ವೈದ್ಯೆ ಅರ್ಚನಾ ಶರ್ಮಾ ಆತ್ಮಹತ್ಯೆ ಪ್ರಕರಣ: ಬಿಜೆಪಿ ಮುಖಂಡನ ಬಂಧನ

By Anusha KbFirst Published Apr 1, 2022, 5:38 AM IST
Highlights
  • ವೈದ್ಯೆಯ ಆತ್ಮಹತ್ಯೆಗೆ ಪ್ರೇರೆಪಿಸಿದ ಆರೋಪ
  • ಬಿಜೆಪಿ ಮುಖಂಡನ ಬಂಧನ
  • ಆತ್ಮಹತ್ಯೆ ಮಾಡಿಕೊಂಡಿದ್ದ ವೈದ್ಯೆ ಅರ್ಚನಾ ಶರ್ಮಾ

ಜೈಪುರ: ಎರಡು ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡ ರಾಜಸ್ತಾನದ ಸ್ತ್ರೀರೋಗ ತಜ್ಞೆ ಅರ್ಚನಾ ಶರ್ಮಾ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮುಖಂಡನೋರ್ವನನ್ನು ಬಂಧಿಸಲಾಗಿದೆ. ಜೀತೇಂದ್ರ ಗೊತ್ವಾಲ್ ಬಂಧಿತ ಆರೋಪಿ. ಆತ್ಮಹತ್ಯೆಗೆ ಪ್ರೇರೆಪಣೆ ನೀಡಿದ ಆರೋಪದ ಮೇಲೆ ಜೀತೇಂದ್ರ ಗೊತ್ವಾಲ್‌ನನ್ನು ಬಂಧಿಸಲಾಗಿದೆ. ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಸ್ವತಃ ಜಿತೇಂದ್ರ ಗೊತ್ವಾಲ್‌ ಬರೆದುಕೊಂಡಿದ್ದಾರೆ. ಇವರ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್‌ 302ರ ಅಡಿ ಆತ್ಮಹತ್ಯೆಗೆ ಪ್ರೇರೇಪಣೆ ಮಾಡಿದ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ. ಮಧ್ಯರಾತ್ರಿ ಜೈಪುರದಲ್ಲಿರುವ ನನ್ನ ಮನೆಯಿಂದ ನನ್ನನ್ನು ಬಂಧಿಸಲಾಗಿದೆ. 

ರಾಜಸ್ಥಾನದ ದೌಸಾ ಜಿಲ್ಲೆಯ ಖಾಸಗಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿತ್ತು, ಸಿಸೇರಿಯನ್ ಮಾಡುವ ಸಮಯದಲ್ಲಿ  ಸಾವನ್ನಪ್ಪಿದ ಮಹಿಳೆಯ ಸಂಬಂಧಿಕರು ಆಸ್ಪತ್ರೆಯ ನಿರ್ಲಕ್ಷ್ಯವನ್ನು ಆರೋಪಿಸಿ, ಆಸ್ಪತ್ರೆ ಆಡಳಿತ ಮಂಡಳಿ ವಿರುದ್ಧ ಪ್ರತಿಭಟನೆ ಮಾಡಿದ್ದರು. ಗರ್ಭಿಣಿಯ ಸಾವಿಗೆ ಸಂಬಂಧಿಸಿದಂತೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 ಅಡಿಯಲ್ಲಿ ವೈದ್ಯೆ , ಸ್ತ್ರೀರೋಗ ತಜ್ಞೆ, ಅರ್ಚನಾ ಶರ್ಮಾ (Dr Archana Sharma) ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದರು. ಇದರಿಂದ ನೊಂದ ವೈದ್ಯೆ ಮಾನಸಿಕ ಹಿಂಸೆಗೆ ಒಳಗಾಗಿ ಮಾರ್ಚ್ 30 ರಂದು ಆತ್ಮಹತ್ಯೆಗೆ ಶರಣಾಗಿದ್ದರು.

Latest Videos

ಸ್ತ್ರೀರೋಗ ತಜ್ಞೆ, ಖ್ಯಾತ ಸಾಹಿತಿ ಡಾ.ಎಚ್. ಗಿರಿಜಮ್ಮ ನಿಧನ

ಮಾರ್ಚ್ 28 ರಂದು 22 ವರ್ಷದ ಗರ್ಭಿಣಿ ಮಹಿಳೆಯನ್ನು ಡಾ ಅರ್ಚನಾ ಶರ್ಮಾ ಮತ್ತು ಅವರ ಪತಿ ಡಾ ಸುನೀತ್ ಉಪಾಧ್ಯಾಯ ನಡೆಸುತ್ತಿರುವ ಆನಂದ್ ಆಸ್ಪತ್ರೆಗೆ ಕರೆತರಲಾಯಿತು. ಆಕೆಯನ್ನು ಲೇಬರ್ ರೂಮ್‌ಗೆ ಕರೆದೊಯ್ದರೂ, ಆಕೆಯ ಸ್ಥಿತಿ ಹದಗೆಟ್ಟಿತು ಮತ್ತು ತೀವ್ರ ರಕ್ತ ಸೋರಿಕೆಯಿಂದಾಗಿ ಗರ್ಭಿಣಿ ಸಾವನ್ನಪ್ಪಿದಳು ಎನ್ನಲಾಗಿದೆ.ಆತ್ಮಹತ್ಯೆ ಮಾಡಿಕೊಂಡಿರುವ ವೈದ್ಯೆ ಡಾ.ಅರ್ಚನಾ ಶರ್ಮಾ ಅವರ ಪತಿ ಡಾ ಸುನೀತ್ ಉಪಾಧ್ಯಾಯ (Dr Suneet Upadhyay) ಅವರು ಕೂಡ ವೈದ್ಯರಾಗಿದ್ದು, ಸ್ಥಳೀಯ ರಾಜಕಾರಣಿಗಳು ಮತ್ತು ಪತ್ರಕರ್ತರು ಪ್ರಕರಣದಲ್ಲಿ ತಪ್ಪು ಮಾಹಿತಿ ಹರಡುತ್ತಿದ್ದಾರೆ. ವೈದ್ಯರ ವಿರುದ್ಧ ಎಫ್‌ಐಆರ್‌ ದಾಖಲಿಸುವಂತೆ ಸ್ಥಳೀಯ ಮುಖಂಡರು ಹಾಗೂ ಪತ್ರಕರ್ತರು ಪೊಲೀಸರ ಮೇಲೆ ಒತ್ತಡ ಹೇರಿದ್ದರು ಎಂದು ಆರೋಪಿಸಿದ್ದಾರೆ. ಮಹಿಳೆಯು ಪಿಪಿಎಚ್ ಸಮಸ್ಯೆಯಿಂದ  ಮೃತಪಟ್ಟಿದ್ದಾರೆ. ಆಸ್ಪತ್ರೆಯ ವೈದ್ಯರು ಸತ್ತವರ ಜೀವವನ್ನು ಉಳಿಸಲು ಪ್ರಯತ್ನಿಸುತ್ತಾರೆ ಎಂದು ಡಾ ಉಪಾಧ್ಯಾಯ  ಹೇಳಿದ್ದಾರೆ.

ಸ್ತ್ರೀರೋಗ ತಜ್ಞೆ Dr Archana Sharma ಆತ್ಮಹತ್ಯೆ ಪ್ರಕರಣದಲ್ಲಿ ಪತ್ರಕರ್ತ, ರಾಜಕಾರಣಿಗಳಿಗೆ ನಂಟು!

ಮೃತ ವ್ಯಕ್ತಿಯ ಅಂತಿಮ ಸಂಸ್ಕಾರಕ್ಕಾಗಿ ಮನೆಗೆ ಕರೆದೊಯ್ಯಲು ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಲು ಕುಟುಂಬವು ಆಸ್ಪತ್ರೆಗೆ ವಿನಂತಿಸಿತು. ನಾವು ಉಚಿತ ಆಂಬ್ಯುಲೆನ್ಸ್ ವ್ಯವಸ್ಥೆಯನ್ನು ಮಾಡಿ ಕೊಟ್ಟೆವು. ನಂತರ ಬಿಜೆಪಿಯ ಶಿವಶಂಕರ ಬಲ್ಯ ಜೋಶಿ (Shiv Shankar Balya Joshi ), ಕುಟುಂಬದವರ ಬಳಿ ತೆರಳಿ ಮೃತದೇಹವನ್ನು ಮರಳಿ ಆಸ್ಪತ್ರೆಗೆ ತಂದಿದ್ದಾರೆ. ಜೋಶಿ ಅವರು ಡಾ.ಕಿರೋಡಿ ಲಾಲ್ ಮೀನಾ ( Dr Kirodi Lal Meena ) ಅವರ ಸಹಾಯ ಪಡೆದು ಕುಟುಂಬಕ್ಕೆ ಸಿಎಂ ನಿಧಿಯಿಂದ ಹಣಕಾಸಿನ ನೆರವು ನೀಡುವುದಾಗಿ ಭರವಸೆ ನೀಡಿದರು.  200 ಜನರನ್ನು ಒಗ್ಗೂಡಿಸಿ ಇತರ ಬಿಜೆಪಿ ನಾಯಕರನ್ನು ಕರೆದು ಆಸ್ಪತ್ರೆಯ ವಿರುದ್ಧ ಪ್ರತಿಭಟಿಸಿ, ಡಾ ಅರ್ಚನಾ ಶರ್ಮಾ ಅವರ ವಿರುದ್ಧ ಕೊಲೆ ಯತ್ನದ ಆರೋಪವನ್ನೂ ಮಾಡಿದ್ದಾರೆ ಎಂದು ಪತಿ ವಿಡಿಯೋ ಬಿಡುಗಡೆ ಮಾಡಿ ಹೇಳಿದ್ದಾರೆ.

ಐಪಿಸಿ ಸೆಕ್ಷನ್ 302 ರ ಅಡಿಯಲ್ಲಿ ಕೊನೆ ಪ್ರಕರಣ ದಾಖಲಿಸಿದ್ದನ್ನು ಮರುದಿನ ಪತ್ರಿಕೆಯಲ್ಲಿ ಡಾ.ಅರ್ಚನಾ ಓದಿದರು. ಈ ಒತ್ತಡವನ್ನು ತಡೆಯಲು ಸಾಧ್ಯವಾಗದೆ, ಹೆದರಿ ಆಕೆ ಸಾವನ್ನಪ್ಪಿದ್ದಾಳೆ ಎಂದು ಪತಿ ಆರೋಪಿಸಿದ್ದಾರೆ. ಪತ್ರಕರ್ತ ಮಹೇಶ್ ಬಿಹಾರಿ, ಜೋಶಿ ಮತ್ತು ಕಿರೋಡಿ ಲಾಲ್ ಮೀನಾ ಅವರು ನನ್ನನ್ನು ಜೈಲಿಗೆ ಕಳುಹಿಸುತ್ತಾರೆ ಎಂದು ಆಕೆ  ನಿರಂತರವಾಗಿ ಹೇಳುತ್ತಿದ್ದಳು. ಪತ್ರಕರ್ತ ಮಹೇಶ್ ಬಿಹಾರಿ ( journalist Mahesh Bihari) ಸುದ್ದಿಯ ಒಂದು ಭಾಗವನ್ನು ಮಾತ್ರ ಪರಿಗಣಿಸಿ ಸುದ್ದಿ ಪ್ರಕಟಿಸಿದ್ದಾರೆ. ಈ ವಿಚಾರದಲ್ಲಿ ಆಸ್ಪತ್ರೆಯ ಹೇಳಿಕೆಯನ್ನು ಪರಿಗಣಿಸಲಿಲ್ಲ ಜೊತೆಗೆ ಮುದ್ರಿಸಲಿಲ್ಲ ಎಂದು ಅರ್ಚನಾ ಪತಿ ಹೇಳಿದ್ದಾರೆ.

ಬಿಹಾರಿ, ಜೋಶಿಯಂತಹ ಜನರು ಆಸ್ಪತ್ರೆಗಳಲ್ಲಿ ಹಿಂಸಾಚಾರವನ್ನು ಸೃಷ್ಟಿಸಲು ಬಿಡಬಾರದು. ಡಾ.ಕಿರೋಡಿ ಲಾಲ್ ಮೀನಾ ಈ ಜನರಿಗೆ ಬೆಂಬಲ ನೀಡುವುದನ್ನು ನಿಲ್ಲಿಸಬೇಕು ಮತ್ತು ಪೊಲೀಸರು ತಕ್ಷಣ ಅವರನ್ನು ಬಂಧಿಸಬೇಕು. ಜೋಶಿ ಒಬ್ಬ ಗೂಂಡಾ ಮತ್ತು ಈ ಹಿಂದೆ ಪೊಲೀಸರಿಗೂ ಹೊಡೆದಿದ್ದರು ಎಂದು ಆರೋಪಿಸಿದ್ದಾರೆ.

click me!