ಲೋನ್‌ನಲ್ಲಿ ಮೊಪೆಡ್‌ ಖರೀದಿಸಿದ ಚಾಯ್‌ವಾಲಾ, ಸ್ನೇಹಿತರ ಡಿಜೆ ಪಾರ್ಟಿಗೆ 60 ಸಾವಿರ ಖರ್ಚು!

By Santosh Naik  |  First Published Oct 15, 2024, 6:54 PM IST

ಮಧ್ಯಪ್ರದೇಶ ಮೂಲದ ಚಾಯ್‌ವಾಲಾ ಇತ್ತೀಚೆಗೆ ಲೋನ್‌ನಲ್ಲಿ ಮೊಪೆಡ್‌ ಬೈಕ್‌ ಖರೀದಿ ಮಾಡಿದ್ದರು. ಇದರ ಖುಷಿಯನ್ನು ಹಂಚಿಕೊಳ್ಳಲು ಸ್ನೇಹಿತರಿಗೆ ಡಿಜೆ ಪಾರ್ಟಿ ನೀಡಿದ್ದ. ಇದಕ್ಕಾಗಿಯೇ ಆತನಿಗೆ 60 ಸಾವಿರ ಖರ್ಚಾಗಿದೆ. ಡಿಜೆ ಪಾರ್ಟಿಯಲ್ಲಿ ಬಾಡಿಗೆ ಜೆಸಿಬಿಯನ್ನೂ ತರಿಸಿ ಸಂಭ್ರಮಿಸಿದ್ದ.


ಭೋಪಾಲ್‌ (ಅ.15): ಸಾಮಾನ್ಯವಾಗಿ ಒಂದು ಬೈಕ್‌ ಖರೀದಿ ಮಾಡಿದ್ರೆ ಸ್ನೇಹಿತರಿಗೆ ಸ್ವೀಟ್‌ ಕೊಡಿಸಬಹುದು. ಇನ್ನೂ ಹೆಚ್ಚೆಂದರೆ ಎಣ್ಣೆ ಪಾರ್ಟಿ, ಹೋಟೆಲ್‌ನಲ್ಲಿ ಊಟದ ಪಾರ್ಟಿ ಕೊಡಬಹುದು. ಆದರೆ, ಮಧ್ಯಪ್ರದೇಶದ ಚಾಯ್‌ವಾಲಾ, ಟಿವಿಎಸ್‌ ಎಕ್ಸೆಲ್‌ ಮೊಪೆಡ್‌ ಖರೀದಿ ಮಾಡಿದ್ದಕ್ಕದೆ ಆಗಿರುವ ಸಂಭ್ರಮ ದೇಶಾದ್ಯಂತ ಸುದ್ದಿಯಾಗಿದೆ. ಅದಕ್ಕೆ ಕಾರಣವೂ ಇದೆ. ಟಿವಿಎಸ್‌ ಎಕ್ಸೆಲ್‌ ಮೊಪೆಡ್‌ಅನ್ನು ಸಾಲ ಮಾಡಿ ಖರೀದಿಸಿರುವ ಚಾಯ್‌ವಾಲಾ, ತನ್ನ ಸ್ನೇಹಿತರಿಗೆ ಡಿಜೆ ಪಾರ್ಟಿಗಾಗಿ ಬರೋಬ್ಬರಿ 60 ಸಾವಿರ ರೂಪಾಯಿ ಖರ್ಚು ಮಾಡಿದ್ದಾನೆ. ಅದಲ್ಲದೆ, ಜೆಸಿಬಿ ಕ್ರೇನ್‌ನಲ್ಲಿ ತನ್ನ ದ್ವಿಚಕ್ರ ವಾಹನವನ್ನು ಲಿಫ್ಟ್‌ ಮಾಡಿರುವ ಆತ ತನ್ನ ಕುಟುಂಬ ಹಾಗೂ ಸ್ನೇಹಿತರಿಗೆ ತಾನು ತೆಗೆದುಕೊಂಡಿರುವ ಮೊಪೆಡ್‌ ಬೈಕ್‌ಅನ್ನು ತೋರಿಸಿದ್ದಾನೆ. ಈತನ ಸೆಲಬ್ರೇಷನ್‌ ಹಾಗೂ ಬೈಕ್‌ ತೆಗೆದುಕೊಂಡಿದ್ದಕ್ಕಾಗಿ ನೀಡಿರುವ ಪಾರ್ಟಿ ಈಗ ವೈರಲ್‌ ಆಗಿದೆ.

ವರದಿಯ ಪ್ರಕಾರ, ಮುರಾರಿ ಲಾಲ್ ಕುಶ್ವಾಹಾ ಅವರು ಮಧ್ಯಪ್ರದೇಶದ ಶಿವಪುರಿಯಲ್ಲಿ ಚಹಾ ಮಾರುವ ಕೆಲಸ ಮಾಡುತ್ತಾರೆ. 20,000 ಸಾವಿರ ರೂಪಾಯಿ ಡೌನ್‌ ಪೇಮೆಂಟ್‌ ಮಾಡಿ ಸಾಲದಲ್ಲಿ ಮೊಪೆಡ್‌ ಖರೀದಿ ಮಾಡಿದ್ದಾರೆ. ಆದರೆ, ತಾವು ಮೊಪೆಡ್‌ ಖರೀದಿ ಮಾಡಿದ ಸಂಭ್ರಮವನ್ನು ಮಾತ್ರ ಅಬ್ಬರದಿಂದ ಆಚರಣೆ ಮಾಡಬೇಕು ಎಂದು ಕೊಂಡಿದ್ದಾರೆ. ಡಿಜೆ ಮಾತ್ರವಲ್ಲದೆ, ಜೆಸಿಬಿಯನ್ನು ಡೆಲಿವರಿ ಪಾಯಿಂಟ್‌ನತ್ತ ಕರೆಸಿದ್ದಾರೆ.ಕ್ರೇನ್‌ನಲ್ಲಿ ಮೊಪೆಡ್‌ಅನ್ನು ರಸ್ತೆಯಲ್ಲಿ ಮೆರವಣಿಗೆ ಮಾಡಲಾಗಿದೆ. ಇದಕ್ಕಾಗಿ ದ್ವಿಚಕ್ರ ವಾಹನದ ಡೌನ್‌ ಪೇಮೆಂಟ್‌ಗೆ ಪಾವತಿ ಮಾಡಿದ ಮೂರು ಪಟ್ಟು ಹೆಚ್ಚು ಖರ್ಚಾಗಿದೆ.

Latest Videos

undefined

ಸಂಭ್ರಮಿಸಿದ್ದು ಹೇಗೆ: ಡಿಜೆಯೊಂದಿಗೆ ಮರವಣಿಗೆ ಮಾಡಿದ್ದಲ್ಲದೆ, ಹೂವಿನಿಂದ ಅಲಂಕಾರ ಮಾಡಿದ್ದ ಮೊಪೆಡ್‌ಅನ್ನು ಜೆಸಿಬಿ ಮೇಲೆ ಇರಿಸಲಾಗಿತ್ತು. ಜೆಸಿಬಿ ಮೂಲಕ ತಮ್ಮ ಮೊಪೆಡ್‌ಅನ್ನು ಲಿಫ್ಟ್‌ ಮಾಡಿ ಸ್ನೇಹಿತರಿಗೆ ಹಾಗೂ ಕುಟುಂಬದವರಿಗೆ ತಾನು ಖರೀದಿ ಮಾಡಿದ ಮೊಪೆಡ್‌ಅನ್ನು ತೋರಿಸಿದ್ದಾರೆ. ಡಾನ್ಸ್‌, ಮ್ಯೂಸಿಕ್‌ನೊಂದಿಗೆ ರಸ್ತೆಯಲ್ಲಿ ಸಂಭ್ರಮಿಸಿದ ಮುರಾರಿ ಲಾಲ್‌ಗೆ ಮೆರವಣಿಗೆಯ ವೇಳೆ ಈತನ ಆಪ್ತರು ಹಾಗೂ ದಾರಿಹೋಕರು ಕೂಡ ಜೊತೆಯಾದರು.

100 ಕಿ.ಮೀ ವೇಗದಲ್ಲಿ ಚಲಿಸುತ್ತಿದ್ದ ಟ್ರೇನ್‌ನ ಎಮರ್ಜೆನ್ಸಿ ಕಿಟಕಿಯಿಂದ ಹೊರಬಿದ್ದ ಮಗು, ಪ್ರಾಣಾಪಾಯದಿಂದ ಪಾರು!

ತನ್ನ ಮಕ್ಕಳ ಖುಷಿಗಾಗಿ ಈ ರೀತಿ ಮಾಡಿದ್ದೇನೆ ಎಂದು ಮುರಾರಿ ಲಾಲ್‌ ಹೇಳಿದ್ದಾರೆ. 'ನನಗೆ ಖುಷಿ ಏನೆಂದರೆ, ಇದೆಲ್ಲವನ್ನೂ ನನ್ನ ಕುಟುಂಬಕ್ಕಾಗಿ ಮಾಡಿದ್ದೇವೆ. ರಸ್ತೆಯುದ್ದಕ್ಕೂ ಮಾಡಿದ ಸೆಲ್ರಬೇಷನ್‌ ನನ್ನ ಮಕ್ಕಳ ಮುಖದಲ್ಲಿ ನಗುವಿಗೆ ಕಾರಣವಾಗಿದೆ' ಎಂದು ಮೂರು ಮಕ್ಕಳಾದ ಪ್ರಿಯಾಂಕಾ, ರಾಮ್‌ ಹಾಗೂ ಶ್ಯಾಮ್‌ ತಂದೆಯಾಗಿರುವ ಮುರಾರಿ ಲಾಲ್‌ ಹೇಳಿದ್ದಾರೆ. ಮೊಪೆಡ್‌ ಖರೀದಿ ಮಾಡುವ ದಿನ ಮನೆಯಿಂದಲೇ ಸ್ನೇಹಿತರೊಂದಿಗೆ ಡಿಜೆ ಮೆರವಣಿಗೆಯಲ್ಲಿ ಮುರಾರಿ ಲಾಲ್‌ ತೆರಳಿದ್ದ. ಶೋ ರೂಮ್‌ನಲ್ಲಿ ಮೊಪೆಡ್‌ ಪಡೆದುಕೊಂಡ ಬಳಿಕವೂ ಮೆರವಣಿಗೆ ನಡೆದಿದೆ. ಮೊಪೆಡ್‌ ಖರೀದಿ ಮಾಡಿದ ಬಳಿಕ ಅದಕ್ಕೆ ಹಾರ ಹಾಕಿ ಮುರಾರಿ ಲಾಲ್‌ ಸೆಲ್ಫಿ ತೆಗೆದುಕೊಂಡಿದ್ದಾರೆ.

ಸತ್ತ ವ್ಯಕ್ತಿಗಳು ಕನಸಿನಲ್ಲಿ ಬಂದು ಅಳಬಾರದಂತೆ, ಯಾಕೆ ಗೊತ್ತಾ?

ಇನ್ನು ಮುರಾರಿ ಲಾಲ್‌ ಅವರ ಪಾರ್ಟಿ ಸಾರ್ವಜನಿಕರಿಗೆ ಯಾವುದೇ ಸಮಸ್ಯೆ ಆಗದ ಕಾರಣ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಆದರೆ, ಡಿಜೆ ವಸ್ತುವನ್ನು ಮಾತ್ರವೇ ವಶಪಡಿಸಿಕೊಂಡಿದ್ದಾರೆ. ಮುರಾರಿ ಲಾಲ್‌ ಹಾಗೂ ಡಿಜೆ ವ್ಯಕ್ತಿಯ ವಿರುದ್ಧ ಶಬ್ದಮಾಲಿನ್ಯದ ಕೇಸ್‌ ದಾಖಲಿಸಿದ್ದಾರೆ. ಹಾಗಂತ ಇದು ಮುರಾರಿ ಅವರ ಮೊದಲ ಸೆಲಬ್ರೇಷನ್‌ ಅಲ್ಲ. ಮೂರು ವರ್ಷಗಳ ಹಿಂದೆ ಮಗಳಿಗಾಗಿ ಲೋನ್‌ನಲ್ಲಿ 12500 ರೂಪಾಯಿಗೆ ಮೊಬೈಲ್‌ ಖರೀದಿ ಮಾಡಿದ್ದ. ಈ ಖುಷಿಗಾಗಿ ನೀಡಿದ ಪಾರ್ಟಿಗೆ 25 ಸಾವಿರ ರೂಪಾಯಿ ಖರ್ಚಾಗಿತ್ತು.
 

click me!