ಮದಿರೆಯ ಮತ್ತು... ನವ ವಧುವಿನ ಬೆಡ್‌ರೂಮ್‌ಗೆ ಪೊಲೀಸ್‌ ದಾಳಿ ... ತಲೆ ತಿರುಗಿ ಬಿದ್ದ ಅತ್ತೆ

Suvarna News   | Asianet News
Published : Dec 20, 2021, 08:09 PM IST
ಮದಿರೆಯ ಮತ್ತು... ನವ ವಧುವಿನ ಬೆಡ್‌ರೂಮ್‌ಗೆ ಪೊಲೀಸ್‌ ದಾಳಿ ... ತಲೆ ತಿರುಗಿ ಬಿದ್ದ ಅತ್ತೆ

ಸಾರಾಂಶ

ನವ ವಧುವಿನ ಕೋಣೆಯಲ್ಲಿ ಪೊಲೀಸರ ತಲಾಶ್‌ ತಲೆ ತಿರುಗಿ ಬಿದ್ದ ವಧುವಿನ ಅತ್ತೆ ಮದ್ಯದ ಬಾಟಲ್‌ ಇರುವ ಶಂಕೆಯ ಮೇಲೆ ದಾಳಿ

ಬಿಹಾರ(ಡಿ.20):  ಮನೆಯಲ್ಲಿ ಮದ್ಯ ಶೇಖರಿಸಿಡಲಾಗಿದೆ ಎಂಬ ಶಂಕೆಯ ಮೇರೆಗೆ ನವ ವಧುವಿನ ಬೆಡ್‌ ರೂಮ್‌ಗೆ ಬಿಹಾರ ಪೊಲೀಸರು ದಾಳಿ ನಡೆಸಿದ್ದು, ಇದರಿಂದ ದಂಗಾದ ವಧುವಿನ ಅತ್ತೆ ತಲೆ ತಿರುಗಿ ಬಿದ್ದಂತಹ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದೆ. ಬಿಹಾರದಲ್ಲಿ 2016 ರ ಎಪ್ರಿಲ್‌ನಲ್ಲಿ ಮದ್ಯ ಮಾರಾಟ ಹಾಗೂ ಪೂರೈಕೆಯನ್ನು ನಿಷೇಧಿಸಲಾಗಿದೆ. ರಾಜ್ಯದ ಮಹಿಳೆಯರ ಒತ್ತಾಯದ ಮೇರೆಗೆ ಮದ್ಯವನ್ನು ನಿಷೇಧಿಸಲಾಗಿದೆ ಎಂದು ಬಿಹಾರ ಸಿಎಂ ನಿತೀಶ್‌ ಕುಮಾರ್‌ (Nitish Kumar) ಹೇಳಿಕೆ ನೀಡಿದ್ದರು. ಆದರೆ ಈಗ ಬಿಹಾರ ಪೊಲೀಸರು ನವ ವಿವಾಹಿತರ ಕೋಣೆಗೆ ನುಗ್ಗಿ ಹುಡುಕಾಟ ನಡೆಸುತ್ತಿದ್ದಾರೆ. 

ಗುರುವಾರ(ಡಿ. 16) ಬಿಹಾರದ ವೈಶಾಲಿ ಪೊಲೀಸರು(Vaishali police) ಹಾಜಿಪುರ( Hajipur) ನಗರದ ಹತ್‌ಸರ್‌ಗಂಜ್ (Hathsarganj) ಪ್ರದೇಶದಲ್ಲಿ ಇರುವ ಶೀಲಾ ದೇವಿ (Sheela Devi) ಅವರ ಮನೆ ಮೇಲೆ  ದಾಳಿ ನಡೆಸಿದ್ದಾರೆ. ಈ ವೇಳೆ ಶೀಲಾ ಅವರ ಮಗನಿಗೆ ಮದುವೆ ಮಾಡಿ ಸೊಸೆಯನ್ನು ಮನೆ ಹತ್ತಿಸಿಕೊಂಡು ಕೇವಲ 5 ದಿನಗಳಾಗಿತ್ತಷ್ಟೇ. ಪೊಲೀಸ್‌ ಸಿಬ್ಬಂದಿಯ ತಂಡ ದಾಳಿ ನಡೆಸುವ ವೇಳೆ ಇವರ ಹೊಸ ಸೊಸೆ ಪೂಜಾ ಕುಮಾರಿ (Pooja Kumari) ಕೋಣೆಯಲ್ಲೇ ಇದ್ದರಂತೆ. ಆದರೆ ಪೊಲೀಸ್‌ ತಂಡದಲ್ಲಿ ಮಹಿಳಾ ಸಿಬ್ಬಂದಿಯೂ ಇಲ್ಲದೇ ನವ ವಧುವಿನ ಕೋಣೆಗೆ ಪೊಲೀಸರು ಪ್ರವೇಶಿಸಿ ಎಲ್ಲವನ್ನೂ ಹುಡುಕಾಡಿದ್ದಾರೆ ಎಂದು ಮನೆಯವರು ಆರೋಪಿಸಿದ್ದಾರೆ. 

Marriage Fraud: 60 ವರ್ಷದ ಮುದುಕನ ಮದುವೆಗೆ ತಂದಿದ್ದ ಸೀರೆ, ತಾಳಿ ಜತೆ ವಧು ಪರಾರಿ..!

ಅವರು ಹಾಸಿಗೆ, ಬೀರು, ಸೂಟ್‌ಕೇಸ್‌ಗಳು ಮತ್ತು ಡ್ರಾಯರ್‌ಗಳನ್ನು ಒಳಗೊಂಡಂತೆ ಇಡೀ ಕೋಣೆಯನ್ನೇ ತಲಾಶ್‌ ಮಾಡಿದ್ದಾರೆ. ಏನನ್ನು ಹುಡುಕುತ್ತಿದ್ದೀರೆಂದು ನಾನು ಅವರನ್ನು ಕೇಳಿದಾಗ ಅವರು ಮೌನವಾಗಿರಲು ನನಗೆ ಅಸಭ್ಯವಾಗಿ ಹೇಳಿದರು. ನಂತರ ಅವರು ನಿಮ್ಮ ರೂಮಿನಲ್ಲಿ ಮದ್ಯದ ಬಾಟಲಿ ಇದ್ದು, ಅದನ್ನು ಹುಡುಕುತ್ತಿರುವುದಾಗಿ ನನಗೆ ತಿಳಿಸಿದರು ಎಂದು ಪೂಜಾ ನಂತರ ಹಾಜಿಪುರದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದರು.
ಈ ನಡುವೆ ಪೊಲೀಸರು ಮನೆಗೆ ದಾಳಿ ಮಾಡಿದ್ದರಿಂದ ಮುಜುಗರಕ್ಕೊಳಗಾದ ವಧುವಿನ ಅತ್ತೆ ಅಲ್ಲೇ ತಲೆ ತಿರುಗಿ ಬಿದ್ದರು ಎಂದು ತಿಳಿದು ಬಂದಿದೆ. ನಮ್ಮ ಅತ್ತೆ ಪ್ರಜ್ಞಾ ಶೂನ್ಯರಾಗಿ ಬಿದ್ದಿದ್ದರೂ ಪೊಲೀಸರ ಈ ಅಮಾನವೀಯ ವರ್ತನೆ ಮುಂದುವರಿದಿತ್ತು. ಅವರು ನಮ್ಮ ಮನೆಯಲ್ಲಿ ಶೋಧ ನಡೆಸುತ್ತಲೇ ಇದ್ದರು ಎಂದು ಪೂಜಾ ಆರೋಪಿಸಿದ್ದಾರೆ. 

Liquor price hike in US: ಅಮೆರಿಕದಲ್ಲಿ ಹಣದುಬ್ಬರ ಮಾತ್ರವಲ್ಲ, ಮದ್ಯ ಬೆಲೆಯಲ್ಲೂ ಏರಿಕೆ!

ಪೊಲೀಸರ ದಾಳಿಯ ನಂತರ ಸ್ಥಳೀಯರ ಮುಂದೆ ನಾವು ತಲೆ ತಗ್ಗಿಸಿ ನಡೆಯುವಂತಾಗಿದೆ. ನಮ್ಮ ಕುಟುಂಬದಲ್ಲಿ ಯಾರೂ ಕೂಡ ಮದ್ಯ ಸೇವಿಸಿದ ದಾಖಲೆ ಇಲ್ಲ.  ಹಾಗಿದ್ದೂ ಪೊಲೀಸರು ಯಾವುದೇ ಸರ್ಚ್‌ ವಾರೆಂಟ್‌ ಇಲ್ಲದೇ ನಮ್ಮ ಮನೆಗೆ ನುಗ್ಗಿ ಶೋಧ ನಡೆಸಿದ್ದಾರೆ ಎಂದು ಶೀಲಾ ದೇವಿ ಆರೋಪಿಸಿದ್ದಾರೆ. 
ಆದರೆ ವೈಶಾಲಿ ಎಸ್‌ಎಸ್‌ಪಿ (Vaishali SSP) ಮನೀಶ್‌ ಕುಮಾರ್‌ (Maneesh Kumar) ಈ ಘಟನೆ ಬಗ್ಗೆ ಉತ್ತರಿಸಲು ನಿರಾಕರಿಸಿದ್ದಾರೆ.  ಇದೇ ತಿಂಗಳ ಆರಂಭದಲ್ಲಿ ಬಿಹಾರ ಪೊಲೀಸರ ತಂಡ ಪಾಟ್ನಾದಲ್ಲೂ ನವ ವಧುವಿನ ಕೋಣೆಗೆ ನುಗ್ಗಿ ಮದ್ಯಕ್ಕಾಗಿ ಶೋಧ ನಡೆಸಿತ್ತು. ಪೊಲೀಸರ ಈ ಕ್ರಮಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. 

ಈ ನಡುವೆ ಬಿಹಾರದ ಮಧುಬಾನಿ (Madhubani) ಯಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಬಿಹಾರ ಸಿಎಂ ನಿತೀಶ್‌ ಕುಮಾರ್‌ (Nitish Kumar), ರಾಜ್ಯದಲ್ಲಿ ಮದ್ಯಪಾನ ನಿಷೇಧವನ್ನು ಮಹಿಳೆಯರ ಒತ್ತಾಯದ ಕಾರಣಕ್ಕೆ ಮಾಡಲಾಯಿತು. ಇದನ್ನು ಮಹಿಳೆಯರು ಮರೆಯುವಂತಿಲ್ಲ ಎಂದು ಹೇಳಿದರು. ಮಹಿಳೆಯರು ಮುಂದೆ ಬಂದು ಮದ್ಯಪಾನದ ವಿರುದ್ಧ ಹಾಗೂ ಮಾರಾಟಗಾರರ ವಿರುದ್ಧ ಹೋರಾಡುವಂತೆ ನಾವು ಮನವಿ ಮಾಡುತ್ತೇವೆ. ಇವತ್ತು ಮಹಿಳಾ ಸಬಲೀಕರಣ ಹೆಚ್ಚಾಗಿದೆ. ನಿಮಗಾಗಿ ಹಲವು ಯೋಜನೆಗಳಿದ್ದು ಈಗ ನಿಮ್ಮ ಶಕ್ತಿ ಹೆಚ್ಚಿದೆ ಎಂದರು. ಎಲ್ಲೇ ಮದ್ಯ ಸೇವನೆ ಹಾಗೂ ಮಾರಾಟ ಕಂಡು ಬಂದಲ್ಲಿ ಅದರ ವಿರುದ್ಧ ಹೋರಾಡಿ ಪೊಲೀಸರು ನಿಮ್ಮ ಜೊತೆಗಿದ್ದಾರೆ ಎಂದು ನಿತೀಶ್‌ ಹೇಳಿದ್ದರು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮೆಹೆಂದಿಯಾಗಿತ್ತು, ಆದರೆ ಮದುವೆಯಾಗಲ್ಲ: ಕೊನೆಗೂ Palash Muchhal ಜೊತೆಗಿನ ಸಂಬಂಧಕ್ಕೆ ತೆರೆ ಎಳೆದ Smriti Mandhana
ಮನೆಯಲ್ಲಿ ಒಂದು ರೂಪಾಯಿ ಇಲ್ಲ ಆದ್ರೂ ಸಿಸಿಟಿವಿ ಯಾಕೆ ಹಾಕಿದ್ರಿ: ಸಿಕ್ಕಿದ್ದನ್ನು ದೋಚಿ ಪತ್ರ ಬರೆದಿಟ್ಟು ಹೋದ ಕಳ್ಳ