ರೀಲ್‌ಗಾಗಿ ಹೆದ್ದಾರಿಯಲ್ಲಿ ಕಾರು ನಿಲ್ಲಿಸಿ ಸಂಚಾರಕ್ಕೆ ಅಡ್ಡಿ: ಇನ್ಸ್ಟಾ ಸ್ಟಾರ್‌ಗೆ ದಂಡ

Published : Jan 23, 2023, 06:37 PM IST
ರೀಲ್‌ಗಾಗಿ ಹೆದ್ದಾರಿಯಲ್ಲಿ ಕಾರು ನಿಲ್ಲಿಸಿ ಸಂಚಾರಕ್ಕೆ ಅಡ್ಡಿ: ಇನ್ಸ್ಟಾ  ಸ್ಟಾರ್‌ಗೆ ದಂಡ

ಸಾರಾಂಶ

ಇಲ್ಲೊಬ್ಬಳು ಯುವತಿ ಹೆದ್ದಾರಿ ಮಧ್ಯೆ ಕಾರು ನಿಲ್ಲಿಸಿ ರೀಲ್ಸ್ ಮಾಡಿ ಸಂಚಾರಿ ನಿಯಮ ಉಲ್ಲಂಘನೆ ಮಾಡಿದ್ದು, ಆಕೆಗೆ ಪೊಲೀಸರು 17 ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ. 

ಲಕ್ನೋ:  ಇತ್ತೀಚೆಗೆ ಸೋಶಿಯಲ್ ಮೀಡಿಯಾ ಸ್ಟಾರ್‌ಗಳು ಕಂಡ ಕಂಡಲ್ಲಿ ರೀಲ್ಸ್ ಮಾಡುವುದು ಸಾಮಾನ್ಯ ಎನಿಸಿದೆ. ಸಾರ್ವಜನಿಕ ಸ್ಥಳ ಎಂಬುದನ್ನು ಕೂಡ ಗಣನೆಗೆ ತೆಗೆದುಕೊಳ್ಳದೇ ಬಸ್‌, ಮೆಟ್ರೋ, ರಸ್ತೆ ರೈಲುಗಳಲ್ಲಿ  ಸೋಶಿಯಲ್ ಮೀಡಿಯಾ ಸ್ಟಾರ್‌ಗಳು ರೀಲ್ಸ್ ಮಾಡುತ್ತಾರೆ. ಇದರಿಂದ ಕೆಲವೊಮ್ಮೆ ಸಾರ್ವಜನಿಕರು ಸಂಕಷ್ಟಕ್ಕೆ ಒಳಗಾಗುತ್ತಾರೆ. ಅದೇ ರೀತಿ ಇಲ್ಲೊಬ್ಬಳು ಯುವತಿ ಹೆದ್ದಾರಿ ಮಧ್ಯೆ ಕಾರು ನಿಲ್ಲಿಸಿ ರೀಲ್ಸ್ ಮಾಡಿ ಸಂಚಾರಿ ನಿಯಮ ಉಲ್ಲಂಘನೆ ಮಾಡಿದ್ದು, ಆಕೆಗೆ ಪೊಲೀಸರು 17 ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ. 

ವೈಶಾಲಿ ಚೌಧರಿ ಖುಟಲಿ (Vaishali Chaudhary Khutail) ಎಂಬಾಕೆಯೇ ಹೀಗೆ ನಡುರಸ್ತೆಯಲ್ಲಿ ಕಾರು ನಿಲ್ಲಿಸಿ ರೀಲ್ಸ್ ಮಾಡಲು ಹೋಗಿ ದಂಡ ಕಟ್ಟುವಂತಾದ ಸೋಶಿಯಲ್ ಮೀಡಿಯಾ ಸ್ಟಾರ್,  ಉತ್ತರಪ್ರದೇಶದ (Uttar Pradesh) ಗಾಜಿಯಾಬಾದ್ (Ghaziabad) ನಿವಾಸಿಯಾದ ಈಕೆ  ಹೆದ್ದಾರಿಯಲ್ಲಿ ರೀಲ್ಸ್ ಮಾಡುವ ಸಲುವಾಗಿ ತನ್ನ ಕಾರನ್ನು ನಡುರಸ್ತೆಯಲ್ಲಿ ನಿಲ್ಲಿಸಿ ವಿಡಿಯೋ ಮಾಡಿದ್ದಾಳೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿದ್ದಂತೆ ಸಾಕಷ್ಟು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನು ಗಾಜಿಯಾಬಾದ್ ಪೊಲೀಸರು ಕೂಡ ಗಮನಿಸಿದ್ದು, ಯುವತಿಗೆ ಸಂಚಾರಿ ಹಾಗೂ ರಸ್ತೆ ಸುರಕ್ಷತಾ ನಿಯಮ ಉಲ್ಲಂಘಿಸಿದ್ದಕ್ಕಾಗಿ  17 ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ. 

ಎಸ್‌ಪಿ ಫೋನ್‌ಗೆ ಬಂತು ಮಹಿಳಾ ಪೇದೆಯರ ಡಾನ್ಸ್ ರೀಲ್ಸ್: ಹಾಯ್ ಹಾಯ್ ಎಂದು ಕುಣಿದವರಿಗೆ ವರ್ಗಾವಣೆ ಶಿಕ್ಷೆ

ಹೀಗೆ ದಂಡ ತೆತ್ತ ವೈಶಾಲಿ ಚೌಧರಿ ಖುಟಲಿಗೆ ಇನ್ಸ್ಟಾಗ್ರಾಮ್‌ನಲ್ಲಿ 6 ಲಕ್ಷದ 52 ಸಾವಿರ ಫಾಲೋವರ್‌ಗಳಿದ್ದಾರೆ.  ವೈರಲ್ ಆಗಿರುವ ವಿಡಿಯೋದಲ್ಲಿ ಆಕೆ ಕಾರನ್ನು ನಡುರಸ್ತೆಯಲ್ಲಿ  ನಿಲ್ಲಿಸಿ ವಿಡಿಯೋ ಮಾಡುತ್ತಿರುವುದು ಕಂಡು ಬಂದಿದೆ. ಅಲ್ಲೇ ಸಮೀಪದಲ್ಲಿ ವಾಹನಗಳು ಸಾಗುತ್ತಿದ್ದಾರೆ ಇತ್ತ ಈಕೆ ಕ್ಯಾಮರಾಗೆ ಸಖತ್ ಫೋಸ್ ನೀಡಿದ್ದಾಳೆ.  ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಗಾಜಿಯಾಬಾದ್ ಪೊಲೀಸರು ಕ್ರಮಕ್ಕೆ ಮುಂದಾಗಿದ್ದಾರೆ. ಟ್ವಿಟ್ಟರ್‌ನಲ್ಲಿ  ವಾಹನದ ಮಾಲೀಕರ ವಿರುದ್ಧ ಸಂಚಾರ ನಿಯಮ ಉಲ್ಲಂಘಿಸಿದ್ದಕ್ಕಾಗಿ (violating road safety rules) 17 ಸಾವಿರ ದಂಡ ವಿಧಿಸಿ ಕ್ರಮ ಕೈಗೊಳ್ಳಲಾಗಿದೆ. ಸಹಿಬಾಬಾದ್‌ನಲ್ಲಿ (Sahibabad) ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

Khaby Lame ಜೊತೆ ಸೋನು ಸೂದ್ ರೀಲ್ಸ್: 21 ಮಿಲಿಯನ್‌ಗೂ ಹೆಚ್ಚು ಜನರಿಂದ ವೀಕ್ಷಣೆ

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋವೊಂದಕ್ಕೆ ಸಂಬಂಧಿಸಿದಂತೆ ಸಹಿಬಾಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,  ದಂಡ ವಿಧಿಸಲಾಗಿದೆ ಎಂದು ಟ್ವಿಟ್‌ನಲ್ಲಿ ತಿಳಿಸಲಾಗಿದೆ. 

ರೈಲ್ವೆ ಬ್ರಿಡ್ಜ್ ಮೇಲೆ ರೀಲ್ಸ್ ಮಾಡಲು ಹೋಗಿ ಇಬ್ಬರು ಬಾಲಕರು ಸಾವು

ರೀಲ್ಸ್ ಮಾಡಲು ಹೋಗಿ ರೈಲಿಗೆ ಸಿಲುಕಿ ಬಾಲಕರಿಬ್ಬರು ಮೃತಪಟ್ಟ ಘಟನೆ ಬಿಹಾರದ ಖಗರಿಯಾದಲ್ಲಿ ಕೆಲದಿನಗಳ ಹಿಂದೆ ನಡೆದಿತ್ತು. ಮೃತ ಬಾಲಕರು ಸೇರಿದಂತೆ ಒಟ್ಟು ಮೂರು ಜನ ರೈಲು ಹಳಿ ಮೇಲೆ ನಿಂತುಕೊಂಡು ರೀಲ್ಸ್ ಮಾಡುತ್ತಿದ್ದರು. ಈ ವೇಳೆ ರೈಲು ಬಂದಿದ್ದು, ಓರ್ವ ಬಾಲಕ ರೈಲ್ವೆ ಬ್ರಿಡ್ಜ್‌ನಿಂದ ಕೆಳಗೆ ಹಾರಿದ್ದರೆ, ಮತ್ತಿಬ್ಬರು ಬಾಲಕರು ಪ್ರಾಣ ಕಳೆದುಕೊಂಡಿದ್ದಾರೆ. ಸಾವಿಗೂ 15 ನಿಮಿಷ ಮೊದಲು ಇವರು ಇನ್ಸ್ಟಾಗೆ ರೀಲ್ಸ್ ಅಪ್‌ಲೋಡ್ ಮಾಡಿದ್ದರು.  ಬಿಹಾರದ (Bihar) ಖಗರಿಯಾದಲ್ಲಿರುವ (Khagaria) ರೈಲ್ವೆ ಬ್ರಿಡ್ಜ್‌ ಮೇಲೆ ನಿಂತುಕೊಂಡು ಬಾಲಕರಿಬ್ಬರು ರೀಲ್ಸ್ ಮಾಡುತ್ತಿದ್ದರು. ಈ ವೇಳೆ ರೈಲು ಬಂದಿದ್ದು, ಇಬ್ಬರು ಬಾಲಕರು ರೈಲಡಿಗೆ ಬಿದ್ದು ಪ್ರಾಣ ಬಿಟ್ಟರೆ ಮತ್ತೊಬ್ಬ ಬ್ರಿಡ್ಜ್‌ನಿಂದ ನರಿ ತೀರಕ್ಕೆ ಹಾರಿದ್ದು, ಆತನ ಪ್ರಾಣ ಉಳಿದಿದ್ದರು, ಆತನಿಗೆ ಗಂಭೀರ ಗಾಯಗಳಾಗಿವೆ.  ಜನವರಿ 1 ರ ಹೊಸವರ್ಷದಂದೇ ಈ ದುರಂತ ಸಂಭವಿಸಿತ್ತು. ಮೂವರ ವಯಸ್ಸು 16 ರಿಂದ 19 ವರ್ಷದ ಒಳಗಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕಾರ್‌ನಲ್ಲಿ ಜೋಡಿ 'ಸರಸ' ಸೆರೆಹಿಡಿದ ಟೋಲ್‌ ಮ್ಯಾನೇಜರ್‌, ಸಿಸಿಟಿವಿ ವಿಡಿಯೋ ತೋರಿಸಿ ಬ್ಲ್ಯಾಕ್‌ಮೇಲ್‌!
ವಿಶ್ವದ ಟಾಪ್ 10 ಬೊಟಾನಿಕಲ್ ಗಾರ್ಡನ್ ಲಿಸ್ಟ್‌ನಲ್ಲಿ ನಂ.1 ನಮ್ಮ ಲಾಲ್‌ಬಾಗ್