
ಅಗರ್ತಲಾ (ಮಾ.9): ಕೇಂದ್ರ ಗೃಹ ಸಚಿವ ಅಮಿತ್ ಶಾ ಬುಧವಾರ ಅಗರ್ತಲಾದಲ್ಲಿ ತ್ರಿಪುರದ ರಾಜ ಪ್ರದ್ಯೋತ್ ಮಾಣಿಕ್ಯ ದೆಬ್ಬರ್ಮಾ ಅವರನ್ನು ಭೇಟಿಯಾಗಿದ್ದರು ಮತ್ತು ಬಿಜೆಪಿ ಮತ್ತು ತಿಪ್ರಾ ಮೋಥಾ ನಡುವಿನ ಮೈತ್ರಿ ಕುರಿತು ಚರ್ಚಿಸಿದರು. ಅದಲ್ಲದೆ, ಇತ್ತೀಚೆಗೆ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ಮಾಣಿಕ್ ಸಹಾ ಅವರೊಂದಿಗೆ ಸಭೆ ನಡೆಸಿದರು. ಆದರೆ, ಈ ವೇಳೆ ಅವರ ಬೆಂಗಾವಲು ಪಡೆಯ ಭದ್ರತೆಯಲ್ಲಿ ಲೋಪವಾದ ಘಟನೆ ನಡೆದಿದೆ. ಅಮಿತ್ ಶಾ ಅವರ ಬೆಂಗಾವಲು ಪಡೆ ಹೋಗುವ ವೇಳೆ ಬಿಳಿ ಬಣ್ಣದ ಕಾರು ಬೆಂಗಾವಲು ಪಡೆಯ ಕಾರಿಯ ಸರಣಿಯಲ್ಲಿ ನುಗ್ಗಿದೆ. ಅಗರ್ತಲಾದ ರಾಜ್ಯ ಅತಿಥಿ ಗೃಹದಿಂದ ಅಮಿತ್ ಶಾ ಹೊರಟ ತಕ್ಷಣ ಅವರೊಂದಿಗೆ ಅವರ ಬೆಂಗಾವಲು ಪಡೆಯೂ ಭದ್ರತೆಗೆ ಮುಂದುವರಿಯಿತು. ಈ ವೇಳೆ ಬಿಳಿ ಬಣ್ಣದ ಟಾಟಾ ಟೈಗೋರ್ ಕಾರು ಹಿಂಬಾಲಿಸುತ್ತಿತ್ತು. ಇದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವೇಳೆ ಪೊಲೀಸರು ಕಾರ್‌ಅನ್ನು ನಿಲ್ಲಿಸಲು ಪ್ರಯತ್ನ ಮಾಡಿ ಅದರಲ್ಲಿ ಯಶಸ್ವಿಯಾಗಿದ್ದಾರೆ. ಹೀಗಿರುವಾಗ ಅಮಿತ್ ಶಾ ಅವರ ಬೆಂಗಾವಲು ವಾಹನಗಳು ಮಾರ್ಗದಲ್ಲಿ ಸಾಗುತ್ತಿದ್ದವು. ಪೊಲೀಸರ ಬಳಿ ನಿಂತಿದ್ದ ಕಾರು ಈ ಹಂತದಲ್ಲಿ ತಕ್ಷಣವೇ ಭದ್ರತೆಯನ್ನು ಧಿಕ್ಕರಿಸಿ ನುಗ್ಗಿ ಆತಂಕ ಸೃಷ್ಟಿ ಮಾಡಿತ್ತು.
ಮೆಘಾಲಯದಲ್ಲೂ ಬಿಜೆಪಿ ಸರ್ಕಾರ, ಅಮಿತ್ ಶಾಗೆ ಕರೆ ಮಾಡಿ ಬೆಂಬಲ ಕೇಳಿದ 26 ಸ್ಥಾನ ಗೆದ್ದ NPP!
ಅಮಿತ್ ಶಾ ಬೆಂಗಾವಲು ಪಡೆಯ ಕೊನೆಯ ಕಾರು, ಸರಣಿಗೆ ಕೂಡಿಕೊಳ್ಳಬೇಕಾದ ಹಂತದಲ್ಲಿ ಬಿಳಿ ಬಣ್ಣದ ಖಾಸಗಿ ಟಾಟಾ ಕಾರು ನುಗ್ಗಿದೆ. ಅಮಿತ್ ಶಾ ಅವರ ಬೆಂಗಾವಲು ವಾಹನದ ಬೆನ್ನಲ್ಲಿಯೇ ಕೆಲ ವಿಐಪಿಗಳ ಕಾರು ಕೂಡ ಹೋಗಬೇಕಿದ್ದವು. ಈ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
Karnataka Election 2023: ಅಮಿತ್ ಶಾ ಭಾಷಣ 8ನೇ ಅದ್ಭುತ: ಎಚ್‌ಡಿ ಕುಮಾರಸ್ವಾಮಿ ವ್ಯಂಗ್ಯ
ಕಳೆದ ವರ್ಷ, ಕಾರ್ಯಕ್ರಮವೊಂದರಲ್ಲಿ ಅಮಿತ್ ಶಾ ಅವರನ್ನು ಭೇಟಿಯಾಗಲು ಹೊರಟಿದ್ದ ಆಂಧ್ರಪ್ರದೇಶ ಸಂಸದರೊಬ್ಬರ ಪರ್ಸನಲ್ ಅಸಿಸ್ಟೆಂಟ್‌ನಂತೆ ನಟಿಸಿದ 32 ವರ್ಷದ ವ್ಯಕ್ತಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದರು. ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಅವರ ಉಪ ದೇವೇಂದ್ರ ಫಡ್ನವಿಸ್ ಅವರ ನಿವಾಸದ ಹೊರಗೆ ಈ ವ್ಯಕ್ತಿ ಕಾಣಿಸಿಕೊಂಡಿದ್ದು, ಗೃಹ ಸಚಿವಾಲಯದ (ಎಂಎಚ್‌ಎ) ರಿಬ್ಬನ್ ಟ್ಯಾಗ್ ಅನ್ನು ಸಹ ಅವರು ಹೊಂದಿದ್ದರಿಂದ ಅದರ ಸದಸ್ಯರ ರೀತಿಯಲ್ಲಿಯೇ ಕಾಣಿಸಿಕೊಂಡಿದ್ದರು ಎಂದು ಎಎನ್‌ಐ ವರದಿ ಮಾಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ