ಬಾಲಿವುಡ್‌ನಿಂದ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ ಸಂಸದೆ ಕಂಗನಾ ರನಾವತ್ ಅವರು ಸಿನಿಮಾ, ರಾಜಕೀಯದಲ್ಲಿ ವಿವಾದಾತ್ಮಕ ಹೇಳಿಕೆಗಳಿಂದ ದೇಶಾದ್ಯಂತ ಸುದ್ದಿಯಾಗುತ್ತಿದ್ದಾರೆ.
Kangana Ranaut Controversy : ಬಾಲಿವುಡ್‌ನಿಂದ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ ಸಂಸದೆ ಕಂಗನಾ ರನಾವತ್ ಅವರು ಸಿನಿಮಾ, ರಾಜಕೀಯದಲ್ಲಿ ವಿವಾದಾತ್ಮಕ ಹೇಳಿಕೆಗಳಿಂದ ದೇಶಾದ್ಯಂತ ಸುದ್ದಿಯಾಗುತ್ತಿದ್ದಾರೆ.
ಕಂಗನಾ ಹೇಳಿಕೆಗಳಿಂದ ಬಿಜೆಪಿ ಪದೇಪದೆ ಮುಜುಗರಕ್ಕೀಡಾಗುತ್ತಿದೆ. ಈ ಹಿಂದೆ ರೈತರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ತೀವ್ರ ಟೀಕೆಗೆ ಒಳಗಾಗಿದ್ದರು. ಬಿಜೆಪಿ ಹೈಕಮಾಂಡ್ ಎಚ್ಚರಿಕೆ ನೀಡಿತ್ತು. ಎಚ್ಚರಿಕೆ ನೀಡಿದ್ರೂ ಇದೀಗ ಮತ್ತೆ ರೈತ ಮಸೂದೆ ಬಗ್ಗೆ ಹೇಳಿಕೆ ನೀಡಿ ವಿರೋಧ ಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದ್ದಾಳೆ. 'ಈ ಹಿಂದೆ ಬಿಜೆಪಿ ಸರ್ಕಾರವು 2020ರಲ್ಲಿ ನಡೆದ ರೈತ ಚಳಿವಳಿ ಬಳಿಕ ಹಿಂಪಡೆದುಕೊಂಡಿದ್ದ 3 ರೈತ ಕಾನೂನುಗಳನ್ನು ಮರಳಿ ಅನುಷ್ಠಾನಗೊಳಿಸುವಂ ಹೇಳಿಕೆ ನೀಡಿ ಎನ್‌ಡಿಎ ಸರ್ಕಾರವನ್ನ ಮತ್ತೆ ಇಕ್ಕಟ್ಟಿಗೆ ಸಿಲುಕಿಸಿದ್ದಾರೆ.
undefined
ವಿವಾದಿತ ಮುಂಬೈ ಬಂಗಲೆ ಮಾರಾಟ ಮಾಡಿದ ನಟಿ ಕಂಗನಾ,ಲಾಭಕ್ಕಿಂತ ನಷ್ಟವೇ ಹೆಚ್ಚು!
ಕಂಗನಾ ವಿವಾದಾತ್ಮಕ ಹೇಳಿಕೆ ನೀಡುತ್ತಿರುವುದು ಇದೇ ಮೊದಲೇನಲ್ಲ. ಕೆಲವು ಹೇಳಿಕೆಗಳು ದೇಶಾದ್ಯಂತ ವಿವಾದ ಎಬ್ಬಿಸಿವೆ. ಅಂತಹ ಪ್ರಮುಖ ಐದು ವಿವಾದಾತ್ಮಕ ಹೇಳಿಕೆಗಳು ಇಲ್ಲಿವೆ.
ಬಾಲಿವುಡ್ ನಟಿ ಮತ್ತು ಕಳೆದ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಬಿಜೆಪಿಯ ಸಂಸದೆ ಕಂಗನಾ ರಣಾವತ್ ಪಕ್ಷಕ್ಕೆ ಸಮಸ್ಯೆಗಳನ್ನು ಸೃಷ್ಟಿಸುತ್ತಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ತಂತ್ರಗಾರಿಕೆಯಿಂದ ಕಂಗನಾ ರಣಾವತ್ ಚುನಾವಣೆಯಲ್ಲಿ ಗೆದ್ದಿದ್ದರು, ಗೆದ್ದ ಬಳಿಕ ಆದರೆ ಕ್ಷೇತ್ರದ ಅಭಿವೃದ್ಧಿ ಬಗ್ಗೆ, ಬಿಜೆಪಿ ಬಲಪಡಿಸುವ ಬಗ್ಗೆ ಮಾತಾಡುವ ಬದಲು ಪಕ್ಷಕ್ಕೆ ಸಮಸ್ಯೆ ಸೃಷ್ಟಿಸುತ್ತಿದ್ದಾರೆ.
ಕಳೆದ ಒಂದು ತಿಂಗಳಲ್ಲಿ ಕಂಗನಾ ರಣಾವತ್ ಎರಡನೇ ಬಾರಿಗೆ ಇಂತಹ ಹೇಳಿಕೆಗಳನ್ನು ನೀಡಿದ್ದು, ಬಿಜೆಪಿ ಎಚ್ಚರಿಕೆ ನೀಡಿ ಇದೀಗ ಹೈಕಮಾಂಡ್ ಕಂಗನಾ ಹೇಳಿಕೆಯಿಂದ ದೂರ ಸರಿದಿದೆ. ಈ ಬಾರಿ ಮೂರು ಕೃಷಿ ಕಾನೂನುಗಳನ್ನು ಮತ್ತೆ ಜಾರಿಗೆ ತರುವುದಾಗಿ ಕಂಗನಾ ಹೇಳಿದ್ದಾರೆ. ಅವರ ಹೇಳಿಕೆಯಿಂದ ಬಿಜೆಪಿ ಎಷ್ಟು ವಿಚಲಿತವಾಗಿದೆ ಎಂದರೆ ಅದು ತನ್ನದೇ ಸಂಸದೆ ಹೇಳಿದ್ದನ್ನು ಖಂಡಿಸಿದೆ.
ರೈತ ಚಳವಳಿ ಬಗ್ಗೆ ಕಂಗನಾ ಹೇಳಿದ್ದೇನು?
ಕಂಗನಾ ರಣಾವತ್ 2020 ರಲ್ಲಿ ದೆಹಲಿಯಲ್ಲಿ ರೈತ ಚಳವಳಿ ನಡೆದ ಸಂದರ್ಭದಲ್ಲಿ ನೀಡಿದ್ದ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ದೇಶಾದ್ಯಂತ ನಡೆದ ರೈತರ ಆಂದೋಲನದ ಬಗ್ಗೆಯೂ ಕಂಗನಾ ರನಾವತ್ ವಿವಾದಾತ್ಮಕ ಹೇಳಿಕೆ ನೀಡಿದ್ದರು. ರೈತ ಮಹಿಳೆ ಬಗ್ಗೆ ಅಸಭ್ಯವಾಗಿ ಹೇಳಿಕೆ ನೀಡಿದ್ದರು. ಕಂಗನಾ ವಿರುದ್ಧ ವಿರುದ್ಧ ಹಲವು ಎಫ್‌ಐಆರ್‌ಗಳು ದಾಖಲಾಗಿದ್ದವು. ಆದರೆ, ಆಗ ಅವರು ಸಂಸದರಾಗಿರಲಿಲ್ಲ. ರೈತರ ಹೋರಾಟದ ಕುರಿತಾದ ಪೋಸ್ಟ್‌ವೊಂದರಲ್ಲಿ ವೃದ್ಧ ಬಿಲ್ಕಿಸ್ ಅಜ್ಜಿ ಎಂದು ಕರೆದು ಅತ್ಯಂತ ಆಕ್ಷೇಪಾರ್ಹ ಪೋಸ್ಟ್ ಹಾಕಿದ್ದರು. ಈ ಪೋಸ್ಟ್ ಅನ್ನು ತೆಗೆದುಹಾಕಲು ಮತ್ತು ನಟಿಯ ವಿರುದ್ಧ ಎಫ್‌ಐಆರ್ ದಾಖಲಿಸಲು ಕರ್ನಾಟಕ ಹೈಕೋರ್ಟ್ ಆದೇಶಿಸಿತ್ತು. ಭಾರತದ ಪ್ರಬಲ ಮಹಿಳೆ ಎಂದು ಕರೆಸಿಕೊಂಡ ಅದೇ ಅಜ್ಜಿ ಇದು. ಅವರು 100 ರೂಪಾಯಿಗಾಗಿ ಸಿಗುತ್ತಾರೆ ಎಂದು ಹೇಳಿ ವಿವಾದ ಸೃಷ್ಟಿಸಿದ್ದರು.
ಕಂಗನಾ ಮಾತು ಬಿಜೆಪಿಗೆ ಸಮಸ್ಯೆಯಾಗಲಿದೆಯೇ?
ಹರಿಯಾಣದಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿರುವ ಸಂದರ್ಭದಲ್ಲಿ ರೈತರ ಚಳವಳಿ ಮತ್ತು ಕೃಷಿ ಕಾನೂನುಗಳಿಗೆ ಸಂಬಂಧಿಸಿದಂತೆ ಕಂಗನಾ ಹೇಳಿಕೆ ನೀಡಿದ್ದಾರೆ. ಹರಿಯಾಣದಲ್ಲಿ ಹೆಚ್ಚಿನ ಸಂಖ್ಯೆಯ ರೈತರು ಮತ್ತು ಜಾಟ್ ಮತದಾರರಿದ್ದಾರೆ. ರೈತರ ಆಂದೋಲನದಿಂದಾಗಿ ಜಾಟ್ ಮತದಾರರು ಈಗಾಗಲೇ ಬಿಜೆಪಿ ವಿರುದ್ಧ ಕೋಪಗೊಂಡಿದ್ದಾರೆ ಎನ್ನಲಾಗಿದೆ. ಇಂತಹ ಸಂದರ್ಭದಲ್ಲಿ ಕಂಗನಾ ಹೇಳಿಕೆಯಿಂದ ಬಿಜೆಪಿಗೆ ಹಾನಿಯಾಗಬಹುದು ಎಂಬುದು ತಜ್ಞರ ಅಭಿಪ್ರಾಯ. ಇದು ಬಿಜೆಪಿಗೂ ಚೆನ್ನಾಗಿ ಗೊತ್ತಿದೆ. ಇದೇ ಕಾರಣಕ್ಕೆ ಕಂಗನಾ ಅವರ ಎರಡನೇ ಹೇಳಿಕೆಗೆ ಬಿಜೆಪಿ ನಿರಂತರವಾಗಿ ಸ್ಪಷ್ಟನೆ ನೀಡಿದ್ದು, ಅದನ್ನು ಅವರ ವೈಯಕ್ತಿಕ ಹೇಳಿಕೆ ಎಂದಿದ್ದಾರೆ.
ರಾಹುಲ್ ವಿರುದ್ಧ ಕಂಗನಾ ಹೇಳಿಕೆ
ರಾಹುಲ್ ಗಾಂಧಿ ಬಗ್ಗೆ ಕಂಗನಾ ರಣಾವತ್ ಕೂಡ ಕಾಮೆಂಟ್ ಮಾಡಿದ್ದಾರೆ. ಜುಲೈ 2024 ರಲ್ಲಿ ಸಂಸತ್ತಿನ ಅಧಿವೇಶನದಲ್ಲಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಭಗವಾನ್ ಶಿವನ ಚಕ್ರವ್ಯೂಹ ಮತ್ತು ಮಹಾಭಾರತದ ಕಥೆಯನ್ನು ಪ್ರಸ್ತಾಪಿಸಿದ್ದರು ಬಳಿಕ ಕಂಗನಾ ರಣಾವತ್ ರಾಹುಲ್ ಗಾಂಧಿ ವಿರುದ್ಧ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದರು.
ಶಂಕರಾಚಾರ್ಯರ ಮೇಲೂ ಕಿಡಿಕಾರಿದ್ದರು.
ಮಹಾರಾಷ್ಟ್ರದಲ್ಲಿ ರಾಜಕೀಯ ಪಕ್ಷಗಳು ವಿಘಟನೆಗೊಂಡು ಏಕನಾಥ್ ಶಿಂಧೆ ಮುಖ್ಯಮಂತ್ರಿಯಾದ ನಂತರ 'ರಾಜಕಾರಣಿ ರಾಜಕೀಯ ಮಾಡದಿದ್ದರೆ ಗೋಲಗಪ್ಪ ಮಾರುತ್ತಾರಾ?' ಎಂದು ಬರೆದುಕೊಂಡಿದ್ದರು. ಶಂಕರಾಚಾರ್ಯರು ನಮ್ಮ ಗೌರವಾನ್ವಿತ ಮಹಾರಾಷ್ಟ್ರದ ಮುಖ್ಯಮಂತ್ರಿ ವಿರುದ್ಧ ಅವಹೇಳನಕಾರಿ ಪದಗಳನ್ನು ಬಳಸಿ ನಮ್ಮೆಲ್ಲರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ಅವರನ್ನು ದೇಶದ್ರೋಹಿ ಎಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದರು. ಶಂಕರಾಚಾರ್ಯರು ಇಂತಹ ಸಣ್ಣ-ಪುಟ್ಟ ಮಾತುಗಳನ್ನಾಡುವ ಮೂಲಕ ಹಿಂದೂ ಧರ್ಮದ ಘನತೆಗೆ ಧಕ್ಕೆ ತರುತ್ತಿದ್ದಾರೆ ಎಂದು ಕಿಡಿಕಾರಿದ್ದರು.
ನಿಜವಾದ ಸ್ವಾತಂತ್ರ್ಯ 2014 ರಲ್ಲಿ ಬಂದಿತು
2014ರ ನಂತರ ದೇಶಕ್ಕೆ ನಿಜವಾದ ಸ್ವಾತಂತ್ರ್ಯ ಸಿಕ್ಕಿದೆ ಎಂದು ಹೇಳಿದ್ದರು. 2021 ರಲ್ಲಿ, ಟಿವಿ ಚಾನೆಲ್ ಕಾರ್ಯಕ್ರಮವೊಂದರಲ್ಲಿ, ಕಂಗನಾ ರನೌತ್ 1947 ರಲ್ಲಿ ಭಿಕ್ಷಾಟನೆಯ ಮೂಲಕ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿತು ಮತ್ತು 2014 ರಲ್ಲಿ ದೇಶಕ್ಕೆ ನಿಜವಾದ ಸ್ವಾತಂತ್ರ್ಯ ಸಿಕ್ಕಿತು ಎಂದು ಹೇಳಿದ್ದರು. ವಾಸ್ತವವಾಗಿ, ಭಾರತವು 1947 ರಲ್ಲಿ ಆಗಸ್ಟ್ 15 ರಂದು ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆಯಿತು. ಸುದೀರ್ಘ ಹೋರಾಟ ಮತ್ತು ಹೋರಾಟದ ನಂತರ ಈ ಸ್ವಾತಂತ್ರ್ಯವನ್ನು ಸಾಧಿಸಲಾಯಿತು, ಆದರೆ 2014 ರಲ್ಲಿ ನರೇಂದ್ರ ಮೋದಿ ಅವರು ಮೊದಲ ಬಾರಿಗೆ ಭಾರತದ ಪ್ರಧಾನಿಯಾದರು ಎಂದು ಹೇಳಿಕೆ ನೀಡಿದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು.
ತಾಪ್ಸಿ ಪನ್ನು, ಸ್ವರಾ ಭಾಸ್ಕರ್ ಬಿ ದರ್ಜೆಯ ನಟಿಯರು:
ಟಿವಿ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಕಂಗನಾ ರಣಾವತ್ ಅವರು, ನಟಿಯರಾದ ತಾಪ್ಸಿ ಪನ್ನು ಮತ್ತು ಸ್ವರಾ ಭಾಸ್ಕರ್ ಅವರನ್ನು ಬಿ-ಗ್ರೇಡ್ ನಟಿಯರು ಎಂದು ಕರೆದಿದ್ದರು. ಕಂಗನಾ ರಣಾವತ್ ಅವರ ಈ ಕಾಮೆಂಟ್ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಈ ವೇಳೆ ಅವರ ಅಭಿಮಾನಿಗಳು ಹಾಗೂ ವಿರೋಧಿಗಳ ನಡುವೆ ಗಲಾಟೆ ನಡೆಯಿತು.
ಉರ್ಫಿ ಜಾವೇದ್‌ಗೆ ಎದೆಯ ಕೆಳಗಿದೆ! ಕಂಗನಾ ರಾಣಾವತ್‌ಗೆ ಬೆನ್ನಿನಲ್ಲಿದೆ! ಏನದು ಗೊತ್ತಾ?
ಸಿಐಎಸ್ಎಫ್ ಮಹಿಳಾ ಪೇದೆಯಿಂದ ಕಂಗನಾಗೆ ಕಪಾಳಮೋಕ್ಷ
ರೈತರ ಚಳವಳಿ ವಿಚಾರವಾಗಿ ಕಂಗನಾ ರಣಾವತ್ ನೀಡಿದ ಹೇಳಿಕೆಯಿಂದ ಸಿಐಎಸ್‌ಎಫ್ ಮಹಿಳಾ ಪೇದೆಯೊಬ್ಬರು ಕಂಗನಾಗೆ ಕಪಾಳಮೋಕ್ಷ ಮಾಡಿದ್ದು ಭಾರೀ ಸುದ್ದಿಯಾಗಿತ್ತು. ಹರಿಯಾಣದಲ್ಲಿ ಚುನಾವಣೆ ನಡೆಯುತ್ತಿದೆ. ಬಿಜೆಪಿ ವಿರುದ್ಧ ನಡೆಯುತ್ತಿದೆ. ಹೀಗಿರುವಾಗ ಕಂಗನಾ ರಣಾವತ್‌ಗೆ ರೈತ ಮಸೂದೆ ಪುನಃ ಜಾರಿ ಮಾಡುವ ಬಗ್ಗೆ ಮಾತನಾಡಿದ್ದಾರೆ. ಬಿಜೆಪಿ ಹೈಕಮಾಂಡ್ ಎಚ್ಚರಿಕೆ ನೀಡಿದ ನಂತರ ಮಾತು ಹಿಂಪಡೆದಿದ್ದಾರೆ. ಆದರೆ ವಿರೋಧ ಪಕ್ಷಗಳು ಸುಮ್ಮನೆ ಬಿಟ್ಟಾರೆಯೇ? ಕಂಗನಾ ಹೇಳಿಕೆಯಿಂದ ಬಿಜೆಪಿ ಇದೆ ಎಂದು ಆಕ್ರೋಶ ವ್ಯಕ್ತಪಡಿದ್ದಾರೆ. ಒಟ್ಟಿನಲ್ಲಿ ಕಂಗನಾ ರಣಾವತ್ ರ ವಿವಾದಾತ್ಮಕ ಹೇಳಿಕೆಯಿಂದ ಚುನಾವಣೆಯಲ್ಲಿ ಬಿಜೆಪಿಗೆ ನಷ್ಟವನ್ನುಂಟುಮಾಡುತ್ತದೆ ಎಂಬ ಬಗ್ಗೆ ಅಭಿಪ್ರಾಯ ಕೇಳಿಬಂದಿದೆ.