ಮರುಕಳಿಸುತ್ತಿದೆ ಭಾರತದ ಮತ್ತೊಂದು ಶ್ರೀಮಂತ ಪರಂಪರೆ: ಕಡಲ ತಾಣಕ್ಕೆ ಮರುಜೀವ- ಸಲಹೆಗೆ ಕೋರಿದ ಪ್ರಧಾನಿ

By Suchethana DFirst Published Oct 15, 2024, 7:36 PM IST
Highlights

ಗುಜರಾತಿನ ಲೋಥಾಲ್‌ನಲ್ಲಿರುವ ರಾಷ್ಟ್ರೀಯ ಸಮುದ್ರ ಪಾರಂಪರಿಕ ಸಂಕೀರ್ಣ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಮುಂದಾಗಿದ್ದು, ಇದಕ್ಕೆ ಅರ್ಹರಿಂದ ಸಲಹೆ ಕೇಳಲಾಗಿದೆ.
 

ಗುಜರಾತಿನ ಲೋಥಾಲ್‌ನಲ್ಲಿ ರಾಷ್ಟ್ರೀಯ ಸಮುದ್ರ ಪಾರಂಪರಿಕ ಸಂಕೀರ್ಣ ಅಭಿವೃದ್ಧಿಗೆ ಕೆಲವು ದಿನಗಳ ಹಿಂದೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿತ್ತು.  ಇದರ ಬೆನ್ನಲ್ಲೇ ಇದೀಗ ಪ್ರಧಾನಿ ನರೇಂದ್ರ  ಮೋದಿಯವರು, ಲಿಂಕ್ಡ್‌ಇನ್ ಪೋಸ್ಟ್‌ನಲ್ಲಿ ಕುತೂಹಲದ ವಿಷಯವನ್ನು ಶೇರ್​ ಮಾಡಿಕೊಂಡಿದ್ದಾರೆ. ಈ ಯೋಜನೆಯು ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳಲ್ಲಿ ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ ಎಂದಿರುವ ಪ್ರಧಾನಿ, ಈ ಪಾರಂಪರಿಕ ತಾಣದ ಕುರಿತು ಕೆಲವೊಂದು ಮಾಹಿತಿಗಳನ್ನು ನೀಡಿದ್ದಾರೆ.   "ನಮ್ಮ ಸರ್ಕಾರವು ರೋಮಾಂಚಕ ರಾಷ್ಟ್ರೀಯ ಕಡಲ ಪರಂಪರೆಯ ಸಂಕೀರ್ಣವನ್ನು ನಿರ್ಮಿಸಲು ನಿರ್ಧರಿಸಿದೆ, ಇದು ನಾಗರಿಕತೆಯ ಇತಿಹಾಸದ ಬಗ್ಗೆ ನಮ್ಮ ತಿಳಿವಳಿಕೆಯನ್ನು ಹೆಚ್ಚಿಸುತ್ತದೆ. ಈ ಹೊಸ ಯೋಜನೆಯು ನಿಸ್ಸಂದೇಹವಾಗಿ ಇತಿಹಾಸ ಉತ್ಸಾಹಿಗಳು ಮತ್ತು ಪ್ರವಾಸಿಗರಲ್ಲಿ ಉತ್ಸಾಹವನ್ನು ಉಂಟುಮಾಡುತ್ತದೆ. ಈ ಸಂಕೀರ್ಣವು ಡಾಕ್ ಸಿಟಿಯ ಮಿನಿ-ಪ್ರತಿರೂಪವಾಗಿ 77 ಮೀಟರ್ ಎತ್ತರದ ಐಕಾನಿಕ್ ಲೈಟ್‌ಹೌಸ್ ಮ್ಯೂಸಿಯಂ ಅನ್ನು ಪುನರುಜ್ಜೀವನಗೊಳಿಸುತ್ತದೆ ಎಂದು ಹೇಳಿದ್ದಾರೆ.
 
ಪ್ರಧಾನಿಯವರು ತಮ್ಮ ಪೋಸ್ಟ್‌ನಲ್ಲಿ ಲೋಥಲ್‌ನ ನಾಗರಿಕತೆಯ ಮಹತ್ವವನ್ನು ಸೂಚಿಸಿದ್ದಾರೆ. "ಇದು ಅಹಮದಾಬಾದ್‌ನ ಸಮೀಪದಲ್ಲಿದೆ. ಲೋಥಾಲ್, ಪ್ರಪಂಚದ ಅತ್ಯಂತ ಹಳೆಯ ನೌಕಾನೆಲೆಗೆ ನೆಲೆಯಾಗಿದೆ. ಇದು ಒಂದು ಕಾಲದಲ್ಲಿ ನಾಗರಿಕತೆ ಮತ್ತು  ವ್ಯಾಪಾರದ ರೋಮಾಂಚಕ ಸಮ್ಮಿಳನ ಪ್ರದೇಶವಾಗಿತ್ತು. ಇಲ್ಲಿ ನಡೆದಿರುವ ಉತ್ಖನನಗಳಿಂದ ಈ ಭವ್ಯ ಪರಂಪರೆಯ ಬಗ್ಗೆ ತಿಳಿದುಕೊಳ್ಳಬಹುದು.  ಸಾವಿರಾರು ವರ್ಷಗಳ ಹಿಂದೆ ನಿರ್ಮಿಸಲಾದ ಪ್ರಮುಖ ಸಮುದ್ರದ ಕೇಂದ್ರವಾಗಿ ಲೋಥಾಲ್‌ನ ಪಾತ್ರವು ನಮ್ಮ ಪೂರ್ವಜರ ಜಾಣ್ಮೆಯನ್ನು ಎತ್ತಿ ತೋರಿಸುತ್ತದೆ ಮತ್ತು ಆಧುನಿಕ ವೀಕ್ಷಕರನ್ನು ಬೆರಗುಗೊಳಿಸುತ್ತದೆ ಎಂದಿದ್ದಾರೆ. ಸ್ವಾತಂತ್ರ್ಯದ ನಂತರದ ದಶಕಗಳಲ್ಲಿ ವಿಷಾದನೀಯವಾಗಿ, ನಮ್ಮ ಇತಿಹಾಸದ ಹಲವು ಅಂಶಗಳನ್ನು  ಮತ್ತು ನಮ್ಮ ಐತಿಹಾಸಿಕ ಸ್ಥಳಗಳ ಮೇಲೆ  ನಿರ್ಲಕ್ಷ್ಯ ತೋರಲಾಗಿದೆ.  ನಮ್ಮ ಶ್ರೀಮಂತ ಭೂತಕಾಲದ ವೈಭವವು ನೆನಪಿನಿಂದ ಮರೆಯಾಗುತ್ತಿದೆ. ಆದಾಗ್ಯೂ, ಕಳೆದ ಹತ್ತು ವರ್ಷಗಳಲ್ಲಿ ದೇಶದ ಸಾಂಸ್ಕೃತಿಕ  ಶ್ರೀಮಂತಿಕೆಯನ್ನು ಎತ್ತಿ ಹಿಡಿಯಲು ಪ್ರಯತ್ನಿಸುತ್ತಿದ್ದೇವೆ. ಈ ನಿಟ್ಟಿನಲ್ಲಿ ಈಗ ಈ ಹೊಸ ಕಾರ್ಯ ಕೈಗೊಳ್ಳಲಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ. 

ರಶ್ಮಿಕಾ ಮಂದಣ್ಣ ಈಗ ಸೈಬರ್ ಕ್ರೈಂ ರಾಷ್ಟ್ರೀಯ ರಾಯಭಾರಿ! ಲೈವ್​ನಲ್ಲಿ ಬಂದ ನಟಿ ಹೇಳಿದ್ದೇನು?
 
ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳಲ್ಲಿ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸುವುದು ಎಲ್ಲರ ಪ್ರಮುಖ ಕರ್ತವ್ಯ ಎಂದಿರುವ ಅವರು,  "ಪ್ರವಾಸೋದ್ಯಮವು ಅಭಿವೃದ್ಧಿ ಹೊಂದಿದಾಗ, ಸ್ಥಳೀಯ ಮಟ್ಟದಿಂದ ಹಿಡಿದು ದೇಶದ ಮಟ್ಟದವರೆಗಿನ ಆದಾಯವು ಹೆಚ್ಚಾಗುತ್ತದೆ ಎಂದಿದ್ದಾರೆ. ಇದು ಉದ್ಯೋಗ ಸೃಷ್ಟಿಗೂ ನೆರವಾಗಲಿದೆ ಎಂದಿರುವ ಅವರು, ವೃತ್ತಿಪರರು ಮತ್ತು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೊಸ ಅವಕಾಶಗಳನ್ನು ಅನ್ವೇಷಿಸುವವರು  ಆಲೋಚನೆಗಳನ್ನು ತಮ್ಮೊಂದಿಗೆ ಹಂಚಿಕೊಳ್ಳುವಂತೆ ಕೋರಿಕೊಂಡಿದ್ದಾರೆ.  ಮುಂದಿನ ಪೀಳಿಗೆಗೆ ನಮ್ಮ ಶ್ರೀಮಂತ ಪರಂಪರೆಯನ್ನು ಸಂರಕ್ಷಿಸುವ ಮೂಲಕ ನಾವು ಬಲವಾದ ಆರ್ಥಿಕತೆಗೆ ಕೊಡುಗೆ ನೀಡುತ್ತೇವೆ ಎಂದಿದ್ದಾರೆ.  

Latest Videos

ಬಂದರುಗಳು, ಶಿಪ್ಪಿಂಗ್ ಮತ್ತು ಜಲಮಾರ್ಗಗಳ ಸಚಿವಾಲಯದ ಮಹತ್ವದ ಉಪಕ್ರಮವಾದ ನ್ಯಾಷನಲ್ ಮ್ಯಾರಿಟೈಮ್ ಹೆರಿಟೇಜ್ ಕಾಂಪ್ಲೆಕ್ಸ್ (NMHC) ಅನ್ನು ಬಹು ಹಂತಗಳಲ್ಲಿ ಪೂರ್ಣಗೊಳಿಸಲು ನಿರ್ಧರಿಸಲಾಗಿದೆ. ಈ ತಿಂಗಳ ಆರಂಭದಲ್ಲಿ, ಕೇಂದ್ರ ಸಚಿವ ಸಂಪುಟವು ಹಂತ 1B ಮತ್ತು ಹಂತ 2 ರ ಪ್ರಗತಿಗೆ ತಾತ್ವಿಕ ಅನುಮೋದನೆಯನ್ನು ನೀಡಿತು, ಸ್ವಯಂಪ್ರೇರಿತ ಸಂಪನ್ಮೂಲಗಳು ಮತ್ತು ಕೊಡುಗೆಗಳ ಮೂಲಕ ನಿಧಿಸಂಗ್ರಹಕ್ಕೆ ಅವಕಾಶ ನೀಡಿತು. ಅಗತ್ಯ ಹಣವನ್ನು ಪಡೆದುಕೊಂಡ ನಂತರ ಈ ಹಂತಗಳ ನಿರ್ಮಾಣ ಪ್ರಾರಂಭವಾಗುತ್ತದೆ.

ಒಂದೇ ಸಲಕ್ಕೆ 11 ಸಾವಿರ ವಡಾಪಾವ್​ ಪಾರ್ಸೆಲ್​​: ಗಿನ್ನೆಸ್ ದಾಖಲೆ ಬರೆದ ಸ್ವಿಗ್ಗಿ- ಸಿಂಘಮ್​​ ಅಗೇನ್​ ಚಿತ್ರ ತಂಡ ಸಾಥ್​

click me!