ಭಾರೀ ಮಳೆ, ಪ್ರವಾಹ: ಸರ್ಕಾರಿ ಹಣ ರಕ್ಷಿಸಲು ಬಸ್ ತುದಿಯಲ್ಲೇ ಉಳಿದ ವ್ಯಕ್ತಿ

By Suvarna NewsFirst Published Jul 26, 2021, 6:22 PM IST
Highlights
  • ಭೀಕರ ಮಳೆ, ಪ್ರವಾಹ ಹೆಚ್ಚಾದ್ರೂ ಕರ್ತವ್ಯ ಬಿಟ್ಟು ಓಡಲಿಲ್ಲ
  • ಎಲ್ಲೆಡೆ ನೀರು ತುಂಬಿ ಬರೋಬ್ಬರಿ 7 ಗಂಟೆ ಬಸ್ ತುದಿಯಲ್ಲೇ ಕುಳಿತ ವ್ಯಕ್ತಿ

ಮುಂಬೈ(ಜು.26): ಮಹಾರಾಷ್ಟ್ರದ ರತ್ನಾಗಿರಿ ಜಿಲ್ಲೆಯ ಚಿಪ್ಲುನ್ ಬಸ್ ಡಿಪೋ ವ್ಯವಸ್ಥಾಪಕ ಬಸ್ ಮೇಲೆ ಸುಮಾರು ಏಳು ಗಂಟೆಗಳ ಕಾಲ ಕಳೆದಿದ್ದಾರೆ. ದಿನಕ್ಕೆ ಒಂಬತ್ತು ಲಕ್ಷ ರೂಪಾಯಿಗಳ ಸಾರಿಗೆ ಆದಾಯವು ಡಿಪೋದಲ್ಲಿ ಪ್ರವಾಹಕ್ಕೆ ಸಿಲುಕಿದ ಸಂದರ್ಭ ಇದನ್ನು ರಕ್ಷಿಸಲು ಪಣತೊಟ್ಟಿದ್ದಾರೆ ಇವರು. ರಂಜಿತ್ ರಾಜೇ ಶಿರ್ಕೆ ಮುಳುಗಿರದ ಏಕೈಕ ಸ್ಥಳವಾದ್ದರಿಂದ ಬಸ್ಸಿನ ಮೇಲಕ್ಕೆ ಏರಲು ನಿರ್ಧರಿಸಿದರು.

ಪ್ರತಿ ನಿಮಿಷ ನೀರಿನ ಮಟ್ಟ ಹೆಚ್ಚುತ್ತಿತ್ತು. ಹಣವನ್ನು ಕಚೇರಿಯಲ್ಲಿ ಇಟ್ಟುಕೊಂಡರೆ ಅದು ನೆನೆಸಿ ಕೊಚ್ಚಿಕೊಂಡು ಹೋಗುವ ಸಾಧ್ಯತೆಗಳಿತ್ತು. ನಾನು ಜವಾಬ್ದಾರನಾಗಿರುತ್ತಿದ್ದೆ. ನನ್ನ ಜೀವದ ಬಗ್ಗೆ ಯೋಚಿಸದೆ ಹಣವನ್ನು ರಕ್ಷಿಸುವುದು ನನ್ನ ಪ್ರಧಾನ ಕರ್ತವ್ಯ ಎಂದು ಶಿರ್ಕೆ ಹೇಳಿದ್ದಾರೆ.

ಟ್ರಾಕ್ಟರ್‌ ಓಡಿಸಿ ಕೃಷಿ ಕಾಯ್ದೆ ವಿರೋಧಿಸಿದ ರಾಹುಲ್ ಗಾಂಧಿ

ಇತರ ಉದ್ಯೋಗಿಗಳೂ ಇದ್ದರು. ಅವರು ಬಸ್ಸುಗಳ ಮೇಲೆ ಉಳಿದುಕೊಂಡರು. ಒಮ್ಮೆ ಪ್ರವಾಹದ ನೀರು ಕಡಿಮೆಯಾಗಲು ಪ್ರಾರಂಭಿಸಿದಾಗ ಅವರು ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ನಿಗಮದ ರತ್ನಾಗಿರಿ ವಿಭಾಗೀಯ ಕಚೇರಿ ಮತ್ತು ಸ್ಥಳೀಯ ಪೊಲೀಸ್ ಠಾಣೆಗೆ ಕರೆದು ಪರಿಸ್ಥಿತಿಯ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಿದ್ದಾರೆ.

ನಂತರ ಅವರು ಮತ್ತೊಂದು ಸುರಕ್ಷಿತ ಸ್ಥಳಕ್ಕೆ ತೆರಳಿ ಹಣವನ್ನು ಜಮಾ ಮಾಡಿದ್ದಾರೆ. ಇದು ಕಠಿಣ ಸಮಯ. ನಾವು ಸರ್ಕಾರದ ಹಣದ ಪಾಲಕರು ಎಂದು ಶಿರ್ಕೆ ಹೇಳಿದ್ದಾರೆ. ಬಸ್ ಮೇಲ್ಛಾವಣಿಯಲ್ಲಿ ಗಂಟೆಗಟ್ಟಲೆ ಕಳೆಯುವ ದಿನ ಬರುತ್ತದೆ ಎಂದು ಅವರು ಎಂದಿಗೂ ಯೋಚಿಸಲಿಲ್ಲ ಎಂದು ಅವರು ಹೇಳಿದ್ದಾರೆ.

click me!