ಉತ್ತರ ಪ್ರದೇಶ(ಮೇ.30): ಕೊರೋನಾ ವೈರಸ್ ವಕ್ಕರಿಸಿದ ಬಳಿಕ ಅಮಾನವೀಯ ಘಟನೆಗಳು ಹೆಚ್ಚಾಗುತ್ತಿದೆ. ಸೋಂಕಿತರ ಆರೈಕೆ, ಶವ ಸಂಸ್ಕಾರಕ್ಕೆ ದುಬಾರಿ ಹಣ, ಸಂಕಷ್ಟಕ್ಕೆ ಮಿಡಿಯದ ಜನ ಸೇರಿದಂತೆ ಹಲವು ಘಟನೆಗಳು ವರದಿಯಾಗಿವೆ. ಇದೀಗ ಕುಟುಂಬದ ಸದಸ್ಯನೋರ್ವನ ಶವವನ್ನು ಸೇತುವೆ ಮೇಲಿನಿಂದ ನದಿಗೆ ಎಸೆದ ಘಟನೆ ನಡೆದಿದೆ
ಪತಿ ಅಂತ್ಯಸಂಸ್ಕಾರ ಮಾಡಿ ಬಂದ ಬಳಿಕ ಪತ್ನಿ ಸಾವು: ಸಾವಿನಲ್ಲೂ ಒಂದಾದ ದಂಪತಿ.
undefined
ಈ ಘಟನೆ ನಡೆದಿರುವುದು ಉತ್ತರ ಪ್ರದೇಸದ ಬಲರಾಮಪುರ ಜಿಲ್ಲೆಯ ರಾಪ್ತಿ ನದಿ ಸೇತುವೆ ಮೇಲೆ ನಡೆದಿದೆ. ಗಂಗಾ ನದಿಯಲ್ಲಿ ಕೋವಿಡ್ ಸೋಂಕಿತರ ಮೃತದೇಹ ತೇಲಿಬರುತ್ತಿರುವ ಘಟನೆ ಭಾರಿ ವಿವಾದಕ್ಕೆ ಕಾರಣವಾಗಿತ್ತು. ಬಳಿಕ ಸರ್ಕಾರ ಕಟ್ಟು ನಿಟ್ಟಿನ ಸೂಚನೆ ನೀಡಲಾಗಿದೆ. ಆದರೂ ಜನ ಮತ್ತೆ ಅದೇ ತಪ್ಪನ್ನು ಮಾಡುತ್ತಿದ್ದಾರೆ. ಗಂಗಾ ನದಿ ಕಿನಾರೆಯಲ್ಲಿ ಪೊಲೀಸ್ ಕಣ್ಗಾವಲು ಇರುವುದರಿಂದ ಇದೀಗ ರಾಪ್ತಿ ನದಿಯಲ್ಲಿ ಹೆಣಗಳು ತೇಲಲು ಆರಂಭವಾಗಿದೆ.
In UP's Balrampur district, video of body of man being thrown in the river from a bridge has surfaced. The body was of a man who succumbed to Covid on May 28. pic.twitter.com/DEAAbQzHsL
— Piyush Rai (@Benarasiyaa)ಮೇ.25 ರಂದು ಕೊರೋನಾ ಕಾರಣ ಕೋವಿಂಡ್ ಸೋಂಕಿತನನ್ನು ಬಲರಾಮಪುರ ಜಿಲ್ಲಾಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಾಯಾಗದೆ ಮೇ.28 ರಂದು ಸೋಂಕಿತ ಸಾವನ್ನಪ್ಪಿದ್ದ. ಹೊಸ ಮಾರ್ಗಸೂಚಿ ಪ್ರಕಾರ ಮೃತರ ಶವವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಕುಟುಂಬಸ್ಥರಿಗೆ ಪಿಪಿಐ ಕಿಟ್ ಒದಗಿಸಿ ಶವವನ್ನು ಸಾಗಿಸಲು ಸೂಚಿಸಲಾಗಿದೆ.
ಕೊರೋನಾ ಸೋಂಕಿಗೆ ಕಡಿವಾಣ ಬಿದ್ದರೂ ಸಾವಿನ ಸಂಖ್ಯೆ ತಗ್ಗುತ್ತಿಲ್ಲ, ಹೆಚ್ಚಾದ ಆತಂಕ!.
ಇದರಂತೆ ಕುಟುಂಬ ಇಬ್ಬರು ಸದಸ್ಯರು ಸೋಂಕಿತನ ಮೃತದೇಹವನ್ನು ಆಸ್ಪತ್ರೆಯಿಂದ ತೆಗೆದುಕೊಂಡು ಹೋಗಿ ರಾಪ್ತಿ ನದಿ ಸೇತುವೆ ಮೇಲೆ ಇರಿಸಿದ್ದಾರೆ. ಜಿಟಿ ಜಿಟಿ ಸುರಿಯುತ್ತಿರುವ ಮಳೆ ನಡುವೆ ಮೃತದೇಹವನ್ನು ಸೇತುವೆ ಮೇಲಿನಿಂದ ನದಿಗೆ ಎಸೆದಿದ್ದಾರೆ.
ಈ ಘಟನೆಯನ್ನು ಸೇತುವೆ ಮೇಲೆ ಸಾಗುತ್ತಿದ್ದ ಕಾರು ಪ್ರಯಾಣಿಕರು ಚಿತ್ರೀಕರಿಸಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸ್ಥಳೀಯ ಜಿಲ್ಲಾಡಳಿತ ಕಾರ್ಯಪ್ರವೃತ್ತರಾಗಿದೆ. ಕುಟುಂಬಸ್ಥರನ್ನು ಪತ್ತೆ ಹಚ್ಚಿ ಪ್ರಕರಣ ದಾಖಲಿಸಲಾಗಿದೆ.
ಗಂಗಾ ನದಿಯಲ್ಲಿ ಸುಮಾರು 71ಕ್ಕೂ ಹೆಚ್ಚು ಮೃತ ದೇಹಗಳನ್ನು ನದಿಯಿಂದ ತೆಗೆದು ಶವಸಂಸ್ಕಾರ ಮಾಡಲಾಗಿದೆ. ಬಳಿಕ ಕಟ್ಟು ನಿಟ್ಟಿನ ಸೂಚನೆ ಇದ್ದರೂ ಜನ ಮಾತ್ರ ಮತ್ತೆ ಮೃತದೇಹಗಳನ್ನು ನದಿಗೆ ಎಸೆಯುವ ಮೂಲಕ ಅಮಾನವೀಯವಾಗಿ ನಡೆದುಕೊಳ್ಳುತ್ತಿದ್ದಾರೆ.