ಸಿಸಿಟಿವಿ ಅಪ್ ಮಾಡಿ, ಅತ್ಯಾಚಾರಕ್ಕೆ ಯತ್ನಿಸಿದ ವೈದ್ಯನ ಮರ್ಮಾಂಗಕ್ಕೆ ಬ್ಲೇಡ್‌ನಿಂದ ಕುಯ್ದ ನರ್ಸ್‌

By Anusha Kb  |  First Published Sep 13, 2024, 9:41 AM IST

ನರ್ಸ್‌ ಮೇಲೆ ವೈದ್ಯನೆ ಅತ್ಯಾಚಾರಕ್ಕೆ ಯತ್ನಿಸಿದ ನಾಚಿಕೆಗೇಡಿನ ಘಟನೆ ಖಾಸಗಿ ಆಸ್ಪತ್ರೆಯೊಂದರಲ್ಲಿ ನಡೆದಿದೆ. ಆದರೆ ಈ ಸಂದರ್ಭದಲ್ಲಿ ಹೆದರುವ ಬದಲು ಧೈರ್ಯ ತೋರಿದ ನರ್ಸ್‌ ವೈದ್ಯನ ಮರ್ಮಾಂಗಕ್ಕೆ ಬ್ಲೇಡ್‌ನಿಂದ ಕೊಯ್ದು ಓಡಿ ಹೋಗುವ ಮೂಲಕ ತನ್ನನ್ನು ತಾನು ರಕ್ಷಿಸಿಕೊಂಡಿದ್ದಾರೆ.


ಬಿಹಾರ: ಕೋಲ್ಕತ್ತಾದ ಆರ್‌ ಜಿ ಕಾರ್‌ ಆಸ್ಪತ್ರೆಯಲ್ಲಿ ವೈದ್ಯೆಯ ಅತ್ಯಾಚಾರವೆಸಗಿ ಕೊಲೆ ಮಾಡಿದ ಹೇಯ ಘಟನೆಯನ್ನು ದೇಶವಿನ್ನು ಮರೆತಿಲ್ಲ, ಮರೆಯಲು ಸಾಧ್ಯವೂ ಇಲ್ಲ, ಹೀಗಿರುವಾಗ ಮತ್ತೊಂದು ಕಡೆ ನರ್ಸ್‌ ಮೇಲೆ ವೈದ್ಯನೆ ಅತ್ಯಾಚಾರಕ್ಕೆ ಯತ್ನಿಸಿದ ನಾಚಿಕೆಗೇಡಿನ ಘಟನೆ ಖಾಸಗಿ ಆಸ್ಪತ್ರೆಯೊಂದರಲ್ಲಿ ನಡೆದಿದೆ. ಆದರೆ ಈ ಸಂದರ್ಭದಲ್ಲಿ ಹೆದರುವ ಬದಲು ಧೈರ್ಯ ತೋರಿದ ನರ್ಸ್‌ ವೈದ್ಯನ ಮರ್ಮಾಂಗಕ್ಕೆ ಬ್ಲೇಡ್‌ನಿಂದ ಕೊಯ್ದು ಓಡಿ ಹೋಗುವ ಮೂಲಕ ತನ್ನನ್ನು ತಾನು ರಕ್ಷಿಸಿಕೊಂಡಿದ್ದಾರೆ. ಬಿಹಾರದ ಸಮಸ್ಟಿಪುರ ಜಿಲ್ಲೆಯ ಖಾಸಗಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಈಗ ವೈದ್ಯ ಹಾಗೂ ಆತನ ಇಬ್ಬರು ಸಹಚರರನ್ನು ಬಂಧಿಸಿದ್ದಾರೆ.  ಈತ ಬರೀ ವೈದ್ಯ ಮಾತ್ರವಲ್ಲದೇ ಆ ಖಾಸಗಿ ಆಸ್ಪತ್ರೆಯ ಆಡಳಿತ ನಿರ್ವಾಹಕನೂ ಆಗಿದ್ದ.

ಸಮಸ್ತಿಪುರ ಜಿಲ್ಲೆಯ ಮುಸ್ರಿಘರಾರಿ ಪೊಲೀಸ್ ಠಾಣೆ ವ್ಯಾಪ್ತಿಯ ಗಂಗಾಪುರದ ಆರ್‌ಬಿಎಸ್ ಹೆಲ್ತ್ ಕೇರ್ ಸೆಂಟರ್‌ನಲ್ಲಿ ಬುಧವಾರ ರಾತ್ರಿ ಈ ಘಟನೆ ನಡೆದಿದೆ. ತನ್ನ ಕರ್ತವ್ಯ ಮುಗಿಸಿ ಮನೆಗೆ ಹೊರಟಿದ್ದ ನರ್ಸ್ ಮೇಲೆ ಆಸ್ಪತ್ರೆಯ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಸಂಜಯ್ ಕುಮಾರ್ ಮತ್ತು ಆತನ ಇಬ್ಬರು ಸಹಚರರು ನರ್ಸ್‌ ಮೇಲೆ ಅತ್ಯಾಚಾರ ಮಾಡಲು ಪ್ರಯತ್ನಿಸಿದ್ದಾರೆ. ಈ ವೇಳೆ ಆರೋಪಿಗಳೆಲ್ಲರೂ ಪಾನಮತ್ತರಾಗಿದ್ದರು ಎಂದು ತಿಳಿದು ಬಂದಿದೆ. ಆದರೆ ಬಿಹಾರದಲ್ಲಿ ಮದ್ಯಪಾನಕ್ಕೆ ಸರ್ಕಾರವೇ ನಿಷೇಧ ಹೇರಿದ್ದು, ಮದ್ಯ ಮಾರಾಟಕ್ಕೂ ಎಲ್ಲೂ ಅವಕಾಶವಿಲ್ಲ, ಹೀಗಿರುವಾಗ ಈ ವೈದ್ಯ ಹಾಗೂ ಸಹಚರರು ಎಲ್ಲಿಂದ ಈ ಮದ್ಯ ತಂದು ಸೇವಿಸಿದರು ಎಂಬುದು ಈಗ ತನಿಖೆಗೆ ಕಾರಣವಾಗಿದೆ. 

Tap to resize

Latest Videos

undefined

ಕೋಲ್ಕತ್ತಾದ ವೈದ್ಯ ವಿದ್ಯಾರ್ಥಿನಿ ರೇಪ್ & ಮರ್ಡರ್..! ಡಾಕ್ಟರ್ ಅಭಯಾ ಕೇಸ್ ಮುಚ್ಚಿ ಹಾಕೋ ಸಂಚು ನಡೆದಿತ್ತಾ

ತನ್ನ ಮೇಲೆ ಅತ್ಯಾಚಾರವೆಸಗಲು ಬಂದ ಡಾ ಸಂಜಯ್‌ ಕುಮಾರ್ ಮರ್ಮಾಂಗದ ಮೇಲೆ ನರ್ಸ್ ಬ್ಲೇಡ್‌ನಿಂದ ಕೊಯ್ದಿದ್ದಾಳೆ.  ಬಳಿಕ ಆ ಸ್ಥಳದಿಂದ ಎಸ್ಕೇಪ್ ಆದ ಆಕೆ ಆಸ್ಪತ್ರೆಯ ಹೊರಗೆ ಬಂದು ಪೊಲೀಸರ ತುರ್ತು ಸಹಾಯವಾಣಿಗೆ ಕರೆ ಮಾಡಿದ್ದಾಳೆ. 

ಘಟನೆಗೆ ಸಂಬಂಧಿಸಿದಂತೆ ಡೆಪ್ಯುಟಿ ಸೂಪರಿಟೆಂಡೆಂಟ್ ಆಫ್ ಪೊಲೀಸ್‌ ಸಂಜಯ್ ಕುಮಾರ್ ಪಾಂಡೆ ಪ್ರತಿಕ್ರಿಯಿಸಿದ್ದು, ನರ್ಸ್ ಕರೆ ಮಾಡುತ್ತಿದ್ದಂತೆ ತಂಡವೊಂದು ಆಸ್ಪತ್ರೆಗೆ ಭೇಟಿ ನೀಡಿದೆ. ಈ ವೇಳೆ ನರ್ಸ್ ಸುರಕ್ಷಿತವಾಗಿದ್ದಾರೆ ಎಂಬುದನ್ನು ಖಚಿತಪಡಿಸಿಕೊಂಡ ಪೊಲೀಸರು ವೈದ್ಯನು ಸೇರಿದಂತೆ ಒಟ್ಟು ಮೂವರನ್ನು ಬಂಧಿಸಿದ್ದಾರೆ.  ಉಳಿದ್ದಿಬ್ಬರು ಆರೋಪಿಗಳನ್ನು  ಸುನೀಲ್ ಕುಮಾರ್ ಗುಪ್ತಾ ಹಾಗೂ ಅವಧೇಶ್ ಕುಮಾರ್‌ ಎಂದು ಗುರುತಿಸಲಾಗಿದೆ. 

ತನ್ನಿಬ್ಬರು ಸೋದರರಿಗೆ ಕೊನೆಯ ಬಾರಿ ರಾಖಿ ಕಟ್ಟಿ ಪ್ರಾಣ ಬಿಟ್ಟ ಸೋದರಿ

ಆರೋಪಿಗಳು  ಆಸ್ಪತ್ರೆಯನ್ನು ಒಳಭಾಗದಿಂದ ಬಂದ್ ಮಾಡಿ, ಅಲ್ಲಿದ್ದ ಸಿಸಿಟಿವಿಗಳನ್ನು ಆಫ್ ಮಾಡಿ ಬಳಿಕ ನರ್ಸ್‌ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಅಪಾಯದಿಂದ ಪಾರಾದ ನರ್ಸ್‌ನ  ಸಮಯಪ್ರಜ್ಞೆ ಹಾಗೂ ಧೈರ್ಯವನ್ನು ಮೆಚ್ಚಲೇಬೇಕು ಎಂದು ಪೊಲೀಸ್ ಅಧಿಕಾರಿ ಪಾಂಡೆ ಹೇಳಿದ್ದಾರೆ.  ಘಟನಾ ಸ್ಥಳದಿಂದ ಪೊಲೀಸರು ಅರ್ಧ ಬಾಟಲ್ ಮದ್ಯ ಹಾಗೂ ನರ್ಸ್ ಬಳಸಿದ ಬ್ಲೇಡ್ ರಕ್ತಸಿಕ್ತ ಬಟ್ಟೆ ಹಾಗೂ ಮೂರು ಸೆಲ್‌ಫೋನ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳು ನರ್ಸ್‌ ಮೇಲೆ ಅತ್ಯಾಚಾರಕ್ಕೆ ಯತ್ನಿಸುವ  ಮೊದಲು ಮದ್ಯಪಾನ ಮಾಡಿದ್ದರು. ಬಿಹಾರವೂ ಮದ್ಯ ಮುಕ್ತ ರಾಜ್ಯವಾಗಿರುವುದರಿಂದ ಆರೋಪಿಗಳ ವಿರುದ್ಧ ಈ ಮದ್ಯಪಾನ ನಿಷೇಧ ಕಾಯ್ದೆಯಡಿಯೂ ಪ್ರಕರಣ ದಾಖಲಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.

click me!