ಭಾರತದ ಖ್ಯಾತ ವೈದ್ಯ ಅಮೆರಿಕಾದಲ್ಲಿ ಗುಂಡೇಟಿಗೆ ಬಲಿ

By Anusha Kb  |  First Published Aug 26, 2024, 10:08 AM IST

ಭಾರತೀಯ ಮೂಲದ ವೈದ್ಯರೊಬ್ಬರು ಅಮೆರಿಕಾದಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಬಲಿಯಾಗಿದ್ದಾರೆ. ಅಮೆರಿಕಾದ ಅಲ್ಬಾಮಾದಲ್ಲಿರುವ ಟಸ್ಕಲೂಸಾ ನಗರದಲ್ಲಿ ಈ ಘಟನೆ ನಡೆದಿದೆ.


ಭಾರತೀಯ ಮೂಲದ ವೈದ್ಯರೊಬ್ಬರು ಅಮೆರಿಕಾದಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಬಲಿಯಾಗಿದ್ದಾರೆ. ಅಮೆರಿಕಾದ ಅಲ್ಬಾಮಾದಲ್ಲಿರುವ ಟಸ್ಕಲೂಸಾ ನಗರದಲ್ಲಿ ಈ ಘಟನೆ ನಡೆದಿದೆ. ಗುಂಡೇಟಿಗೆ ಬಲಿಯಾದ ವೈದ್ಯನನ್ನು ಡಾ. ರಮೇಶ್ ಬಾಬು ಪೆರಂಶೆಟ್ಟಿ ಎಂದು ಗುರುತಿಸಲಾಗಿದೆ. ಇವರು ಅಮೆರಿಕಾದಲ್ಲಿ ಖ್ಯಾತ ವೈದ್ಯರಾಗಿದ್ದು, ಅಮೆರಿಕಾದಲ್ಲಿ ಹಲವು ಆಸ್ಪತ್ರೆಗಳನ್ನು ನಡೆಸುತ್ತಿದ್ದರು. 

ಆಂಧ್ರಪ್ರದೇಶದ ತಿರುಪತಿಯವರಾದ ಡಾ. ರಮೇಶ್ ಬಾಬು ಪೆರಂಶೆಟ್ಟಿ, ಕ್ರಿಮ್ಸನ್ ನೆಟ್‌ವರ್ಕ್ ಎಂಬ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ಥಳೀಯ ವೈದ್ಯಕೀಯ ಅಧಿಕಾರಿಗಳ ಗುಂಪಿನ ಸಂಸ್ಥಾಪಕರು ಹಾಗೂ ವೈದ್ಯಕೀಯ ನಿರ್ದೇಶಕರಲ್ಲಿ ಒಬ್ಬರಾಗಿದ್ದರು. ಆರೋಗ್ಯ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ಇವರು ಟಸ್ಕಲೂಸಾದಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿದ್ದು, ಅಲ್ಲಿನ ನೆಚ್ಚಿನ ವೈದ್ಯರಾಗಿದ್ದರು. 

Latest Videos

ಅಮೆರಿಕಾದಲ್ಲಿ ವೇಶ್ಯಾವಾಟಿಕೆ ದಂಧೆ: ಭಾರತೀಯ ಮೂಲದ 7 ಯುವಕರ ಬಂಧನ

ಕ್ರಿಮ್ಸನ್ ನೆಟ್‌ವರ್ಕ್ ವೈದ್ಯ ರಮೇಶ್ ಬಾಬು ಸಾವಿಗೆ ಸಂತಾಪ ವ್ಯಕ್ತಪಡಿಸಿದ್ದು, ಅವರು ಬಯಸಿದಂತೆ ಕೆಲಸ ಮಾಡುವ ಮೂಲಕ ನಾವು ಅವರಿಗೆ ಗೌರವ ಸಲ್ಲಿಸುತ್ತೇವೆ. ನಮ್ಮನ್ನು ನೀವು ಅರ್ಥ ಮಾಡಿಕೊಂಡಿದ್ದಕ್ಕೆ ಧನ್ಯವಾದಗಳು ಕ್ರಿಮ್ಸನ್ ನೆಟ್‌ವರ್ಕ್ ಟೀಂ ಫೇಸ್‌ಬುಕ್ ಪೋಸ್ಟ್‌ನಲ್ಲಿ ಹೇಳಿದೆ.  ಡಾ. ರಮೇಶ್ ಬಾಬು ಪೆರಂಶೆಟ್ಟಿ ಅವರು 38 ವರ್ಷಗಳ ಸುಧೀರ್ಘ ಅನುಭವವನ್ನು ಹೊಂದಿದ್ದರು. 

ವಿಸ್ಕಾನ್ಸಿನ್‌  ಮೆಡಿಕಲ್‌  ಕಾಲೇಜಿನಿಂದ ಡಾ ರಮೇಶ್ ವೈದ್ಯಕೀಯ ಪದವಿ ಪಡೆದಿದ್ದರು. ಅದಕ್ಕೂ ಮೊದಲು ತಿರುಪತಿಯ ವೆಂಕಟೇಶ್ವರ ವೈದ್ಯಕೀಯ ಕಾಲೇಜಿನಲ್ಲಿಯೂ ವೈದ್ಯಕೀಯ ಪದವಿ ಪಡೆದಿದ್ದರು. ಇದಾದ ನಂತರ ಟಸ್ಕಲೂಸಾ ಸೇರಿದಂತೆ ಒಟ್ಟು ನಾಲ್ಕು ಪ್ರದೇಶಗಳಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಿದ್ದರು. ಫ್ಯಾಮಿಲಿ ಮೆಡಿಸಿನ್ ಹಾಗೂ ತುರ್ತು ಮೆಡಿಸಿನ್ ವಿಭಾಗದಲ್ಲಿ ವಿಶೇಷತಜ್ಞ ಎನಿಸಿದ್ದರು. 

ಮಹಿಳೆಯರು-ಮಕ್ಕಳ ಬೆತ್ತಲೆ ವಿಡಿಯೋ ಸೆರೆ ಹಿಡಿಯುತ್ತಿದ್ದ ಭಾರತ ಮೂಲದ ಡಾಕ್ಟರ್ ಅರೆಸ್ಟ್ - 13 ಸಾವಿರಕ್ಕೂ ಅಧಿಕ ವಿಡಿಯೋ

ಇವರ ಹಠಾತ್ ಸಾವು ಅಲ್ಲಿನ ಜನರ ಪಾಲಿಗೆ ತುಂಬಲಾರದ ನಷ್ಟವೆನಿಸಿದ್ದು, ಅವರು ವೈದ್ಯಕೀಯ ಲೋಕದಲ್ಲಿ ಸಲ್ಲಿಸಿದ ಅವಿಸ್ಮರಣೀಯ ಸೇವೆಗಾಗಿ ಟಸ್ಕಲೂಸಾದ ಸ್ಟೀಟ್‌ವೊಂದಕ್ಕೆ ಅವರ ಹೆಸರನ್ನು ಇಡಲಾಗುವುದು ಎಂದು ಕೆಲ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಕೆಲ ವರ್ಷಗಳ ಹಿಂದೆ ಭಾರತಕ್ಕೆ ಆಗಮಿಸಿದ್ದ ವೇಳೆ ಡಾ ರಮೇಶ್ ಅವರು ತಾವು ಓದಿದ ಮೆನಕುರು ಹಿರಿಯ ಪ್ರೌಢಶಾಲೆಗೆ 14 ಲಕ್ಷ ರೂಪಾಯಿ ಅರ್ಥಿಕ ನೆರವು ನೀಡಿದ್ದರು.  ಇವರು ಪತ್ನಿ ಇಬ್ಬರು ಗಂಡು ಹಾಗೂ ಇಬ್ಬರು ಹೆಣ್ನು ಮಕ್ಕಳನ್ನು ಅಗಲಿದ್ದು, ಇವರೆಲ್ಲರೂ ಅಮೆರಿಕಾದಲ್ಲೇ ನೆಲೆಸಿದ್ದಾರೆ. 

click me!