* ಬಿಪಿನ್ ರಾವತ್ ಇದ್ದ ಹೆಲಿಕಾಪ್ಟರ್ ಪತನ
* ರಕ್ಷಣಾ ಕಾರ್ಯದ ವೇಳೆ ಜೀವಂತವಾಗಿದ್ರು ಜ| ಬಿಪಿನ್ ರಾವತ್
* ರಕ್ಷಣಾ ಸಿಬ್ಬಂದಿ ಬಳಿ ಹೇಳಿದ ಕೊನೆಯ ಮಾತಿದು
ವೆಲ್ಲಿಂಗ್ಟನ್(ಡಿ.09): ತಮಿಳುನಾಡಿನ ಕುನೂರಿನಲ್ಲಿ ಬುಧವಾರ ಸಂಭವಿಸಿದ ಹೆಲಿಕಾಪ್ಟರ್ ಅಪಘಾತದಲ್ಲಿ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ (ಸಿಡಿಎಸ್) ಜನರಲ್ ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ ರಾವತ್ ಸೇರಿದಂತೆ 13 ಜನರು ಸಾವನ್ನಪ್ಪಿದ್ದಾರೆ. ಈ ಅಪಘಾತದಲ್ಲಿ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಮಾತ್ರ ಬದುಕುಳಿದಿದ್ದಾರೆ. ತೀವ್ರ ಸುಟ್ಟ ಗಾಯಗಳಾಗಿದ್ದು, ಚಿಂತಾಜನಕ ಸ್ಥಿತಿಯಲ್ಲಿದ್ದಾರೆ. ಈ ಘಟನೆಯಿಂದ ದೇಶಾದ್ಯಂತ ಶೋಕದ ಅಲೆ ನಿರ್ಮಾಣವಾಗಿದೆ. ಸಿಡಿಎಸ್ ಸೇರಿದಂತೆ ಜವಾನರ ಆಪ್ತರು ತುಂಬಾ ಆಘಾತಕ್ಕೊಳಗಾಗಿದ್ದಾರೆ ಮತ್ತು ಅವರನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಹೆಲಿಕಾಪ್ಟರ್ ಪತನದ ನಂತರವೂ ಜನರಲ್ ಬಿಪಿನ್ ರಾವತ್ ಬದುಕಿದ್ದರು ಎಂಬುದು ಈಗ ಬಯಲಿಗೆ ಬಂದಿದೆ. Mi-17V5 ಹೆಲಿಕಾಪ್ಟರ್‌ನ ಅವಶೇಷಗಳಿಂದ ರಕ್ಷಿಸಲ್ಪಟ್ಟಾಗ ಅವರು ತಮ್ಮ ಹೆಸರನ್ನು ಹಿಂದಿಯಲ್ಲಿ ಹೇಳಿದ್ದರೆನ್ನಲಾಗಿದೆ. ರಕ್ಷಣಾ ತಂಡದ ಸದಸ್ಯರೊಬ್ಬರು ಈ ಮಾಹಿತಿ ನೀಡಿದ್ದಾರೆ. ಜನರಲ್ ರಾವತ್ ಜೊತೆಗೆ ಮತ್ತೊಬ್ಬ ಸವಾರನನ್ನು ಕೂಡ ಸ್ಥಳಾಂತರಿಸಲಾಗಿತ್ತು. ನಂತರ ಅವರನ್ನು ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಎಂದು ಗುರುತಿಸಲಾಯಿತು. ಈ ಅಪಘಾತದಲ್ಲಿ ಗ್ರೂಪ್ ಕ್ಯಾಪ್ಟನ್ ವರುಣ್ ಮಾತ್ರ ಬದುಕುಳಿದಿದ್ದಾರೆ. ಅವರು ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ.
Bipin Rawat Chopper Crash: ಇನ್ನೂ ಪತ್ತೆಯಾಗಿಲ್ಲ Black Box: ದುರಂತ ಇನ್ನೂ ನಿಗೂಢ!
undefined
ಹಿರಿಯ ಅಗ್ನಿಶಾಮಕ ಸಿಬ್ಬಂದಿ ಮತ್ತು ರಕ್ಷಣಾ ಸಿಬ್ಬಂದಿ ಎನ್‌ಸಿ ಮುರಳಿ ಅವರ ಪ್ರಕಾರ, ಅಪಘಾತದ ಬಗ್ಗೆ ಮಾಹಿತಿ ಪಡೆದ ತಕ್ಷಣ ಅವರು ಸ್ಥಳಕ್ಕೆ ತಲುಪಿದರು. ನಾವು ಇಬ್ಬರನ್ನು ಜೀವಂತವಾಗಿ ಉಳಿಸಿದ್ದೇವೆ ಎಂದು ಹೇಳಿದರು. ಅವರಲ್ಲಿ ಒಬ್ಬರು ಸಿಡಿಎಸ್ ರಾವತ್. ನಾವು ಅವರನ್ನು ಹೊರಕ್ಕೆ ಕರೆದೊಯ್ದ ಕೂಡಲೇ ರಕ್ಷಣಾ ಸಿಬ್ಬಂದಿಯೊಂದಿಗೆ ಹಿಂದಿಯಲ್ಲಿ ಮೆಲುದನಿಯಲ್ಲಿ ಮಾತನಾಡಿ ತಮ್ಮ ಹೆಸರನ್ನು ಉಚ್ಛರಿಸಿದ್ದಾರೆ ಎಂದು ಮುರಳಿ ಹೇಳಿದ್ದಾರೆ. ನಾನು ಜನರಲ್ ಬಿಪಿನ್... ಎಂದಿದ್ದಾರೆ. ತಕ್ಷಣ ಅವರನ್ನು ರಕ್ಷಕರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ದೇಹದ ಕೆಳಭಾಗದಲ್ಲಿ ಆಳವಾದ ಗಾಯಗಳಿಂದಾಗಿ, ದೇಶದ ಈ ವೀರ ಮಗ ಶಾಶ್ವತವಾಗಿ ರಕಣ್ಮುಚ್ಚಿದ್ದಾರೆ. ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಜನರಲ್ ರಾವತ್ ಸಾವನ್ನಪ್ಪಿದ್ದಾರೆ ಎಂದು ಮುರಳಿ ತಿಳಿಸಿದ್ದಾರೆ. ಮುರಳಿ ಅವರ ಪ್ರಕಾರ, ಇನ್ನೊಬ್ಬ ವ್ಯಕ್ತಿಯನ್ನು ತಕ್ಷಣ ಗುರುತಿಸಲು ಸಾಧ್ಯವಾಗಲಿಲ್ಲ, ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು ಮತ್ತು ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಳಿಕ ಅವರು ವರುಣ್ ಎಂದು ಗುರುತಿಸಲಾಯಿತು ಎಂದಿದ್ದಾರೆ.
ಬೆಡ್‌ಶೀಟ್‌ನಲ್ಲಿ ಸುತ್ತಿ ಆಂಬ್ಯುಲೆನ್ಸ್‌ನಲ್ಲಿ ತೆಗೆದುಕೊಂಡು ಹೋಗಿದ್ದಾರೆ
ತಮ್ಮ ದೇಹದ ಕೆಳಭಾಗದಲ್ಲಿ ಗಂಭೀರ ಗಾಯಗಳಾಗಿವೆ ಎಂದು ಜನರಲ್ ರಾವತ್ ಹೇಳಿದ್ದಾರೆ ಎಂದು ಮುರಳಿ ಹೇಳಿದರು. ಇದಾದ ಬಳಿಕ ಶೀಟ್‌ನಲ್ಲಿ ಸುತ್ತಿ ಆಂಬ್ಯುಲೆನ್ಸ್‌ನಲ್ಲಿ ಕರೆದೊಯ್ದಿದ್ದಾರೆ. ಅದರ ನಂತರ ಅವರು ಆಸ್ಪತ್ರೆಗೆ ಹೋದರು. ಈ ಪ್ರದೇಶದಲ್ಲಿ ರಕ್ಷಣಾ ತಂಡವು ರಕ್ಷಣಾ ಕಾರ್ಯದಲ್ಲಿ ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಯಿತು. ಬೆಂಕಿ ನಂದಿಸಲು ಅಗ್ನಿಶಾಮಕ ದಳಕ್ಕೆ ದಾರಿ ಇರಲಿಲ್ಲ. ಅಕ್ಕಪಕ್ಕದ ನದಿಗಳಿಂದ, ಮನೆಗಳಿಂದ ಮಡಕೆಗಳಲ್ಲಿ ನೀರು ತರಬೇಕಾಗಿದೆ ಎಂದು ಮುರಳಿ ಹೇಳಿದರು. ಕಾರ್ಯಾಚರಣೆಯು ತುಂಬಾ ಕಷ್ಟಕರವಾಗಿತ್ತು ಏಕೆಂದರೆ ನಾವು ಜನರನ್ನು ರಕ್ಷಿಸಲು ಅಥವಾ ದೇಹಗಳನ್ನು ಹೊರತೆಗೆಯಲು ಹೆಲಿಕಾಪ್ಟರ್‌ನ ತುಂಡುಗಳನ್ನು ಕತ್ತರಿಸಬೇಕಾಯ್ತು ಎಂದಿದ್ದಾರೆ.
ಜ| ನರವಣೆ ಹೊಸ ಸಶಸ್ತ್ರ ಪಡೆ ಮುಖ್ಯಸ್ಥ?, ಮೋದಿ ಸಭೆಯಲ್ಲಿ Bipin Rawat ಉತ್ತರಾಧಿಕಾರಿ ಬಗ್ಗೆ ಮಾತು!
ಬೇರು ಸಮೇತ ಕಿತ್ತು ಬಂದಿದ್ದ ಮರ ಅಡ್ಡಿ
ಬೇರು ಸಮೇತ ಮೇಲೆದ್ದಿದ್ದ ಮರವೊಂದು ರಕ್ಷಣಾ ಕಾರ್ಯಕ್ಕೆ ಅಡ್ಡಿಯಾಗಿದೆ ಎಂದು ಮುರಳಿ ತಿಳಿಸಿದರು. ಅದನ್ನು ಕತ್ತರಿಸಬೇಕಾಗಿತ್ತು. ಇದೆಲ್ಲವೂ ನಮ್ಮ ರಕ್ಷಣಾ ಕಾರ್ಯವನ್ನು ವಿಳಂಬಗೊಳಿಸಿತು. ನಾವು 12 ಶವಗಳನ್ನು ಹೊರತೆಗೆದಿದ್ದೇವೆ ಎಂದು ಅವರು ಹೇಳಿದರು. ಇಬ್ಬರನ್ನು ಜೀವಂತವಾಗಿ ಹೊರ ತೆಗೆಯಲಾಗಿದೆ. ಇಬ್ಬರಿಗೂ ಗಂಭೀರ ಸುಟ್ಟ ಗಾಯಗಳಾಗಿವೆ. ನಂತರ, ಭಾರತೀಯ ವಾಯುಪಡೆ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ಅರ್ಧದಾರಿಯಲ್ಲೇ ಸೇರಿಕೊಂಡರು. ಅವರು ತಂಡವನ್ನು ಹೆಲಿಕಾಪ್ಟರ್‌ನ ಹಾನಿಗೊಳಗಾದ ಭಾಗಗಳಿಗೆ ಕರೆದೊಯ್ದರು. ಅವಶೇಷಗಳ ನಡುವೆ ಶಸ್ತ್ರಾಸ್ತ್ರಗಳು ಬಿದ್ದಿದ್ದವು. ಆದ್ದರಿಂದ ನಾವು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕಾಯಿತು.