ಉತ್ತರ ಪ್ರದೇಶದ ಸುಮ್ಲಿ ನದಿಯಲ್ಲಿ ದೋಣಿ ದುರಂತ, ಮಕ್ಕಳು ಸೇರಿ 3 ಸಾವು

By Gowthami KFirst Published Nov 8, 2022, 10:12 PM IST
Highlights

ಉತ್ತರ ಪ್ರದೇಶ ಬಾರಾಬಂಕಿಯ ಸುಮ್ಲಿ ನದಿಯಲ್ಲಿ 25 ಜನರನ್ನು ಹೊತ್ತೊಯ್ಯುತ್ತಿದ್ದ ದೋಣಿ ಮುಳುಗಿ ಇಬ್ಬರು ಮಕ್ಕಳು ಸೇರಿದಂತೆ 3 ಜನ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ. 

ಉತ್ತರ ಪ್ರದೇಶ (ನ.8 ): ಉತ್ತರ ಪ್ರದೇಶ ಬಾರಾಬಂಕಿಯ ಸುಮ್ಲಿ ನದಿಯಲ್ಲಿ 25 ಜನರನ್ನು ಹೊತ್ತೊಯ್ಯುತ್ತಿದ್ದ ದೋಣಿ ಮುಳುಗಿ ಇಬ್ಬರು ಮಕ್ಕಳು ಸೇರಿದಂತೆ 3 ಜನ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ. ಬಾರಾಬಂಕಿಯ ಮೊಹಮ್ಮದ್‌ಪುರ ಖಾಲಾ ಪೊಲೀಸ್ ಠಾಣಾ ವ್ಯಾಪ್ತಿಯ ಸಿವ್ಲಿ ನದಿಯಲ್ಲಿ ಈ ದುರಂತ ನಡೆದಿದ್ದು, ಸಲ್ಪುರ್ ಗ್ರಾಮದ ನಿವಾಸಿಗಳು ನದಿಯ ಆಚೆಯ ಹಳ್ಳಿಯಲ್ಲಿ ಕಾರ್ತಿಕ ಪೂರ್ಣಿಮೆಯಂದು ಆಯೋಜಿಸಲಾಗಿದ್ದ ಆಯೋಜಿಸಿದ್ದ ಕುಸ್ತಿ ಪಂದ್ಯವನ್ನು ಮುಗಿಸಿ ಹಿಂತಿರುಗುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.    

ಪ್ರತ್ಯಕ್ಷದರ್ಶಿಗಳ ಪ್ರಕಾರ, ದೋಣಿಯು ಹೊಳೆಯ ಮಧ್ಯದಲ್ಲಿ ಒದ್ದಾಡಿತು ಮತ್ತು ಇದ್ದಕ್ಕಿದ್ದಂತೆ ಮಗುಚಿತು. ಬೋಟ್‌ನಲ್ಲಿದ್ದವರು  ಕೆಲವು ಮೀನುಗಾರರು ನದಿಗೆ ಹಾರಿದರು.  ಮೃತರನ್ನು ಪ್ರಿಯಾಂಕಾ (5), ಹಿಮಾಂಶು (8) ಮತ್ತು ರಿತು ಯಾದವ್ (18) ಎಂದು ಗುರುತಿಸಲಾಗಿದೆ. ಈ ಅಪಘಾತದ ಬಗ್ಗೆ ಸಂತಾಪ ವ್ಯಕ್ತಪಡಿಸಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಸಂತ್ರಸ್ತ ಕುಟುಂಬಗಳಿಗೆ ತಕ್ಷಣದ ನೆರವು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿದ್ದಾರೆ.

Latest Videos

ಜಿಲ್ಲಾಧಿಕಾರಿ ಅವಿನಾಶ್ ಕುಮಾರ್ ಅವರು ಮೃತರ ಮುಂದಿನ ಕುಟುಂಬಗಳಿಗೆ ವಿಪತ್ತು ನಿಧಿಯಿಂದ ತಲಾ 4 ಲಕ್ಷ ರೂ.ಧನ ಸಹಾಯವನ್ನು ಘೋಷಿಸಿದ್ದು, 13 ಜನರು ಈಜಿಕೊಂಡು ಸುರಕ್ಷಿತವಾಗಿದ್ದರೆ, ಉಳಿದವರನ್ನು ನದಿಯಿಂದ ರಕ್ಷಿಸಲಾಗಿದೆ. ಈ ಪೈಕಿ ಮೂವರು ಸಾವನ್ನಪ್ಪಿದ್ದು, ಮತ್ತೊಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ಅವರು ತಿಳಿಸಿದ್ದಾರೆ. 

ಅಸ್ಸಾಂನಲ್ಲಿ ದೋಣಿ ದುರಂತ; 40 ಮಂದಿ ರಕ್ಷಣೆ, 100ಕ್ಕೂ ಜನ ನಾಪತ್ತೆ!

ಈ ಅಪಘಾತದಲ್ಲಿ ಸುಮಾರು 6 ಜನರು ನದಿಯಲ್ಲಿ ಮುಳುಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಅಪಘಾತ ಸಂಭವಿಸಿದ ರೀತಿಯಿಂದಾಗಿ ಸಂಖ್ಯೆ ಹೆಚ್ಚಾಗಬಹುದು ಎಂದು ತಿಳಿದುಬಂದಿದೆ.

ಉತ್ತರ ಪ್ರದೇಶದಲ್ಲಿ ಭೀಕರ ದೋಣಿ ದುರಂತ, 20ಕ್ಕೂ ಅಧಿಕ ಸಾವು?

ಕಳೆದ ಆಗಸ್ಟ್ ನಲ್ಲಿ ಕೂಡ ಉತ್ತರ ಪ್ರದೇಶದ ಭಂಡಾ ಜಿಲ್ಲೆಯಲ್ಲಿ ಭೀಕರ ದೋಣಿ ದುರಂತ ಸಂಭವಿಸಿತ್ತು.   ಯಮುನಾ ನದಿಯಲ್ಲಿ ನಡೆದ ದುರಂತದಲ್ಲಿ 20ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದರು. ದೋಣಿಯಲ್ಲಿ  ಪ್ರಯಾಣಿಸುತ್ತಿದ್ದ ಮಹಿಳೆಯರು  ರಕ್ಷಾಬಂಧನ ಸಮಯದಲ್ಲಿ ರಾಖಿ ಕಟ್ಟಲು ತಮ್ಮ ತಾಯಿಯ ಮನೆಗೆ ತೆರಳುತ್ತಿದ್ದಾಗ ಈ ದುರಂತ ನಡೆದಿತ್ತು.  

click me!