ಬಿಹಾರದ ಬಡ ಶಾಸಕನಿಗೆ ಸಿಕ್ಕಿತು ಸರ್ಕಾರಿ ನಿವಾಸ

By Kannadaprabha NewsFirst Published Oct 30, 2022, 10:11 AM IST
Highlights

ಬಿಹಾರ ರಾಜ್ಯದಲ್ಲಿರುವ ಬಡ ಶಾಸಕ, ಕೇವಲ 70 ಸಾವಿರ ರುಪಾಯಿ ಆಸ್ತಿ ಮೌಲ್ಯ ಹೊಂದಿರುವ ರಾಮ್‌ವೃಕ್ಷ ಸದಾ ಅವರಿಗೆ ಪಟನಾದಲ್ಲಿ ಸರ್ಕಾರಿ ನಿವಾಸ ನೀಡಲಾಗಿದೆ. ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ಮನೆಯ ಕೀ ಹಸ್ತಾಂತರಿಸುವ ವೇಳೆ ಶಾಸಕ ಭಾವುಕರಾಗಿ ಆನಂದಬಾಷ್ಪ ಸುರಿಸಿದ್ದಾರೆ.

ಪಟನಾ: ಬಿಹಾರ ರಾಜ್ಯದಲ್ಲಿರುವ ಬಡ ಶಾಸಕ, ಕೇವಲ 70 ಸಾವಿರ ರುಪಾಯಿ ಆಸ್ತಿ ಮೌಲ್ಯ ಹೊಂದಿರುವ ರಾಮ್‌ವೃಕ್ಷ ಸದಾ ಅವರಿಗೆ ಪಟನಾದಲ್ಲಿ ಸರ್ಕಾರಿ ನಿವಾಸ ನೀಡಲಾಗಿದೆ. ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ಮನೆಯ ಕೀ ಹಸ್ತಾಂತರಿಸುವ ವೇಳೆ ಶಾಸಕ ಭಾವುಕರಾಗಿ ಆನಂದಬಾಷ್ಪ ಸುರಿಸಿದ್ದಾರೆ.

ನಾನು ಬಿಹಾರದಲ್ಲೇ ಅತ್ಯಂತ ಬಡ ಶಾಸಕ (poorest MLA). ಬಡವರಿಗೆ ಏನೇ ಸಿಕ್ಕಿದರೂ ಅದು ಅವರಿಗೆ ದೀಪಾವಳಿ. ಹಾಗಾಗಿ ಮುಖ್ಯಮಂತ್ರಿಗಳು ನನ್ನ ಮನೆಯ ಕೀ ನೀಡುವಾಗ ನಾನು ಭಾವುಕನಾದೆ (emotional). ಈ ಮನೆಯಲ್ಲಿ ನಾನು ವಾಸಿಸುತ್ತೇನೆ ಎಂಬುದನ್ನು ಕನಸಿನಲ್ಲೂ ಭಾವಿಸಿರಲಿಲ್ಲ. ನಾನು ಮುಸಾಹರ್‌ ಜಾತಿಗೆ ಸೇರಿದವನಾಗಿದ್ದೇನೆ. ಲಾಲು ಪ್ರಸಾದ್‌ ಯಾದವ್‌ ಅವರು ನನ್ನನ್ನು ನಾಯಕ ಮತ್ತು ಶಾಸಕ ಮಾಡಿದರು’ ಎಂದು ಆರ್‌ಜೆಡಿ ಶಾಸಕರಾದ(RJD MLA) ಸದಾ ಹೇಳಿದ್ದಾರೆ.

ಇಂದಿರಾ ಆವಾಸ್‌ ಮನೆ ನಿವಾಸಿ:

ಪ್ರಸ್ತುತ ಶಾಸಕ ಸದಾ ಅವರು ಹಳ್ಳಿಯಲ್ಲಿ ಇಂದಿರಾ ಆವಾಸ್‌ ಯೋಜನೆಯ(Indira Awas Yojana) 2 ಕೋಣೆಯ ಚಿಕ್ಕ ಮನೆಯಲ್ಲಿ ವಾಸಿಸುತ್ತಿದ್ದಾರೆ. 12 ಜನರ ತುಂಬು ಕುಟಂಬವು ಈ ಚಿಕ್ಕ ಮನೆಯಲ್ಲಿದೆ.

UN Report: ಭಾರತದಲ್ಲಿ ಬಡವರ ಸಂಖ್ಯೆ 41 ಕೋಟಿ ಇಳಿಕೆ!

ಕೇವಲ 70 ಸಾವಿರ ರೂ. ಆಸ್ತಿ:

ಕಳೆದ ಚುನಾವಣೆಯಲ್ಲಿ ಅವರು ಸಲ್ಲಿಸಿದ ಅಫಿಡವಿಡ್‌ನಂತೆ (affidavit) 70 ಸಾವಿರ ರುಪಾಯಿ. ಮೌಲ್ಯದ ಆಸ್ತಿ, 25 ಸಾವಿರ ರುಪಾಯಿ ನಗದು ಹಾಗೂ ಅವರ ಪತ್ನಿಯ ಬಳಿ 5 ಸಾವಿರ ರೂ. ನಗದು ಮತ್ತು 10 ಸಾವಿರ ರೂ. ಮೌಲ್ಯದ ಕೃಷಿ ಭೂಮಿಯನ್ನು ಹೊಂದಿದ್ದಾರೆ.

Lal Bahadur Shastri: ಶಾಂತಿ, ಸರಳತೆಯ ಸಾಕಾರ ಮೂರ್ತಿ

click me!