Kashmiri Pandit Genocide ಕಾಶ್ಮೀರ್ ಫೈಲ್ಸ್ ಚಿತ್ರದ ಮೂಲಕ ಬಿಜೆಪಿ ವಿಷಕಾರಿ ಮಾತಾವರಣ ಸೃಷ್ಟಿ, ಶರದ್ ಪವಾರ್!

Published : Apr 01, 2022, 04:44 PM IST
Kashmiri Pandit Genocide ಕಾಶ್ಮೀರ್ ಫೈಲ್ಸ್ ಚಿತ್ರದ ಮೂಲಕ ಬಿಜೆಪಿ ವಿಷಕಾರಿ ಮಾತಾವರಣ ಸೃಷ್ಟಿ,  ಶರದ್ ಪವಾರ್!

ಸಾರಾಂಶ

ಕಾಶ್ಮೀರದಿಂದ ಪಂಡಿತರು ಮಾತ್ರವಲ್ಲ ಮುಸ್ಲಿಮರು ಪಲಾಯನ ಕಾಶ್ಮೀರ ಫೈಲ್ಸ್ ಚಿತ್ರದಿಂದ ದೇಶದಲ್ಲಿ ಅಶಾಂತಿಯ ವಾತಾರವಣರ ಸೃಷ್ಟಿ ಕಾಶ್ಮೀರ ಪಂಡಿತರ ಹತ್ಯೆಗೆ ಬಿಜೆಪಿ ಕಾರಣ, ಶರದ್ ಪವಾರ್ ವಾಗ್ದಾಳಿ

ನವದೆಹಲಿ(ಏ.01): ದಿ ಕಾಶ್ಮೀರ್ ಫೈಲ್ಸ್ ಚಿತ್ರ ದೇಶದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ಕಾಶ್ಮೀರ ಪಂಡಿತರ ಮೇಲೆ ನಡದ ಹತ್ಯಾಕಾಂಡ ವಿರುದ್ಧ ಆಕ್ರೋಶಗಳು ಹೆಚ್ಚಾಗುತ್ತಿದೆ. ಇದರ ಬೆನ್ನಲ್ಲೇ ರಾಜಕೀಯ ಕೆಸರೆರಚಾಟ ಕೂಡ ಜೋರಾಗಿದೆ. ಇದೀಗ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್, ಕಾಶ್ಮೀರ ಫೈಲ್ಸ್ ಚಿತ್ರದ ಮೂಲಕ ಬಿಜೆಪಿ ಸುಳ್ಳು ಪ್ರಚಾರ ಮಾಡುತ್ತಿದೆ. ಇಷ್ಟೇ ಅಲ್ಲ ಚಿತ್ರದಿಂದ ದೇಶದಲ್ಲಿ ವಿಷಕಾರಿ ಹಾಗೂ ಆತಂಕದ ವಾತಾವರಣವನ್ನು ಬಿಜೆಪಿ ಸೃಷ್ಟಿಸುತ್ತಿದೆ ಎಂದು ಶರದ್ ಪವಾರ್ ವಾಗ್ದಾಳಿ ನಡೆಸಿದ್ದಾರೆ.

ನವದೆಹಲಿಯಲ್ಲಿ ಆಯೋಜಿಸಿದ ಅಲ್ಪಸಂಖ್ಯಾತರ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಶರದ್ ಪವಾರ್, ಬಿಜೆಪಿ, ಹಿಂದೂ, ಕಾಶ್ಮೀರ ಫೈಲ್ಸ್ ಚಿತ್ರದ ವಿರುದ್ಧ ಮಾತನಾಡಿ ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾರೆ. ಸಮಾಜ ಸಾಮರಸ್ಯ ಹಾಳುವಮಾಡುವ ಹಾಗೂ ಬಿಜೆಪಿ ಅಜೆಂಡಾಗಳನ್ನು ಪ್ರಚಾರ ಮಾಡುವ ದಿ ಕಾಶ್ಮೀರ ಫೈಲ್ಸ್ ಚಿತ್ರ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡಬಾರದು. ಆದರೆ ಬಿಜೆಪಿ ಆಡಳಿತ ರಾಜ್ಯಗಳು ತೆರಿಗೆ ಮುಕ್ತ ಮಾಡಿ ಪ್ರದರ್ಶನಕ್ಕೆ ಅವಕಾಶ ಮಾಡಿಕೊಟ್ಟಿದೆ. ಇದಕ್ಕಿಂತ ದೊಡ್ಡ ದರುಂತ ಇನ್ನೇನು ಬೇಕು ಎಂದು ಶರದ್ ಪವಾರ್ ಪ್ರಶ್ನಿಸಿದ್ದಾರೆ.

31 ವರ್ಷಗಳ ನಂತರ ಕೋರ್ಟ್‌ ಕಟಕಟೆಗೆ ಕಾಶ್ಮೀರದ ನರರಾಕ್ಷಸ!

ದೇಶದ ಐಕ್ಯತೆಯನ್ನು ಕಾಪಾಡಿಕೊಳ್ಳಲು ಈ ರೀತಿಯ ಚಿತ್ರಗಳನ್ನು ನಿಷೇಧಿಸಬೇಕು. ಕಾಶ್ಮೀರದಲ್ಲಿ ಪಂಡಿತರು ಮಾತ್ರವಲ್ಲ, ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಮರು ಪಲಾಯನ ಮಾಡಿದ್ದಾರೆ. ಉಗ್ರರ ದಾಳಿಗೆ ಮುಸ್ಲಿಮರು ಬೇರೆ ಭಾಗಗಳಲ್ಲಿ ನಿರಾಶ್ರಿತರಾಗಿ ಬದುಕುತ್ತಿದ್ದಾರೆ. ಇದು ಪಾಕಿಸ್ತಾನದ ಭಯೋತ್ಪಾದನೆಯಿಂದ ಆಗಿದೆ. ಕಾಶ್ಮೀರದ ಮುಸ್ಲಿಮರು ಅಮಾಯಕರು ಎಂದು ಶರದ್ ಪವಾರ್ ಅಲ್ಪಸಂಖ್ಯಾತ ಮತಗಳ ಒಲೈಕೆ ಮಾಡಿದ್ದಾರೆ.

ಕಾಶ್ಮೀರ ಪಂಡಿತರ ಹತ್ಯೆಯಲ್ಲಿ ಬಿಜೆಪಿ ಕೈವಾಡವಿದೆ ಎಂದು ಶರದ್ ಪವಾರ್ ಆರೋಪಿಸಿದ್ದಾರೆ. ಅಂದು ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ವಿಪಿ ಸಿಂಗ್ ಸರ್ಕಾರಕ್ಕೆ ಬಿಜೆಪಿ ಬೆಂಬಲ ಇತ್ತು. ಪಂಡಿತರ ಪಲಾಯನದ ವೇಳೆ ಇದ್ದ ಜಮ್ಮು ಕಾಶ್ಮೀರ ರಾಜ್ಯಪಾಲ, ಬಳಿಕ ಬಿಜೆಪಿಯಿಂದ ಸ್ಪರ್ಧಿಸಿದ ಅಭ್ಯರ್ಥಿ. ಇವೆಲ್ಲವೂ ಸ್ಪಷ್ಟವಾಗಿ ಬಿಜೆಪಿ ಕೈವಾಡವನ್ನು ಎತ್ತಿ ತೋರಿಸುತ್ತದೆ ಎಂದು ಶರದ್ ಪವಾರ್ ಹೇಳಿದ್ದಾರೆ.

ದೇಶದ ಸಾಮರಸ್ಯ ಹಾಳು ಮಾಡವುದು ಬಿಜೆಪಿ ಉದ್ದೇಶ. ಇದಕ್ಕಾಗಿ ಕಾಶ್ಮೀರ ಫೈಲ್ಸ್ ಸೇರಿದಂತೆ ಹಲವು ವಿಚಾರಗಳನ್ನು ಮಂದಿಟ್ಟುಕೊಂಡು ಬಿಜೆಪಿ ರಾಜಕಾರಣ ಮಾಡುತ್ತಿದೆ ಎಂದು ಶರದ್ ಪವಾರ್ ಹೇಳಿದ್ದಾರೆ. 

ಕಾಶ್ಮೀರದಲ್ಲಿ ಹಿಂದುಗಳ ಹತ್ಯೆ ಕುರಿತು ಅಪಹಾಸ್ಯ, ಕೇಜ್ರಿವಾಲ್ ಮನೆಯ ಮುಂದೆ ತೇಜಸ್ವಿ ಸೂರ್ಯ ನೇತೃತ್ವದಲ್ಲಿ ಪ್ರತಿಭಟನೆ!

ಬಿಜೆಪಿಗರಿಗೆ ಭಾವನಾತ್ಮಕ ವಿಚಾರಣಗಳೇ ಮುಖ್ಯ: ದಿನೇಶ್‌ ಗುಂಡೂರಾವ್‌
ಬಿಜೆಪಿಯವರಿಗೆ ಭಾವನಾತ್ಮಕ ವಿಚಾರಗಳೇ ಮುಖ್ಯವಾಗಿವೆ ಹೊರತು ಮಕ್ಕಳ ವಿದ್ಯಾಭ್ಯಾಸ, ಬೆಲೆ ಏರಿಕೆಯ ಬಗ್ಗೆ ಮಾತನಾಡುವುದಿಲ್ಲ ಎಂದು ಶಾಸಕ ದಿನೇಶ್‌ ಗುಂಡೂರಾವ್‌ ಆರೋಪಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಾಶ್ಮೀರ್‌ ಫೈಲ್ಸ್‌’, ಹಿಜಾಬ್‌ನಂತಹ ವಿಚಾರಗಳೇ ಅವರಿಗೆ ಬೇಕಾಗಿರುವುದು. ಅವರಿಗೆ ಒಬ್ಬ ಹರ್ಷ ಕೊಲೆಯಾದರೆ ದೊಡ್ಡ ವಿಷಯ. ಅದೇ ದಿನೇಶ್‌ ಅಥವಾ ಸಯ್ಯದ್‌ ಶುಬಾನ್‌ ಸತ್ತರೆ ವಿಷಯವೇ ಆಗುವುದಿಲ್ಲ. ಯಾರೇ ತಪ್ಪು ಮಾಡಿದರೂ ಕಠಿಣ ಕ್ರಮಕೈಗೊಳ್ಳಬೇಕು. ಪಿಎಫ್‌ಐ, ಭಜರಂಗದಳ, ಸಂಘ ಪರಿವಾರ ಯಾರೇ ತಪ್ಪು ಮಾಡಿದರೂ ಕ್ರಮವಾಗಬೇಕು ಎಂದರು.

ಕಾಶ್ಮೀರ್‌ ಫೈಲ್ಸ್‌ ಚಿತ್ರ ನೋಡಿ ಹಿಂದೂಗಳು ಜಾಗೃತರಾಗಿ: ವಜ್ರದೇಹಿ ಶ್ರೀ
ಸಿನಿಮಾ ವೀಕ್ಷಣೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ, ಕಾಶ್ಮೀರ್‌ ಫೈಲ್ಸ್‌ ಚಿತ್ರ ವೀಕ್ಷಿಸಿದಾಗ ರಕ್ತ ಕುದಿಯುತ್ತದೆ. ಹಿಂದಿನ ಸರ್ಕಾರಗಳು ಸಮಾಜವನ್ನು ಯಾವ ರೀತಿಯಲ್ಲಿ ನೋಡಿದರೂ, ಭಯೋತ್ಪಾದನೆಯ ಕರಿನೆರಳಿನ ಛಾಯೆ ಭಾರತದ ಮೇಲೆ ಹೇಗೆ ಬಿತ್ತು, ಪಾಕಿಸ್ತಾನ ಕುಮ್ಮಕ್ಕು ನೀಡಿ ಹೇಗೆ ಭಯೋತ್ಪಾದನೆಯನ್ನು ಬೆಳೆಸಿತು ಎಂಬುದನ್ನು ಅರ್ಥಮಾಡಿಕೊಳ್ಳಬಹುದು. ಇದನ್ನು ನೋಡಿದರೆ ಕಣ್ಣಲ್ಲಿ ನೀರು ಬರುತ್ತದೆ. ನೈಜ ಘಟನೆ ಆಧಾರಿತವಾಗಿ ಚಿತ್ರ ನಿರ್ಮಿಸಿದ ನಿರ್ದೇಶಕರಿಗೆ ಹ್ಯಾಟ್ಸಾಪ್‌ ಹೇಳಬೇಕು ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!