ಕೆಣಕಿದರೆ ಪಾಕ್‌ ಮೇಲೆ ಭಾರತದ ಮಿಲಿಟರಿ ದಾಳಿ ಸಂಭವ: ಅಮೆರಿಕ

By Kannadaprabha News  |  First Published Mar 10, 2023, 7:21 AM IST

ಪಾಕಿಸ್ತಾನ ಏನಾದರೂ ಕೆಣಕಿದರೆ ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಭಾರತ ತನ್ನ ಮಿಲಿಟರಿ ಶಕ್ತಿ ಬಳಸಿ ಹಿಂದೆಂದಿಗಿಂತ ದೊಡ್ಡ ತಿರುಗೇಟು ನೀಡುವ ಸಾಧ್ಯತೆ ಇದೆ ಎಂದು ಅಮೆರಿಕದ ಗುಪ್ತಚರ ದಳ ತನ್ನ ಸಂಸತ್ತಿಗೆ ವರದಿಯನ್ನು ಕೊಟ್ಟಿದೆ.


ಪಿಟಿಐ ವಾಷಿಂಗ್ಟನ್‌: ಪಾಕಿಸ್ತಾನ ಏನಾದರೂ ಕೆಣಕಿದರೆ ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಭಾರತ ತನ್ನ ಮಿಲಿಟರಿ ಶಕ್ತಿ ಬಳಸಿ ಹಿಂದೆಂದಿಗಿಂತ ದೊಡ್ಡ ತಿರುಗೇಟು ನೀಡುವ ಸಾಧ್ಯತೆ ಇದೆ ಎಂದು ಅಮೆರಿಕದ ಗುಪ್ತಚರ ದಳ ತನ್ನ ಸಂಸತ್ತಿಗೆ ವರದಿಯನ್ನು ಕೊಟ್ಟಿದೆ. ಇದೇ ವೇಳೆ, ಸಣ್ಣ ಪ್ರಮಾಣದ ಘರ್ಷಣೆಗಳು ಗಡಿಯಲ್ಲಿ ನಡೆದರೂ ಭಾರತ ಹಾಗೂ ಚೀನಾ ನಡುವೆ ಬಿಕ್ಕಟ್ಟು ಬಹುಬೇಗನೆ ಭುಗಿಲೇಳುತ್ತದೆ ಎಂದೂ ಭವಿಷ್ಯ ನುಡಿದಿದೆ.

ವಾರ್ಷಿಕ ಅಪಾಯಗಳನ್ನು ಅಂದಾಜಿಸಿ ಅಮೆರಿಕದ ಗುಪ್ತಚರ (Inteligence) ಸಮುದಾಯ ಸಂಸತ್ತಿಗೆ ಸಲ್ಲಿಕೆ ಮಾಡಿರುವ ವರದಿಯಲ್ಲಿ ಈ ಅಂಶಗಳು ಇವೆ. ಭಾರತ- ಪಾಕಿಸ್ತಾನ ಹಾಗೂ ಭಾರತ- ಚೀನಾ (Indo china) ನಡುವೆ ದ್ವೇಷಮಯ ಪರಿಸ್ಥಿತಿ ಹೆಚ್ಚಾದರೆ ಆ ದೇಶಗಳ ನಡುವೆ ದೊಡ್ಡ ಬಿಕ್ಕಟ್ಟು ಸೃಷ್ಟಿಯಾಗುವ ಸಂಭವವಿದೆ ಎಂದು ವಿವರಿಸಿದೆ. ಭಾರತ ವಿರೋಧಿ ಭಯೋತ್ಪಾದಕ ಗುಂಪುಗಳನ್ನು ಬೆಂಬಲಿಸುವ ಸುದೀರ್ಘ ಇತಿಹಾಸ ಪಾಕಿಸ್ತಾನಕ್ಕೆ ಇದೆ. ಆದರೆ ಪಾಕಿಸ್ತಾನದ ಪ್ರಚೋದನೆಗಳಿಗೆ ನರೇಂದ್ರ ಮೋದಿ ನಾಯಕತ್ವದಲ್ಲಿ ಮಿಲಿಟರಿ ಬಳಸಿ ಹಿಂದೆಂದಿಗಿಂತ ಭಾರಿ ಪ್ರತಿಕ್ರಿಯೆ ನೀಡುವ ಸಾಧ್ಯತೆ ಹೆಚ್ಚಿದೆ. ಕಾಶ್ಮೀರದಲ್ಲಿ (Kashmira) ಹಿಂಸಾಚಾರ ಅಥವಾ ಭಾರತದ ಮೇಲೆ ಭಯೋತ್ಪಾದಕರ ದಾಳಿಗಳು ಎರಡೂ ದೇಶಗಳ ನಡುವೆ ಕಿಡಿ ಹೊತ್ತಿಸಬಹುದು ಎಂದು ತಿಳಿಸಿದೆ.

Tap to resize

Latest Videos

1971ರ ಶರಣಾಗತಿ ಫೋಟೋ ತೋರ್ಸಿ ಪಾಕ್‌ಗೆ ತಾಲಿಬಾನ್‌ ಎಚ್ಚರಿಕೆ

ಮತ್ತೊಂದೆಡೆ, 2020ರಲ್ಲಿ ಎರಡೂ ದೇಶಗಳ ನಡುವೆ ಗಡಿಯಲ್ಲಿ ಮಾರಣಾಂತಿಕ ಹೊಡೆದಾಟ ನಡೆದ ಬಳಿಕ ಭಾರತ- ಚೀನಾ ಸಂಬಂಧ ಸುಧಾರಣೆಯಾಗಿಲ್ಲ. ವಿವಾದಿತ ಗಡಿಯಲ್ಲಿನ ಎರಡೂ ದೇಶಗಳ ಮಿಲಿಟರಿ ಶಕ್ತಿ ಪ್ರದರ್ಶನವು ಅಮೆರಿಕ ವ್ಯಕ್ತಿಗಳು ಹಾಗೂ ಹಿತಾಸಕ್ತಿಗಳಿಗೆ ನೇರ ಬೆದರಿಕೆಯಾಗಿ ಪರಿಣಮಿಸಬಹುದು. ಅಮೆರಿಕದ ಮಧ್ಯಪ್ರವೇಶಕ್ಕೆ ಕರೆಗಳು ಬರಬಹುದು. ಎರಡೂ ದೇಶಗಳ ವಾಸ್ತವಿಕ ಗಡಿ ನಿಯಂತ್ರಣ ರೇಖೆಯಲ್ಲಿ ಸಣ್ಣ ಪ್ರಮಾಣದ ಘರ್ಷಣೆ ನಡೆದರೂ ಅದು ಬಹುಬೇಗನೆ ದೊಡ್ಡ ಬಿಕ್ಕಟ್ಟಾಗಿ ಪರಿವರ್ತನೆಯಾಗುತ್ತವೆ ಎಂಬುದನ್ನು ಹಿಂದಿನ ಬಿಕ್ಕಟ್ಟುಗಳು ನಿರೂಪಿಸಿವೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

ಬಾರ್ಡರ್‌ ಸಿನಿಮಾಗೆ ಸ್ಫೂರ್ತಿಯಾಗಿದ್ದ 1971ರ ಇಂಡೋ-ಪಾಕ್‌ ಯುದ್ಧದ ವೀರ ರಾಥೋಡ್‌ ನಿಧನ

click me!