ಮುಂಬೈನ 5 ಸೋಂಕಿತರಿಗೆ ಟ್ರಂಪ್‌ ಕೊರೋನಾ ಮಾಯ ಮಾಡಿದ್ದ ‘ಕಾ​ಕ್‌​ಟೇ​ಲ್‌ ಇಂಜೆ​ಕ್ಷ​ನ್‌’!

By Suvarna NewsFirst Published May 30, 2021, 11:12 AM IST
Highlights

* ಟ್ರಂಪ್‌ರ ‘ಕಾ​ಕ್‌​ಟೇ​ಲ್‌ ಇಂಜೆ​ಕ್ಷ​ನ್‌’ ಪಡೆ​ದ ಮುಂಬೈನ 5 ಸೋಂಕಿತರು

* ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ಗೆ ಕೊರೋನಾ ಗುಣ​ಪ​ಡಿ​ಸಿದ್ದ ಔಷ​ಧ

* ಅಮೆರಿಕದ ರೋಚಿಸ್‌ ಕಂಪನಿ ಅಭಿವೃದ್ಧಿಪಡಿಸಿರುವ ಔಷಧವನ್ನು ಭಾರತದಲ್ಲಿ ಬಿಡುಗಡೆ ಮಾಡಿದ ಸಿಪ್ಲಾ ಕಂಪನಿ

ಮುಂಬೈ(ಮೇ.30): ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ಗೆ ಕಳೆದ ಅಕ್ಟೋಬರ್‌ ವೇಳೆ ಕೊರೋನಾ ಸೋಂಕು ತಗುಲಿದ್ದ ವೇಳೆ ಅವರ ಚಿಕಿತ್ಸೆಗೆ ಬಳಸಲಾಗಿದ್ದ ಆ್ಯಂಡಿಬಾಡಿ ಕಾಕ್‌ಟೇಲ್‌ (ಕ್ಯಾಸಿರಿವಿಮ್ಯಾಬ್‌ ಮತ್ತು ಇಮ್‌ಡೆವಿಮ್ಯಾಬ್‌) ಇಂಜೆಕ್ಷನ್‌ ಭಾರ​ತ​ದಲ್ಲಿ ಬಿಡು​ಗಡೆ ಆದ ಬೆನ್ನಲ್ಲೇ, ಮುಂಬೈನ ಐದು ಮಂದಿ ಈ ಚುಚ್ಚುಮದ್ದು ತೆಗೆದು​ಕೊಂಡಿ​ದ್ದಾರೆ.

ಅಮೆರಿಕದ ರೋಚಿಸ್‌ ಕಂಪನಿ ಅಭಿವೃದ್ಧಿಪಡಿಸಿರುವ ಔಷಧವನ್ನು ಸಿಪ್ಲಾ ಕಂಪನಿ ಭಾರತದಲ್ಲಿ ಬಿಡುಗಡೆ ಮಾಡಿದ್ದು, ಅದಕ್ಕೆ 59750 ರು. ದರ ನಿಗದಿ ಮಾಡಲಾಗಿದೆ. ಬಾಂದ್ರಾದ ಲೀಲಾ​ವತಿ ಆಸ್ಪ​ತ್ರೆಯ ಇಬ್ಬರು, ಎಂಪಿ​ಸಿಟಿ ಆಸ್ಪ​ತ್ರೆಯ ಇಬ್ಬರು ರೋಗಿ​ಗಳು ಹಾಗೂ ಚೆಂಬುರ್‌ ಆಸ್ಪ​ತ್ರೆಯ ಒಬ್ಬ ರೋಗಿ ಈ ದುಬಾರಿ ಇಂಜೆ​ಕ್ಷನ್‌ ಅನ್ನು ಪಡೆ​ದಿ​ದ್ದಾರೆ.

ಈ ಮುನ್ನ ಗುರುಗ್ರಾಮದ ಮೇದಾಂತ ಆಸ್ಪತ್ರೆಯಲ್ಲಿ ದಾಖಲಾಗಿದ್ದ 84 ರೋಗಿ​ಯೊ​ಬ್ಬರು ಕಾಕ್‌ಟೇಲ್‌ ಇಂಜೆ​ಕ್ಷನ್‌ ಪಡೆ​ದ ಎರಡು ದಿನ​ದಲ್ಲೇ ಆಸ್ಪ​ತ್ರೆ​ಯಿಂದ ಬಿಡು​ಗಡೆ ಆಗಿ​ದ್ದರು.

click me!