ಬೆಂಗಳೂರಿನಿಂದ ಹೊರಟ ಇಂಡಿಗೋ ವಿಮಾನದಲ್ಲಿ ನೀಡಿದ ಸ್ಯಾಂಡ್‌ವಿಚ್‌ನಲ್ಲಿ ಸಿಕ್ತು ಬೋಲ್ಟ್‌

By Anusha Kb  |  First Published Feb 14, 2024, 1:19 PM IST

ಇಂಡಿಗೋ ವಿಮಾನದಲ್ಲಿ ಪ್ರಯಾಣಿಕರೊಬ್ಬರಿಗೆ ವಿಮಾನದ ಸಿಬ್ಬಂದಿ ನೀಡಿದ ಸ್ಯಾಂಡ್‌ವಿಚ್‌ನಲ್ಲಿ ಬೋಲ್ಟ್ ಸಿಕ್ಕಿದೆ. ಸ್ವತಃ ವಿಮಾನ ಪ್ರಯಾಣಿಕ ಈ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಬೆಂಗಳೂರು: ಇಂಡಿಗೋ ವಿಮಾನದಲ್ಲಿ ಪ್ರಯಾಣಿಕರೊಬ್ಬರಿಗೆ ವಿಮಾನದ ಸಿಬ್ಬಂದಿ ನೀಡಿದ ಸ್ಯಾಂಡ್‌ವಿಚ್‌ನಲ್ಲಿ ಬೋಲ್ಟ್ ಸಿಕ್ಕಿದೆ. ಸ್ವತಃ ವಿಮಾನ ಪ್ರಯಾಣಿಕ ಈ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಿಂದ ಚೆನ್ನೈಗೆ ತೆರಳುತ್ತಿದ್ದ ಇಂಡಿಯೋ ವಿಮಾನದಲ್ಲಿ ಈ ಘಟನೆ ನಡೆದಿದೆ. 

ವಿಮಾನ ಪ್ರಯಾಣದ ವೇಳೆ ಏರ್‌ಲೈನ್ಸ್‌ಗಳು ನೀಡುವ ಆಹಾರದ ವಿಚಾರದಲ್ಲಿಇತ್ತೀಚೆಗೆ ಹೆಚ್ಚು ಹೆಚ್ಚು ಆರೋಪಗಳು ಕೇಳಿ ಬರುತ್ತಿವೆ. ಕೆಲ ದಿನಗಳ ಹಿಂದಷ್ಟೇ ಸಸ್ಯಾಹಾರದ ಆಹಾರದಲ್ಲಿ ಚಿಕನ್ ಫೀಸ್ ಸಿಕ್ಕ ಬಗ್ಗೆ ಮಹಿಳೆಯೊಬ್ಬರು ಆರೋಪಿಸಿದ್ದರು. ಈ ಘಟನೆ ಮಾಸುವ ಮೊದಲೇ ಈಗ ಇಂಡಿಗೋ ವಿಮಾನದಲ್ಲಿ ನೀಡಿದ ಸ್ಯಾಂಡ್‌ವಿಚ್‌ನಲ್ಲಿ ಬೋಲ್ಟ್ ಸಿಕ್ಕ ಬಗ್ಗೆ ಪ್ರಯಾಣಿಕರೊಬ್ಬರು ಆರೋಪಿಸಿದ್ದಾರೆ. 

Tap to resize

Latest Videos

undefined

ಏರ್‌ಪೋರ್ಟ್‌ ಟಾರ್‌ಮ್ಯಾಕ್‌ನಲ್ಲಿ ಆಹಾರ ತಿಂದ ಪ್ರಯಾಣಿಕರು: ಇಂಡಿಗೋಗೆ ಬರೋಬ್ಬರಿ 1.2 ಕೋಟಿ ರೂ. ದಂಡ!

ರೆಡಿಟ್‌ನಲ್ಲಿ @MacaroonI13601 ಎಂಬ ಬಳಕೆದಾರರೊಬ್ಬರು ಫೋಟೋ ಸಮೇತ ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ಇವರು ಫೆಬ್ರವರಿ ಒಂದರಂದು ಬೆಂಗಳೂರಿನಿಂದ ಚೆನ್ನೈಗೆ ಹೊರಟಿದ್ದ ಇಂಡಿಗೋ ವಿಮಾನದಲ್ಲಿ ಸ್ಪೀನಚ್‌ ಹಾಗೂ ಕಾರ್ನ್ ಸ್ಯಾಂಡ್‌ವಿಚ್‌ ಅನ್ನು ನೀಡಲಾಗಿತ್ತು. ಪ್ರಯಾಣದ ವೇಳೆ ಇವರು ಈ ಸ್ಯಾಂಡ್‌ವಿಚ್‌ ಅನ್ನು ಮುಟ್ಟಿರಲಿಲ್ಲ,  ಆದರೆ ವಿಮಾನದಿಂದ ಇಳಿದು ಹೋದ ಬಳಿಕ ಈ ಸ್ಯಾಂಡ್‌ವಿಚ್ ಅನ್ನು ತೆರೆದು ನೋಡಿದಾಗ ಅವರಿಗೆ ಶಾಕ್ ಕಾದಿತ್ತು. ಸ್ಯಾಂಡ್‌ವಿಚ್ ಮಧ್ಯದಲ್ಲಿ ಅವರಿಗೆ ಬೋಲ್ಟ್‌ ಸಿಕ್ಕಿತ್ತು.  ಈ ಹಿನ್ನೆಲೆಯಲ್ಲಿ ಅವರು ಇಂಡಿಗೋ ವಿಮಾನಯಾನ ಸಿಬ್ಬಂದಿಯನ್ನು ಸಂಪರ್ಕಿಸಿ ಕ್ಷಮೆ ಕೇಳುವಂತೆ ಆಗ್ರಹಿಸಿದ್ದಾರೆ. ಆದರೆ ಇಂಡಿಗೋ ವಿಮಾನ ಸಿಬ್ಬಂದಿ ಇವರ ಆರೋಪ ಸುಳ್ಳು ಎಂದು ವಾದ ಮಾಡಿದ್ದಾರೆ. ಅವರು  ಆಹಾರವನ್ನು ಬಳಸಿರುವುದರಿಂದ ಇದು ಸುಳ್ಳು ದೂರು ಎಂದು ವಿಮಾನದ ಸಿಬ್ಬಂದಿ ಆರೋಪಿಸಿದ್ದಾರೆ ಎಂದು ಈ ಪ್ರಯಾಣಿಕ ಆರೋಪಿಸಿದ್ದಾರೆ. 

ಇಂಡಿಗೋದಲ್ಲಿ ಸಾಮೂಹಿಕವಾಗಿ ಮೊಳಗಿದ “ರಾಮ್ ಆಯೇಂಗೆ’; ವಿಮಾನದಲ್ಲೊಂದು ವಿಶಿಷ್ಟ ಪ್ರಸಂಗ!

ಫೆ. 1 ರಂದು ನಾನು ಬೆಂಗಳೂರಿನಿಂದ ಚೆನ್ನೈಗೆ ಇಂಡಿಗೋ ವಿಮಾನದಲ್ಲಿ ಹೋಗಿದ್ದ ವೇಳೆ ವಿಮಾನದಲ್ಲಿ ನೀಡಿದ ಆಹಾರದಲ್ಲಿ ನನಗೆ ಬೋಲ್ಡ್ ಅಥವಾ ಸ್ಕ್ರೂ ಸಿಕ್ಕಿದೆ. ಈ ಬಗ್ಗೆ ವಿಮಾನ ಸಿಬ್ಬಂದಿಗೆ ಹೇಳಿದಾಗ ಅವರು ವಿಮಾನ ಹಾರಾಟ ಮುಗಿದ ನಂತರ ಅದನ್ನು ಸೇವಿಸಿದ ನಂತರ ಆರೋಪ ಮಾಡಬಾರದು ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸುವುದಕ್ಕಾಗಿ ನಾನು ಹೇಗೆ ಯಾರನ್ನು ಸಂಪರ್ಕಿಸಬೇಕು? ಎಂದು ಅವರು ಪ್ರಶ್ನೆ ಮಾಡಿದ್ದರು. ಈ ಪೋಸ್ಟ್ ಸ್ವಲ್ಪ ಹೊತ್ತಿನಲ್ಲಿ ವೈರಲ್ ಆಗಿದ್ದು, ಅನೇಕರು ಇಂಡಿಗೋ ಏರ್‌ಲೈನ್ಸ್ ಸಂಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವಿಚಾರವಾಗಿ ನೀವು ಗ್ರಾಹಕ ನ್ಯಾಯಾಲಯದಲ್ಲಿ ದೂರು ದಾಖಲಿಸಿ ಎಂದು ಕೆಲವರು ಸಲಹೆ ನೀಡಿದ್ದಾರೆ. 

Got a screw in my sandwich
byu/MacaroonIll3601 inbangalore

 

click me!