
ಜೈಪುರ(ಜೂ.13): ರಾಜಸ್ಥಾನದಲ್ಲಿ ತಮ್ಮದೇ ಪಕ್ಷದ ಸರ್ಕಾರ ಹಾಗೂ ಸಿಎಂ ಅಶೋಕ್ ಗೆಹ್ಲೋಟ್ ನಡೆಯಿಂದ ಬೇಸತ್ತಿರುವ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್‌ಗಾಗಿ ಬಿಜೆಪಿ ತನ್ನ ಪಕ್ಷದ ಬಾಗಿಲು ತೆರೆದಿದೆ. ಪರೋಕ್ಷವಾಗಿ ಈ ಬಗ್ಗೆ ಸಂಕೇತ ನಿಡಿರುವ ಬಿಜೆಪಿ ನಾಯಕ, ದೇಶಕ್ಕೆ ಮೊದಲ ಆದ್ಯತೆ ನೀಡುವ ಎಲ್ಲಾ ನಾಯಕರಿಗೂ ಪಕ್ಷದ ಬಾಗಿಲು ತೆರೆದಿದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್‌ಗೆ ರೆಡ್ ಅಲರ್ಟ್: ದೆಹಲಿಗೆ ಹಾರಿದ ಪೈಲಟ್!
ರಾಜಸ್ಥಾನ ಸಂಸದ ರಾಜ್ಯವರ್ಧನ್ ಸಿಂಗ್ ರಾಠೋಡ್ ಈ ಬಗ್ಗೆ ಮಾತನಾಡುತ್ತಾ ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ದೃಷ್ಟಿಕೋನವಿಲ್ಲ. ಹೀಗಾಗಿ ನಾಯಕರು ಆ ಪಕ್ಷ ಬಿಟ್ಟು ಉತ್ತಮ ದೃಷ್ಟಿಕೋನವುಳ್ಳ ಮತ್ತೊಂದು ಪಕ್ಷಕ್ಕೆ ಹೋಗಬೇಕು ಎಂದಿದ್ದಾರೆ. ಇನ್ನು ಸಚಿನ್ ಪೈಲಟ್ ಬಿಜೆಪಿಗೆ ಸೇರ್ಪಡೆಯಾಗುವ ವಿಚಾರವಾಗಿ ಉತ್ತರಿಸಿದ ರಾಠೋಡ್ ದೇಶಕ್ಕೆ ಪ್ರಥಮ ಆದ್ಯತೆ ನೀಡುವ ಎಲ್ಲಾ ನಾಯಕರಿಗೆ ನಮ್ಮ ಪಕ್ಷದ ಬಾಗಿಲು ತೆರೆದಿದೆ ಎಂದಿದ್ದಾರೆ.
ಲಾಕ್‌ಡೌನ್ ಎಫೆಕ್ಟ್: ನೌಕರಿಗೆ ಗುಡ್ ಬೈ ಹೇಳಿ ಕೃಷಿಗೆ ಜೈ ಎಂದ ಯುವಕರು..!
ಕಾಂಗ್ರೆಸ್ ರಾಷ್ಟ್ರೀಯ ನೇತೃತ್ವವನ್ನು ಬಲಹೀನ ಎಂದ ನಾಯಕ
ಕಾಂಗಗ್ರೆಸ್ ಪಕ್ಷ ಒಡೆದು ಹೋಗುತ್ತಿರುವುದಕ್ಕೆ ರಾಷ್ಟ್ರೀಯ ನೇತೃತ್ವವೇ ಕಾರಣ ಎಂದಿರುವ ರಾಠೋಡ್ 'ಕೇಂದ್ರದಲ್ಲಿ ನೇತೃತ್ವ ಬಲ ಕಳೆದುಕೊಂಡರೆ, ಪ್ರಾದೇಶಿಕ ನಾಯಕರು ತಮ್ಮದೇ ಇಚ್ಛೆಯಂತೆ ನಡೆಸುಕೊಳ್ಳುತ್ತಾರೆ. ದೃಷ್ಟಿಕೊನವಿಲ್ಲದ ಪಕ್ಷ ಬಿಟ್ಟು ನಾಯಕರು ಉತ್ತಮ ವಿಷನ್ ಇರುವ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಾರೆ ಎಂದಿದ್ದಾರೆ. '
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ