ಅಂದು ನಕ್ಕವರಿಗೆ ಇಂದು ನಮ್ಮ ಕೊರೋನಾ ನಿಯಂತ್ರಣ ಸೂತ್ರ ಬೇಕು; ಮುಂಬೈ BMC ಕಮಿಷನರ್!

By Suvarna NewsFirst Published May 7, 2021, 3:24 PM IST
Highlights

ದೇಶದಲ್ಲಾ ಕಡೆ ಕೊರೋನಾ ನಿಯಂತ್ರಣದಲ್ಲಿದ್ದಾಗ ಮುಂಬೈ ಮಹಾನಗರಿಯಲ್ಲಿ ಕೊರೋನಾ ಸ್ಫೋಟಗೊಂಡಿತ್ತು. ಪ್ರಮುಖ ಸಭೆ, ಉನ್ನತ ಮಟ್ಟದ ಚರ್ಚೆಗಳಲ್ಲಿ ಮುಂಬೈನಲ್ಲಿ ಯಾಕೆ ಹೀಗೆ? ಎಂದು ನಕ್ಕವರೇ ಹೆಚ್ಚು. ಅಂದು ನಕ್ಕವರಿಗೆ ಇದೀಗ ನಮ್ಮ ಸೂತ್ರ ಬೇಕಿದೆ. ಮುಂಬೈ ಕೊರೋನಾ ಗೆದ್ದ ಕತೆಯನ್ನು ಮಹಾನಗರ ಪಾಲಿಕೆ ಕಮಿಷನರ್ ವಿವರಿಸಿದ್ದಾರೆ.

ಮುಂಬೈ(ಮೇ.07): ಕೊರೋನಾ 2ನೇ ಅಲೆ ದೇಶದ ಎಲ್ಲಾ ನಗರ, ರಾಜ್ಯಗಳಲ್ಲಿ ಆರ್ಭಟಿಸುತ್ತಿದೆ. ನಿಯಂತ್ರಣಕ್ಕೆ ಮಾಡಿದ ಎಲ್ಲಾ ಪ್ರಯತ್ನಗಳು ಫಲ ನೀಡುತ್ತಿಲ್ಲ. ಆದರೆ ದೇಶದ ಕೊರೋನಾ ಪ್ರಕರಣಗಳ ಸಂಖ್ಯೆ ಗರಿಷ್ಠ ಕೊಡುಗೆ ನೀಡಿದ್ದ ಮುಂಬೈನಲ್ಲಿ ಇದೀಗ ಸರಾಸರಿ 3000ಕ್ಕಿಂತ ಕಡಿಮೆ ಪ್ರಕರಣಗಳು ದಾಖಲಾಗುತ್ತಿದೆ. ಇದೀಗ ಎಲ್ಲರೂ ಮುಂಬೈ ಮಾದರಿಯನ್ನು ಅನುಸರಿಸಲು ಮುಂದಾಗಿದ್ದಾರೆ. ಈ ಕುರಿತು ಮುಂಬೈ ಮಹಾನಗರ ಪಾಲಿಕೆ ಕಮಿಷನರ್ ಇಕ್ಬಾಲ್ ಸಿಂಗ್ ಚಹಾಲ್ ಕೊರೋನಾ ಗೆದ್ದ ಕತೆಯನ್ನು ವಿವರಿಸಿದ್ದಾರೆ.

ಗುಡ್‌ನ್ಯೂಸ್‌: ಮುಂಬೈನಲ್ಲಿ ಸೋಂಕಿನಬ್ಬರ ತೀವ್ರ ಕುಸಿತ!

ಎರಡು ತಿಂಗಳ ಹಿಂದೆ ಹಲವು ಕರೆಗಳನ್ನು ಸ್ವೀಕರಿಸುತ್ತಿದ್ದೆ. ಮುಂಬೈನಲ್ಲಿ ಮಾತ್ರ ಕೊರೋನಾ ಏರುತ್ತಲೇ ಇದೆ, ನಿಯಂತ್ರಣ ಮಾಡಿ, ನಿರ್ಲಕ್ಷ ಬೇಡ ಅನ್ನೋ ಹಲವು ಸಲಹೆಗಳನ್ನು ನೀಡಿದ್ದರು. ಜೊತೆಗೆ ಕುಹಕದ ಮಾತು, ನಮ್ಮ ನೋಡಿ ನಕ್ಕವರೂ ಇದ್ದರು. ಆದರೆ ಇದೀಗ ಅವರೇ ಕೊರೋನಾ ನಿಯಂತ್ರಣಕ್ಕೆ ನಮ್ಮ ಬಳಿ ಮುಂಬೈ ಮಾಡೆಲ್ ವಿವರಣೆ ಕೇಳುತ್ತಿದ್ದಾರೆ. ಅಂದು ನಕ್ಕವರಿಗೆ ನಾನು ಹೇಗೆ ಸೂತ್ರ ಹೇಳಲಿ ಎಂದು ಇಕ್ಬಾಲ್ ಸಿಂಗ್ ಚಹಾಲ್ ಹೇಳಿದ್ದಾರೆ.

ಕೊರೋನಾ 2ನೇ ಅಲೆ ಅಬ್ಬರಿಸಲು ಆರಂಭಿಸಿದಾಗ ದೇಶದಲ್ಲಿ ಯಾರಿಗೂ ಅರಿವೇ ಇರಲಿಲ್ಲ. ಈ ಮಟ್ಟಿಗೆ ಪರಿಸ್ಥಿಯನ್ನು ಅಲ್ಲೋಲ ಕಲ್ಲೋಲ ಮಾಡಲಿದೆ ಅನ್ನೋ ಊಹೆಯೂ ಇರಲಿಲ್ಲ. ಅದೇ ಕ್ಷಣದಿಂದ ಮುಂಬೈ ಮಹಾನಗರ ಪಾಲಿಕೆ ಕಾರ್ಯಸನ್ನದ್ದವಾಗಿತ್ತು.ಈ ಸಾಂಕ್ರಾಮಿಕ ರೋಗ, ಇಂದು ಲಾಕ್‌ಡೌನ್ ಮಾಡಿ ನಾಳೆ ಫಲಿತಾಂಶ ನಿರೀಕ್ಷಿಸಲು ಸಾಧ್ಯವಿಲ್ಲ. ಇದು ನಿರಂತರ ಹೋರಾಟ.  ಕೊರೋನಾ ನಿಯಂತ್ರಣಕ್ಕೆ ಯಾವ ಕ್ರಮಗಳನ್ನು ಕೈಗೊಳ್ಳಬೇಕು ಅನ್ನೋ ತಜ್ಞರ ವರದಿ, ಟಾಸ್ಕ್ ಫೋರ್ಸ್ ಸಲಹೆಯನ್ನು ಪರಿಗಣಿಸಿ ಕಟ್ಟು ನಿಟ್ಟಿನ ಹಾಗೂ ಪಾರದರ್ಶಕ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಇದರ ಫಲ ಸಿಕ್ಕಿದೆ ಎಂದು ಇಕ್ಬಾಲ್ ಹೇಳಿದ್ದಾರೆ.

ಅಂಬಾನಿ ದಂಪತಿಯಿಂದ ಮಹಾರಾಷ್ಟ್ರಕ್ಕೆ 100 ಟನ್ ಆಕ್ಸಿಜನ್ ಪೂರೈಕೆ

ಇತ್ತೀಚೆಗೆ ಸುಪ್ರೀಂ ಕೋರ್ಟ್ ಮುಂಬೈ ಮಾದರಿಯನ್ನು ಬಳಸಿಕೊಂಡು ಕೊರೋನಾ ನಿಯಂತ್ರ ಮಾಡಿ ಎಂದು ದೆಹಲಿ ಸೇರಿದಂತೆ ಪ್ರಮುಖ  ನಗರಗಳಲ್ಲಿ ಸೂಚನೆ ನೀಡಿತ್ತು. ಪರಿಣಾಮ ದೆಹಲಿ ಸರ್ಕಾರದ ಅಧಿಕಾರಿಗಳ ಜೊತೆ ಸಭೆ ನಡೆಸಲಾಗಿದೆ.  ಸಭೆಯಲ್ಲಿ ಮುಂಬೈ ಅನುಸರಿಸಿದ ಮಾರ್ಗಗಳನ್ನು ವಿವರಿಸಲಾಗಿದೆ ಎಂದು ಇಕ್ಬಾಲ್ ಹೇಳಿದ್ದಾರೆ.

ಕೊರೋನಾ ಹೆಚ್ಚಳ: ಹೊಟೆಲ್‌ಗಳನ್ನು ಆಸ್ಪತ್ರೆಗಳಾಗಿ ಪರಿವರ್ತಿಸಲು ಆದೇಶ!

ಸೋಂಕಿತರು ಹೆಚ್ಚಾದ ತಕ್ಷಣ ಸರ್ಕಾರಿ ಆಸ್ಪತ್ರೆಗಳು ಅಥವಾ ಬೇರೆಡೆ ಬೆಡ್ ಹೆಚ್ಚು ಮಾಡಿದರೆ ಸಾಲದು, ಆಕ್ಸಿಜನ್, ವೆಂಟಿಲೇಟರ್, ಔಷಧಿ, ವೈದ್ಯಕೀಯ ತಂಡ ಸೇರಿದಂತೆ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕು. ಮುಂಬೈನಲ್ಲಿ ಆಕ್ಸಿಜನ್ ಸಮಸ್ಯೆಯಿಂದ ಯಾವ ಸಾವು ಸಂಭವಿಸಿಲ್ಲ. ಇದಕ್ಕೆ ಆಕ್ಸಿಜನ್ ಪೂರೈಕೆ, ಹಂಚಿಕೆಯಲ್ಲಿ ಯಾವುದೇ ರೀತಿಯ ಅವ್ಯವಹಾರವಾಗದಂತೆ ನೋಡಿಕೊಳ್ಳಲಾಗಿತ್ತು. ಸಂಪೂರ್ಣ ವ್ಯವಸ್ಥೆಯನ್ನು ಬಳಸಿಕೊಂಡು ವೈದ್ಯಕೀಯ ಸಲಕರಣೆ, ಆಕ್ಸಿಜನ್ ಪೂರೈಕೆ, ಲಸಿಕೆ, ಹೋಮ್ ಐಸೋಲೇಶನ್ ಸೇರಿದಂತೆ ಕೊರೋನಾ ಮಾರ್ಗಸೂಚಿಗಳನ್ನು ಕಟ್ಟು ನಿಟ್ಟಾಗಿ ಪಾಲಿಸಲಾಯಿತು. ಪರಿಣಾಮ ಮುಂಬೈನಲ್ಲಿ ಕೊರೋನಾ ನಿಯಂತ್ರಣಕ್ಕೆ ಬರುತ್ತಿದೆ. ನಾವು ಗೆದ್ದಿದ್ದೇವೆ ಎಂದು ನಿಟ್ಟುಸಿರು ಬಿಟ್ಟರೆ ಮತ್ತೆ ಉಲ್ಬಣಗೊಳ್ಳುವ ಸಾಧ್ಯತೆ ಹೆಚ್ಚು. ಹೀಗಾಗಿ ಕೊರೋನಾ ಪ್ರೊಟೊಕಾಲ್‌ ಪಾಲನೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಇಕ್ಬಾಲ್ ಹೇಳಿದ್ದಾರೆ.

click me!