Covid vaccine ಬೂಸ್ಟರ್‌ ಪಡೆದ 70% ಜನರಿಗೆ ಸೋಂಕಿಲ್ಲ!

By Kannadaprabha NewsFirst Published Apr 27, 2022, 4:26 AM IST
Highlights

- 5ರಿಂದ 12 ವರ್ಷದವರಿಗೆ ಕೋರ್ಬೆವ್ಯಾಕ್ಸ್‌
- 6ರಿಂದ 12 ವರ್ಷದ ಮಕ್ಕಳಿಗೆ ಕೋವ್ಯಾಕ್ಸಿನ್‌
- ಬೂಸ್ಟರ್‌ ಪಡೆದ 70% ಜನರಿಗೆ ಸೋಂಕಿಲ್ಲ

ನವದೆಹಲಿ(ಏ.27): ಕೊರೋನಾ ಲಸಿಕಾಕರಣ ವಿಚಾರದಲ್ಲಿ ಭಾರತ ಇನ್ನೊಂದು ಹೆಜ್ಜೆ ಮುಂದಿಟ್ಟಿದೆ. 5-12ರ ವಯೋಮಾನದ ಮಕ್ಕಳಿಗೆ ಕೋರ್ಬೆವ್ಯಾಕ್ಸ್‌ ಮತ್ತು 6-12 ವರ್ಷದ ಮಕ್ಕಳಿಗೆ ಕೋವ್ಯಾಕ್ಸಿನ್‌ ಕೋವಿಡ್‌ ಲಸಿಕೆಯ ತುರ್ತು ಬಳಕೆಗೆ ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ (ಡಿಸಿಜಿಐ) ಮಂಗಳವಾರ ಅನುಮೋದನೆ ನೀಡಿದೆ.

ಜೊತೆಗೆ 12 ವರ್ಷ ಮೇಲ್ಪಟ್ಟಮಕ್ಕಳಿಗೆ ಕ್ಯಾಡಿಲಾ ಕಂಪನಿ ಅಭಿವೃದ್ಧಿಪಡಿಸಿರುವ ಝೈಕೋವ್‌-ಡಿ ಲಸಿಕೆ ನೀಡಿಕೆಯಲ್ಲಿ ಕೊಂಚ ಬದಲಾವಣೆ ಮಾಡಲಾಗಿದೆ. ಹಾಲಿ ಝೈಕೋವ್‌-ಡಿ ಲಸಿಕೆಯನ್ನು 2 ಎಂಜಿಯಂತೆ 3 ಡೋಸ್‌ ನೀಡಲಾಗುತ್ತಿದೆ. ಅದರ ಬದಲು ಇನ್ನು ತಲಾ 28 ದಿನಗಳ ಅಂತರದಲ್ಲಿ 3 ಎಂಜಿಯ 2 ಡೋಸ್‌ ಮಾದರಿ ಅನುಸರಿಸಲು ಅನುಮತಿ ನೀಡಲಾಗಿದೆ.

ಕೋವಿಡ್ ಹೆಚ್ಚಾಗುವ ಬಗ್ಗೆ ಎಚ್ಚರಿಕೆ, ವರ್ಷಕ್ಕೊಂದು ಡೋಸ್ ಪಡೆಯುವ ಬಗ್ಗೆ ಸುಧಾಕರ್ ಹೇಳಿದ್ದು ಹೀಗೆ

ಇತ್ತೀಚೆಗಷ್ಟೇ ವಿಷಯ ತಜ್ಞರ ಸಮಿತಿಯು, 5-12ರ ವಯೋಮಾನದ ಮಕ್ಕಳಿಗೆ ಹೈದರಾಬಾದ್‌ ಮೂಲದ ಬಯೋಲಾಜಿಕಲ್‌ ಇ ಸಂಸ್ಥೆ ಅಭಿವೃದ್ಧಿಪಡಿಸಿರುವ ಕೋರ್ಬೆವ್ಯಾಕ್ಸ್‌ ಲಸಿಕೆ ನೀಡಲು ಶಿಫಾರಸು ಮಾಡಿತ್ತು. ಅದರ ಬೆನ್ನಲ್ಲೇ ಇದೀಗ ಡಿಸಿಜಿಐ ಮಕ್ಕಳಿಗೆ ಲಸಿಕೆ ನೀಡಲು ಅನುಮೋದನೆ ನೀಡಿದೆ. ಈಗಾಗಲೇ ಇದೇ ಲಸಿಕೆಯನ್ನು 12-14ರ ವಯೋಮಾನದ ಮಕ್ಕಳಿಗೆ ನೀಡಲಾಗುತ್ತಿದೆ. ಕೋವ್ಯಾಕ್ಸಿನ್‌ ಅನ್ನು 12ರಿಂದ 18 ವರ್ಷದ ಮಕ್ಕಳಿಗೆ ನೀಡಲು 2021ರ ಡಿ.24ರಂದೇ ಡಿಸಿಜಿಐ ಶಿಫಾರಸು ಮಾಡಿತ್ತು.

ಬೂಸ್ಟರ್‌ ಪಡೆದ 70% ಜನರಿಗೆ ಸೋಂಕಿಲ್ಲ
ದೇಶದಲ್ಲಿ ಬೂಸ್ಟರ್‌ ಡೋಸ್‌ ಪಡೆದ ಶೇ.70ರಷ್ಟುಜನರಿಗೆ 3ನೇ ಅಲೆಯಲ್ಲಿ ಸೋಂಕು ತಗಲಿಲ್ಲ ಎಂದು ಅಧ್ಯಯನ ವರದಿಯೊಂದು ಹೇಳಿದೆ.

ಲಸಿಕೆ ಪಡೆಯದವರೇ ಆಸ್ಪತ್ರೆಗೆ ದಾಖಲು
3 ಲಕ್ಷಕ್ಕೂ ಅಧಿಕ ಜನರು ಬೆಂಗಳೂರಿನಲ್ಲಿ 2ನೇ ಡೋಸ್‌ ಪಡೆದಿಲ್ಲ. ಅಂತಹವರೇ ಹೆಚ್ಚಾಗಿ ಸೋಂಕಿನಿಂದ ಆಸ್ಪತ್ರೆಗೆ ಸೇರುತ್ತಿದ್ದಾರೆ ಎಂದು ಬಿಬಿಎಂಪಿ ಹೇಳಿದೆ.

ಒಮಿಕ್ರಾನ್ ಉಪತಳಿ ವಿರುದ್ಧ ಕೋವಿಶೀಲ್ಡ್‌ ಲಸಿಕೆ ಪರಿಣಾಮಕಾರಿ ಅಲ್ಲ, ಅಧ್ಯಯನ ವರದಿ ತಂದ ಆತಂಕ!

ಲಸಿಕೆಯ ಹೆಜ್ಜೆಗಳು
2021 ಜ.16 ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು
2021 ಮಾ.1 60 ವರ್ಷ ಮೇಲ್ಪಟ್ಟವರು, ಅನಾರೋಗ್ಯಪೀಡಿತ 45 ವರ್ಷ ಮೇಲ್ಪಟ್ಟವರು
2021 ಏ.1 45 ವರ್ಷ ಮೇಲ್ಪಟ್ಟಎಲ್ಲರೂ
2021 ಮೇ 1 18 ವರ್ಷ ಮೇಲ್ಪಟ್ಟಎಲ್ಲರೂ
2022 ಜ.3 15-18 ವರ್ಷದವರಿಗೆ
2022 ಜ.10 60 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್‌ ಡೋಸ್‌
2022 ಏ.10 18 ವರ್ಷ ಮೇಲ್ಪಟ್ಟಎಲ್ಲರಿಗೂ ಮುಂಜಾಗ್ರತಾ ಡೋಸ್‌

ಜನರೇ ಆರೋಗ್ಯ ಕಾಪಾಡಿಕೊಳ್ಳಿ
ಆರೋಗ್ಯ ಶಿಬಿರದಲ್ಲಿ ಉಚಿತವಾಗಿ ದೊರೆಯುವ ಔಷಧೋಪಚಾರಗಳನ್ನು ಬಳಸಿಕೊಂಡು ಉತ್ತಮ ಆರೋಗ್ಯ ಕಾಪಾಡಿಕೊಳ್ಳುವಂತೆ ಶಾಸಕ ರವೀಂದ್ರ ಶ್ರೀಕಂಠಯ್ಯ ಸಲಹೆ ನೀಡಿದರು.ಪಟ್ಟಣದ-ಗಂಜಾಂ ರಸ್ತೆಯಲ್ಲಿನ ಸರ್ಕಾರಿ ಮೆಟ್ರಿಕ್‌ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ 75ನೇ ಸ್ವತಂತ್ರ್ಯೋತ್ಸವದ ಅಂಗವಾಗಿ ಜಿಲ್ಲಾಡಳಿತ, ತಾಲೂಕು ಆಡಳಿತ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಆಯೋಜಿಸಲಾಗಿದ್ದ ಆರೋಗ್ಯ ಮೇಳವನ್ನು ಶಾಸಕ ರವೀಂದ್ರ ಶ್ರೀಕಂಠಯ್ಯ ಉದ್ಘಾಟಿಸಿ ಮಾತನಾಡಿದರು.ನಂತರ ಅರ್ಹ ಫಲಾನುಭವಿಗಳಿಗೆ ಉಚಿತ ಶ್ರವಣ ಉಪಕರಣ ವಿತರಿಸಿ ಮಾತನಾಡಿದ ಶಾಸಕರು, ಸರ್ಕಾರದ ಯೋಜನೆಯನ್ನು ಪ್ರತಿಯೊಬ್ಬರೂ ಸದ್ಬಳಕೆ ಮಾಡಿಕೊಳ್ಳಬೇಕು. ಉಚಿತವಾಗಿ ದೊರೆಯುವ ಔಷಧೋಪಚಾರ ಹಾಗೂ ಇತರೆ ಅಗತ್ಯ ಸೌಲಭ್ಯಗಳನ್ನು ಬಳಸಿಕೊಂಡು ತಮ್ಮ ಆರೋಗ್ಯವನ್ನು ಉತ್ತಮ ಪಡಿಸಿಕೊಳ್ಳಬೇಕು ಎಂದರು.

click me!