ಬಿಜ್ಲಿ ಬಿಜ್ಲಿ ಹಾಡಿಗೆ ಸೊಂಟ ಬಳುಕಿಸಿದ ಅಪ್ಪ ಮಗಳು... ವಾಹ್ ಎಂದ ನೆಟ್ಟಿಗರು

Suvarna News   | Asianet News
Published : Dec 20, 2021, 05:35 PM IST
ಬಿಜ್ಲಿ ಬಿಜ್ಲಿ ಹಾಡಿಗೆ ಸೊಂಟ ಬಳುಕಿಸಿದ ಅಪ್ಪ ಮಗಳು... ವಾಹ್ ಎಂದ ನೆಟ್ಟಿಗರು

ಸಾರಾಂಶ

ಅಪ್ಪನೊಂದಿಗೆ ಪುಟ್ಟ ಬಾಲೆಯ ಜಬರ್‌ದಸ್ತ್‌ ಡಾನ್ಸ್‌ ಇನ್ಸ್ಟಾಗ್ರಾಮ್‌ನಲ್ಲಿ ಧೂಳೆಬ್ಬಿಸಿದ ವಿಡಿಯೋ ಒಂದು ಮಿಲಿಯನ್‌ ಜನರಿಂದ ವಿಡಿಯೋ ವೀಕ್ಷಣೆ

ನವದೆಹಲಿ(ಡಿ.20):  ನೀವು  63 ವರ್ಷದ ಅಜ್ಜಿಯೊಬ್ಬರ ಜಬರ್‌ದಸ್ತ್‌ ಡಾನ್ಸ್ ವೊಂದನ್ನು ಈಗಾಗಲೇ ಇಂಟರ್‌ನೆಟ್‌ ನಲ್ಲಿ ನೋಡಿರಬಹುದು. ಈಗ ಅಪ್ಪ ಹಾಗೂ ಪುಟ್ಟ ಮಗಳು ಜೊತೆಯಾಗಿ ಸಖತ್‌ ಡಾನ್ಸ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಸುಂಟರಗಾಳಿ ಎಬ್ಬಿಸಿದ್ದಾರೆ. ಈ ಹಿಂದೆ ಡಾನ್ಸ್‌ ಮಾಡಿದ್ದ ಅಜ್ಜಿಯೊಬ್ಬರು ವಯಸ್ಸು ಕೇವಲ ಸಂಖ್ಯೆಯಷ್ಟೇ ಎಂಬುದನ್ನು ಸಾಬೀತುಪಡಿಸಿದ್ದರು. 

ಹಾರ್ಡಿ ಸಂಧು ಅವರ ಟ್ರೆಂಡಿಂಗ್‌ನಲ್ಲಿ ಇರುವ ಹಾಡು,  ಬಿಜ್ಲಿ ಬಿಜ್ಲಿ (Bijlee Bijlee), ಹಾಡಿಗೆ ಈ ಅಪ್ಪ ಮಗಳ ಡಾನ್ಸ್‌ನ ವಿಡಿಯೋ ಮತ್ತೊಂದು ಸೇರ್ಪಡೆ. ಅಪ್ಪ ಮಗಳು ಇಬ್ಬರು ಈ ಹಾಡಿಗೆ ಸಖತ್‌ ಸ್ಟೆಪ್‌ ಹಾಕುತ್ತಿದ್ದಾರೆ. ಈ ವಿಡಿಯೋದ ಮತ್ತೊಂದು ವಿಶೇಷ ಎಂದರೆ ಈ ಇಬ್ಬರೂ ಭಾರತೀಯರು ಅಲ್ಲ ಎನ್ನುವುದು ಇದರಿಂದ ಹಾರ್ಡಿ ಸಂಧು (Harrdy Sandhu) ಅವರ ಬಿಜ್ಲಿ ಬಿಜ್ಲಿ ಹಾಡು ಅಂತಾರಾಷ್ಟ್ರೀಯ (International) ಮಟ್ಟದಲ್ಲಿ ಹಿಟ್‌ ಆಗಿದೆ ಎಂಬುದರಲ್ಲಿ ಎರಡು ಮಾತಿಲ್ಲ. 

 

ಪಾಬ್ಲೋ ( Pablo) ಮತ್ತು ವೆರೋನಿಕಾ (Veronica) ಎಂಬುವರು ತಮ್ಮ ಇನ್‌ಸ್ಟಾಗ್ರಾಮ್ (Instagram) ಖಾತೆಯಲ್ಲಿ ಈ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಇದರಲ್ಲಿ ಅವರು ಹಾರ್ಡಿ ಸಂಧು ಅವರ ಬಿಜ್ಲಿ ಬಿಜ್ಲಿ ಹಾಡಿಗೆ  ನೃತ್ಯ ಮಾಡುವುದನ್ನು ಕಾಣಬಹುದು. ವೀಡಿಯೊವನ್ನು ಡಿಸೆಂಬರ್ 17 ರಂದು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಲಾಗಿದೆ ಮತ್ತು ಇದುವರೆಗೆ 1 ಮಿಲಿಯನ್ ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. 

Social Media Upload| ಸಾಲ ವಾಪಸ್ ಕೊಡದ್ದಕ್ಕೆ ಬೆತ್ತಲಾಗಿಸಿ ಡ್ಯಾನ್ಸ್ ಮಾಡಿಸಿದ ಜ್ಯೋತಿಷಿ!

ವೀಡಿಯೊದಲ್ಲಿ, ಪಾಬ್ಲೋ ತನ್ನ ಮಗಳು ವೆರೋನಿಕಾ ಜೊತೆ ಬಿಜ್ಲಿ ಬಿಜ್ಲಿ ಹಾಡಿಗೆ ಹುಕ್ ಸ್ಟೆಪ್ ಮಾಡುವುದನ್ನು ಕಾಣಬಹುದು. ಇಬ್ಬರೂ ತಮ್ಮ ಹೆಜ್ಜೆಗಳನ್ನು ಸರಿಸಮಗೊಳಿಸಲು  ಕನ್ನಡಿಯಲ್ಲಿ ನೋಡುತ್ತಾ ಡಾನ್ಸ್ ಮಾಡುವ ದೃಶ್ಯ ಈ ವಿಡಿಯೋದಲ್ಲಿದೆ. ಇದಕ್ಕೆ ನೆಟ್ಟಿಗರು ಕೂಡ ತುಂಬಾ ಮುದ್ದಾಗಿ ಕಾಮೆಂಟ್‌ ಮಾಡಿದ್ದಾರೆ. ನೀವಿಬ್ಬರೂ ತುಂಬಾ ಕ್ಯೂಟ್ ಆಗಿ ಡಾನ್ಸ್‌ ಮಾಡಿದ್ದೀರಾ,  ನೀವಿಬ್ಬರು ಉತ್ತಮವಾದ ಅಪ್ಪ ಮಗಳು, ನಿಮಗೆ ಭಾರತದಿಂದ ಪ್ರೀತಿಯನ್ನು ಕಳುಹಿಸುತ್ತಿದ್ದೇವೆ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ. 

ಮೊನ್ನೆಯಷ್ಟೇ ಸ್ಪೈಸ್‌ ಜೆಟ್‌ (SpiceJet Air) ಗಗನಸಖಿಯೊಬ್ಬರು ಧವನಿ ಭಾನುಶಾಲಿ(Dhvani Bhanushali) ಅವರ ಮೆರಾ ಯಾರ್‌(Mera Yaar) ಹಾಡಿಗೆ ಖಾಲಿ ವಿಮಾನದಲ್ಲಿ ಜಬರ್‌ದಸ್ತ್‌ ಆಗಿ ನೃತ್ಯ ಮಾಡಿದ್ದು  ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು. ಹಿಂದೆಯೂ ಈ ಸ್ಪೈಸ್‌ಜೆಟ್‌ ಗಗನಸಖಿ ಉಮಾ ಮೀನಾಕ್ಷಿ (Uma Meenakshi), ನವ್ರೈ ಮಾಜಿ ಹಾಗೂ ಲೇಜಿ ಲಾಡ್‌ ಹಾಡುಗಳಿಗೆ  ನೃತ್ಯ ಮಾಡಿ ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದರು. ಅವುಗಳಿಗೂ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು. ಈಗ ಮಾಡಿರುವ ವಿಡಿಯೋದಲ್ಲಿ ಈ ಗಗನಸಖಿ ಧವನಿ ಭಾನುಶಾಲಿ ( Dhvani Bhanushali) ಹಾಗೂ ಆಶ್‌ ಕಿಂಗ್‌ (Ash King) ಅವರ ಮೆರಾ ಯಾರ್‌ ಹಾಡಿಗೆ  ಡಾನ್ಸ್‌ ಮಾಡಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, 3,500 ಕ್ಕೂ ಹೆಚ್ಚು ಲೈಕ್ಸ್‌ಗಳು ಬಂದಿವೆ. 

ಬೀದರ್‌: ಭಜನೆ ಹಾಡಿಗೆ ಪ್ರಭು ಚೌವ್ಹಾಣ್‌ ಸಖತ್‌ ಡಾನ್ಸ್‌..!

ನನಗೆ ಈ ಹಾಡಿನ ಮೇಲೆ ಪ್ರೀತಿಯಾಗಿದೆ ಎಂದು ಶೀರ್ಷಿಕೆ ನೀಡಿ ತಮ್ಮ  yamtha.uma ಹೆಸರಿನಲ್ಲಿರುವ ಇನ್ಸ್ಟಾಗ್ರಾಮ್‌ ಖಾತೆಯಿಂದ ಪೋಸ್ಟ್ ಮಾಡಿದ್ದಾರೆ. 
ಇವರು ಖಾಲಿ ವಿಮಾನದಲ್ಲಿ ಬಿಂದಾಸ್‌ ಆಗಿ ಸ್ಟೆಪ್‌ ಹಾಕುತ್ತಿದ್ದರೆ, ಉಮಾ  ಮೀನಾಕ್ಷಿ ಅವರ ಸಹೋದ್ಯೋಗಿಗಳು ಇವರ ಸುಂದರವಾದ ನೃತ್ಯವನ್ನು ಚಿತ್ರೀಕರಿಸಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕಾರ್‌ನಲ್ಲಿ ಜೋಡಿ 'ಸರಸ' ಸೆರೆಹಿಡಿದ ಟೋಲ್‌ ಮ್ಯಾನೇಜರ್‌, ಸಿಸಿಟಿವಿ ವಿಡಿಯೋ ತೋರಿಸಿ ಬ್ಲ್ಯಾಕ್‌ಮೇಲ್‌!
ವಿಶ್ವದ ಟಾಪ್ 10 ಬೊಟಾನಿಕಲ್ ಗಾರ್ಡನ್ ಲಿಸ್ಟ್‌ನಲ್ಲಿ ನಂ.1 ನಮ್ಮ ಲಾಲ್‌ಬಾಗ್