ವೆಡ್ಡಿಂಗ್ ಶೂಟ್‌‌ನಲ್ಲಿ ನಾಚಿ ನೀರಾದ ಜೋಡಿಗೆ ನಿರ್ದೇಶಕನಾದ ಅಂಬಿಗ, ವೈರಲ್ ವಿಡಿಯೋ!

Published : May 31, 2024, 01:51 PM IST
ವೆಡ್ಡಿಂಗ್ ಶೂಟ್‌‌ನಲ್ಲಿ ನಾಚಿ ನೀರಾದ ಜೋಡಿಗೆ ನಿರ್ದೇಶಕನಾದ ಅಂಬಿಗ, ವೈರಲ್ ವಿಡಿಯೋ!

ಸಾರಾಂಶ

ಪ್ರೀ ವೆಡ್ಡಿಂಗ್ ಶೂಟ್‌ಗೆ ಬಂದ ನವ ಜೋಡಿ ನಾಚಿ ನೀರಾಗಿ ಫೋಟೋ ಪೋಸ್ ನೀಡಲು ಸಾಧ್ಯವಾಗಿಲ್ಲ. ಈ ವೇಳೆ ದೋಣಿ ನಡೆಸುವ ಅಂಬಿಗ ನವ ಜೋಡಿಗೆ ಫೋಟೋಗೆ ಐಕಾನಿಕ್ ಪೋಸ್ ಹೇಳಿಕೊಟ್ಟು ನಿರ್ದೇಶಕನಾದ ವಿಡಿಯೋ ಭಾರಿ ಸಂಚಲನ ಸೃಷ್ಟಿಸಿದೆ.  

ಹೈದರಾಬಾದ್(ಮೇ.31) ಪ್ರೀ ವೆಡ್ಡಿಂಗ್ ಶೂಟ್ ಇದೀಗ ಸಾಮಾನ್ಯ. ಜೋಡಿಗಳು ಸುಂದರ ತಾಣಕ್ಕೆ ತೆರಳಿ ಫೋಟೋ ಶೂಟ್ ಮಾಡಿಸಿಕೊಳ್ಳುತ್ತಾರೆ. ಹೀಗೆ ನದಿಯಲ್ಲಿ ದೋಣಿ ಮೇಲೆ ನಿಂತು ಫೋಟೋ ಶೂಟ್ ಮಾಡಲು ಬಂದ ಜೋಡಿ ನಾಚಿ ನೀರಾಗಿದೆ. ಫೋಟೋಗೆ ಪೋಸ್ ನೀಡಲು ಸಾಧ್ಯವಾಗದೆ ಪರದಾಡಿದೆ. ಈ ವೇಳೆ ದೋಣಿ ನಡೆಸುವಾತನೇ ನವ ಜೋಡಿಗೆ ಐಕಾನಿಕ್ ಫೋಟೋ ಪೋಸ್ ಹೇಳಿಕೊಟ್ಟು ನಿರ್ದೇಕನಾದ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ.

ನವ ಜೋಡಿ ತಮ್ಮ ಪ್ರೀ ವೆಡ್ಡಿಂಗ್ ಶೂಟ್‌ಗೆ ಪ್ಲಾನ್ ಮಾಡಿದೆ. ಫೋಟೋಗ್ರಾಫರ್ ಕರೆದುಕೊಂಡು ನದಿಯಲ್ಲಿ ಶೂಟ್ ಮಾಡಲು ಮುಂದಾಗಿದೆ. ಸಣ್ಣ ದೋಣಿಯಲ್ಲಿ ಫೋಟೋ, ವಿಡಿಯೋ ಶೂಟ್ ಮಾಡಲು ನಿರ್ಧರಿಸಿದೆ. ನದಿಯಲ್ಲಿ ಜನರನ್ನು ಒಂದು ಬದಿಯಿಂದ ಮತ್ತೊಂದು ಬದಿಗೆ ಕರೆದುಕೊಂಡು ಹೋಗುವ ಸಣ್ಣ ದೋಣಿಯಲ್ಲಿ ಶೂಟ್ ಮಾಡಲು ಅಂಬಿಗನ ಬಳಿ ಮನವಿ ಮಾಡಿದ್ದಾರೆ. ಬಾಡಿಗೆ ನೀಡಿ ಅಂಬಿಗನ ಜೊತೆ ನದಿಯಲ್ಲಿ ತೆರಳಿದ್ದಾರೆ. ನದಿ ನಡುವಿನಲ್ಲಿ ದೋಣಿಯಲ್ಲಿ ಫೋಟೋ ಶೂಟ್ ಆರಂಭಗೊಂಡಿದೆ.

Pre Wedding Shoot ಮಾಡಲು ಪ್ಲ್ಯಾನ್ ಮಾಡಿದ್ದೀರಾ? ಈ ತಾಣಗಳು ಬೆಸ್ಟ್

ಫೋಟೋಗ್ರಾಫರ್‌ಗೆ ಹೆಚ್ಚಿನ ಪೋಸ್ ತಿಳಿದಿಲ್ಲ. ಇತ್ತ ನವ ಜೋಡಿಗಳು ನಾಚಿ ನೀರಾಗಿ ಅತ್ತ ಪೋಸ್ ನೀಡಲು ಸಾಧ್ಯವಾಗದೇ ಇತ್ತ, ಡ್ಯಾನ್ಸ್ ಹೆಜ್ಜೆ ಹಾಕಲು ಸಾಧ್ಯವಾಗದೆ ನಿಂತಿದೆ. ಕೆಲ ಹೊತ್ತು ಇವರ ಫೋಟೋ ಶೂಟ್ ನೋಡಿದ ದೋಣಿಯ ಅಂಬಿಗ ನವ ಜೋಡಿಯ ಬಳಿ ಬಂದು ಫೋಟೋಗೆ ಫೋಸ್ ಹೇಗೆ ನೀಡಬೇಕು ಎಂದು ಹೇಳಿಕೊಟ್ಟಿದ್ದಾನೆ.

ಸಾಮಾನ್ಯ ಅಂಬಿಗ ಕೆಲ ಐಕಾನಿಕ್ ಫೋಸ್‌ಗಳನ್ನು ನವ ಜೋಡಿಗೆ ಹೇಳಿಕೊಟ್ಟಿದ್ದಾನೆ. ವಿಶೇಷವಾಗಿ ಸಿನಿಮಾದಲ್ಲಿ ಬರುವ ರೋಮ್ಯಾಂಟಿಕ್ ಡ್ಯಾನ್ಸ್ ಸ್ಟೆಪ್ಸ್ ಹೇಳಿಕೊಟ್ಟಿದ್ದಾನೆ. ಇತ್ತ ಒಂದರ ಮೇಲೊಂದರಂತೆ ಪೋಸ್ ಹೇಳಿಕೊಟ್ಟಿದ್ದಾನೆ. ಕೆಲ ಫೋಟೋ ಪೋಸ್ ನಿಜಕ್ಕೂ ಅದ್ಭುತವಾಗಿದೆ. ಅಂಬಿಗ ಹೇಳಿಕೊಟ್ಟ ಹಾಗೆ ನವ ಜೋಡಿ ಮಾಡುವಲ್ಲಿ ವಿಫಲವಾಗಿದೆ. ಆದರೂ ಅಂಬಿನ ಪ್ರಯತ್ನದಿಂದ ನವ ಜೋಡಿ ವಿವಿಧ ಪೋಸ್‌ನಲ್ಲಿ ಫೋಟೋ, ವಿಡಿಯೋ ಶೂಟ್ ಮಾಡಿದೆ.

 

 

ಈ ಕುರಿತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಅಂಬಿಗನ ದೋಣಿಯಲ್ಲಿ ಈಗಾಗಲೇ ಹಲವರು ಪ್ರೀ ವೆಡ್ಡಿಂಗ್, ಪೋಸ್ಟ್ ವೆಡ್ಡಿಂಗ್ ಶೂಟ್ ಮಾಡಿದ್ದಾರೆ. ಇವೆಲ್ಲವನ್ನೂ ನೋಡಿದ ಅಂಬಿಗ ಇದೀಗ ನವ ಜೋಡಿಗೆ ನಿರ್ದೇಕನಾಗಿದ್ದಾನೆ ಎಂದು ಕಮೆಂಟ್ ಮಾಡಿದ್ದಾರೆ. 

Wedding Albumನಲ್ಲಿ ನಿಮ್ಮ ಲುಕ್ ಸಖತ್ತಾಗಿರ್ಬೇಕು ಅಂದ್ರೆ ಹೀಗ್ಮಾಡಿ..
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕಾರ್‌ನಲ್ಲಿ ಜೋಡಿ 'ಸರಸ' ಸೆರೆಹಿಡಿದ ಟೋಲ್‌ ಮ್ಯಾನೇಜರ್‌, ಸಿಸಿಟಿವಿ ವಿಡಿಯೋ ತೋರಿಸಿ ಬ್ಲ್ಯಾಕ್‌ಮೇಲ್‌!
ವಿಶ್ವದ ಟಾಪ್ 10 ಬೊಟಾನಿಕಲ್ ಗಾರ್ಡನ್ ಲಿಸ್ಟ್‌ನಲ್ಲಿ ನಂ.1 ನಮ್ಮ ಲಾಲ್‌ಬಾಗ್