ಮಾಜಿ ಸಚಿವ, ಬಿಜೆಪಿ ನಾಯಕ ಮನ್‌‌ಪ್ರೀತ್ ಬಾದಲ್‌ಗೆ ಹೃದಯಾಘಾತ, ಆಸ್ಪತ್ರೆ ದಾಖಲು!

By Suvarna News  |  First Published Mar 10, 2024, 8:43 PM IST

ಮಾಜಿ ಸಚಿವ, ಬಿಜೆಪಿ ನಾಯಕ  ಮನ್‌ಪ್ರೀತ್ ಸಿಂಗ್ ಬಾದಲ್ ಹೃದಯಾಘಾತದಿಂದ ಆಸ್ಪತ್ರೆ ದಾಖಲಾಗಿದ್ದಾರೆ. ತುರ್ತು ನಿಘಾ ಘಟಕದಲ್ಲಿ ಬಾದಲ್‌ಗೆ ಚಿಕಿತ್ಸೆ ನೀಡಲಾಗುತ್ತಿದೆ.
 


ಚಂಡೀಘಡ(ಮಾ.10) ಬಿಜೆಪಿ ಹಿರಿಯ ನಾಯಕ ಮನ್‌ಫ್ರೀತ್ ಸಿಂಗ್ ಬಾದಲ್ ಹೃದಯಾಘಾತದಿಂದ ಆಸ್ಪತ್ರೆ ದಾಖಲಾಗಿದ್ದಾರೆ. ಪಂಜಾಬ್ ಮಾಜಿ ಹಣಕಾಸು ಸಚಿವರಾಗಿ ಸೇವೆ ಸಲ್ಲಿರುವ ಬಾದಲ್ ಎದೆನೋವಿನಿಂದ ತೀವ್ರ ಅಸ್ವಸ್ಥಗೊಂಡಿದ್ದರು. ತಕ್ಷಣವೇ ಅವರನ್ನು ಬಾತಿಂದಲ್ಲಿ ಜಿಂದಾಲ್ ಹೃದಯಾಲಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ತುರ್ತು ನಿಘಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.  61 ವರ್ಷದ ನಾಯಕ ಬಾದಲ್‌ಗೆ ಆ್ಯಂಜಿಯೋಪ್ಲಾಸ್ಟಿ ಸರ್ಜರಿ ಮಾಡಲಾಗಿದೆ. ಬಾದಲ್ ಹೃದಯದ ಅಪಧಮನಿಯಲ್ಲಿ ಬ್ಲಾಕೇಜ್ ತೆಗೆಯಲು ಸರ್ಜರಿ ಮಾಡಲಾಗಿದೆ.

ಸದ್ಯ ಮನ್‌ಪ್ರೀತ್ ಸಿಂಗ್ ಬಾದಲ್ ಆರೋಗ್ಯ ಸ್ಥಿರವಾಗಿದೆ. ಆದರೆ ಚಿಕಿತ್ಸೆ ಮುಂದುವರಿದಿದೆ. ಮಾಹಿತಿ ತಿಳಿಯುತ್ತಿದ್ದಂತೆ ಶಿರೋಮಣಿ ಅಕಾಲಿ ದಳ ಪಕ್ಷದ ಮುಖ್ಯಸ್ಥ, ಬಾದಲ್ ಸಂಬಂಧಿ ಸುಕ್ಬೀರ್ ಸಿಂಗ್ ಬಾದಲ್ ಆಸ್ಪತ್ರೆಗೆ ದೌಡಾಯಿಸಿದ್ದಾರೆ. ವೈದ್ಯರ ಜೊತೆ ಬಾದಲ್ ಆರೋಗ್ಯ ಕುರಿತು ಮಾಹಿತಿ ಪಡೆದಿದ್ದಾರೆ. ಬಳಿಕ ಮಾಧ್ಯಮಕ್ಕೆ ಮಾಹಿತಿ ನೀಡಿರುವ ಸುಕ್ಬೀರ್ ಸಿಂಗ್, ಮನ್‌ಪ್ರೀತ್ ಆರೋಗ್ಯ ಸ್ಥಿರವಾಗಿದೆ. ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದಿದ್ದಾರೆ.

Latest Videos

ಕಾಲಿವುಡ್​ ಸೂಪರ್​ಸ್ಟಾರ್​ ಅಜಿತ್ ಕುಮಾರ್​ಗೆ ಮಿದುಳಿಗೆ ಸರ್ಜರಿ ಆಯ್ತಾ? ನಟ ಈಗ ಹೇಗಿದ್ದಾರೆ?

ಇತ್ತ ಬಿಜೆಪಿ ನಾಯಕರು ಸೇರಿದಂತೆ ಪಂಜಾಬ್ ರಾಜಕೀಯ ಮುಖಂಡರು ಆಸ್ಪತ್ರೆಗೆ ತೆರಳಿ ಆರೋಗ್ಯ ವಿಚಾರಿಸಿದ್ದಾರೆ. ಶೀಘ್ರ ಚೇತರಿಕಗೆ ಪ್ರಾರ್ಥಿಸಿದ್ದಾರೆ. ಮನ್‌ಪ್ರೀತ್ ಸಿಂಗ್ ಅವರಿಗೆ ಚಿಕಿತ್ಸೆ ಮುಂದುವರಿದಿದೆ. ಕೆಲ ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲಿದ್ದಾರೆ. ಆರೋಗ್ಯ ಚೇತರಿಸಿಕೊಳ್ಳುತ್ತಿದೆ ಎಂದು ಆಸ್ಪತ್ರೆ ಮೂಲಗಳು ಹೇಳಿವೆ.

ಮನ್‌ಪ್ರೀತ್ ಸಿಂಗ್ ಬಾದಲ್ 2011ರಲ್ಲಿ ರಾಜಕೀಯಕ್ಕೆ ಎಂಟ್ರಿ ನೀಡಿದ್ದರು. ಹಲವು ಪಕ್ಷಗಳನ್ನು ಸುತ್ತಿದ ಮನ್‌ಪ್ರೀತ್ ಸಿಂಗ್ ಬಾದಲ್, ಕಳೆದ ವರ್ಷ ಜನವರಿಯಲ್ಲಿ ಬಿಜೆಪಿ ಸೇರಿಕೊಂಡಿದ್ದರು. ಕಾಂಗ್ರೆಸ್ ಹಾಗೂ ಶಿರೋಮಣಿ ಅಕಾಲಿ ದಳ ಮೈತ್ರಿ ಸರ್ಕಾರದಲ್ಲಿ ಮನ್‌ಪ್ರೀತ್ ಸಿಂಗ್ ಬಾದಲ್ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.

 

ಎರಡೂ ಕೈ ಕಳ್ಕೊಂಡಿದ್ದ ಪೇಂಟರ್‌ಗೆ ಮಹಿಳೆ ಕೈ ಜೋಡಣೆ ಯಶಸ್ವಿ!

2011ರಲ್ಲಿ ಶಿರೋಮಣಿ ಅಕಾಲಿದಳ ಮೂಲಕ ರಾಜಕೀಯ ಪ್ರವೇಶ ಮಾಡಿದ ಮನ್‌ಪ್ರೀತ್ ಸಿಂಗ್ ಬಾದಲ್, ಬಳಿಕ ಪೀಪಲ್ ಪಾರ್ಟಿ ಆಫ್ ಪಂಜಾಬ್, ಕಾಂಗ್ರೆಸ್, ಆಮ್ ಆದ್ಮಿ ಪಾರ್ಟಿಗೆ ಪಕ್ಷಾಂತರ ಮಾಡಿದ್ದರು. 2023ರ ಜನವರಿಯಲ್ಲಿ ಬಿಜೆಪಿ ಸೇರಿಕೊಂಡ ಮನ್‌ಪ್ರೀತ್ ಸಿಂಗ್ ಬಾದಲ್, ರಾಜಕೀಯದಲ್ಲಿ ಸಕ್ರಿಯವಾಗಿದ್ದರು. 2021ರಲ್ಲಿ ನಡೆಗ ಭೂಹಗರಣದಲ್ಲಿ ಮನ್‌ಪ್ರೀತ್ ಸಿಂಗ್ ಬಾದಲ್ ಹೆಸರು ಕೇಳಿಬಂದಿತ್ತು. 
 

click me!