ಅಯೋಧ್ಯೆ ತೀರ್ಪು: ಬಿಜೆಪಿಗೆ ಜೀವ ಕೊಟ್ಟಿದ್ದೇ ರಾಮಜನ್ಮಭೂಮಿ ಹೋರಾಟ

By Web Desk  |  First Published Nov 10, 2019, 10:10 AM IST

ತೀರ್ಪಿನಿಂದ ಇಂದು ಅತಿ ಹೆಚ್ಚು ಖುಷಿಯಾಗಿದ್ದರೆ ಅದು ಅಡ್ವಾಣಿ ಅವರಿಗೆ|ಯೋಧ್ಯೆಯ ರಾಮಜನ್ಮ ಭೂಮಿಯಲ್ಲೇ ರಾಮಮಂದಿರ ನಿರ್ಮಾಣವಾಗಬೇಕು ಎಂದು ಬಿಜೆಪಿ ದಶಕಗಳ ಹಿಂದೆಯೇ ಹೋರಾಟ ಆರಂಭಿಸಿತ್ತು| ಅಡ್ವಾಣಿ 1990 ರಲ್ಲಿ ಗುಜರಾತ್‌ನ ಸೋಮನಾಥದಿಂದ ರಾಮರಥಯಾತ್ರೆ ಆರಂಭಿಸಿ ದೇಶದ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದರು|


ನವದೆಹಲಿ[ನ.10]: ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟುವುದಕ್ಕೆ ಅವಕಾಶ ನೀಡಿರುವ ಸುಪ್ರೀಂಕೋರ್ಟ್ ತೀರ್ಪು, ಈ ಕುರಿತಾದ ಬಿಜೆಪಿ ಹೋರಾಟವನ್ನು ಪುನಃ ಜ್ಞಾಪಕಕ್ಕೆ ತಂದಿದೆ. ಅಯೋಧ್ಯೆಯ ರಾಮಜನ್ಮ ಭೂಮಿಯಲ್ಲೇ ರಾಮಮಂದಿರ ನಿರ್ಮಾಣವಾಗಬೇಕು ಎಂದು ಬಿಜೆಪಿ ದಶಕಗಳ ಹಿಂದೆಯೇ ಹೋರಾಟ ಆರಂಭಿಸಿತ್ತು. 

ಅಯೋಧ್ಯೆಗೆ ಹೊರಟಿದ್ದ ನಮ್ಮನ್ನು ಬಂಧಿಸಿದ್ದರು: ಪೇಜಾವರ ಶ್ರೀ

Tap to resize

Latest Videos

undefined

ಅಂದು ಈ ಹೋರಾಟದ ಮುಂಚೂಣಿ ವಹಿಸಿದವರು ಪಕ್ಷದ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಅವರು. ಅಡ್ವಾಣಿ ನೇತೃತ್ವದ ಈ ಹೋರಾಟ 1984 ರ ಲೋಕಸಭೆಯಲ್ಲಿ ಕೇವಲ 2 ಸ್ಥಾನ ಹೊಂದಿದ್ದ ಬಿಜೆಪಿಗೆ 1989ರಲ್ಲಿ 85 ಸ್ಥಾನ ತರಿಸಿಕೊಟ್ಟಿತು. ಆವತ್ತಿನಿಂದ ನಡೆಸುತ್ತಿದ್ದ ಹೋರಾಟಕ್ಕೆ ಇಂದು ಫಲಸಿಕ್ಕಿರುವ ಕಾರಣ, ತೀರ್ಪಿನ ಬಗ್ಗೆ ಅತಿ ಹೆಚ್ಚು ಖುಷಿ ಪಡುತ್ತಿರುವವರೆಂದರೆ ಅಡ್ವಾಣಿ ಎಂಬುದರಲ್ಲಿ ಎರಡು ಮಾತಿಲ್ಲ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಾರೆ. 

ರಾಮಾಯಣ, ಸ್ಕಂದಪುರಾಣ ರಾಮ ಜನ್ಮಭೂಮಿಗೆ ಆಧಾರ: ಸುಪ್ರೀಂ ಕೋರ್ಟ್

ಅಡ್ವಾಣಿ ಅವರು 1990 ರಲ್ಲಿ ಗುಜರಾತ್‌ನ ಸೋಮನಾಥದಿಂದ ರಾಮರಥಯಾತ್ರೆ ಆರಂಭಿಸಿ ದೇಶದ ರಾಜಕಾರಣದಲ್ಲಿ ಸಂಚಲನ ಮೂಡಿಸಿದರು. ಬಿಹಾರದ ಸಮಷ್ಟಿಪುರದಲ್ಲಿ ಅಡ್ವಾಣಿ ಅವರನ್ನು ಅಂದಿನ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಸೂಚನೆ ಮೇರೆಗೆ ಬಂಧಿಸಲಾಗಿತ್ತು. ಹೀಗಾಗಿ ಅಂದಿನ ವಿ.ಪಿ.ಸಿಂಗ್ ಸರ್ಕಾರಕ್ಕೆ ಕೂಡಲೇ ತನ್ನ ಬೆಂಬಲವನ್ನು ಬಿಜೆಪಿ ಹಿಂಪಡೆಯಿತು. ಅಡ್ವಾಣಿ ಬಂಧನ ರಾಮಭಕ್ತರಲ್ಲಿ ಆಕ್ರೋಶ ಹೆಚ್ಚಳಕ್ಕೆ ನಾಂದಿ ಹಾಡಿತು. ಇದು 1992 ರ ಡಿ.6 ರಂದು ಬಾಬ್ರಿಮಸೀದಿಯನ್ನು ಕರಸೇವಕರು ಕೆಡವಲು ಕಾರಣವಾಯಿತು.

ಅಯೋಧ್ಯೆ ತೀರ್ಪು: ಸಂಧಾನದ ಮೂಲಕವೂ ವಿವಾದ ಬಗೆಹರಿಸಲು ನಡೆದಿತ್ತು ಪ್ರಯತ್ನ

‘ಒಟ್ಟಾರೆ ರಾಮಮಂದಿರ ಹೋರಾಟವು ಬಿಜೆಪಿಗೆ ಒಂದು ಗುರುತು ನೀಡಿತು. ಕಾಂಗ್ರೆಸ್‌ಗೆ ಮಹಾತ್ಮಾ ಗಾಂಧಿ ಹಾಗೂ ಸ್ವಾತಂತ್ರ್ಯ ಹೋರಾಟ ಹೇಗೆ ಸಂಕೇತವೋ ಹಾಗೆ ರಾಮಮಂದಿರವು ಬಿಜೆಪಿ ಸಂಕೇತವಾಯಿತು’ ಎಂದು ರಾಜಕೀಯ ವಿಶ್ಲೇಷಕ ಮಹೀಂದ್ರನಾಥ ಠಾಕೂರ್ ಹೇಳುತ್ತಾರೆ.

click me!