ಬಿಹಾರದಲ್ಲಿ ಆಯೋಜಿಸಿದ ಬಿಜೆಪಿ 9 ವರ್ಷದ ಸಾಧನಾ ಸಮಾರಂಭದ ಮೇಲೆ ಗುಂಡಿನ ದಾಳಿ!

Published : Jun 25, 2023, 11:44 PM IST
ಬಿಹಾರದಲ್ಲಿ ಆಯೋಜಿಸಿದ ಬಿಜೆಪಿ 9 ವರ್ಷದ ಸಾಧನಾ ಸಮಾರಂಭದ ಮೇಲೆ ಗುಂಡಿನ ದಾಳಿ!

ಸಾರಾಂಶ

ಪ್ರಧಾನಿ ಮೋದಿ ಸರ್ಕಾರದ 9 ವರ್ಷದ ಸಾಧನೆಗಳ ಜನರಿಗೆ ತಿಳಿಸಲು ಆಯೋಜಿಸಿದ ಸಮಾರಂಭದ ಮೇಲೆ ಗುಂಡಿನ ದಾಳಿಯಾಗಿದೆ. ಹಲವು ನಾಯಕರು, ಕಾರ್ಯಕರ್ತರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಮಾಧೆಪುರ(ಜು.25) ಮುಂಬರುವ ಲೋಕಸಭಾ ಚುನಾವಣೆ ದೃಷ್ಟಿಯಿಂದ ಬಿಜೆಪಿ ತಮ್ಮ 9 ವರ್ಷದ ಸಾಧನೆಯನ್ನು ಜನರಿಗೆ ತಿಳಿಸಲು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಹೀಗೆ ಬಿಹಾರದ ಮಾಧೆಪುರದಲ್ಲಿ ಆಯೋಜಿಸಿದ್ದ ಬಿಜೆಪಿ ಸಮಾರಂಭದಲ್ಲಿ ಗುಂಡಿನ ದಾಳಿಯಾಗಿದೆ. ಈ ದಾಳಿಯಲ್ಲಿ ಬಿಜೆಪಿ ನಾಯಕ, ಮಾಜಿ ಉಪಮುಖ್ಯಮಂತ್ರಿ ಸಂಬಂಧಿ ಸಂಜಯ್ ಕುಮಾರ್ ಭಗತ್ ತೀವ್ರವಾಗಿ ಗಾಯಗೊಂಡಿದ್ದಾರೆ. ಇನ್ನು ಜಿಲ್ಲಾ ಬಿಜೆಪಿ ಅಧ್ಯಕ್ಷ ಸೇರಿದಂತೆ ಹಲವು ಕಾರ್ಯಕರ್ತರು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆ ದಾಖಲಿಸಲಾಗಿದೆ. ತೀವ್ರವಾಗಿ ಗಾಯಗೊಂಡಿರುವ ಸಂಜಯ್ ಕುಮಾರ್‌ಗೆ ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ. 

ಈ ಘಟನೆ ಸಂಬಂಧ ಆರೋಪಿ ಪಂಕಜ್ ಕುಮಾರ್ ನಿರಾಲನನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ಸಂಬಂಧ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಘಟನೆ ಕುರಿತು ಬಿಹಾರ ಬಿಜೆಪಿ ಘಟಕ ತೀವ್ರ ಕಳವಳ ವ್ಯಕ್ತಪಡಿಸಿದೆ.

Bengaluru: ತಡರಾತ್ರಿ ಪಿಸ್ತೂಲ್ ಹಿಡಿದು ಬೆದರಿಸಿ ಅಟ್ಟಹಾಸಗೈದ ಬಿಲ್ಡರ್..!

ಬಿಹಾರದ ಮಾಧೇಪುರದಲ್ಲಿ ಬಿಜೆಪಿ 9 ವರ್ಷದ ಸಾಧನೆಗಳನ್ನು ಜನರಿಗೆ ತಿಳಿಸಲು ಸಮಾವೇಶ ಆಯೋಜಿಸಲಾಗಿತ್ತು. ಸಂಜಯ್ ಕುಮಾರ್ ಭಗತ್ ಸೇರಿದಂತೆ ಹಲವು ನಾಯಕರು ಹಾಜರಾಗಿದ್ದರು. ಕಾರ್ಯಕ್ರಮ ಆರಂಭಕ್ಕೆ ಕೆಲವೇ ನಿಮಿಷಗಳ ಮೊದಲು ಸಂಜಯ್ ಕುಮಾರ್ ಹಾಗೂ ಆರೋಪಿ ಪಂಕಜ್ ಕುಮಾರ್ ನಿರಾಲ ನಡುವೆ ವಾಗ್ವಾದ ನಡೆದಿದೆ.  ವಾಗ್ವಾದ ನಡೆಯುತ್ತಿದ್ದಂತೆ ಏಕಾಏಕಿ ಪಿಸ್ತೂಲ್ ತೆಗೆದ ಪಂಕಜ್ ಕುಮಾರ್ ನಿರಾಲ ಗುಂಡು ಹಾರಿಸಿದ್ದಾರೆ.

ಈ ದಾಳಿಯಲ್ಲಿ ಸಂಜಯ್ ಕುಮಾರ್ ಭಗತ್‌ಗೆ ಗುಂಡು ತುಗುಲಿ ಕುಸಿದು ಬಿದ್ದಿದ್ದಾರೆ. ಈ ದಾಳಿಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ದೀಪಕ್ ಕುಮಾರ್ ಸೇರಿದಂತೆ ಕೆಲ ಕಾರ್ಯಕರ್ತರು ಗಾಯಗೊಂಡಿದ್ದಾರೆ. ಇತ್ತ ದಾಳಿ ನಡೆಸಿದ ಪಂಕಜ್ ಕುಮಾರ್‌ನನ್ನು ಭಗತ್ ಬೆಂಬಲಿಗರು ಹಿಡಿದು ಥಳಿಸಿದ್ದಾರೆ. ಹಿಗ್ಗಾ ಮುಗ್ಗ ಥಳಿತಕ್ಕೆ ಪಂಕಜ್ ಕಮಾರ್ ತೀವ್ರವಾಗಿ ಅಸ್ವಸ್ಥಗೊಂಡಿದ್ದಾನೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪಂಕಜ್ ಕುಮಾರ್‌ನನ್ನು ಬಂಧಿಸಿದ್ದಾರೆ.

ಘಟನೆ ಕುರಿತು ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಸ್ಥಳದಲ್ಲಿನ ಸಿಸಿಟಿವಿ ದೃಶ್ಯ, ಸಭೆಗೆ ಹಾಜರಾಗಿದ್ದ ಹಲವರ ಮೊಬೈಲ್ ದೃಶ್ಯಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 

ವಿದ್ಯಾರ್ಥಿಗಳ ಕಿತ್ತಾಟ, ಬುದ್ಧಿ ಹೇಳಿದ ಟೀಚರ್ ಮೇಲೆ 3 ಸುತ್ತು ಗುಂಡು ಹಾರಿಸಿದ 10ನೇ ತರಗತಿ ವಿದ್ಯಾರ್ಥಿ!

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ 9 ವರ್ಷದ ಆಡಳಿತಾವಧಿಯಲ್ಲಿ ನೀಡಿದ ಯೋಜನೆಗಳು, ಅರ್ಹರಿಗೆ ಆಗಿರುವ ಲಾಭಗಳು, ದೇಶದಲ್ಲಿ ಆಗಿರುವ ಬದಲಾವಣೆ, ಮೂಲಭೂತ ಸೌಕರ್ಯ ಸೇರಿದಂತೆ ಬಿಜೆಪಿ ಸರ್ಕಾರದ ಸಾಧನೆಗಳನ್ನು ಮನೆ ಮನೆಗೆ ತಲುಪಿಸಲು ಬಿಜೆಪಿ ಪ್ಲಾನ್ ಹಾಕಿಕೊಂಡಿದೆ. ಇದರ ಅಂಗವಾಗಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. 9 ವರ್ಷ ಪೂರೈಸಿದ ಸಂಭ್ರಮವನ್ನು ಆಚರಿಸುತ್ತಿದ್ದಾರೆ. ಈ ಸಭೆಯಲ್ಲಿ ಗುಂಡಿನ ದಾಳಿ ನಡೆದಿದೆ.

ಪ್ರಧಾನಿ ನರೇಂದ್ರ ಮೋದಿ ಅವರು 9 ವರ್ಷ ಆಡಳಿತ ಪೂರೈಸಿದ ಹಿನ್ನೆಲೆಯಲ್ಲಿ ವಿಶೇಷ ಜನಸಂಪರ್ಕ ಅಭಿಯಾನದಡಿಯಲ್ಲಿ ಭಾರತೀಯ ಜನತಾ ಪಾರ್ಟಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಯುವ ಮತದಾರರನ್ನು ಸೆಳೆಯಲು, ಬಿಜೆಪಿ ಮತಗಳನ್ನು ಕ್ರೋಢಿಕರಿಸಲು ಪ್ಲಾನ್ ಹಾಕಿಕೊಂಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಟೀ ಶರ್ಟ್ ಬಿಟ್ಟು ಖಾದಿ ಧರಿಸಿ ಬಂದು ರಾಜಕೀಯ ಸಂದೇಶ ರವಾನಿಸಿದ ರಾಹುಲ್ ಗಾಂಧಿ
ಪೌರತ್ವಕ್ಕೂ ಮುನ್ನ ಮತಪಟ್ಟೀಲಿ ಹೆಸರು : ಸೋನಿಯಾಗೆ ನೋಟಿಸ್‌