ಗೇಮ್ ಆಡಲು ಬಿಡದಕ್ಕೆ ಮನೆಯಲ್ಲಿದ್ದ ಚಾಕು ಕೀ ಬಂಚ್‌, ನೈಲ್ ಕಟ್ಟರ್ ನುಂಗಿದ ಯುವಕ

By Anusha Kb  |  First Published Aug 26, 2024, 11:24 AM IST

ಬಿಹಾರದಲ್ಲಿ ಆನ್‌ಲೈನ್ ಗೇಮ್ ಆಡದಂತೆ ಕುಟುಂಬದವರು ನಿರ್ಬಂಧ ಹೇರಿದ್ದಕ್ಕೆ ಸಿಟ್ಟುಗೊಂಡ ಯುವಕನೊಬ್ಬ ಬೀಗದ ಕೀ, ಚಾಕು ಮತ್ತು ಉಗುರು ಕತ್ತರಿಸುವ ಉಪಕರಣವನ್ನು ನುಂಗಿದ ಘಟನೆ ನಡೆದಿದೆ. ಶಸ್ತ್ರಚಿಕಿತ್ಸೆಯ ನಂತರ ಆತನ ಸ್ಥಿತಿ ಸ್ಥಿರವಾಗಿದೆ.


ಪಾಟ್ನಾ: ಬಿಹಾರದ ವ್ಯಕ್ತಿಯೊಬ್ಬನಿಗೆ ಕುಟುಂಬದವರು ಆನ್‌ಲೈನ್ ಗೇಮ್ ಆಡದಂತೆ ನಿರ್ಬಂಧ ಹೇರಿದ್ದಕ್ಕೆ ಸಿಟ್ಟುಗೊಂಡ ಆತ ಮನೆಯಲ್ಲಿದ್ದ ಬಂಚ್‌ಗಟ್ಟಲೇ ಬೀಗದ ಕೀ, ಚಾಕು ಹಾಗೂ ಎರಡು ಉಗುರು ಕತ್ತರಿಸುವ ಉಪಕರಣವನ್ನು ನುಂಗಿದ ಆಘಾತಕಾರಿ ಘಟನೆ ನಡೆದಿದೆ. ಆದರೆ  ವೈದ್ಯರ ತುರ್ತು ಶಸ್ತ್ರಚಿಕಿತ್ಸೆಯಿಂದಾಗಿ ಈ ಶತಮೂರ್ಖನ ಜೀವ ಉಳಿದಿದೆ.  

ಆಂಗ್ಲ ಮಾಧ್ಯಮಗಳ ವರದಿ ಪ್ರಕಾರ, ಈ ಯುವಕನಿಗೆ ಕುಟುಂಬದವರು ಮಲ್ಟಿಪ್ಲೇಯರ್‌ ಗೇಮ್ ಬ್ಯಾಟಲ್‌ಗ್ರೌಂಡ್ ಮೊಬೈಲ್ ಇಂಡಿಯಾವನ್ನು ಆಡುವುದಕ್ಕೆ ನಿರ್ಬಂಧ ಹೇರಿದ್ದಾರೆ. ಇದರಿಂದ ಕುಪಿತಗೊಂಡ ಆತ ಮನೆಯಲ್ಲಿದ್ದ ಹಲವು ಬೀಗದ ಕೀ, ಎರಡು ನೈಲ್ ಕಟ್ಟರ್ ಹಾಗೂ ಒಂದು ಚಾಕುವನ್ನು ನುಂಗಿದ್ದಾನೆ. ಬಿಹಾರದ ಮೋತಿಹಾರಿಯಲ್ಲಿ ಈ ಘಟನೆ ನಡೆದಿದೆ. 

Tap to resize

Latest Videos

ಆನ್‌ಲೈನ್ ಗೇಮ್‌ ಸಾಲದ ಸುಳಿಗೆ ಸಿಲುಕಿ ಯುವಕರಿಬ್ಬರು ಆತ್ಮಹತ್ಯೆ

ಇವೆಲ್ಲ ಉಪಕರಣಗಳನ್ನು ನುಂಗಿದ ನಂತರ ಆತನಿಗೆ ಹೊಟ್ಟೆಯಲ್ಲಿ ತೀವ್ರ ನೋವಾಗಲು  ಆರಂಭವಾಗಿದ್ದು, ಇದಾಗಿ ಸ್ವಲ್ಪ ಹೊತ್ತಿನ ನಂತರ ಆತನ ಆರೋಗ್ಯ ಸ್ಥಿತಿ ಹದಗೆಟ್ಟಿದೆ. ಕೂಡಲೇ ಕುಟುಂಬದವರು ಈತನನ್ನು  ಚಂಪರಣ್ ಜಿಲ್ಲೆಯ ಮೋತಿಹಾರಿ ನಗರದಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.  ಅಲ್ಲಿ ವೈದ್ಯರು ಆತನಿಗೆ ಎಕ್ಸ್‌ ರೇ ಮಾಡಿದ್ದು, ಈ ವೇಳೆ ಹೊಟ್ಟೆಯಲ್ಲಿ ಚಾಕು, ನೈಲ್ ಕಟ್ಟರ್ ಹಾಗೂ ಕೀಗಳು ಕಾಣಿಸಿವೆ. 

ಇದಾದ ನಂತರ ಆತನಿಗೆ ಒಂದೂವರೆ ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ಮಾಡಿ ಆತನ ಹೊಟ್ಟೆಯಲ್ಲಿದ್ದ ವಸ್ತುಗಳನ್ನು ಹೊರತೆಗೆದಿದ್ದಾಗಿ ವೈದ್ಯರಾದ ಡಾಕ್ಟರ್ ಅಮಿತ್ ಕುಮಾರ್ ಹೇಳಿದ್ದಾರೆ.  ಆತ ಹಲವು ಕೀಗಳಿದ್ದ ಒಂದು ಕೀ ಬಂಚ್, ಮತ್ತೊಂದು ಸಿಂಗಲ್ ಕೀ, ಎರಡು ನೈಲ್ ಕಟ್ಟರ್ ಹಾಗೂ ಒಂದು ಚಾಕುವನ್ನು ನುಂಗಿದ್ದು, ಆತನ ದೇಹದಿಂದ ಇವಿಷ್ಟನ್ನು ಹೊರತೆಗೆಯಲಾಗಿದೆ. ಆತ ಸಿಟ್ಟಿನಲ್ಲಿ ಇದೆಲ್ಲವನ್ನು ನುಂಗಿದ್ದಾನೆ. ಪ್ರಸ್ತುತ ಆತನ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯ ಅಮಿತ್ ಕುಮಾರ್ ಹೇಳಿದ್ದಾರೆ. 

ನಾಣ್ಯ ಹಾಗೂ ಆಯಸ್ಕಾಂತ ನುಂಗಿದ್ದ ಯುವಕ

ಇಂತಹದ್ದೇ ಮತ್ತೊಂದು ಪ್ರಕರಣ ದೆಹಲಿಯಲ್ಲಿ ನಡೆದಿತ್ತು.  ಸತು ಅಂಶ ದೇಹ ಸೇರುವುದರಿಂದ ಬಾಡಿ ಬಿಲ್ಡ್ ಮಾಡಲು ಸುಲಭವಾಗುತ್ತದೆ ಎಂದು ನಂಬಿದ್ದ ದೆಹಲಿಯ ಯುವಕನೋರ್ವ 39 ನಾಣ್ಯ ಹಾಗೂ 27 ಆಯಸ್ಕಾಂತದ ತುಂಡುಗಳನ್ನು ನುಂಗಿದ್ದ. ಇದಾದ ನಂತರ ಆತನಿಗೆ ತೀವ್ರ ವಾಂತಿ ಹಾಗೂ ಕಿಬ್ಬೊಟ್ಟೆಯಲ್ಲಿ ನೋವಾಗಲು ಶುರುವಾಗಿದ್ದು, ಕೂಡಲೇ ಆತನನ್ನು ಮನೆಯವರು ದೆಹಲಿಯ ಸರ್ ಗಂಗಾರಾಮ್ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿ ವೈದ್ಯರು ಆತನಿಗೆ ಶಸ್ತ್ರಚಿಕಿತ್ಸೆ ನೀಡಿ ಆತನ ರಕ್ಷಣೆ ಮಾಡಿದ್ದಾರೆ.

ಆನ್‌ಲೈನ್ ಗೇಮ್‌ನಿಂದ ಕಳ್ಕೊಂಡ ಹಣ ಹಿಂದಿರುಗಿಸಲು ತಾಯಿಯನ್ನೇ ಕೊಂದ ಮಗ!

click me!