ಸರ್ಜಿಕಲ್‌ ಸ್ಟ್ರೈಕ್‌ ಬಗ್ಗೆ ನಿಮ್ಮಲ್ಲೇನಿದೆ ಪ್ರೂಫ್‌, ಮೋದಿ ಸರ್ಕಾರಕ್ಕೆ ಕಾಂಗ್ರೆಸ್‌ ನಾಯಕ ದಿಗ್ವಿಜಯ್‌ ಸಿಂಗ್ ಪ್ರಶ್ನೆ!

By Santosh NaikFirst Published Jan 23, 2023, 6:25 PM IST
Highlights


ಕೇಂದ್ರ ಸರ್ಕಾರ ಈವರೆಗೂ ಸರ್ಜಿಕಲ್‌ ಸ್ಟ್ರೈಕ್‌ ಕುರಿತಾದ ಯಾವುದೇ ದಾಖಲೆಗಳನ್ನು ಬಿಡುಗಡೆ ಮಾಡಿಲ್ಲ. ಪುಲ್ವಾಮಾ ಘಟನೆಯ ಸಮಯದಲ್ಲಿ ಸಿಆರ್‌ಪಿಎಫ್‌ ತನ್ನ ಸೈನಿಕರನ್ನು ವಿಮಾನದ ಮೂಲಕ ಸಾಗಿಸಲು ಪ್ರಧಾನಿ ಅವರನ್ನು ಕೇಳಿತ್ತು. ಆದರೆ ಅವರು ಒಪ್ಪಿರಲಿಲ್ಲ ಎಂದು ಕಾಂಗ್ರೆಸ್‌ ಹಿರಿಯ ನಾಯಕ ದಿಗ್ವಿಜಯ್‌ ಸಿಂಗ್‌ ಟೀಕೆ ಮಾಡಿದ್ದಾರೆ.
 

ಶ್ರೀನಗರ (ಜ.23): 2016ರಲ್ಲಿ ನಡೆದ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಸೋಮವಾರ ಪ್ರಶ್ನೆಗಳನ್ನು ಎತ್ತಿದ್ದಾರೆ. ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಸರ್ಕಾರ ಇನ್ನೂ ದಾಖಲೆ ನೀಡಿಲ್ಲ ಎಂದು ಜಮ್ಮುವಿನಲ್ಲಿ ಹೇಳಿದ್ದಾರೆ. ಕೇಂದ್ರ ಸರ್ಕಾರ ಸರ್ಜಿಕಲ್ ಸ್ಟ್ರೈಕ್ ಬಹಳ ಕೊಚ್ಚಿಕೊಳ್ಳುತ್ತದೆ. ಅಷ್ಟೆಲ್ಲಾ ಜನರನ್ನು ಕೊಂದಿದ್ದೇವೆ ಎಂದು ಹೇಳುತ್ತದೆ. ಆದರೆ, ಅದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಟೀಕೆ ಮಾಡಿದ್ದಾರೆ. ಸರ್ಜಿಕಲ್ ಸ್ಟ್ರೈಕ್ ಹೊರತಾಗಿ, 2019 ರಲ್ಲಿ ಪುಲ್ವಾಮಾದಲ್ಲಿ ನಡೆದ ಭಯೋತ್ಪಾದಕ ದಾಳಿಯ ಬಗ್ಗೆ ದಿಗ್ವಿಜಯ್ ಪ್ರಧಾನಿಯ ಪ್ರಶ್ನೆ ಮಾಡಿದ್ದಾರೆ. ಪುಲ್ವಾಮಾ ದಾಳಿಯ ಸಂದರ್ಭದಲ್ಲಿ, ಸಿಆರ್‌ಪಿಎಫ್ ಅಧಿಕಾರಿಗಳು ಸೈನಿಕರನ್ನು ವಿಮಾನದ ಮೂಲಕ ಸ್ಥಳಾಂತರಿಸಬೇಕೆಂದು ಹೇಳಿದ್ದರು, ಆದರೆ ಪ್ರಧಾನಿ ಇದಕ್ಕೆ ಒಪ್ಪಿರಲಿಲ್ಲ ಎಂದು ಕಾಂಗ್ರೆಸ್ ಹಿರಿಯ ನಾಯಕ ಹೇಳಿದ್ದಾರೆ. 2019 ರಲ್ಲಿ ಪುಲ್ವಾಮಾದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 40 ಸಿಆರ್‌ಪಿಎಫ್ ಯೋಧರು ಹುತಾತ್ಮರಾಗಿದ್ದರು. ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್ ದಾಳಿಯ ಹೊಣೆ ಹೊತ್ತುಕೊಂಡಿತ್ತು.

ಬೇಜವಾಬ್ದಾರಿ ಹೇಳಿಕೆ ನೀಡುವುದು ಕಾಂಗ್ರೆಸ್ ಪಕ್ಷದ ಲಕ್ಷಣವಾಗಿದೆ ಎಂದರು. ನಮ್ಮ ಭದ್ರತಾ ಪಡೆಗಳ ವಿರುದ್ಧ ಮಾತನಾಡುವವರನ್ನು ದೇಶ ಸಹಿಸುವುದಿಲ್ಲ. ಪ್ರಧಾನಿ ಮೋದಿ ಮೇಲಿನ ದ್ವೇಷದಿಂದಾಗಿ ರಾಹುಲ್ ಗಾಂಧಿ ಮತ್ತು ದಿಗ್ವಿಜಯ್ ಸಿಂಗ್ ಅವರಲ್ಲಿ ದೇಶಭಕ್ತಿ ಉಳಿದಿಲ್ಲ. ನಮ್ಮ ಕೆಚ್ಚೆದೆಯ ಸೈನ್ಯವು ತನ್ನ ಶಕ್ತಿಯನ್ನು ತೋರಿಸಿದಾಗ, ಭಯೋತ್ಪಾದಕ ಚಟುವಟಿಕೆಗಳಿಗೆ ವಿಶ್ವದಲ್ಲೇ ಕುಖ್ಯಾತಿಯಾಗಿರುವ ದೇಶ ಹೆಚ್ಚು ನೋವು ಕಾಣುತ್ತದೆ. ಆದರೆ ಈ ನೋವನ್ನು ಭಾರತದ ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ ಅನುಭವಿಸುತ್ತಿರುವುದು ಬೇಸರದ ಸಂಗತಿ ಎಂದು ಬಿಜೆಪಿ ವಕ್ತಾರ ಗೌರವ್‌ ಭಾಟಿಯಾ ಪ್ರತಿಕ್ರಿಯೆ ನೀಡಿದ್ದಾರೆ.

ದಿಗ್ವಿಜಯ್‌ ಸಿಂಗ್‌ ಹೇಳಿದ್ದೇನು?:ಪುಲ್ವಾಮಾ ದಾಳಿ ಮತ್ತು ಸರ್ಜಿಕಲ್ ಸ್ಟ್ರೈಕ್ ವರದಿಯನ್ನು ಕೇಂದ್ರ ಸರ್ಕಾರ ಇನ್ನೂ ಸಂಸತ್ತಿನಲ್ಲಿ ನೀಡಿಲ್ಲ. ಬಿಜೆಪಿ ಸರಕಾರ ಬರೀ ಸುಳ್ಳುಗಳನ್ನು ಹಬ್ಬಿಸುತ್ತಿದೆ. ಪುಲ್ವಾಮಾದಲ್ಲಿ ನಮ್ಮ 40 ಯೋಧರು ಹುತಾತ್ಮರಾಗಿದ್ದರು. ಇದು ಸೂಕ್ಷ್ಮ ವಲಯ ಎಂದು ಸಿಆರ್‌ಪಿಎಫ್ ನಿರ್ದೇಶಕರು ಹೇಳಿದ್ದರು. ಸೈನಿಕರನ್ನು ವಿಮಾನದ ಮೂಲಕ ಶ್ರೀನಗರಕ್ಕೆ ಕಳುಹಿಸಬೇಕು ಎಂದಿದ್ದರು. ಆದರೆ ಮೋದಿ ಇದನ್ನು ನಿರಾಕರಿಸಿದರು. ದಾಳಿಯ ಬಗ್ಗೆ ಗೊತ್ತಿದ್ದರೂ ಸರ್ಕಾರ ಕ್ರಮ ಕೈಗೊಂಡಿಲ್ಲ. ಅಲ್ಲಿ ಪ್ರತಿ ವಾಹನವನ್ನು ತಪಾಸಣೆ ಮಾಡಲಾಗುತ್ತದೆ, ಆದರೆ, ಸ್ಪೋಟಕ್ಕೆ ಕಾರಣವಾದ ಸ್ಕಾರ್ಪಿಯೋ ವಾಹನವನ್ನು ಏಕೆ ಪರಿಶೀಲಿಸಲಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.

ಆರ್ಟಿಕಲ್ 370 ರದ್ದತಿಯಿಂದ ಯಾರಿಗೆ ಲಾಭವಾಗಿದೆ ಎಂದು ಕಾಂಗ್ರೆಸ್ ನಾಯಕ ಪ್ರಶ್ನೆ ಮಾಡಿದ್ದಾರೆ. ಭಯೋತ್ಪಾದನೆ ಕೊನೆಗೊಳ್ಳುತ್ತದೆ, ಹಿಂದೂಗಳು ಪ್ರಾಬಲ್ಯ ಸಾಧಿಸುತ್ತಾರೆ ಎನ್ನುತ್ತಿದ್ದರು. ಆದರೆ 370 ನೇ ವಿಧಿಯನ್ನು ತೆಗೆದುಹಾಕಿದಾಗಿನಿಂದ ಭಯೋತ್ಪಾದನೆ ಹೆಚ್ಚಾಗಿದೆ. ಪ್ರತಿದಿನ ಏನಾದರೊಂದು ಘಟನೆ ನಡೆಯುತ್ತಲೇ ಇರುತ್ತದೆ. ಮೊದಲು ಕಣಿವೆಗೆ ಸೀಮಿತವಾಗಿದ್ದ ಈ ಭಯೋತ್ಪಾದನೆ ಈಗ ರಾಜೌರಿ, ದೋಡಾ ಕೂಡ ತಲುಪಿದೆ ಎಂದಿದ್ದಾರೆ.

ದಿಗ್ವಿಜಯ್‌ ಹೇಳಿಕೆ ತಿರುಕನ ಕನಸು: ಸಿಎಂ ಯಡಿಯೂರಪ್ಪ

ಇಲ್ಲಿನ ಸಮಸ್ಯೆ ಬಗೆಹರಿಸಲು ಸರಕಾರಕ್ಕೆ ಮನಸ್ಸಿಲ್ಲ ಎಂದರು. ಇಲ್ಲಿ ನಿರ್ಧಾರ ಕೈಗೊಳ್ಳುವುದು ಸರ್ಕಾರಕ್ಕೆ ಇಷ್ಟವಿಲ್ಲ. ಕಾಶ್ಮೀರ ಫೈಲ್‌ಗಳಂತಹ ಚಲನಚಿತ್ರಗಳನ್ನು ಮಾಡುವುದನ್ನು ಮುಂದುವರಿಸಲು ಮತ್ತು ಹಿಂದೂಗಳು ಮತ್ತು ಮುಸ್ಲಿಮರ ನಡುವೆ ದ್ವೇಷವನ್ನು ಹರಡಲು ಇದು ಈ ಸಮಸ್ಯೆಯನ್ನು ಶಾಶ್ವತಗೊಳಿಸಲು ಬಯಸುತ್ತದೆ. ಪ್ರಧಾನಿಯೊಬ್ಬರು ಚಿತ್ರದ ಪ್ರಚಾರಕ್ಕೆ ಹೋಗುವುದನ್ನು ನೀವು ಎಂದಾದರೂ ನೋಡಿದ್ದೀರಾ? ಎಂದು ಕೇಳಿದ್ದಾರೆ.

ಅಯೋಧ್ಯೆ ಮಹೂರ್ತ ಸರಿಯಿಲ್ಲ, ಆದ್ದರಿಂದಲೇ ಬಿಜೆಪಿಗರಿಗೆ ಕೊರೋನಾ: ದಿಗ್ಗಿ!

ಜಮ್ಮು ಮತ್ತು ಕಾಶ್ಮೀರದ ಉರಿ ಸೇನಾ ನೆಲೆಯ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ 18 ಯೋಧರು ಹುತಾತ್ಮರಾದ ನಂತರ 2016ರಲ್ಲಿ ಭಾರತವು ಸರ್ಜಿಕಲ್ ಸ್ಟ್ರೈಕ್ ನಡೆಸಿತು. ಇದರಲ್ಲಿ ಸಾಕಷ್ಟು ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿತ್ತು. ಪುಲ್ವಾಮಾ ದಾಳಿಯ ಬಳಿಕ ಭಾರತ ಪಾಕಿಸ್ತಾನದ ಬಾಲಾಕೋಟ್ ಮೇಲೆ ಏರ್‌ಸ್ಟ್ರೈಕ್‌ ನಡೆಸಿತ್ತು.

click me!