
ನವದೆಹಲಿ(ಜು.26): ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಮಹಿಳಾ ಕಿಸಾನ್ ಸಂಸದ್( ರೈತ ಮಹಿಳೆ ಪ್ರತಭಟನೆ) ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಿದ್ಧತೆ ನಡೆಸಿದ್ದ ಕಾಂಗ್ರೆಸ್ ನಾಯಕಿ ಅಲ್ಕಾ ಲಾಂಬಾಗೆ ದೆಹಲಿ ಪೊಲೀಸರು ಶಾಕ್ ನೀಡಿದ್ದಾರೆ. ಪ್ರತಿಭಟನೆಗೆ ತೆರೆಳುವ ಮುನ್ನವೆ ಅಲ್ಕಾ ಲಾಂಬಾ ಮನೆಗೆ ದಿಢೀರ್ ಆಗಮಿಸಿದ ಪೊಲೀಸರು ಅಲ್ಕಾ ಲಾಂಬಾರನ್ನು ಗೃಹ ಬಂಧನಲ್ಲಿರಿಸಿದ್ದಾರೆ. ಈ ಕುರಿತು ಸ್ವತ ಅಲ್ಕಾ ಲಾಂಬಾ ಟ್ವಿಟರ್ ಮೂಲಕ ಮಾಹಿತಿ ಬಹಿರಂಗ ಪಡಿಸಿದ್ದಾರೆ.
ಈ ಕುರಿತು ದೆಹಲಿ ಪೊಲೀಸರು ಯಾವುದೇ ಮಾಹಿತಿ ಬಹಿರಂಗ ಪಡಿಸಿಲ್ಲ. ಆದರೆ ಅಲ್ಕಾ ಲಾಂಬಾ ಜೊತೆಗೆ ಮಾಜಿ ಆಪ್ ಪಕ್ಷದ ಮುಖಂಡರೊಬ್ಬರು ಅಲ್ಕಾ ಲಾಂಬಾ ಗೃಹ ಬಂಧನ ಕುರಿತು ಮಾಹಿತಿ ನೀಡಿದ್ದು, ಬಂಧನವನ್ನು ಖಂಡಿಸಿದ್ದಾರೆ. ಇದೇ ವೇಳೆ ಟ್ವಿಟರ್ ಮೂಲಕ ದೆಹಲಿ ಪೊಲೀಸರ ನಡೆಯನ್ನು ಅಲ್ಕಾ ಲಾಂಬಾ ಪ್ರಶ್ನಿಸಿದ್ದಾರೆ.
ಜಂತರ್ ಮಂತರ್‌ನಲ್ಲಿ ನಡೆಯುತ್ತಿರುಮ ಮಹಿಳಾ ಕಿಸಾನ್ ಸಂಸದ್‌ನಲ್ಲಿ ನಾನು ಪಾಲ್ಗೊಂಡರೆ ಕಾನೂನು ಸುವ್ಯವಸ್ಥೆ ಹೇಗೆ ಪರಿಣಾಮ ಬೀರುತ್ತದೆ? ಪ್ರತಿಭಟನಾ ನಿರತ ರೈತರನ್ನು ಬೆಂಬಲಿಸಲು ನಾನು ಮಹಿಲಾ ಕಿಸಾನ್ ಸಂಸಾದ್‌ಗೆ ಭೇಟಿ ನೀಡಲು ಬಯಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
ಈ ಕುರಿತು ವಿಡಿಯೋ ಕೂಡಾ ಹರಿಬಿಟ್ಟಿದ್ದಾರೆ. ಕಾನೂನು ಗೌರವಿಸು ನಾನು ಜಂತರ್ ಮಂತರ್‌ನಲ್ಲಿ ಪಾಲ್ಗೊಂಡರೆ ತಪ್ಪೇನು ಎಂದು ಪೊಲೀಸರನ್ನು ಪ್ರಶ್ನಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ