ದೂರ ಪ್ರಯಾಣ ಮಾಡುವಾಗ ಜನ ಬುತ್ತಿ ಕಟ್ಟಿ ತಂದು ರೈಲಿನಲ್ಲಿ ಹಂಚಿಕೊಂಡು ತಿಂದು ಪ್ರಯಾಣವನ್ನು ಎಂಜಾಯ್ ಮಾಡುತ್ತಾರೆ. ಈ ವೇಳೆ ಪ್ರಯಾಣಕ್ಕೆ ಜೊತೆಯಾದ ಸಹಪ್ರಯಾಣಿಕರಿಗೂ ಕೆಲವರು ಆಹಾರ ನೀಡುತ್ತಾರೆ. ಆದರೆ ಹೀಗೆ ರೈಲಿನಲ್ಲಿ ಆಹಾರ ಹಂಚಿ ತಿನ್ನುತ್ತಿದ್ದ ಕುಟುಂಬವನ್ನು ಪೊಲೀಸರು ಬಂಧಿಸಿದ್ದಾರೆ.
ರೈಲಿನಲ್ಲಿ ಅಪರಿಚಿತರು ಕೊಟ್ಟ ಆಹಾರವನ್ನು ತಿನ್ನಬೇಡಿ ಎಂದು ರೈಲ್ವೆ ಪೊಲೀಸರು ಹಾಗೂ ರೈಲ್ವೆ ಇಲಾಖೆ ತನ್ನ ಪ್ರಯಾಣಿಕರಿಗೆ ಆಗಾಗ ಎಚ್ಚರಿಕೆ ನೀಡುತ್ತಲೇ ಇರುತ್ತದೆ. ಆದರೂ ಜೊತೆಗೆ ದೂರ ಪ್ರಯಾಣ ಮಾಡುವಾಗ ಜನ ಬುತ್ತಿ ಕಟ್ಟಿ ತಂದು ರೈಲಿನಲ್ಲಿ ಹಂಚಿಕೊಂಡು ತಿಂದು ಪ್ರಯಾಣವನ್ನು ಎಂಜಾಯ್ ಮಾಡುತ್ತಾರೆ. ಈ ವೇಳೆ ಪ್ರಯಾಣಕ್ಕೆ ಜೊತೆಯಾದ ಸಹಪ್ರಯಾಣಿಕರಿಗೂ ಕೆಲವರು ಆಹಾರ ನೀಡುತ್ತಾರೆ. ಆದರೆ ಹೀಗೆ ರೈಲಿನಲ್ಲಿ ಆಹಾರ ಹಂಚಿ ತಿನ್ನುತ್ತಿದ್ದ ಕುಟುಂಬವನ್ನು ಪೊಲೀಸರು ಬಂಧಿಸಿದ್ದಾರೆ. ಅರೇ ಫುಡ್ ಹಂಚಿ ತಿಂದರೆ ಅದು ಅವರ ಓನ್ ರಿಸ್ಕ್ ಇವರಿಗೇನು ಸಮಸ್ಯೆ ಎಂಬ ಯೋಚನೆ ಬರಬಹುದು. ಆದರೆ ಹೀಗೆ ತಂದ ಬುತ್ತಿಯ ಹಂಚಿ ತಿನ್ನುತ್ತಿದ್ದವರ ಬಂಧನದ ಹಿಂದೆ ದೊಡ್ಡ ಮಾಫಿಯಾ ಅಡಗಿತ್ತು. ಅದೇನು ಮುಂದೆ ಓದಿ...
ರೈಲಿನಲ್ಲಿ ಬುತ್ತಿಕಟ್ಟಿಕೊಂಡು ತುಂಬು ಕುಟುಂಬದಂತೆ ಪ್ರಯಾಣ ನಡೆಸುತ್ತಿದ್ದವರು ಡ್ರಗ್ ಸಾಗಣೆ ಜಾಲದ ಭಾಗವಾಗಿದ್ದರು. ಮೇಲ್ನೋಟಕ್ಕೆ ತುಂಬಾ ಸುಂದರವಾದ ಮರ್ಯಾದಸ್ಥ ಕುಟುಂಬದಂತೆ ಕಾಣುತ್ತಿದ್ದ ಇವರ ಇಡೀ ಕುಟುಂಬವೇ ಡ್ರಗ್ ಜಾಲದಲ್ಲಿ ತೊಡಗಿತ್ತು. ಇವರು ದೊಡ್ಡದಾದ ಬ್ಯಾಗುಗಳನ್ನು ಹಿಡಿದುಕೊಂಡು ನಗು ನಗುತ್ತಾ ರೈಲು ಏರಿದ್ದರು. ಅಲ್ಲದೇ ತಮ್ಮದೊಂದು ಮರ್ಯಾದಸ್ಥ ಕುಟುಂಬ ಎಂಬ ಸೋಗು ಹಾಕುವುದಕ್ಕಾಗಿ ತಾವು ಊಟ ಮಾಡುತ್ತಾ ತಾವು ತಂದ ಆಹಾರವನ್ನು ರೈಲಿನಲ್ಲಿದ್ದ ಇತರರಿಗೂ ಹಂಚಿದ್ದರು. ಆದರೆ ಈ ವಿಚಾರವನ್ನು ಮೊದಲೇ ಅರಿತಿದ್ದ ಪೊಲೀಸರು ಇವರನ್ನು ಬಂಧಿಸುವುದಕ್ಕಾಗಿ ಇವರಿಗಿಂತ ಚೆನ್ನಾಗಿ ಸೋಗು ಹಾಕಿದ್ದರು.
ಬೆಂಗಳೂರು: ಅದ್ಧೂರಿಯಾಗಿ ತಂಗಿ ಮದುವೆ ಮಾಡಲು ಗಾಂಜಾ ಮಾರಲು ಯತ್ನ, ಡ್ರಗ್ ಪೆಡ್ಲರ್ ಬಂಧನ..!
ಕವಚ್ ಕೋಡ್ ಹೆಸರಿನಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಈ ಸಂಬಂಧ ರೈಲಿನಲ್ಲಿ ನಿಯಮಿತವಾಗಿ ಪ್ರಯಾಣ ಮಾಡುತ್ತಿದ್ದ 45 ವರ್ಷದ ಮಹಿಳೆ ಅನಿತಾ ಅಲಿಯಾಸ್ ಮನೋ, 26 ವರ್ಷದ ಅಮಾನ್ ರಾಣಾ ಹಾಗೂ 16 ವರ್ಷದ ಹುಡುಗಿಯೊಬ್ಬಳನ್ನು ಪೊಲೀಸರು ಬಂಧಿಸಿದ್ದಾರೆ.
ದೆಹಲಿಯ ವಿಶೇಷ ಪೊಲೀಸ್ ಕಮೀಷನ್ ದೆಬೆಶ್ ಶ್ರೀವಾಸ್ತವ ಅವರ ನೇತೃತ್ವದಲ್ಲಿ 'ಕವಚ್ ಕೋಡ್' ಹೆಸರಿನ ಕಾರ್ಯಾಚರಣೆ ನಡೆದಿದೆ. ಈ ಕಾರ್ಯಾಚರಣೆಯಿಂದ ಈ ಡ್ರಗ್ ಸಾಗಾಟ ಜಾಲದಲ್ಲಿ ಇಡೀ ಕುಟುಂಬವೇ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ದೆಹಲಿ ಪೊಲೀಸ್ ಇಲಾಖೆಯ ಕ್ರೈಂ ಬ್ರಾಂಚ್ ಪೊಲೀಸರು ಈ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಕಾರ್ಯಾಚರಣೆಯಿಂದ ಸಂಪೂರ್ಣ ಡ್ರಗ್ ಜಾಲವೇ ಬಯಲಾಗಿದ್ದು, ಬಂಧಿತರಿಂದ ಬೇರೆ ಬೇರೆ ಪ್ರದೇಶಗಳಲ್ಲಿ ಇರಿಸಿದ್ದ 400 ಕೇಜಿ ಡ್ರಗ್‌ನ್ನು ವಶಕ್ಕೆ ಪಡೆಯಲಾಗಿದೆ. ಇದರ ಜೊತೆಗೆ ಈ ಡ್ರಗ್ ಜಾಲದ ಇನ್ನೂ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಕೊಲಂಬಿಯಾದ ಡ್ರಗ್ ದೊರೆ ಪ್ಯಾಬ್ಲೋ ಎಸ್ಕೋಬಾರ್‌ಗೆ ಜಗನ್‌ರೆಡ್ಡಿ ಹೋಲಿಸಿದ ಚಂದ್ರಬಾಬು ನಾಯ್ಡು
ಅಡಿಷನಲ್ ಸಿಪಿ ಸಂಜಯ್ ಭಟಿಯಾ ಹಾಗೂ ಡಿಸಿಪಿ ಸತೀಶ್ ಕುಮಾರ್ ಅವರು ಈ ಸ್ಮಗ್ಲರ್‌ಗಳ ಕಾರ್ಯವಿಧಾನ, ಅವರ ಮಾರ್ಗಗಳು, ಅವರಿಗೆ ಡ್ರಗ್ ಪೂರೈಕೆಯ ಮೂಲದ ಬಗ್ಗೆ ತನಿಖೆ ಮಾಡ್ತಿದ್ದಾರೆ. ಈ ಜಾಲದ ಕೊನೆಯ ಸರಪಳಿ ವಿದ್ಯಾರ್ಥಿಗಳಾಗಿದ್ದು, ಅವರ ಮೂಲಕ ಡ್ರಗನ್ನು ತಲುಪಿಸಬೇಕಾದಲ್ಲಿಗೆ ತಲುಪಿಸಲಾಗುತ್ತಿತ್ತು.
ತನಿಖೆಯ ಆರಂಭದಲ್ಲಿ ಅನಿತಾ ಹಾಗೂ ಅಮಾನ್ ಅವರು ಸುಸಂಸ್ಕೃತ ಕುಟುಂಬದ ಸೋಗಿನಲ್ಲಿ ಡ್ರಗ್ ಸಾಗಣೆ ಮಾಡುತ್ತಿರುವ ವಿಚಾರ ಪೊಲೀಸರ ಬೆಳಕಿಗೆ ಬಂದಿತ್ತು. ಇದಾದ ನಂತರ ಎಸ್ಪಿ ನರೇಂದ್ರ ಬೆನಿಯವಾಲ್ ಹಾಗೂ ಕ್ರೈಂ ಬ್ರಾಂಚ್‌ನ ಅಧಿಕಾರಿ ಸಂದೀಪ್ ತುಷಾರ್ ಅವರು ಇವರ ಸೆರೆಗೆ ಬಲೆ ಬೀಸಿದ್ದರು. ಅವರಿಂದ 41.5 ಕೆಜಿ ಗಾಂಜಾವನ್ನು ವಶಕ್ಕೆ ಪಡೆಯಲಾಗಿದೆ. ಅದರ ಅಂದಾಜು ಮೊತ್ತ 5 ಮಿಲಿಯನ್ ರೂಪಾಯಿಗಳು. ಇವರು ಆಂಧ್ರಪ್ರದೇಶದಿಂದ ಒಡಿಶಾ ನಂತರ ಅಲ್ಲಿಂದ ರಾಷ್ಟ್ರ ರಾಜಧಾನಿಗೆ ಡ್ರಗನ್ನು ಸಪ್ಲೈ ಮಾಡುತ್ತಿದ್ದರು.