
ಬಿಹಾರ(ಮೇ.04): ಕೊರೋನಾ ವೈರಸ್ ಲಾಕ್‌ಡೌನ್ ಕಾರಣ ವಾಯುಮಾಲಿನ್ಯ ಪ್ರಮಾಣ ತಗ್ಗಿದೆ. ಇದರಿಂದ ಪರಿಸರ, ಪ್ರಾಣಿ ಪಕ್ಷಿಗಳು ಸಂತಸದಿಂದ ನಲಿದಾಡುತ್ತಿದೆ. ಇತ್ತೀಚೆಗಷ್ಟೇ ಹಿಮಾಚಲ ಪ್ರದೇಶದ ಪರ್ವತ ಶಿಖರಗಳು ಗೋಚರಿಸಿದ್ದು ಸುದ್ದಿಯಾಗಿತ್ತು. ಇದೀಗ ಇದೆಲ್ಲವನ್ನು ಮೀರಿಸುವ ಹಾಗೇ ಬಿಹಾರದ ಜನತೆಗೆ ಚೀನಾ ಹಾಗೂ ನೇಪಾಳಗ ಗಡಿ ಭಾಗದಲ್ಲಿರುವ ವಿಶ್ವದ ಅತೀ ಎತ್ತರದ ಮೌಂಟ್ ಎವರೆಸ್ಟ್ ಶಿಖರ್ ಗೋಚರಿಸುತ್ತಿದೆ.
ಲಾಕ್‌ಡೌನ್ ಕಮಾಲ್, ಈಗ ಸಹಾರನ್ಪುರದಿಂದ್ಲೂ ಕಾಣಿಸ್ತಿದೆ ಹಿಮಾಚಲ ಪರ್ವತ!
ಹಲವು ದಶಕಗಳ ಬಳಿಕ ಈ ದೃಶ್ಯ ಕಾಣಸಿಕ್ಕಿದೆ. ಬಿಹಾರದ ಸಿಂಘಿವಾಹಿನಿ ಗ್ರಾಮದ ನಿವಾಸಿಗಳು ತಮ್ಮ ಮನೆಗಳಿಂದ ದೂರದ ಚೀನಾ ಹಾಗೂ ನೇಪಾಳ ಗಡಿಭಾಗದಲ್ಲಿರುವ ಮೌಂಟ್ ಎವರೆಸ್ಟ್ ಶಿಖರವನ್ನು ವೀಕ್ಷಿಸುತ್ತಿದ್ದಾರೆ. ಭಾರತೀಯ ಅರಣ್ಯ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರವೀಣ್ ಕಸ್ವಾನ್ ಈ ಅಪೂರ್ವ ದೃಶ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇಷ್ಟೇ ಅಲ್ಲ ಬಿಹಾರದ ಜನತೆ ದಶಕಗಳ ಬಳಿಕ ಮೌಂಟ್ ಎವರೆಸ್ಟ್ ಶಿಖರ ವೀಕ್ಷಿಸುತ್ತಿದ್ದಾರೆ ಎಂದು ಪೋಸ್ಟ್ ಹಾಕಿದ್ದಾರೆ.
ಗಾರ್ಡನ್ ಸಿಟಿ ಎಂದಿದ್ದು ಸುಮ್ಮನೆಯಲ್ಲ, ಬೆಂಗಳೂರಿನ ಚಂದವನ್ನೊಮ್ಮೆ ನೋಡಿ
ಲಾಕ್‌ಡೌನ್ ಪರಿಣಾಮ ಗಂಗಾ ನದಿ, ಯಮುನಾ ನದಿ ಸೇರಿದಂತೆ ಹಲವು ನದಿಗಳು ಶುದ್ದವಾಗಿದೆ. ಇನ್ನು ಪಂಜಾಬ್‌ನ ಜಲಂಧರ್‌ನಿಂದ ಹಿಮಾಚಲ ಪ್ರದೇಶ, ಸಹಾರಾನ್ಪುರದಿಂದಲೂ ಹಿಮಾಚಲ ಪ್ರದೇಶ ಗೋಚರಿಸಿದೆ. ದೇಶದಲ ಹಲವು ನಗರಗಳು ಮಾಲಿನ್ಯ ಪ್ರಮಾಣ ಕಡಿಮೆಯಾದ ಕಾರಣ ಹಿಂದೆಂದೂ ಕಾಣದ ರೀತಿಯಲ್ಲಿ ಕಂಗೊಳಿಸುತ್ತಿದೆ. ಪ್ರಾಣಿ ಪಕ್ಷಿಗಳು ಚಿಲಿಪಿಲಿ ಸದ್ದುಗಳು ಕೇಳಿಸುತ್ತಿದೆ. ಇವೆಲ್ಲಾ ಲಾಕ್‌ಡೌನ್ ಪರಿಣಾಮವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ