ಬಾಲಿವುಡ್‌ 'ಕ್ವೀನ್' ಕಂಗನಾಳನ್ನು ಹೊಗಳಿದ ಬಿಜೆಪಿ ಮುಖಂಡ..!

Suvarna News   | Asianet News
Published : Jun 16, 2020, 12:50 PM ISTUpdated : Jun 16, 2020, 01:45 PM IST
ಬಾಲಿವುಡ್‌ 'ಕ್ವೀನ್' ಕಂಗನಾಳನ್ನು ಹೊಗಳಿದ ಬಿಜೆಪಿ ಮುಖಂಡ..!

ಸಾರಾಂಶ

ಪ್ರತಿ ಹೆಣ್ಣು ಮಗಳೂ ಕಂಗನಾ ರಣಾವತ್‌ನಂತೆ ಧೈರ್ಯವಂತಳಾಗಿರಬೇಕು ಎಂದು ಬಿಜೆಪಿ ಮುಖಂಡ ಹೇಳಿದ್ದಾರೆ. ಕೊರೋನಾ ವೈರಸ್ ಲಕ್ಷಣಗಳಿಗಾಗಿ ಆಸ್ಪತ್ರೆಗೆ ದಾಖಲಾಗಿ ಚಿಕತ್ಸೆ ಒಡೆದು ಜೂನ್ ಆರಂಭದಲ್ಲಿ ಡಿಸ್ಚಾರ್ಜ್ ಆಗಿದ್ದ ಬಿಜೆಪಿ ಮುಖಂಡ ಸಂಬಿತ್ ಪಾತ್ರಾ 'ಕ್ವೀನ್' ನಟಿ ಕಂಗನಾ ಬಗ್ಗೆ ಮಾತನಾಡಿದ್ದಾರೆ.

ನವದೆಹಲಿ(ಜೂ.16): ಕಂಗನಾ ರಣಾವತ್ ಅವರ ಮಾತುಗಳು, ಅಭಿಪ್ರಾಯಗಳು ಸ್ಪಷ್ಟವಾಗಿರುತ್ತದೆ. ಪ್ರತಿ ಹೆಣ್ಣು ಮಗಳೂ ಸ್ವಾವಲಂಬಿ ಮತ್ತು ದೈರ್ಯವಂತಳಾಗಿರಬೇಕು. ನಾನು ಸ್ಪಷ್ಟವಾಗಿ ಹೇಳುತ್ತೇನೆ ಎಂದು ಹೇಳದಿದ್ದರೂ ಆಕೆಯ ಮಾತುಗಳು ಅತ್ಯಂತ ಸ್ಪಷ್ಟ ಮತ್ತು ನೇರವಾಗಿರುತ್ತವೆ. ಪ್ರತಿ ಹೆಣ್ಣು ಕಂಗನಾಳಂತೆ ಧೈರ್ಯವಂತಳೂ, ಸ್ವಾವಲಂಬಿಯೂ ಆಗಿರಬೇಕು ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸುಶಾಂತ್ ಸಿಂಗ್ ರಜಪೂತ್‌ ಸಾವಿನ ಬಗ್ಗೆ ಮಾತನಾಡಿ ವಿಡಿಯೋ ಟ್ವೀಟ್ ಮಾಡಿದ ಕಂಗನಾ ರಣಾವತ್ ಬಗ್ಗೆ ಬಿಜೆಪಿ ಮುಖಂಡ ಪ್ರತಿಕ್ರಿಯಿಸಿದ್ದಾರೆ. ಸುಶಾಂತ್ ಸಿಂಗ್ ಪ್ರತಿಭೆಯನ್ನು ಬಾಲಿವುಡ್ ಅಂಗೀಕರಿಸಿದಿರುವ ಬಗ್ಗೆ ಮಾತನಾಡಿದ ಕಂಗನಾ, ಸುಶಾಂತ್‌ನ್ನು ಮಾನಸಿಕವಾಗಿ ದರ್ಬಲ ಎಂದು ಕರೆಯುವುದನ್ನು ತಳ್ಳಿಹಾಕಿದ್ದಾರೆ.

ಬಾಲಿವುಡ್‌ ಒತ್ತಡದಿಂದಾಗಿ ಸುಶಾಂತ್‌ ಆತ್ಮಹತ್ಯೆ? ಕಣ್ಣೀರಿಟ್ಟಿದ್ದ ನಟ!

ಸುಶಾಂತ್ ಸಿನಿಮಾಗಳು ಯಾವ ಅವಾರ್ಡ್ ಕಾರ್ಯಕ್ರಮಗಳಲ್ಲಿಯೂ ಅಂಗೀಕರಿಸಲ್ಪಡಲೇ ಇಲ್ಲ. ಸುಶಾಂತ್‌ ರ್ಯಾಂಕ್‌ ಹೋಲ್ಡರ್ ಎಂಬುದೂ ಸೇರಿ ಸಾಧನೆಗಳನ್ನು ಹೊಗಳಿದ ಕಂಗನಾ, ಆತ ತನ್ನ ಕೇದಾರನಾಥ್, ಚಿಚೋರಿ, ಎಂಎಸ್‌ ಧೋನಿ ಸಿನಿಮಾಗೆ ಯಾವ ಅವಾರ್ಡ್‌ಗಳೂ ಬರಲಿಲ್ಲ.

'ಸ್ವಾತಂತ್ರ್ಯ ಪೂರ್ವದ ಗುಲಾಮಗಿರಿ': ಪ್ರಿಯಾಂಕ ಸೇರಿ ಬಾಲಿವುಡ್ ಸ್ಟಾರ್ಸ್‌ಗೆ ಕಂಗನಾ ಕ್ಲಾಸ್

ಆತ ಒಬ್ಬ ರ್ಯಾಂಕ್ ಹೋಲ್ಡರ್, ಆತ ಹೇಗೆ ವೀಕ್ ಆಗಿರಲು ಸಾಧ್ಯ..? ಕಳೆದ ಕೆಲವು ಪೋಸ್ಟ್‌ಗಳಲ್ಲಿ ಸುಶಾಂತ್, ನನ್ನ ಸಿನಿಮಾಗಳನ್ನು ನೋಡಿ, ನನಗೆ ಗಾಡ್‌ಫಾದರ್ ಇಲ್ಲ, ನಾನು ಇಂಡಸ್ಟ್ರಿಯಿಂದ ಹೊರ ಬರಬೇಕಾದೀತು ಎಂದೂ ಹೇಳಿಕೊಂಡಿದ್ದರು.

ಸಿನಿಮಾ ಲೋಕದ ಹಿರಿಯರ ಸಂಬಂಧವೇ ಇಲ್ಲದ ನಮಗೆ ನಿಮ್ಮಿಂದ ಏನೂ ಬೇಡ. ಆದರೆ ನಮ್ಮನ್ನು ಅಂಗೀಕರಿಸುವುದಕ್ಕೂ ನೀವು ಸಿದ್ಧರಿಲ್ಲ ಏಕೆ ಎಂದು ಪ್ರಶ್ನಿಸಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ರೈಲ್ವೆ ಪ್ರಯಾಣ, ಟಿಕೆಟ್​ ಬುಕಿಂಗ್​ ಎಲ್ಲವೂ ಬಲು ಸುಲಭ : ಸಂಪೂರ್ಣ ಮಾಹಿತಿ ಈ ಒಂದೇ ಒಂದು ಆ್ಯಪ್​ನಲ್ಲಿ!
ವಾಟ್ಸಾಪ್ ಬಳಕೆದಾರರೇ ಎಚ್ಚರ: ಈ ಮೂರು ತಪ್ಪುಗಳು ಮಾಡಿದ್ರೆ ಜೈಲು ಪಾಲಾಗೋದು ಫಿಕ್ಸ್!