
ನವದೆಹಲಿ(ಜೂ.13): ಕೊರೋನಾ ವೈರಸ್ ಅಪಾಯದಿಂದ ದೂರವಿರಲು ಪ್ರತಿಯೊಬ್ಬರು ಲಸಿಕೆ ಪಡೆಯುವುದು ಅವಶ್ಯಕವಾಗಿದೆ. ಆದರೆ ಹಲವು ಗೊಂದಲ, ಭಯ, ಸುಳ್ಳು ಪ್ರಚಾರಗಳಿಂದ ಲಸಿಕೆ ಪಡೆಯಲು ಕೆಲವರು ಹಿಂದೇಟು ಹಾಕುತ್ತಿದ್ದಾರೆ. ಇದರಲ್ಲಿ ಅಲರ್ಜಿ ಸಮಸ್ಯೆ ಇದ್ದವರಿಗೆ ಲಸಿಕೆ ಉತ್ತಮವಲ್ಲ ಅನ್ನೋ ಮಾತುಗಳು ಇವೆ. ಆದರೆ ಈ ಗೊಂದಲಕ್ಕೆ ನೀತಿ ಆಯೋಗದ ಸದಸ್ಯ ವಿಕೆ ಪೌಲ್ ಉತ್ತರ ನೀಡಿದ್ದಾರೆ.
ಕೋವಿಡ್ ಲಸಿಕೆ ಬಳಿಕ ರಕ್ತದೊತ್ತಡ ಏರಿಕೆ ಸಹಜವೇ? ತಜ್ಞರು ಏನ್ ಹೇಳ್ತಾರೆ?
ಸಣ್ಣ ಪ್ರಮಾಣದ ಅಲರ್ಜಿಗಳಾದ ಚರ್ಮ ತುರಿಸುವಿಕೆ, ಕಜ್ಜಿ, ಶೀತ, ಕೆಮ್ಮು, ಜ್ವರ ಸೇರಿದಂತೆ ಕೆಲ ಅಲರ್ಜಿ ಸಮಸ್ಯೆ ಇರುವವರು ಕೊರೋನಾ ಲಸಿಕೆ ಆತಂಕವಿಲ್ಲದೆ ಪಡೆಯಬಹುದು. ಲಸಿಕೆಯಿಂದ ದೇಹದ ಪ್ರತಿಕಾಯ ಹೆಚ್ಚಾಗುವುದರಿಂದ ಭವಿಷ್ಯದಲ್ಲಿ ಈ ರೀತಿಯ ಅಲರ್ಜಿಯಿಂದ ದೂರವಿರಬಹುದು ಎಂದು ವಿಕೆ ಪೌಲ್ ಸ್ಪಷ್ಟಪಡಿಸಿದ್ದಾರೆ.
ಕೆಲ ಗಂಭೀರ ಅಲರ್ಜಿ ಸಮಸ್ಯೆ ಇದ್ದವರು, ವೈದ್ಯರ ಸಲಹೆ ಪಡೆದು ಲಸಿಕೆ ಪಡೆಯುವುದು ಉತ್ತಮ ಎಂದು ವಿಕೆ ಪೌಲ್ ಹೇಳಿದ್ದಾರೆ. ಇನ್ನು ಈಗಾಗಲೇ ಏಮ್ಸ್ ನಿರ್ದೇಶಕ ರಂದೀಪ್ ಗುಲೇರಿಯಾ ಅಲರ್ಜಿ ಸಮಸ್ಯೆ ಇದ್ದವರು ಲಸಿಕೆ ಪಡೆಯಲು ಕೆಲ ಮಹತ್ವದ ಸೂಚನೆಗಳನ್ನು ನೀಡಿದ್ದಾರೆ.
ಖಾಸಗಿ ಆಸ್ಪತ್ರೆಗೆ ಲಸಿಕೆ ದರ ನಿಗದಿಪಡಿಸಿದ ಕೇಂದ್ರ; ಇಲ್ಲಿದೆ 3 ವಾಕ್ಸಿನ್ ಬೆಲೆ !.
ಅಲರ್ಜಿ ಸಮಸ್ಯೆಗೆ ಔಷಧಿ ಪಡೆಯುವವರು ಲಸಿಕೆ ಕಾರಣಕ್ಕಾಗಿ ಔಷಧಿಗಳನ್ನು ನಿಲ್ಲಿಸುವ ಅಗತ್ಯವಿಲ್ಲ. ಇನ್ನು ಲಸಿಕಾ ಕೇಂದ್ರದಲ್ಲಿ ಅಲರ್ಜಿ ಸೇರಿದಂತೆ ಇತರ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಲಾಗಿದೆ. ತೀವ್ರ ಅಲರ್ಜಿ ಸಮಸ್ಯೆ ಇದ್ದರೂ ಲಸಿಕೆಯಿಂದ ವಂಚಿತರಾಗಬೇಡಿ. ಲಸಿಕೆಯಿಂದ ನಿಮ್ಮ ಅಲರ್ಜಿ ಸಮಸ್ಯೆ ಉಲ್ಬಣಗೊಳ್ಳುವ ಸಾಧ್ಯತೆ ಕಡಿಮೆ. ಲಸಿಕೆ ಪಡೆದ ಬಳಿಕ ಸಮಸ್ಯೆ ಇದ್ದರೆ ತಕ್ಷಣವೇ ಆರೋಗ್ಯ ಕೇಂದ್ರಕ್ಕೆ ಬೇಟಿ ನೀಡಿ ಎಂದು ಗುಲೇರಿಯಾ ಹೇಳಿದ್ದಾರೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ