ಭಾನುವಾರ ಮಧ್ಯರಾತ್ರಿಯಿಂದಲೇ ದೇಶಾದ್ಯಂತ ಎಲ್ಲ ಟೋಲ್ ಪ್ಲಾಜಾ಼ಗಳಲ್ಲಿ ವಾಹನ ಟೋಲ್ ಶುಲ್ಕವನ್ನು ಶೇ.5ರಷ್ಟು ಹೆಚ್ಚಳ ಮಾಡಲಾಗಿದೆ ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಿಳಿಸಿದೆ.
ನವದೆಹಲಿ (ಜೂ.3): ಭಾನುವಾರ ಮಧ್ಯರಾತ್ರಿಯಿಂದಲೇ ದೇಶಾದ್ಯಂತ ಎಲ್ಲ ಟೋಲ್ ಪ್ಲಾಜಾಗಳಲ್ಲಿ ವಾಹನ ಟೋಲ್ ಶುಲ್ಕವನ್ನು ಶೇ.5ರಷ್ಟು ಹೆಚ್ಚಳ ಮಾಡಲಾಗಿದೆ ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಿಳಿಸಿದೆ.
ಟೋಲ್ ಕಟ್ಟುವ ವೇಳೆ ಸಿಬ್ಬಂದಿ, ವಾಹನ ಸವಾರ ನಡುವೆ ಗಲಾಟೆ
ಸಾಮಾನ್ಯವಾಗಿ ಪ್ರತಿವರ್ಷ ಏ.1ರಿಂದಲೇ ವಾರ್ಷಿಕ ಶುಲ್ಕ ಹೆಚ್ಚಳ ಮಾಡಲಾಗುತ್ತದೆ. ಆದರೆ ಈ ಬಾರಿ ಲೋಕಸಭಾ ಚುನಾವಣೆಯ ಪ್ರಕ್ರಿಯೆ ಮುಗಿಯುವವರೆಗೆ ಟೋಲ್ ಶುಲ್ಕಗಳಲ್ಲಿ ಹೆಚ್ಚಳ ಮಾಡಬಾರದು ಎಂದು ಚುನಾವಣಾ ಆಯೋಗ ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ಚುನಾವಣೆ ಮುಗಿದ ಕಾರಣ ಜೂ.3ರಿಂದ ಆದೇಶವನ್ನು ಜಾರಿಗೆ ತರಲಾಗಿದೆ ಎಂದು ಎನ್‌ಎಚ್‌ಎಐ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ದೇಶಾದ್ಯಂತ 855 ಟೋಲ್‌ಪ್ಲಾಜಾ಼ಗಳಿದ್ದು, ಇದರಲ್ಲಿ 675 ಪ್ಲಾಜಾ಼ಗಳಲ್ಲಿ ಜನರಿಂದ ಶುಲ್ಕ ವಸೂಲು ಮಾಡುತ್ತಿದ್ದರೆ 180ರಲ್ಲಿ ಪ್ರಾಯೋಜಕರಿಂದ ಹಣ ಸಂಗ್ರಹಿಸಲಾಗುತ್ತಿದೆ.
ಹೊಸ ಬಳಕೆದಾರರ ಶುಲ್ಕವು ಜೂನ್ 3 ರಿಂದ ಜಾರಿಗೆ ಬರಲಿದೆ ಎಂದು ಹಿರಿಯ ಎನ್‌ಎಚ್‌ಎಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಟೋಲ್ ಶುಲ್ಕದಲ್ಲಿನ ಬದಲಾವಣೆಯು ಸಗಟು ಬೆಲೆ ಸೂಚ್ಯಂಕ (CPI) ಆಧಾರಿತ ಹಣದುಬ್ಬರದಲ್ಲಿನ ಬದಲಾವಣೆಗಳಿಗೆ ಸಂಬಂಧಿಸಿರುವ ದರಗಳನ್ನು ವಾರ್ಷಿಕ ಪರಿಷ್ಕರಣೆಯ ಭಾಗವಾಗಿ ಮಾಡಲಾಗಿದೆ. 2008 ರ ನಿಯಮದ ಪ್ರಕಾರ ಬಳಕೆದಾರರ ಶುಲ್ಕವನ್ನು ನಿಗದಿ ಮಾಡಿ ವಿಧಿಸಲಾಗುತ್ತದೆ.
ಮಂಡ್ಯ ಸಂಸದೆ ತ್ಯಾಗಕ್ಕೆ ಸಿಗ್ಲಿಲ್ಲ ಪ್ರತಿಫಲ, ಸುಮಲತಾ ಬಿಟ್ಟು 3 ಕ್ಷೇತ್ರಗಳಿಗೆ ಬಿಜೆಪಿ ಟಿಕೆಟ್ ಘೋಷಣೆ!
ಬೆಂಗಳೂರು-ಮೈಸೂರು, ಬೆಂಗಳೂರು-ಹೈದರಾಬಾದ್ ಮತ್ತು ತುಮಕೂರು-ಹೊನ್ನಾವರ ಹೆದ್ದಾರಿ ಮತ್ತು ಹೊಸ ಕೋಟೆ- ದೇವನಹಳ್ಳಿ ಸ್ಯಾಟಲೈಟ್ ಟೌನ್ ರಿಂಗ್ ರಸ್ತೆಯಲ್ಲಿ ಪ್ರಯಾಣಿಸುವ ಪ್ರಯಾಣಿಕರು ಶೇ. 3 ರಿಂದ ಶೇ. 25 ರಷ್ಟು ಹೆಚ್ಚಿನ ಹಣವನ್ನು ಪಾವತಿಸಬೇಕಾಗುತ್ತದೆ ಎಂದು NHAI ವರದಿ ತಿಳಿಸಿದೆ. ಹೊಸ ಶುಲ್ಕಗಳು ಮಾರ್ಚ್ 31, 2025 ರವರೆಗೆ ಜಾರಿಯಲ್ಲಿರುತ್ತವೆ.
ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಓಡಾಡುವ ಪ್ರಯಾಣಿಕರು ಕಾರು, ವ್ಯಾನ್ ಮತ್ತು ಜೀಪ್ ಗಳಿಗೆ ಒಂದು ಬಾರಿಗೆ ರೂ. 330 ಟೋಲ್ ಗೆ ನೀಡಬೇಕಾಗುತ್ತದೆ. ಬೆಂಗಳೂರು-ನಿಡಘಟ್ಟ ಸೆಕ್ಷನ್ ವರೆಗೂ ರೂ. 170 ಮತ್ತು ನಿಡಘಟ್ಟ-ಮೈಸೂರು ನಡುವಣ ರೂ.160 ರೂ. ಇದೆ. ದೊಡ್ಡಬಳ್ಳಾಪುರ ಬೈಪಾಸ್ ಮತ್ತು ಹೊಸಕೋಟೆ ನಡುವೆ ಓಡಾಡುವ ಕಾರು, ವ್ಯಾನ್ ಮತ್ತು ಜೀಪ್ ರೂ. 80 (ಸಿಂಗಲ್ ಜರ್ನಿ) ರೂ. 120 (ರಿಟರ್ನ್ ಜರ್ನಿ)ಗೆ ಪಾವತಿಸಬೇಕು.