
ನೆಲದಾಳದಿಂದಲೇ ಸೇನೆ ಓಡಾಟಕ್ಕೆ ಅತ್ಯಗತ್ಯವಾಗಿದ್ದ ರಷ್ಯಾ ಸೇತುವೆ ಸ್ಫೋಟಿಸಿದ ಉಕ್ರೇನ್
ಮಾಸ್ಕೋ: ಎರಡು ದಿನಗಳ ಹಿಂದಷ್ಟೇ ರಷ್ಯಾದೊಳಗೆ ತನ್ನ ಲಾರಿಗಳನ್ನು ರಹಸ್ಯವಾಗಿ ಸಾಗಿಸಿ ಬಳಿಕ ಅದರೊಳಗಿಂದ ಡ್ರೋನ್ ಹಾರಿಸಿ ರಷ್ಯಾದ 40 ಯುದ್ಧ ವಿಮಾನ ಧ್ವಂಸಗೊಳಿಸಿದ್ದ ಉಕ್ರೇನ್, ಇದೀಗ ನೆಲದಾಳದಿಂದಲೇ ದಾಳಿ ನಡೆಸಿ ರಷ್ಯಾದ ಕ್ರೆಮ್ಲಿನ್ ಸೇತುವೆಯನ್ನು ಸ್ಫೋಟಿಸಿದೆ.
11000 ಕೆ.ಜಿ.ಯಷ್ಟು ಸ್ಫೋಟಕಗಳನ್ನು ಬಳಸಿ ಈ ಸೇತುವೆಯನ್ನು ಸ್ಫೋಟಿಸಲಾಗಿದೆ. 2014ರಲ್ಲಿ ಉಕ್ರೇನ್‌ನಿಂದ ವಶಪಡಿಸಿಕೊಳ್ಳಲಾದ ಕ್ರೈಮಿಯಾದೊಂದಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಸೇತುವೆಯ ಕಂಬಗಳಿಗೆ, ಮಂಗಳವಾರ ಬೆಳಗ್ಗೆ ಸಂಭವಿಸಿದ ಸ್ಫೋಟದಿಂದ ಭಾರೀ ಹಾನಿಯಾಗಿದ್ದು, ಸೇತುವೆ ಕುಸಿದು ಬಿದ್ದಿದೆ. ಕೆರ್ಚ್ ಜಲಸಂಧಿಯ ಮೇಲೆ ಹಾದು ಹೋಗುವ ಈ ಸೇತುವೆ, ಸೇನೆ ಮತ್ತು ನಾಗರಿಕೆ ಓಡಾಟಕ್ಕೆ ಅತ್ಯವಶ್ಯಕವಾಗಿತ್ತು.
ಈ ಬಗ್ಗೆ ಉಕ್ರೇನ್‌ನ ಭದ್ರತಾ ಸಂಸ್ಥೆ ಮಾಹಿತಿ ನೀಡಿದ್ದು, ‘ಈ ದಾಳಿ ನಡೆಸಲು ಹಲವು ತಿಂಗಳುಗಳಿಂದ ಯೋಜನೆ ರೂಪಿಸಲಾಗುತ್ತಿತ್ತು’ ಎಂದಿದೆ. ಜತೆಗೆ, ಸ್ಫೋಟದ ವಿಡಿಯೋವನ್ನೂ ಬಿಡುಗಡೆ ಮಾಡಿದೆ.
ಕೆಲ ದಿನಗಳ ಹಿಂದಷ್ಟೇ ರಷ್ಯಾದ 2 ಸೇತುವೆಗಳು ಕುಸಿದು, ರೈಲುಗಳು ಕೆಳಗುರುಳಿ ಜನರು ಪ್ರಾಣ ಕಳೆದುಕೊಂಡಿದ್ದರು. ಈ ಸ್ಫೋಟವನ್ನೂ ಉಕ್ರೇನ್ ನಡೆಸಿದ್ದು ಎಂದು ರಷ್ಯಾ ಆರೋಪಿಸಿತ್ತು.
ಡ್ರೋನ್ ದಾಳಿ
2 ತಿಂಗಳ ಹಿಂದೆ ವಾಷಿಂಗ್ಟನ್‌ನಲ್ಲಿ ತಮ್ಮನ್ನು ಭೇಟಿಯಾದ ಉಕ್ರೇನ್ ಅಧ್ಯಕ್ಷ ಜೆಲೆನ್ಸ್ಕಿಗೆ ಸಾಕಷ್ಟು ಹೀನಾಮಾನಾ ಬೈದಿದ್ದರು. ‘ನಿಮ್ಮ ಹತ್ತಿರ ಕಾರ್ಡ್‌ಗಳು (ಇಸ್ಪೀಟ್ ಎಲೆಗಳು) ಇಲ್ಲ. ನನ್ನ ಹತ್ತಿರ ಇವೆ. ನಾನು ಹೇಳಿದಂತೆ ಆಟ ನಡೆಯುತ್ತದೆ’ ಎಂದಿದ್ದರು. ಆಗಿನಿಂದಲೇ ಪುಟಿನ್‌ಗೆ ಮಾತ್ರವಲ್ಲ ಟ್ರಂಪ್‌ಗೂ ಸಂದೇಶ ನೀಡಬೇಕೆಂಬ ಉದ್ದೇಶದಿಂದ ಜೆಲೆನ್ಸ್ಕಿ 117 ಡ್ರೋನ್ ಬಳಸಿ ರಷ್ಯಾದ 5 ವಾಯುನೆಲೆಗಳ 40 ಸಮರ ವಿಮಾನ ಧ್ವಂಸಗೊಳಿಸಿದರು ಎಂದು ವರದಿಗಳು ಹೇಳಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ