Mann Ki Baat: ಇಂದು 94ನೇ ಸಂಚಿಕೆ, ದೇಶವನ್ನು ಉದ್ದೇಶಿಸಿ ಮೋದಿ ಮಾತು!

Published : Oct 30, 2022, 09:39 AM ISTUpdated : Oct 30, 2022, 09:53 AM IST
Mann Ki Baat: ಇಂದು 94ನೇ ಸಂಚಿಕೆ, ದೇಶವನ್ನು ಉದ್ದೇಶಿಸಿ ಮೋದಿ ಮಾತು!

ಸಾರಾಂಶ

ಪ್ರತಿ ತಿಂಗಳು ದೇಶದ ಜನರೊಂದಿಗೆ ತಮ್ಮ ವಿಚಾರಗಳನ್ನು ಹಂಚಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿಯವರ ವೇದಿಕೆಯಾಗಿರುವ ಮನ್‌ ಕಿ ಬಾತ್‌ನ 94ನೇ ಆವೃತ್ತಿ ಇಂದು ಬೆಳಗ್ಗೆ 11 ಗಂಟೆಗೆ ಆಕಾಶವಾಣಿಯಲ್ಲಿ ಪ್ರಸಾರವಾಗಲಿದೆ.

ನವದೆಹಲಿ (ಅ. 30): ಭಾನುವಾರ ಬೆಳಗ್ಗೆ 11 ಗಂಟೆಗೆ ಆಕಾಶವಾಣಿಯಲ್ಲಿ ನಡೆಯುವ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನರೊಂದಿಗೆ ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳಲಿದ್ದಾರೆ. ಇದು ಮಾಸಿಕ ರೇಡಿಯೋ ಕಾರ್ಯಕ್ರಮದ 94 ನೇ ಸಂಚಿಕೆಯಾಗಿದೆ. ಈ ತಿಂಗಳ ಆರಂಭದಲ್ಲಿ, ಅಕ್ಟೋಬರ್ 30 ರಂದು ಪ್ರಸಾರವಾಗಲಿರುವ ತಮ್ಮ ಮನ್ ಕಿ ಬಾತ್ ಕಾರ್ಯಕ್ರಮಕ್ಕಾಗಿ ಆಲೋಚನೆಗಳು ಮತ್ತು ಸಲಹೆಗಳನ್ನು ಹಂಚಿಕೊಳ್ಳಲು ಪ್ರಧಾನಿ ಮೋದಿ ಜನರನ್ನು ಆಹ್ವಾನಿಸಿದರು. ಅಕ್ಟೋಬರ್ 30 ರಂದು ಮುಂಬರುವ ಮನ್ ಕಿ ಬಾತ್ ಕಾರ್ಯಕ್ರಮಕ್ಕಾಗಿ ಜನರು ತಮ್ಮ ಆಲೋಚನೆಗಳು ಮತ್ತು ವಿಚಾರಗಳಿದ್ದಲ್ಲಿ ಕಳುಹಿಸುವಂತೆ ಪ್ರಧಾನಮಂತ್ರಿ ಟ್ವೀಟ್ ಮಾಡಿದ್ದರು. ಮುಂಬರುವ 'ಮನ್ ಕಿ ಬಾತ್' ಸಂಚಿಕೆಯಲ್ಲಿ ಪ್ರಧಾನಿ ಆ ವಿಚಾರವಾಗಿ ಮಾತನಾಡಲು ಬಯಸುವ ವಿಷಯಗಳು ಅಥವಾ ಸಮಸ್ಯೆಗಳ ಕುರಿತು ತಮ್ಮ ಸಲಹೆಗಳನ್ನು ಮೈಗವ್ ಅಥವಾ ನಮೋ ಅಪ್ಲಿಕೇಶನ್‌ನಲ್ಲಿ ಬರೆಯಿರಿ ಎಂದು ಹೇಳಿದ್ದರು. ಅಥವಾ 1800-11-7800 ಅನ್ನು ಡಯಲ್ ಮಾಡುವ ಮೂಲಕ ಸಂದೇಶವನ್ನು ರೆಕಾರ್ಡ್ ಮಾಡಲು ಜನರನ್ನು ಕೇಳಿದರು. ಅಕ್ಟೋಬರ್ 28 ರವರೆಗೆ ಫೋನ್ ಲೈನ್‌ಗಳು ತೆರೆದಿದ್ದವು.

ಮನ್ ಕಿ ಬಾತ್ ಅನ್ನು ಆಲ್ ಇಂಡಿಯಾ ರೇಡಿಯೊದಲ್ಲಿ ಕೇಳಬಹುದು. ದೂರದರ್ಶನದಲ್ಲೂ ಇದು ಪ್ರಸಾರವಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಫೇಸ್‌ಬುಕ್ ಪುಟಕ್ಕೆ ಭೇಟಿ ನೀಡುವ ಮೂಲಕ ನೀವು ಈ ಕಾರ್ಯಕ್ರಮವನ್ನು ಆಲಿಸಬಹುದು. ಇದಲ್ಲದೆ, ಆಲ್ ಇಂಡಿಯಾ ರೇಡಿಯೊ ಮತ್ತು ಪಿಎಂಒದ ಟ್ವಿಟರ್ ಹ್ಯಾಂಡಲ್‌ನಲ್ಲಿಯೂ ಈ ಕಾರ್ಯಕ್ರಮ ಲಭ್ಯವಿರುತ್ತದೆ.

ಮನ್ ಕಿ ಬಾತ್‌ನ ಮೊದಲ ಸಂಚಿಕೆ 2014 ರಲ್ಲಿ ಪ್ರಸಾರವಾಯಿತು. ಅಂದಿನಿಂದ ಈ ಕಾರ್ಯಕ್ರಮ ಪ್ರತಿ ತಿಂಗಳ ಕೊನೆಯ ಭಾನುವಾರದಂದು ಪ್ರಸಾರವಾಗುತ್ತಿದೆ. ಈ ಕಾರ್ಯಕ್ರಮದ 93ನೇ ಸಂಚಿಕೆಯಲ್ಲಿ (Mann Ki Baat 93 Edition) ಪ್ರಧಾನಿ ನರೇಂದ್ರ ಮೋದಿ ಅವರು ಈ ಹಿಂದೆ ನಮೀಬಿಯಾದಿಂದ ಭಾರತಕ್ಕೆ ತಂದ ಚಿರತೆಗಳ ಬಗ್ಗೆ ಮಾತನಾಡಿದರು. ಈ ಚಿರತೆಗಳನ್ನು ಮಧ್ಯಪ್ರದೇಶದ ಕುನೊ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬಿಡಲಾಗಿದೆ. ಇದರೊಂದಿಗೆ ಚಂಡೀಗಢ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶಹೀದ್ ಭಗತ್ ಸಿಂಗ್ ಹೆಸರಿಡುವುದಾಗಿಯೂ ಪ್ರಕಟಿಸಿದ್ದರು.

Mann Ki Baat: ಬೆಂಗಳೂರಿನ ಯೂಥ್‌ ಫಾರ್‌ ಪರಿವರ್ತನ್‌ ಸಂಸ್ಥೆಗೆ ಮೋದಿ ಭೇಷ್‌

ನಮೀಬಿಯಾದ ಚಿರತೆಗಳ ಮೇಲೆ ನಿಗಾ ಇಡುವ ಕಾರ್ಯಪಡೆಯನ್ನು ರಚಿಸಲಾಗಿದ್ದು, ಅವು ಇಲ್ಲಿನ ಪರಿಸರದಲ್ಲಿ ಎಷ್ಟರಮಟ್ಟಿಗೆ ಬೆರೆಯಲು ಸಾಧ್ಯವಾಗಿದೆ ಎಂಬುದನ್ನು ಪರಿಶೀಲಿಸಲು ಕಾರ್ಯಪಡೆ ರಚಿಸಲಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದರು. ಚಂಡೀಗಢ ವಿಮಾನ ನಿಲ್ದಾಣಕ್ಕೆ ನಾಮಕರಣ ಮಾಡುವ ಕುರಿತು, ಪ್ರಧಾನಿ ಮೋದಿ ಅವರು 'ಹುತಾತ್ಮರ ಸ್ಮಾರಕಗಳು, ಸ್ಥಳಗಳು ಮತ್ತು ಸಂಸ್ಥೆಗಳ ಹೆಸರುಗಳು ಕರ್ತವ್ಯಕ್ಕೆ ಪ್ರೇರೇಪಿಸುತ್ತದೆ' ಎಂದು ಪ್ರಧಾನಿ ಮೋದಿ ಅವರು ಮನ್ ಕಿ ಬಾತ್‌ನ 93 ನೇ ಸಂಚಿಕೆಯಲ್ಲಿ ಘೋಷಿಸಿದ್ದರು.

Mann Ki Baat: Cheetah ಮರಳಿದ್ದಕ್ಕೆ ದೇಶದ 130 ಕೋಟಿ ಜನ ಖುಷಿಯಾಗಿದ್ದಾರೆ ಎಂದ ಪ್ರಧಾನಿ ಮೋದಿ

ಪ್ರಧಾನಿ ಮೋದಿಯವರ ಮನ್ ಕಿ ಬಾತ್‌ (Mann Ki Baat) ಮೂಲಕ ಭಾರತೀಯ ಜನತಾ ಪಕ್ಷವು (BJP) ಹಿಮಾಚಲ ಪ್ರದೇಶದ (Himachal Pradesh) ಎಲ್ಲಾ 68 ವಿಧಾನಸಭಾ ಕ್ಷೇತ್ರಗಳನ್ನು ತಲುಪಲಿದೆ. ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ (BJP President JP Nadda) ಅವರು ಹಿಮಾಚಲದಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ಪ್ರಧಾನಿ ಮೋದಿಯವರ 'ಮನ್ ಕಿ ಬಾತ್' ಅನ್ನು ಆಲಿಸಲಿದ್ದಾರೆ. ಜೆಪಿ ನಡ್ಡಾ ಅವರಲ್ಲದೆ, 5 ಕೇಂದ್ರ ಸಚಿವರಾದ ಜ್ಯೋತಿರಾದಿತ್ಯ ಸಿಂಧಿಯಾ, ಜಿತೇಂದ್ರ ಸಿಂಗ್, ಕಿರಣ್ ರಿಜಿಜು, ಅನುರಾಗ್ ಠಾಕೂರ್, ಭೂಪೇಂದ್ರ ಯಾದವ್ ಮತ್ತು ಮುಖ್ಯಮಂತ್ರಿಗಳಲ್ಲಿ ಜೈ ರಾಮ್ ಠಾಕೂರ್, ಹರಿಯಾಣದ ಮನೋಹರ್ ಲಾಲ್ ಖಟ್ಟರ್ ಮತ್ತು ಉತ್ತರಾಖಂಡದ ಪುಷ್ಕರ್ ಸಿಂಗ್ ಧಾಮಿ ಕೂಡ ಮನ್ ಕಿ ಬಾತ್‌ನಲ್ಲಿ ಭಾಗವಹಿಸಲಿದ್ದಾರೆ. ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷೆ ತೇಜಸ್ವಿ ಸೂರ್ಯ, ಮಹಿಳಾ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷೆ ವಂತಿ ಶ್ರೀನಿವಾಸನ್, ಸಂಬಿತ್ ಪಾತ್ರಾ, ಒಲಿಂಪಿಯನ್ ಸರ್ದಾರ್ ಸಂದೀಪ್ ಸಿಂಗ್ ಮತ್ತು ಅನೇಕ ನಾಯಕರು ಇರಲಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರತನ್ ಟಾಟಾ ಮಲತಾಯಿ, ಲ್ಯಾಕ್‌ಮೆ ಫ್ಯಾಶನ್ ಸಂಸ್ಥಾಪಕಿ ಸೈಮನ್ ಟಾಟಾ ನಿಧನ
ಭಾರತದ 2 ಬಿಲಿಯನ್ ಡಾಲರ್ ಪರಮಾಣು ಜಲಾಂತರ್ಗಾಮಿ ಒಪ್ಪಂದ ಅಂತಿಮಗೊಳಿಸಿದ ಪುಟಿನ್ ಭೇಟಿ