ನಿಮಗೇನಾದ್ರೂ ಸಂವೇದನೆ ಇದ್ಯಾ.. ಲಿಕ್ಕರ್ ಲೈಸೆನ್ಸ್ ನವೀಕರಣ ಶುಲ್ಕದ ವಿರುದ್ಧ ಸಲ್ಲಿಸಿದ್ದ ಅರ್ಜಿ ವಜಾ ಮಾಡಿದ ಕೋರ್ಟ್!

Published : Mar 30, 2022, 04:08 PM IST
ನಿಮಗೇನಾದ್ರೂ ಸಂವೇದನೆ ಇದ್ಯಾ.. ಲಿಕ್ಕರ್ ಲೈಸೆನ್ಸ್ ನವೀಕರಣ ಶುಲ್ಕದ ವಿರುದ್ಧ ಸಲ್ಲಿಸಿದ್ದ ಅರ್ಜಿ ವಜಾ ಮಾಡಿದ ಕೋರ್ಟ್!

ಸಾರಾಂಶ

ಮದ್ಯ ಲೈಸೆನ್ಸ್ ನವೀಕರಣ ಶುಲ್ಕದಲ್ಲಿ ಹೆಚ್ಚಳ ಮಾಡಿದ ಮಹಾರಾಷ್ಟ್ರ ಸರ್ಕಾರ ಸರ್ಕಾರದ ಆದೇಶದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದ ಹೋಟೆಲ್-ರೆಸ್ಟೋರೆಂಟ್ ಒಕ್ಕೂಟ ಸಂವೇದನೆ ಇದ್ಯಾ ನಿಮಗೆ.. ಇದೊಂದು ಬೇಜವಾಬ್ದಾರಿಯ ಅರ್ಜಿ ಎಂದು ಹೇಳಿದ ಹೈಕೋರ್ಟ್

ಮುಂಬೈ (ಮಾ. 30): ಹೋಟೆಲ್ ಮತ್ತು ರೆಸ್ಟೋರೆಂಟ್ ಅಸೋಸಿಯೇಷನ್ (ವೆಸ್ಟರ್ನ್ ಇಂಡಿಯಾ) (Hotel & Restaurant Association), ಇಂಡಿಯನ್ ಹೋಟೆಲ್ ಮತ್ತು ರೆಸ್ಟೋರೆಂಟ್ ಅಸೋಸಿಯೇಷನ್ ( AHAR) ಮತ್ತು ಹೋಟೆಲ್‌ಗಳನ್ನು ಪ್ರತಿನಿಧಿಸುವ ಇತರ ವಿದೇಶಿ ಮದ್ಯ (ಎಫ್‌ಎಲ್) ಮಾರಾಟಗಾರರನ್ನು ಪ್ರತಿನಿಧಿಸಿಧ ಎರಡು ಮನವಿಗಳನ್ನು ಬಾಂಬೆ ಹೈಕೋರ್ಟ್ (Bombay High Court ) ಮಂಗಳವಾರ ವಜಾಗೊಳಿಸಿದೆ.

2020ರ ಜನವರಿ 28 ರಂದು ಮಹಾರಾಷ್ಟ್ರ ಸರ್ಕಾರ ಹೊರಡಿಸಿದ ಅಧಿಸೂಚನೆಯ ಪ್ರಕಾರ, 2021–2022ಕ್ಕೆ ವಿದೇಶಿ ಮದ್ಯ (3) (foreign liquor or FL) ಲೈಸೆನ್ಸ್ ನವೀಕರಣದ ಶುಲ್ಕದಲ್ಲಿ ಶೇ. 15ರಷ್ಟು ಏರಿಕೆ ಮಾಡಲಾಗಿತ್ತು. ಕೋವಿಡ್ ಹಾಗೂ ಸರ್ಕಾರದ ಲಾಕ್ ಡೌನ್ ಕಾರಣದಿಂದಾಗಿ ಈ ಶುಲ್ಕದಲ್ಲಿ ವಿನಾಯಿತಿ ನೀಡುವಂತೆ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿತ್ತು.

ನ್ಯಾಯಮೂರ್ತಿಗಳಾದ ಜಿಎಸ್ ಪಟೇಲ್ ಮತ್ತು ಮಾಧವ್ ಜೆ ಜಾಮ್ದಾರ್ ಅವರ ಪೀಠದ ಮುಂದೆ ಅರ್ಜಿದಾರರ ಪರವಾಗಿ ವಾದ ಮಂಡಿಸಿದ ವಕೀಲರು, ಕೋವಿಡ್-19 ನಿಂದ ಇವರೂ ಕೂಡ ಸಮಸ್ಯೆಗೆ ಒಳಗಾಗಿದ್ದಾರೆ, ಇವರ ವ್ಯವಹಾರಗಳಿಗೂ ಏಟು ಬಿದ್ದಿದೆ. ಆ ಕಾರಣಕ್ಕಾಗಿ ಶುಲ್ಕದಲ್ಲಿ ವಿನಾಯಿತಿ ನೀಡುವಂತೆ ವಾದ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಕೋರ್ಟ್, ಇದೊಂದು ಸಂಪೂರ್ಣ ಬೇಜವಾಬ್ದಾರಿಯಿಂದ ಕೂಡಿದ ಅರ್ಜಿ. ನಿಮಗೆ ಸಂವೇದನೆಗಳೇ ಇಲ್ಲ ಎನ್ನುವುದನ್ನು ಇದು ತೋರಿಸುತ್ತದೆ ಎಂದು ಛೀಮಾರಿ ಹಾಕಿದೆ. ಅದರೊಂದಿಗೆ ನ್ಯಾಯಾಲಯವು ಒಂಬತ್ತು ಅರ್ಜಿದಾರರ ಸಂಘಗಳಿಗೆ ತಲಾ 1 ಲಕ್ಷ ರೂ. (ಒಟ್ಟು ಒಂಬತ್ತು ಲಕ್ಷ ರೂ.) ದಂಡ ವಿಧಿಸಿದ್ದು , ಎರಡು ವಾರಗಳಲ್ಲಿ ಈ ಹಣವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ (Chief Minister’s Relief Fund) ಹಾಕಬೇಕು ಎಂದು ಆದೇಶ ನೀಡಿದೆ.

"ನ್ಯಾಯಾಲಯದ ಸಮಯವನ್ನು ಲಘುವಾಗಿ ತೆಗೆದುಕೊಳ್ಳಬಾರದು ಅಥವಾ ನ್ಯಾಯಾಲಯದ ಪ್ರಕರಣದಲ್ಲಿ ತಮಾಷೆ ಮಾಡುವ ಯಾವುದೇ ಪ್ರಯತ್ನ ಮಾಡಬಾರದು ಎಂಬ ದೃಢ ಸಂಕೇತವನ್ನು ಕಳುಹಿಸಲು ಇದು ಸಮಯ ಎಂದು ನಾವು ನಂಬುತ್ತೇವೆ. ಕ್ಷುಲ್ಲಕ ವಿಷಯಗಳಲ್ಲಿ ನ್ಯಾಯಾಲಯದ ಸಮಯವನ್ನು ಹಾಳುಮಾಡಿದಾಗ, ಪರಿಣಾಮಗಳು ಉಂಟಾಗುತ್ತವೆ ಎಂದು ನ್ಯಾಯಮೂರ್ತಿ ಗೌತಮ್ ಎಸ್ ಪಟೇಲ್ ಮತ್ತು ನ್ಯಾಯಮೂರ್ತಿ ಮಾಧವ್ ಜೆ ಜಾಮ್ದಾರ್ ಅವರ ವಿಭಾಗೀಯ ಪೀಠವು ಅಭಿಪ್ರಾಯಪಟ್ಟಿದೆ.

ಸಾಧುವಿನ ರೂಪದಲ್ಲಿದ್ದ ರೇಪಿಸ್ಟ್‌, ಮದ್ಯ ಕುಡಿಸಿ ಅಪ್ರಾಪ್ತೆಯ ಅತ್ಯಾಚಾರ: ಗಣ್ಯರೇ ಈತನ ಭಕ್ತರು!

ಒಂಬತ್ತು ಅಸೋಸಿಯೇಷನ್‌ಗಳು ಮತ್ತು ನಾಲ್ಕು ಹೋಟೆಲ್ ಮಾಲೀಕರನ್ನು ಒಳಗೊಂಡಿರುವ ಅರ್ಜಿದಾರರು, ಕೋವಿಡ್ -19 ಸಾಂಕ್ರಾಮಿಕ ನಿರ್ಬಂಧಗಳಿಂದಾಗಿ ಶೇ. 50 ರಷ್ಟು ಮಾತ್ರ ಕಾರ್ಯನಿರ್ವಹಿಸಲು ಸರ್ಕಾರ ಅನುಮತಿ ನೀಡಿತ್ತು. ಹಾಗಾಗಿ ಲೈಸೆನ್ಸ್ ಶುಲ್ಕ ನವೀಕರಣದ ವಿಚಾರದಲ್ಲಿ ಸಮಯದ ವಿಸ್ತರಣೆ, ಕಂತು ಪಾವತಿಯ ಸೌಲಭ್ಯ ಅಥವಾ ಶುಲ್ಕದಲ್ಲಿಯೇ ಕಡಿತ ಮಾಡುವಂತೆ ಮನವಿ ಮಾಡಿದ್ದರು.

ಹೈಡ್ರೋಜನ್ ಕಾರಲ್ಲಿ ಸಂಸತ್ತಿಗೆ ಬಂದ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ!

ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ವಿರಾಗ್ ತುಲ್ಜಾಪುರ್ಕರ್ ಅವರು ಸರ್ಕಾರದ ಅಧಿಸೂಚನೆಯನ್ನು "ಅಸಮಂಜಸ ಮತ್ತು ಅನಿಯಂತ್ರಿತ" ಎಂದು ಕರೆದಿದ್ದರು. ಹಿಂದಿನ ವರ್ಷಕ್ಕೆ ಈಗಾಗಲೇ ಶೇ. 100 ಪಾವತಿಸಿದವರಿಗೆ 2021-2022 ರ ಅವಧಿಗೆ 50% ರಷ್ಟು 'ಹೊಂದಾಣಿಕೆ' ಮಾಡಲು ಅವಕಾಶ ನೀಡಬೇಕು ಎಂದು ಕೋರಿದರು. ಅರ್ಜಿದಾರರು ವಿಪತ್ತು ನಿರ್ವಹಣಾ ಕಾಯಿದೆ, 2005 ರ ಅಡಿಯಲ್ಲಿ ಕೋವಿಡ್-19 ದುರಂತದ "ಬಲಿಪಶುಗಳು" ಆದ್ದರಿಂದ ಅವರ ನಷ್ಟವನ್ನು ತಗ್ಗಿಸಲು ಶುಲ್ಕದಲ್ಲಿ ಕಡಿತ ಮಾಡಬೇಕು ಎಂದು ಒತ್ತಾಯಿಸಿದ್ದರು.
ಈ ಅರ್ಜಿಯು ಆರಂಭದಿಂದ ಕೊನೆಯವರೆಗೂ ಸಂಪೂರ್ಣವಾಗಿ ನಿಷ್ಪ್ರಯೋಜಕವಾಗಿದೆ. ಕೋವಿಡ್ ಸಾಂಕ್ರಾಮಿಕವನ್ನು ಎಲ್ಲಾ ಉದ್ಯಮಗಳು ತಮ್ಮ ವಿನಾಯಿತಿಗಳಿಗೆ ಸೇರಿಸಬಹುದು ಎನ್ನುವುದನ್ನು ನಾವು ಒಪ್ಪುವುದಿಲ್ಲ. ಸಾಂಕ್ರಾಮಿಕ ರೋಗವು ಎಲ್ಲರನ್ನೂ ಬಾಧಿಸಿತು. ಎಲ್ಲಾ ವ್ಯವಹಾರಗಳು ಹಾನಿಗೊಳಗಾದವು. ಪ್ರಸ್ತುತ ಅರ್ಜಿದಾರರಿಗೆ ಯಾವುದೇ ದೊಡ್ಡ ಮಟ್ಟದ ಉಂಟಾಗಿಲ್ಲ ಎಂದು ಕೋರ್ಟ್ ಹೇಳಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!