ವಡೋದರಾ: ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ತಮ್ಮ ಭಾರತ ಪ್ರವಾಸದ ಮೊದಲ ದಿನ ಗುಜರಾತ್‌ನ ಜೆಸಿಬಿ ಕಾರ್ಖಾನೆಯಲ್ಲಿ 'ಬುಲ್ಡೋಜರ್' ಮೇಲೇರಿ ಮಾಮೂಲಿ ಚಾಲಕನಂತೆ ಜೆಸಿಬಿಯನ್ನು ಚಲಾಯಿಸಲು ಪ್ರಯತ್ನಿಸಿದರು. ವಡೋದರಾ ಬಳಿ ಜೆಸಿಬಿ ಕಾರ್ಖಾನೆಯನ್ನು ನೋಡಲು ಅವರು ಭೇಟಿ ನೀಡಿದ ರೀತಿ ಅಂತರ್ಜಾಲದಲ್ಲಿ ಟ್ರೋಲ್‌ಗೆ ಕಾರಣವಾಗಿದೆ.
ಬ್ರಿಟನ್ ಕನ್ಸರ್ವೇಟಿವ್ ಪಕ್ಷದ ನಾಯಕ (Conservative Party leader) ಬೋರಿಸ್ ಜಾನ್ಸನ್ (Boris Johnson) ಅವರು ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ (Chief Minister Bhupendra Patel) ಅವರೊಂದಿಗೆ (ಏಪ್ರಿಲ್ 21) ನಿನ್ನೆ ಗುಜರಾತ್‌ನ ಪಂಚಮಹಲ್‌ನ (Panchmahal) ಹಲೋಲ್ ಜಿಐಡಿಸಿಯಲ್ಲಿರುವ (Halol GIDC) ಜೆಸಿಬಿ ನಿರ್ಮಾಣ ಘಟಕಕ್ಕೆ ಭೇಟಿ ನೀಡಿದರು ಮತ್ತು ಹೊಳೆಯುವ ಬ್ಯಾಕ್‌ಹೋ ಲೋಡರ್‌ಗೆ ಮೇಲೇರಿ ಎಂಜಾಯ್ ಮಾಡಿದರು. ಸುದ್ದಿಸಂಸ್ಥೆ ಎಎನ್‌ಐ ಹಂಚಿಕೊಂಡಿರುವ ವೀಡಿಯೊದಲ್ಲಿ 57 ವರ್ಷ ವಯಸ್ಸಿನ ಬೋರಿಸ್ ಜಾನ್ಸನ್ ಜೆಸಿಬಿ ಏರಿ ಅದರ ಎಂಜಿನ್ ಅನ್ನು ಚಲಾಯಿಸಲು ಯತ್ನಿಸುತ್ತಿರುವ ದೃಶ್ಯವಿದೆ.
ಜೆಸಿಬಿ ಎಂಬುದು ಬ್ರಿಟಿಷ್ ಬುಲ್ಡೋಜರ್ ತಯಾರಕ ಸಂಸ್ಥೆಯಾಗಿದ್ದು, ಪ್ರಸ್ತುತ ಭಾರತದಲ್ಲಿ ಬುಲ್ಡೋಜರ್ ಹವಾ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ. ಉತ್ತರಪ್ರದೇಶ ಪ್ರಧಾನಿ ಯೋಗಿ ಆದಿತ್ಯನಾಥ್ ರಾಜ್ಯದಲ್ಲಿ ಕ್ರಿಮಿನಲ್‌ಗಳ ಮನೆ ಮೇಲೆ ಹಾಗೂ ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಂಡಿರುವ ಸ್ಥಳಗಳಲ್ಲಿ ಬುಲ್ಡೋಜರ್ ಹತ್ತಿಸಿ ಧ್ವಂಸಗೊಳಿಸುತ್ತಿದ್ದಾರೆ. ಹೀಗಾಗಿ ಇದು ವಿವಾದಕ್ಕೀಡಾಗಿದ್ದು, ಕೆರಳಿದ ವಿವಾದದ ನಡುವೆಯೂ ಪ್ರಧಾನಿ ಬೋರಿಸ್ ಜಾನ್ಸನ್ ಈ ಅಸಾಧಾರಣ ಡೆಮಾಲಿಷರ್ ಅನ್ನು ಒಪ್ಪಿಕೊಂಡಿದ್ದಾರೆಯೇ ಎಂಬುದು ನಿಗೂಢವಾಗಿ ಉಳಿದಿದೆ.
ಭಾರತಕ್ಕೆ ಬಂದಿಳಿದ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್‌ಗೆ ಭವ್ಯ ಸ್ವಾಗತ!
ಬುಲ್ಡೋಜರ್ ಯೋಗಿ ಆದಿತ್ಯನಾಥ್ ಅವರ ಸರ್ಕಾರದ ಅನಧಿಕೃತ ಅದೃಷ್ಟವಾಗಿದೆ. ಏಕೆಂದರೆ ಅವರು ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿಯಾದ ಮೊದಲ ಅವಧಿಯಲ್ಲಿ, ಸರ್ಕಾರಿ ಯಂತ್ರವು ಬುಲ್ಡೋಜರ್ ಮೂಲಕ ಅಸಂಖ್ಯಾತ 'ಅಕ್ರಮ ಆಸ್ತಿ'ಗಳನ್ನು ಧ್ವಂಸಗೊಳಿಸಿತು ಮತ್ತು ಮಾಫಿಯಾಗಳು ಮತ್ತು ಕ್ರಿಮಿನಲ್‌ಗಳ ಅತಿಕ್ರಮಣವನ್ನು ತೆರವುಗೊಳಿಸಿತು. ಉತ್ತರಪ್ರದೇಶ ಸರ್ಕಾರವು ಬುಲ್ಡೋಜರ್‌ಗಳನ್ನು ಬಳಸಿಕೊಂಡಿದ್ದು, ಅಪರಾಧಿಗಳನ್ನು ಮಟ್ಟ ಹಾಕದೇ ಬಿಡುವುದಿಲ್ಲ ಎಂಬ ಖ್ಯಾತಿಯಿಂದಾಗಿ ಇದು ಉತ್ತರಪ್ರದೇಶ ಸಿಎಂ ಆದಿತ್ಯನಾಥ್ ಅವರಿಗೆ 'ಬುಲ್ಡೋಜರ್ ಬಾಬಾ' ಎಂಬ ಹೆಸರು ತಂದುಕೊಟ್ಟಿತು.
ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಭೇಟಿ ಮಾಡಿದ ಬ್ರಿಟನ್ ಪ್ರಧಾನಿ ಬೋರಿಸ್
ಇತ್ತ ಬೋರಿಸ್ ಜಾನ್ಸನ್ ಅವರು ಗುಜರಾತ್‌ಗೆ (Gujarat) ತಮ್ಮ ಮೊದಲ ಭೇಟಿಗಾಗಿ ಗುರುವಾರ ಬೆಳಗ್ಗೆ ಆಗಮಿಸಿದ್ದರು. ಮೊದಲು ಅಹಮದಾಬಾದ್‌ನ (Ahmedabad) ಸಬರಮತಿ ಆಶ್ರಮಕ್ಕೆ (Sabarmati Ashram) ಭೇಟಿ ನೀಡಿದ ಅವರು ಅಲ್ಲಿ ಚರಖಾದಲ್ಲಿ ತಮ್ಮ ಕೈ ಚಳಕ ತೋರಲು ಯತ್ನಿಸಿದರು. ಇಂದು ( ಏಪ್ರಿಲ್ 22) ಅವರು ಸರಣಿ ವಾಣಿಜ್ಯ ಒಪ್ಪಂದಗಳನ್ನು ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಹಲವಾರು ಉದ್ಯಮಿಗಳನ್ನು ಭೇಟಿ ಮಾಡಲಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ