Army Helicopter Crash: ಅತೀ ಚಿಕ್ಕ ವಯಸ್ಸಿನಲ್ಲೇ ದುರಂತ ಅಂತ್ಯ ಕಂಡ ಬಿಪಿನ್‌ರ ಇಬ್ಬರು ವೈಯಕ್ತಿಕ ಭದ್ರತಾ ಅಧಿಕಾರಿಗಳು

By Suvarna NewsFirst Published Dec 9, 2021, 12:28 PM IST
Highlights
  • ದುರಂತದಲ್ಲಿ ಮೃತಪಟ್ಟ ಬಿಪಿನ್ ರಾವತ್ ಅವರ ಇಬ್ಬರು ವೈಯಕ್ತಿಕ ಭದ್ರತಾ ಅಧಿಕಾರಿಗಳು
  • ಆಂಧ್ರದ ಯೋಧನಿಗೆ ಕೇವಲ  27 ವರ್ಷ, ಹಿಮಾಚಲ ಮೂಲದ ಯೋಧನಿಗೆ 29 ವರ್ಷ
  • ಅತೀ ಚಿಕ್ಕ ವಯಸ್ಸೀನಲ್ಲೇ ದುರಂತ ಅಂತ್ಯ ಕಂಡ ಯೋಧರು

ನವದೆಹಲಿ(ಡಿ.9): ಡಿಸೆಂಬರ್ 8ರಂದು  ನಡೆದ ಸೇನಾ ಹೆಲಿಕಾಪ್ಟರ್ ದುರಂತದಲ್ಲಿ  ಆಂಧ್ರಪ್ರದೇಶ ಮತ್ತು ಹಿಮಾಚಲ ಪ್ರದೇಶದ ಇಬ್ಬರು ಯೋಧರು ಮೃತಪಟ್ಟಿದ್ದು ಇವರು ಬಿಪಿನ್ ರಾವತ್ ಅವರ ವೈಯಕ್ತಿಕ ಭದ್ರತಾ ಅಧಿಕಾರಿಗಳಾಗಿದ್ದರು.  ಸಣ್ಣವಯಸ್ಸಿನವರಾಗಿದ್ದು ಇವರಿಗಿನ್ನೂ 30 ವರ್ಷ ದಾಟಿಲ್ಲ. ಒಬ್ಬರು  27 ವರ್ಷ ಆಂಧ್ರದ ಲ್ಯಾನ್ಸ್ ನಾಯಕ್ ಸಾಯಿ ತೇಜ್ (Lance Naik Sai Teja) ಮತ್ತೊಬ್ಬರು 29 ವರ್ಷದ ಹಿಮಾಚಲ ಪ್ರದೇಶದ ಲ್ಯಾನ್ಸ್ ನಾಯಕ್ ವಿವೇಕ್ ಕುಮಾರ್ (Lance Naik Vivek Kumar). ಅತೀ ಚಿಕ್ಕ ವಯಸ್ಸಿನಲ್ಲಿ ದುರಂತ ಅಂತ್ಯ ಕಂಡಿರುವುದು ಬಹಳ ದೊಡ್ಡ ನೋವಿನ ವಿಚಾರ.

ಆಂಧ್ರದ ನಾಯಕ್ ಬಿ ಸಾಯಿ ತೇಜಾ:  ಸಾಯಿ ತೇಜಾ ಅವರು ರಕ್ಷಣಾ ಪಡೆಗಳ ಮುಖ್ಯಸ್ಥ(ಸಿಡಿಎಸ್) ಬಿಪಿನ್ ರಾವತ್ ಅವರ ವೈಯಕ್ತಿಕ ಭದ್ರತಾ ಅಧಿಕಾರಿ ಆಗಿದ್ದರು. ಮೂಲತಃ ಆಂಧ್ರಪ್ರದೇಶದ ಚಿತ್ತೂರು ಮೂಲದ ಸಾಯಿ ತೇಜಾ, 2013ರಲ್ಲಿ ಭಾರತೀಯ ಸೇನೆಯ ಬೆಂಗಳೂರು ರೆಜಿಮೆಂಟ್‍ಗೆ ಸೇರಿದ್ದರು. ಲ್ಯಾನ್ಸ್ ನಾಯ್ಕ್ ಸಾಯಿ ತೇಜ್ ಅವರಿಗೆ ಕೇವಲ 27 ವರ್ಷ ವಯಸ್ಸಾಗಿತ್ತು.

CDS Helicopter Crash: ಜೀವಂತವಾಗಿದ್ರು ಬಿಪಿನ್ ರಾವತ್, ಫೈರ್‌ ಮ್ಯಾನ್‌ ಬಳಿ ಹೇಳಿದ ಕೊನೆಯ ಮಾತಿದು!

ಕಳೆದ ಕೆಲ ದಿನಗಳ ಹಿಂದೆ ಇವರು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರ ವೈಯಕ್ತಿಕ ಭದ್ರತಾ ಅಧಿಕಾರಿಯಾಗಿ(Personal security officer) ಸೇರಿಕೊಂಡಿದ್ದರು. ಲ್ಯಾನ್ಸ್ ನಾಯ್ಕ್ ಸಾಯಿ ತೇಜಾಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಮನೆಗೆ ಭೇಟಿ ನೀಡಿದ್ದರು. ಇವರ ತಂದೆ ಮೋಹನ್ ಮತ್ತು ತಾಯಿ ಭುವನೇಶ್ವರಿ ಸೇನೆಗೆ ಸೇರಲು ಪ್ರೋತ್ಸಾಹ ಮಾಡಿದ್ದರು. ಮೃತ ಸಾಯಿ ತೇಜ್ ಅವರಿಗೆ ಶ್ಯಾಮಲ ಎಂಬ ಪತ್ನಿ ಇದ್ದು, ಇಬ್ಬರು ಮಕ್ಕಳಿದ್ದಾರೆ. ಅದರಲ್ಲಿ 5 ವರ್ಷದ ಗಂಡು ಮಗು ಹಾಗೂ 3 ವರ್ಷದ ಹೆಣ್ಣು ಮಗುವಿದೆ.

ಹೆಲಿಕಾಪ್ಟರ್ ದುರಂತಕ್ಕೂ 4 ಗಂಟೆಗಳ ಹಿಂದೆಯಷ್ಟೇ ತಮ್ಮ ಪತ್ನಿ ಜೊತೆ ಸಾಯಿ ತೇಜ್ ಮಾತನಾಡಿದ್ದರು.  ಸಾಯಿ ತೇಜ್ ಮೃತಪಟ್ಟಿರುವ ವಿಚಾರ ತಿಳಿಯುತ್ತಿದ್ದಂತೆ  ಚಿತ್ತೂರಿನ ಯಗುವರೆಗಡ ಗ್ರಾಮದಲ್ಲಿ ಶೋಕ ಮಡುಗಟ್ಟಿದೆ. ಪಾರ್ಥಿವ ಶರೀರ  ಆಂಧ್ರಪ್ರದೇಶಕ್ಕೆ ಬರಲಿದ್ದು, ಶುಕ್ರವಾರ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ.

IAF Helicopter Crash: ಭೀಕರ ದುರಂತದಲ್ಲಿ ಬದುಕುಳಿದ ಏಕೈಕ ಸಿಬ್ಬಂದಿ ಕ್ಯಾ.ವರುಣ್‌ ಸಿಂಗ್‌!

ಲ್ಯಾನ್ಸ್ ನಾಯಕ್ ವಿವೇಕ್ ಕುಮಾರ್:  ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯ ಜೈಸಿಂಗ್‌ಪುರದ ಅಪ್ಪರ್ ತೆಹ್ದು ಗ್ರಾಮದ ಲ್ಯಾನ್ಸ್ ನಾಯಕ್ ವಿವೇಕ್ ಕುಮಾರ್ ಗೆ 29 ವರ್ಷ. ಇವರು ಕೂಡ ಬಿಪಿನ್ ರಾವತ್ ಅವರ ವೈಯಕ್ತಿಕ ಭದ್ರತಾ ಅಧಿಕಾರಿ ವಿವೇಕ್​ ಅವರಿಗೆ ವಿವಾಹವಾಗಿ ಕೇವಲ 2 ವರ್ಷವಾಗಿದ್ದು, 2 ತಿಂಗಳ ಮಗುವಿದೆ. ರಾವತ್​ ಅವರೊಂದಿಗೆ ತಮಿಳುನಾಡಿಗೆ ತೆರಳುತ್ತಿರುವ ಬಗ್ಗೆ ವಿವೇಕ್​ ತಮ್ಮ ಪತ್ನಿಗೆ ಫೋನ್​ ಕರೆ ಮೂಲಕ ತಿಳಿಸಿದ್ದರು. ಅದಾದ ಕೆಲ ಗಂಟೆಗಳಲ್ಲೇ ಹೆಲಿಕಾಪ್ಟರ್​ ಅಪಘಾತಕ್ಕೀಡಾಗಿದೆ. ವಿಚಾರ ತಿಳಿದ ಬಳಿಕ ವಿವೇಕ್ ಪತ್ನಿ, ತಂದೆ ರಮೇಶ್ ಚಂದ್, ತಾಯಿ ಆಶಾದೇವಿ ಪ್ರಜ್ಞಾಹೀನರಾಗಿದ್ದಾರೆ. ಶುಕ್ರವಾರ ಸಕಲ ಸರ್ಕಾರಿ ಗೌರವದೊಂದಿಗೆ ಹುಟ್ಟೂರಿನಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

ಸಿಡಿಎಸ್​ ಜನರಲ್​ ಬಿಪಿನ್​ ರಾವತ್​(Bipin Rawat) ಹಾಗೂ ಅವರ ಪತ್ನಿ ಮಧುಲಿಕಾ ರಾವತ್ (Madhulika Rawat)​​ ಹಾಗೂ ಇತರೆ 11 ಮಂದಿಯನ್ನು ಹೊತ್ತು ಸಾಗುತ್ತಿದ್ದ ಭಾರತೀಯ ಸೇನೆಯ ಹೆಲಿಕಾಪ್ಟರ್​​ ತಮಿಳುನಾಡಿನ ಕೂನೂರ್​​ನಲ್ಲಿ ದುರಂತಕ್ಕೀಡಾಗಿತ್ತು. ಈ ದುರಂತದಲ್ಲಿ ಸಿಡಿಎಸ್​ ಜನರಲ್​ ಬಿಪಿನ್​ ರಾವತ್​ ಹಾಗೂ ಅವರ ಪತ್ನಿ ಮಧುಲಿಕಾ ರಾವತ್​ ಸೇರಿದಂತೆ 13 ಮಂದಿ ದುರಂತ ಅಂತ್ಯ ಕಂಡಿದ್ದಾರೆ.  ವೆಲ್ಲಿಂಗ್ಟನ್​ನ ಡಿಫೆನ್ಸ್​ ಸರ್ವೀಸ್​ ಸ್ಟಾಫ್​​ ಕಾಲೇಜಿಗೆ ತೆರಳುತ್ತಿದ್ದ ವೇಳೆಯಲ್ಲಿ ಹೆಲಿಕಾಪ್ಟರ್​ ದುರಂತ ಅಂತ್ಯ ಕಂಡಿದೆ. ಮಧ್ಯಾಹ್ನ 12 ಗಂಟೆ ಸುಮಾರಿಗೆ ಭಾರತೀಯ ಸೇನೆಯ ಎಂಐ 15 ವಿ5 ಹೆಲಿಕಾಪ್ಟರ್​​​ ತಮಿಳುನಾಡಿನ ಕುನೂರ್​ ಬಳಿಯಲ್ಲಿ ದುರಂತಕ್ಕೀಡಾಗಿತ್ತು. 

click me!