
ಆಪರೇಷನ್ ಸಿಂದೂರ್ ಬಗ್ಗೆ ಕಾಂಗ್ರೆಸ್ ಮಾಡಿದ ಹೇಳಿಕೆಗೆ ಭಾರತೀಯ ಜನತಾ ಪಕ್ಷ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಬಿಜೆಪಿ ವಕ್ತಾರ ಸುಧಾಂಶು ತ್ರಿವೇದಿ ರಾಹುಲ್ ಗಾಂಧಿಗೆ ಹೊಸ ಮುಲ್ಲಾ ಎಂದು ಕಿಡಿಕಾರಿದ್ದಾರೆ.
ವಿರೋಧ ಪಕ್ಷದ ನಾಯಕನ ಹುದ್ದೆಯನ್ನು ನೀಡಿದ ನಂತರವೂ ರಾಹುಲ್ ಗಾಂಧಿ ಅಪಕ್ವ, ಬುದ್ಧಿಗೇಡಿಯಂತೆ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಭಯೋತ್ಪಾದಕ ಹಫೀಜ್ ಸಯೀದ್ ಕೂಡ ಬಳಸಲಾಗದ ಪದಗಳನ್ನು ರಾಹುಲ್ ಗಾಂಧಿ ಬಳಸಿದ್ದಾರೆ. ಆ ಮೂಲಕ ದೇಶದ ಸೇನೆಯನ್ನೇ ಅವಮಾನಿಸಿದ್ದಾರೆ ಎಂದು ಆರೋಪಿಸಿದರು.
'ಶರಣಾಗತಿ'ಯಂಥ ಪದ ಬಳಕೆ:
ನಮ್ಮ ಸೇನೆ ಪಾಕಿಸ್ತಾನದ ಉಗ್ರ ನೆಲೆಗಳನ್ನು ಯಶಸ್ವಿಯಾಗಿ ಧ್ವಂಸ ಮಾಡಿ ಬಂದಿದೆ. ಆದರೆ ರಾಹುಲ್ ಗಾಂಧಿ 'ಶರಣಾಗತಿ' ಪದ ಬಳಸುವ ಮೂಲಕ ಭಾರತೀಯ ಸೇನೆಗೆ ಅವಮಾನ ಮಾಡಿದ್ದಾರೆ. ಸೇನೆಯ ಶೌರ್ಯ ಮತ್ತು ಸೇನಾ ಅಧಿಕಾರಿಗಳ ಯಶಸ್ಸನ್ನು ಅವರು ವಿವರಿಸಿದ ರೀತಿ ಅವರ ಮನಸ್ಥಿತಿ ಎಂತಹದ್ದು ಎಂಬುದನ್ನು ತೋರಿಸುತ್ತದೆ. ಇದು ಅನಾರೋಗ್ಯಕರ ಮನಸ್ಥಿತಿ. ಅವರು ಪಾಕಿಸ್ತಾನದ ಮಾಧ್ಯಮ, ಸಂಸತ್ತು ದಾಖಲೆಗಳಲ್ಲಿ ರಾಹುಲ್ ಗಾಂಧಿಯವರ ಹೆಸರನ್ನು ತರಲು ಪ್ರಯತ್ನಿಸುತ್ತಿದ್ದಾರೆ. ಹಫೀಜ್ ಸಯೀದ್‌ನಂತಹ ಭಯೋತ್ಪಾದಕರು ಬಳಸದ ಪದಗಳನ್ನು ಈ ದೇಶದ ವಿರೋಧ ಪಕ್ಷದ ನಾಯಕನಾಗಿ ಅವರು ಬಳಸಿದ್ದಾರೆ ಎಂದರೆ ನಾಚಿಕೆಗೇಡು. ಭಾರತದ ಬಗ್ಗೆ ಇವರ ಮನಸ್ಥಿತಿ ಅನಾವರಣಗೊಳಿಸಿದೆ ಎಂದಿದ್ದಾರೆ.
ಹೊಸ ಮುಲ್ಲಾ ಹೆಚ್ಚು ಈರುಳ್ಳಿ ತಿನ್ನುತ್ತಾನೆ:
ರಾಹುಲ್ ಗಾಂಧಿಯದು ಕೊಳಕು ರಾಜಕಾರಣ ಎಂದು ಟೀಕಿಸಿದ ಅವರು, ಹೊಸ ಮುಲ್ಲಾ ಹೆಚ್ಚು ಈರುಳ್ಳಿ ತಿನ್ನುತ್ತಾನೆ, ಆದರೆ ಅವನು ದೇಶದ ವಿರುದ್ಧ ಮಾತನಾಡುತ್ತಿದ್ದೇನೆ, ಪ್ರಶ್ನಿಸುತ್ತಿದ್ದಾನೆಂದು ಅವನಿಗೇ ಅರ್ಥವಾಗುತ್ತಿಲ್ಲ. ಅವನು ಸೇನೆಯ ಶೌರ್ಯ ಮತ್ತು ಯಶಸ್ಸನ್ನು ಪ್ರಶ್ನಿಸುತ್ತಿದ್ದಾನೆ. ಇದು ಕೊಳಕು ರಾಜಕೀಯದ ಪರಿಣಾಮ. ಇಂಥ ಪದಗಳನ್ನು ಪಾಕಿಸ್ತಾನದ ಉಗ್ರರು ಸಹ ಬಳಕೆ ಮಾಡಿಲ್ಲ. ಪಾಕಿಸ್ತಾನ ಸೈನ್ಯ ಸಹ ಬಳಸಿಲ್ಲ. ಆದರೆ ದೇಶದೊಳಗೆ ಇದ್ದು, ಸಂಸತ್ತಿನ ವಿಪಕ್ಷ ನಾಯಕನಾಗಿ ಜವಾಬ್ದಾರಿ ಸ್ಥಾನದಲ್ಲಿದ್ದುಕೊಂಡು ದೇಶದ ವಿರುದ್ಧ, ಭಾರತೀಯ ಸೈನ್ಯದ ವಿರುದ್ಧ ಪ್ರಶ್ನಿಸುತ್ತಿದ್ದಾನೆಂದರೆ ಏನೆನ್ನಬೇಕು? ಎಂದು ಪ್ರಶ್ನಿಸಿದ್ದಾರೆ.
ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಪ್ರಾಣ ಕಳೆದುಕೊಂಡರು . ಆಪರೇಷನ್ ಸಿಂದೂರ್ ಮೂಲಕ ಭಾರತ ಸೇಡು ತೀರಿಸಿಕೊಂಡಿತು. ನೂರಕ್ಕೂ ಹೆಚ್ಚು ಭಯೋತ್ಪಾದಕರನ್ನು ಕೊಂದಿತು, ಆದರೆ ಈ ಮಧ್ಯೆ ಪಾಕಿಸ್ತಾನಿ ಸೇನೆಯು ಭಾರತೀಯ ನಗರಗಳ ಮೇಲೆ ದಾಳಿ ಮಾಡಲು ಪ್ರಯತ್ನಿಸಿತು, ಅದನ್ನು ವಿಫಲಗೊಳಿಸಲಾಯಿತು. ಇದರ ನಂತರ, ಕೇಂದ್ರ ಸರ್ಕಾರದ ನಿರ್ಧಾರಗಳ ಬಗ್ಗೆ ಕಾಂಗ್ರೆಸ್ ಹಲವು ಪ್ರಶ್ನೆಗಳನ್ನು ಎತ್ತಿತ್ತು. ಇದರ ಬಗ್ಗೆ ಸಾಕಷ್ಟು ಗದ್ದಲವೆಬ್ಬಿಸಿತು. ಕಾಂಗ್ರೆಸ್ ನ ಕೆಲ ನಾಯಕರು ಕಾರ್ಯಾಚರಣೆಯೇ ನಡೆದಿಲ್ಲ ಎಂದರು. ಮಲ್ಲಿಕಾರ್ಜುನ ಖರ್ಗೆಯಂಥ ಕಾಂಗ್ರೆಸ್ಸಿಗರು ಇದೊಂದು ಚುಟ್‌ಪುಟ್ ಎಂದು ಬೇಜವಾಬ್ದಾರಿ ಹೇಳಿಕೆ ನೀಡಿದರು. ಪಾಕಿಸ್ತಾನವೇ ಬಹಿರಂಗವಾಗಿ ದಾಳಿಯಿಂದ ಆದ ನಷ್ಟದ ಬಗ್ಗೆ ಬಾಯಿಬಿಟ್ಟಿದೆ. 20 ಅಲ್ಲ, ಅದಕ್ಕಿಂತ ಹೆಚ್ಚು ಸ್ಥಳಗಳ ಮೇಲೆ ಭಾರತ ದಾಳಿ ಮಾಡಿದೆ ಎಂದು ಹೇಳಿದೆ ಆದರೆ ದೇಶದೊಳಗಿನ ಕಾಂಗ್ರೆಸ್ ಪಾಕ್ ಉಗ್ರರು ಮಾತಾಡದ ಪದಗಳನ್ನ ದೇಶದ ವಿರುದ್ಧ, ಸೈನ್ಯದ ವಿರುದ್ಧ ಬಳಸುತ್ತಿದ್ದಾರೆ. ಇವರ ಮನಸ್ಥತಿ ಏನು ಎಂಬುದು ಬಹಿರಂಗಪಡಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ