'ಕೇಸರಿ ಬಟ್ಟೆ ಧರಿಸುವ ಬಿಜೆಪಿಗರು ರೇಪಿಸ್ಟ್‌ಗಳು'
ಕೇಸರಿ ಬಟ್ಟೆಧರಿಸುವ ಬಿಜೆಪಿಗರು ರೇಪಿಸ್ಟ್‌ಗಳು| ಹೇಮಂತ್ ಸುರೇನ್ ವಿವಾದಿತ ಹೇಳಿಕೆ
ಜಾರ್ಖಂಡ್[ಡಿ.19]: ಬಿಜೆಪಿಯಲ್ಲಿ ಕಾವಿ ಬಟ್ಟೆಧರಿಸಿದ ವ್ಯಕ್ತಿಗಳು ಮದುವೆ ಆಗದೇ ಮಹಿಳೆಯರ ಮೇಲೆ ಅತ್ಯಾಚಾರ ಎಸಗುತ್ತಾರೆ ಎಂದು ಜಾರ್ಖಂಡ್ ಮುಕ್ತಿ ಮೋರ್ಚಾ ಕಾರ್ಯಾಧ್ಯಕ್ಷ ಹೇಮಂತ್ ಸೊರೇನ್ ವಿವಾದಿತ ಹೇಳಿಕೆ ನೀಡಿದ್ದಾರೆ.
ಜಾರ್ಖಂಡ್‌ನಲ್ಲಿ 5ನೇ ಹಂತದ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಹೇಮಂತ್, ‘ಇಂದು ದೇಶದಲ್ಲಿ ಪುತ್ರಿಯರನ್ನು ಸುಟ್ಟು ಹಾಕಲಾಗುತ್ತಿದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಇಂದು ರಾಜ್ಯಕ್ಕೆ ಭೇಟಿ ನೀಡಿರುವ ವಿಷಯ ತಿಳಿದುಬಂದಿದೆ.
ಬಿಜೆಪಿಯಲ್ಲಿ ಕೇಸರಿ ಬಟ್ಟೆಧರಿಸಿದ ವ್ಯಕ್ತಿಗಳು ಅವಿವಾಹಿತರಾಗಿರುತ್ತಾರೆ ಮತ್ತು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಾರೆ ಎಂದು ಹೇಳಿದ್ದಾರೆ.