ಕುಸಿದು ಬಿದ್ದ ಮಹಿಳೆ ಹೊತ್ತು ತಿರುಪತಿ ಬೆಟ್ಟ ಹತ್ತಿದ ಪೊಲೀಸ್‌!

Published : Dec 19, 2019, 10:16 AM IST
ಕುಸಿದು ಬಿದ್ದ ಮಹಿಳೆ ಹೊತ್ತು ತಿರುಪತಿ ಬೆಟ್ಟ ಹತ್ತಿದ ಪೊಲೀಸ್‌!

ಸಾರಾಂಶ

ಕುಸಿದು ಬಿದ್ದ ಮಹಿಳೆ ಹೊತ್ತು ತಿರುಪತಿ ಬೆಟ್ಟ ಹತ್ತಿದ ಪೊಲೀಸ್‌!|  4 ಕಿ.ಮಿ ಕ್ರಮಿಸಿ ಆಸ್ಪತ್ರೆಗೆ ದಾಖಲು

ಕಡಪ[ಡಿ.19]: ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದ ವೇಳೆ ನಿಶ್ಶಕ್ತಳಾಗಿ ಕುಸಿದು ಬಿದ್ದ ಮಹಿಳೆಯೊಬ್ಬರನ್ನು ಪೊಲೀಸ್‌ ಪೇದೆಯೊಬ್ಬರು ಹೊತ್ತುಕೊಂಡ ಬೆಟ್ಟಏರಿದ ಘಟನೆ ನಡೆದಿದೆ.

ರಾಜಂಪೇಟ್‌ನ ಮಾಜಿ ಶಾಸಕ ಅಮರನಾಥ್‌ ರೆಡ್ಡಿ ನೇತೃತ್ವದಲ್ಲಿ ಕಾಲ್ನಡಿಗೆ ಮೂಲಕ ತಿರುಮಲಕ್ಕೆ ತೆರಳುತ್ತಿದ್ದ ಗುಂಪಿನಲ್ಲಿದ್ದ ಬುಜ್ಜಿ (20) ಎನ್ನುವ ಯುವತಿಯೊಬ್ಬಳು ನಡೆಯಲಾಗದೇ ನಿಶ್ಶಕ್ತಳಾಗಿದ್ದಾಳೆ. ಸ್ಥಳದಲ್ಲಿ ಯಾವುದೇ ವಾಹನ ಇಲ್ಲದಿದ್ದರಿಂದ, ಪೇದೆ ಕುಲ್ಲಾಯಪ್ಪ ಎಂಬವರು ಯುವತಿಯನ್ನು ಹೆಗಲಲ್ಲೇ ಹೊತ್ತುಕೊಂಡು 4 ಕಿ.ಮಿ ಕ್ರಮಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಪೇದೆಯ ಈ ಸೇವೆ ಭಾರೀ ಪ್ರಶಂಸೆಗೆ ಪಾತ್ರವಾಗಿದ್ದು, ಈ ಸೇವೆ ಇತರರಿಗೆ ಮಾದರಿಯಾಗಬೇಕು ಎಂದು ಕಡಪ ಎಸ್‌ಪಿ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ದಿನಕ್ಕೆರಡು ಬಾರಿ ಠಾಣೆಗೆ ಹಾಜರಾಗಲು ಸೂಚನೆ, ಆದೇಶ ಪ್ರಶ್ನಿಸಿದ ಆರೋಪಿಗೆ 1 ಲಕ್ಷ ರೂ ಪರಿಹಾರ
Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!