
ಬಿಹಾರ (ಅ.15): ಮೂರನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿನಿಯರಿಗೆ ಅದೇ ಶಾಲೆಯ ಶಿಕ್ಷಕ ಲೈಂಗಿಕ ಕಿರುಕುಳ ನೀಡಿದ ಘಟನೆ ಬಿಹಾರದ ರೋಹ್ತಾಸ್ ಜಿಲ್ಲೆಯ ತಿಲೋತು ಬ್ಲಾಕ್‌ನಲ್ಲಿರುವ ಸೊನೋರಾ ಮಿಡಲ್ ಸ್ಕೂಲ್‌ನಲ್ಲಿ ನಡೆದಿದ್ದು ಶಿಕ್ಷಕನ ಬಂಧಿಸಲಾಗಿದೆ.
ಶಿಕ್ಷಕ ಇಶ್ತಿಯಾಕ್ ಅಹಮದ್ ಬಂಧಿತ ಆರೋಪಿ. 2-3 ನೇ ತರಗತಿಯಲ್ಲಿ ಓದುತ್ತಿರುವ ಬಾಲಕಿಯರೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ ಮಕ್ಕಳು ಪೋಷಕರು ಬಳಿ ತಿಳಿಸಿದ್ದಾರೆ. ಮಕ್ಕಳು ವಿಚಾರ ತಿಳಿಸಿದ ನಂತರ ವಿದ್ಯಾರ್ಥಿಯ ಪೋಷಕರು ಸೋಮವಾರ ಶಾಲೆಗೆ ಆಗಮಿಸಿ ಶಿಕ್ಷಕನ ಪ್ರತಿಭಟನೆ ನಡೆಸಿದರು. ಬಳಿಕ ಆರೋಪಿ ಶಿಕ್ಷಕನನ್ನು ಪೊಲೀಸರು ಬಂಧಿಸಿದ್ದಾರೆ.
ಕೋಲಾರದ ಕಾಮುಕ ಶಿಕ್ಷಕನ ಮೊಬೈಲಲ್ಲಿ ಹೆಣ್ಮಕ್ಕಳ 5000ಕ್ಕೂ ಹೆಚ್ಚು ನಗ್ನ ದೃಶ್ಯಗಳು!
ಘಟನೆ ಹಿನ್ನೆಲೆ:
ದಸರಾ ರಜೆ ಬಳಿಕ ಬಾಲಕಿ ಶಾಲೆಗೆ ಹೋಗಲು ನಿರಾಕರಿಸಿದ್ದಾಳೆ. ಯಾಕೆಂದು ಪೋಷಕರು ಕೇಳಿದಾಗ ಘಟನೆ ಬೆಳಕಿಗೆ ಬಂದಿದೆ. ದಿನನಿತ್ಯ ಶಾಲಾ ಮಕ್ಕಳಿಗೆ ಕಿರುಕುಳ ನೀಡುತ್ತಿದ್ದ ಶಿಕ್ಷಕ. ವಿದ್ಯಾರ್ಥಿನಿಯೋರ್ವಳು ಅನಾರೋಗ್ಯದಿಂದ ಬಳಲುತ್ತಿದ್ದರು ರಜೆ ಕೊಡುವಂತೆ ವಿನಂತಿಸಿದರೂ ರಜೆ ಕೊಡದೇ 'ಐ ಲವ್ ಯು' ಹೇಳುವಂತೆ ಬಾಲಕಿಗೆ ಒತ್ತಡ ಹಾಕಿದ್ದಾನೆಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಯಚೂರು: ಬೃಹತ್ ಕಲ್ಲುಬಂಡೆ ಉರುಳಿಬಿದ್ದು ಮಕ್ಕಳಿಬ್ಬರು ದಾರುಣ ಸಾವು
ಘಟನೆ ಬಗ್ಗೆ ರೋಹ್ತಾಸ್ ಪೊಲೀಸ್ ಅಧೀಕ್ಷಕ ರೋಷನ್ ಕುಮಾರ್ ಮಾತನಾಡಿ, ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಈ ಪ್ರಕರಣದಲ್ಲಿ ತನಿಖೆ ನಡೆಸಲಾಗುತ್ತದೆ ಆರೋಪಿ ವಿರುದ್ಧ ಸಾಕ್ಷ್ಯಾಧಾರಗಳು ಕಂಡುಬಂದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಸದ್ಯ ಬಂಧಿತ ಶಿಕ್ಷಕನ ವಿಚಾರಣೆಗೊಳಪಡಿಸಲಾಗಿದೆ. ಎಂದು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ