ ನ್ಯಾಯಯುತವಾದ ಬೆಲೆಯನ್ನು ನೀಡಲು ಕಾಯ್ದುಕೊಳ್ಳಲು ಸಹಾಯ ಮಾಡುತ್ತದೆ. ಈ ಬೆಲೆ ಏರಿಕೆ ಹಾಲು ಉತ್ಪಾದನೆಯ ಹೆಚ್ಚಳವನ್ನು ಉತ್ತೇಜಿಸುತ್ತದೆ ಎಂದು ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟ ತನ್ನ ಹೇಳಿಕೆಯಲ್ಲಿ ಮಾಹಿತಿ ನೀಡಿದೆ. ಇನ್ನುಳಿದಂತೆ ಸಾಗರ್ ಕೆನೆ ತೆಗೆದ ಹಾಲಿನ ಬೆಲೆಗಳಲ್ಲಿ ಯಾವುದೇ ಬದಲಾವಣೆಗಳು ಆಗಿಲ್ಲ.
ದೇಶಾದ್ಯಂತ ಇಂದಿನಿಂದ ಟೋಲ್ ದರ ಶೇ.5 ಹೆಚ್ಚಳ, ಚುನಾವಣೆ ಕಾರಣ 2 ತಿಂಗಳ ಬಳಿಕ ಜಾರಿ!
ಹೊಸದರಗಳು ಹೀಗಿವೆ
ಅಮುಲ್ ಗೋಲ್ಡ್ ಅರ್ಧ ಲೀಟರ್ ಬೆಲೆ 33 ರಿಂದ 34 ರೂಪಾಯಿ ಆಗಿದೆ.
ಅಮುಲ್ ಗೋಲ್ಡ್ ಒಂದು ಲೀಟರ್ ಬೆಲೆ 66 ರಿಂದ 68 ರೂಪಾಯಿ ಆಗಿದೆ.
ಅಮುಲ್ ಹಸುವಿನ ಒಂದು ಲೀಟರ್ ಹಾಲಿನ ಬೆಲೆ 56 ರಿಂದ 57 ರೂಪಾಯಿ ಆಗಿದೆ.
ಅಮುಲ್ ತಾಜಾ ಒಂದು ಲೀಟರ್ ಹಾಲಿನ ಬೆಲೆ 54 ರಿಂದ 56 ರೂಪಾಯಿ ಆಗಿದೆ.
ಅಮುಲ್ ಎಮ್ಮೆ ಹಾಲಿನ ಒಂದು ಲೀಟರ್ ಬೆಲೆ 70 ರಿಂದ 73 ರೂಪಾಯಿ ಆಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ