ಉತ್ತರ ಪ್ರದೇಶ(ಜೂ.13): ಕೊರೋನಾ, ಲಾಕ್‌ಡೌನ್ ಕಾರಣ ಜನರು ಹೈರಾಣಾಗಿದ್ದಾರೆ. ಇದರ ಜೊತೆಗೆ ವೇತನ ಕಡಿತ, ಉದ್ಯೋಗ ಕಡಿತ ಸೇರಿದಂತೆ ಹಲವು ಸಂಕಷ್ಟಗಳು ಸೇರಿಕೊಂಡಿದೆ. ಪೆಟ್ರೋಲ್ ಬೆಲೆ ಏರಿಕೆಯಿಂದ ಅಗತ್ಯವಸ್ತುಗಳ ಬೆಲೆ ಕೂಡ ದುಪ್ಪಟ್ಟಾಗಿದೆ. ಇದರ ನಡುವೆ ಉತ್ತರ ಪ್ರದೇಶ ಸರ್ಕಾರ ಸರ್ಕಾರಿ ನೌಕರರಿಗೆ ಬಂಪರ್ ಕೊಡುಗೆ ಘೋಷಿಸಿದೆ. ಸರ್ಕಾರಿ ನೌಕರರಿಗೆ ವೇತನ ಹಾಗೂ ತುಟ್ಟಿ ಭತ್ಯೆ ಹೆಚ್ಚಳ ಮಾಡುವುದಾಗಿ ಉತ್ತರ ಪ್ರದೇಶ ಸರ್ಕಾರ ಘೋಷಿಸಿದೆ.
ವೇತನ ಪಡೆಯೋರಿಗೊಂದು ಗುಡ್ ನ್ಯೂಸ್, ನೂತನ ಬ್ಯಾಂಕಿಂಗ್ ವ್ಯವಸ್ಥೆ ಜಾರಿ!...
undefined
ಉತ್ತರ ಪ್ರದೇಶದ 15 ಲಕ್ಷಕ್ಕೂ ಹೆಚ್ಚು ರಾಜ್ಯ ಸರ್ಕಾರಿ ನೌಕರರು ಈ ಪ್ರಯೋಜನ ಪಡೆಯಲಿದ್ದಾರೆ. ತುಟ್ಟಿ ಭತ್ಯೆ ಹಾಗೂ ವೇತನ ಹೆಚ್ಚಳ ಮುಂದಿನ 7 ತಿಂಗಳಲ್ಲಿ ಜಾರಿಗೆ ಬರಲಿದೆ ಎಂದು ಅಧಿಸೂಚನೆ ಹೊರಡಿಸಲಾಗಿದೆ. ಜುಲೈ ತಿಂಗಳಲ್ಲಿ ನೌಕರರ ತುಟ್ಟಿ ಭತ್ಯೆ ಶಕೇಡಾ 11ರಷ್ಟು ಹೆಚ್ಚಾಗುವ ನಿರೀಕ್ಷೆ ಇದೆ.
ಕೊರೋನಾದಿಂದ ಟಾಟಾ ಸ್ಟೀಲ್ ಉದ್ಯೋಗಿ ನಿಧನ, 60ನೇ ವಯಸ್ಸಿನವರೆಗೆ ಕುಟುಂಬಕ್ಕೆ ವೇತನ!
ಜುಲೈ ತಿಂಗಳಲ್ಲೇ ಶೇಕಡಾ 3 ರಷ್ಟು ವಾರ್ಷಿಕ ವೇತನ ಹೆಚ್ಚಾಗಲಿದೆ. ಕೊರೋನಾ ವಕ್ಕರಿಸಿದ ಬಳಿಕ ಉತ್ತರ ಪ್ರದೇಶದ ರಾಜ್ಯ ಸರ್ಕಾರಿ ನೌಕರರಿಗೆ ವಾರ್ಷಿಕ ವೇತನ ಹೆಚ್ಚಳ ಮಾಡಿಲ್ಲ. ಸದ್ಯ ಕೆಲಸ ಮಾಡುವ ನೌಕರರಿಗೆ ಮಾತ್ರವಲ್ಲ, 12 ಲಕ್ಷಕ್ಕೂ ಹೆಚ್ಚು ಪಿಂಚಣಿದಾರರಿಗೂ ನೂತನ ನಿರ್ಧಾರ ಅನ್ವಯವಾಗಲಿದೆ ಎಂದು ಸರ್ಕಾರ ಹೇಳಿದೆ.
ವೇತನ ಹೆಚ್ಚಳ, ತುಟ್ಟಿ ಭತ್ಯೆ ಹೆಚ್ಚಳದಿಂದ ಉತ್ತರ ಪ್ರದೇಶ ಸರ್ಕಾರಕ್ಕೆ ಬರೋಬ್ಬರಿ 3,000 ಕೋಟಿ ರೂಪಾಯಿ ಹೊರೆ ಬೀಳಲಿದೆ.