ಸ್ವಾತಂತ್ರ್ಯ ದಿನಾಚರಣೆಗೆ ದೆಹಲಿಯಲ್ಲಿ ರೈತರಿಂದ ಮತ್ತೊಂದು ಟ್ರಾಕ್ಟರ್ ರ‍್ಯಾಲಿ; ರಾಕೇಶ್ ಟಿಕಾಯತ್ ಘೋಷಣೆ!

By Suvarna NewsFirst Published Jul 26, 2021, 6:39 PM IST
Highlights
  • ಆಗಸ್ಟ್ 15ಕ್ಕೆ ಮತ್ತೊಂದು ಟ್ರಾಕ್ಟರ್ ರ‍್ಯಾಲಿ ಘೋಷಿಸಿದ ರೈತ ಮುಖಂಡ
  • ಜನವರಿ 26ರ ಕರಾಳ ಘಟನೆ ಬೆನ್ನಲ್ಲೇ ಆತಂಕ ತಂದ ಟ್ರಾಕ್ಟರ್ ರ‍್ಯಾಲಿ ಘೋಷಣೆ
  • ಪ್ರತಿಭಟನೆ ಸ್ವರೂಪ ಬಿಚ್ಚಿಟ್ಟ ರಾಕೇಶ್ ಟಿಕಾಯತ್ 

ನವೆದೆಹಲಿ(ಜು.26):  ಕೇಂದ್ರ ಕೃಷಿ ಕಾಯ್ದೆ ವಿರೋಧಿ ರೈತ ಸಂಘಟನೆಗಳ ಪ್ರತಿಭಟನೆ ಕಾವು ಹೆಚ್ಚಾಗುತ್ತಿದೆ. ಜನವರಿ 26ರಂದು ಟ್ರಾಕ್ಟರ್ ರ‍್ಯಾಲಿ ಆಯೋಜಿಸಿ ಗಲಭೆ ಸೃಷ್ಟಿಸಿದ ರೈತ ಸಂಘಟನೆಗಳು ಇದೀಗ ಅದೇ ರೀತಿ ದೆಹಲಿಯಲ್ಲಿ ಮತ್ತೊಂದು ಟ್ರಾಕ್ಟರ್ ರ‍್ಯಾಲಿಗೆ ಕರೆ ನೀಡಿದೆ. ಈ ಕುರಿತು ರೈತ ಮುಖಂಡ ರಾಕೇಶ್ ಟಿಕಾಯತ್ ಘೋಷಿಸಿದ್ದಾರೆ.

ಖಲಿಸ್ತಾನ ಉಗ್ರರಿಂದ ರೈತ ಪ್ರತಿಭಟನೆ ಹೈಜಾಕ್; ಎಚ್ಚರಿಕೆ ನೀಡಿದ ರೈತ ಮುಖಂಡನಿಗೆ ಗೇಟ್‌ಪಾಸ್!

ಆಗಸ್ಟ್ 14 ಮತ್ತು 15 ರಂದು ಪ್ರತಿಭಟನಾ ನಿರತ ರೈತರು ಟ್ರಾಕ್ಟರ್ ಮೂಲಕ ದೆಹಲಿಯ ಘಾಜಿಪುರ ಘಡಿಗೆ ತೆರಳಲಿದ್ದಾರೆ. ಆಗಸ್ಟ್ 15 ರಂದು ಧ್ವಜಾರೋಹಣ ಮಾಡಲಿದ್ದೇವೆ ಎಂದು ಭಾರತೀಯ ಕಿಸಾನ್ ಯೂನಿಯನ್ ರಾಕೇಶ್ ಟಿಕಾಯತ್ ಘೋಷಿಸಿದ್ದಾರೆ.

BJP ವಿರುದ್ಧ ರೈತ ಪ್ರತಿಭಟನೆಗೆ ಪಂಜಾಬ್ ಸಿಎಂ ಪ್ರಚೋದನೆ; ಸತ್ಯ ಬಹಿರಂಗಪಡಿಸಿದ ಕಾಂಗ್ರೆಸ್ ಮಾಜಿ ಅಧ್ಯಕ್ಷ!

ಕಳೆದ ಬಾರಿ ಹೇಳಿದಂತೆ ಈ ಬಾರಿಯೂ ಶಾಂತಿಯುತ ಟ್ರಾಕ್ಟರ್ ರ‍್ಯಾಲಿ ಆಯೋಜಿಸುವುದಾಗಿ ರಾಕೇಶ್ ಟಿಕಾಯತ್ ಹೇಳಿದ್ದಾರೆ. ಕಿಸಾನ್ ಯೂನಿಯನ್‌ನ 40 ಸಂಘಟನೆಗಳು ಟ್ರಾಕ್ಟರ್ ರ‍್ಯಾಲಿಗೆ ಬೆಂಬಲ ಸೂಚಿಸಿದೆ ಎಂದು ಟಿಕಾಯತ್ ಹೇಳಿದ್ದಾರೆ.

ಆಗಸ್ಟ್ 15ಕ್ಕೆ ಧ್ವಜಾರೋಹಣ ಮಾಡಲು ಬಿಡುವುದಿಲ್ಲ; ಬಿಜೆಪಿಗೆ ಪ್ರತಿಭಟನಾ ನಿರತ ರೈತರ ಎಚ್ಚರಿಕೆ!

ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು(ಜು.26) ಸಂಸತ್ತಿಗೆ ಟ್ರಾಕ್ಟರ್ ಮೂಲಕ ಆಗಮಿಸಿದ್ದಾರೆ. ಈ ಮೂಲಕ ಕೇಂದ್ರಕ್ಕೆ ಕೃಷಿ ಕಾಯ್ದೆ ರದ್ದು ಮಾಡಲು ಆಗ್ರಹಿಸಿದ್ದಾರೆ. ಕಾಂಗ್ರೆಸ್ ಸಂಸದರಾದ ಪ್ರತಾಪ್ ಸಿಂಗ್ ಬಜ್ವಾ, ರವ್‌ನೀತ್ ಸಿಂಗ್ ಬಿಟ್ಟು, ದೀಪಿಂದರ್ ಸಿಂಗ್ ಹೂಡಾ, ಗುರ್ಜಿತ್ ಸಿಂಗ್ ಆಜ್ಲಾ, ಜಸ್ಬೀರ್ ಸಿಂಗ್ ಗಿಲ್ ಮತ್ತು ರಣದೀಪ್ ಸುರ್ಜೇವಾಲಾ ಕೂಡ ರಾಹುಲ್ ಜೊತೆ ಕೇಂದ್ರದ ವಿರುದ್ಧ ಹರಿಹಾಯ್ದರು. ಬ್ಯಾನರ್ ಹಿಡಿದು ಮಸೂದೆ ರದ್ದು ಮಾಡಲು ಆಗ್ರಹಿಸಿದ್ದಾರೆ. ಇದೀಗ ರಾಕೇಶ್ ಟಿಕಾಯತ್ ಮತ್ತೊಂದು ಟ್ರಾಕ್ಟರ್ ರ‍್ಯಾಲಿಗೆ ಕರೆ ನೀಡಿದ್ದಾರೆ.
 

click me!